ನನ್ನ ಮಗಳಿಗೆ ನಾನು 2ನೇ ಮದುವೆ ಆಗಿದ್ದು ಸ್ವಲ್ಪವು ಇಷ್ಟ ಇರಲಿಲ್ಲ. 2ನೇ ಮದುವೆಯಿಂದಾದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ವಿನಯ ಪ್ರಸಾದ್.

 

ವಿನಯಾ ಪ್ರಸಾದ್ ಅವರು ಕನ್ನಡದ ಒಬ್ಬ ಪ್ರತಿಭಾನ್ವಿತ ನಟಿ. ದೇವರಾಜ್, ಅಂಬರೀಶ್, ವಿಷ್ಣುವರ್ಧನ್, ಅನಂತನಾಗ್ ಮುಂತಾದ ನಟರುಗಳಿಗೆ ಅತ್ಯುತ್ತಮ ಜೋಡಿಯಾಗಿ ಕನ್ನಡಕ್ಕೆ ಸಾಕಷ್ಟು ಸಿನಿಮಾಗಳ ಕೊಡುಗೆ ನೀಡಿರುವ ಇವರು ಇತ್ತೀಚಿನ ಸಂದರ್ಶನ ಒಂದರಲ್ಲಿ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ಎರಡನೇ ಮದುವೆ ಇಂದ ಆದ ಸಮಸ್ಯೆಗಳ ಬಗ್ಗೆ ಮತ್ತು ಮಕ್ಕಳ ಬಗ್ಗೆ ಸಹ ಮಾತನಾಡಿ ಹಲವು ಅರ್ಥಪೂರ್ಣ ಸಂದೇಶಗಳನ್ನು ಈ ಜನರೇಶನ್ ಅವರಿಗೆ ನೀಡಿದ್ದಾರೆ.

ಅವರ ಮಾತುಗಳಲ್ಲಿ ಅವರ ಬದುಕಿನ ಬಗ್ಗೆ ಕೇಳುವುದಾದರೆ ಈ ರೀತಿ ಇತ್ತು. ನಾನು ಎರಡನೇ ಮದುವೆ ಆದಾಗ ನನ್ನ ಮಗಳಿಗೆ 14 ವರ್ಷ ಆಸು ಪಾಸು ಹಾಗೂ ನಾನು ಮದುವೆಯಾದ ಜ್ಯೋತಿ ಪ್ರಕಾಶ್ ಅವರಿಗೂ ಸಹ ಮದುವೆಯಾಗಿ ನನ್ನ ಮಗಳಷ್ಟೇ ವಯಸ್ಸಿನ ಮಗನಿದ್ದ. ಹಾಗಾಗಿ ನಮ್ಮಿಬ್ಬರ ಮಕ್ಕಳಿಗೂ ಅದರಲ್ಲೂ ನನ್ನ ಮಗಳಿಗೆ ಅದನ್ನು ಅರಗಿಸಿಕೊಳ್ಳಲು ಬಹಳ ಕಷ್ಟ ಆಯ್ತು.

ಯಾಕೆಂದರೆ ಅವಳು ತುಂಬಾ ಪ್ರೋಸೆಸಿವ್ ಇದ್ದಳು. ಅಮ್ಮನನ್ನು ಬಿಟ್ಟು ಕೊಡುವುದು ಅವಳಿಗೆ ತುಂಬಾ ಕಷ್ಟ ಆಗಿತ್ತು ಆದರೆ ಅವಳು ಅದರ ಸಾಕಷ್ಟು ತುಡಿತಗಳನ್ನು ಅನುಭವಿಸಿದ್ದಾಳೆ. ಆ ಎಲ್ಲಾ ಸಂಘರ್ಷಗಳ ನಡುವೆಯೂ ಅವಳು ತನ್ನ ಅಸಮಾಧಾನಗಳನ್ನು ನೀಗಿಸಿಕೊಂಡು ಸಮಾಧಾನವಾಗಿ ಇಲ್ಲಿಯ ತನಕ ಎಲ್ಲವನ್ನು ತಂದು ನಿಲ್ಲಿಸುವ ಅವಕಾಶ ಕೊಟ್ಟಿದ್ದಾಳೆ ಅದಕ್ಕಾಗಿ ನಾನು ಅವಳಿಗೆ ಧನ್ಯವಾದಗಳನ್ನು ಹೇಳುತ್ತೇನೆ.

ತಾಯಿಯಾಗಿ ನನಗೆ ನನ್ನ ಬದುಕು ಗೊತ್ತು ಆದರೆ ಮಗಳಾಗಿ ಅವಳಲ್ಲಿ ಇನ್ನೆಷ್ಟು ಗೊಂದಲಗಳು ಆಗಿದ್ದವು, ಆದರೆ ಇಂದು ಅವಳಿಗೂ ಮದುವೆ ಆಗಿ ಮಗು ಇದೆ ಅವಳು ನನ್ನ ಪತಿ ಜೊತೆ ಚೆನ್ನಾಗಿ ಮಾತನಾಡುತ್ತಾಳೆ, ನನ್ನ ತಂದೆ ತಾಯಿ ನನ್ನ ಪತಿ ಜೊತೆ ಚೆನ್ನಾಗಿ ಮಾತನಾಡುತ್ತಾರೆ, ನನ್ನ ತಂದೆ ನಾವು ಊರಿಗೆ ಹೋದಾಗ ನನಗಿಂತ ಹೆಚ್ಚಾಗಿ ಅವರನ್ನು ಚೆನ್ನಾಗಿ ವಿಚಾರಿಸಿ ಕೊಳ್ಳುತ್ತಾರೆ ನನ್ನ ತಾಯಿ ಕರೆ ಮಾಡಿದಾಗಲೆಲ್ಲ ನನ್ನ ಪತಿಯ ಇಷ್ಟ ಕಷ್ಟದ ವಿಷಯಗಳ ಬಗ್ಗೆ ಮಾತನಾಡುತ್ತಾರೆ.

ಎರಡನೇ ಮದುವೆ ಆದರೂ ಸರಿಯಾದ ಜೋಡಿ ಆರಿಸಿಕೊಂಡಿದ್ದೀಯ ಎಂದು ನನ್ನ ಅಮ್ಮನೇ ಹೇಳುತ್ತಾರೆ ಜ್ಯೋತಿಪ್ರಕಾಶ್ ಅವರ ಮಗನು ಸಹ ನನ್ನನ್ನು ತಾಯಿ ಎಂದು ನೋಡುತ್ತಾನೆ ಯಾಕೆಂದರೆ ಅವನು ಮೂರು ತಿಂಗಳ ಮಗು ಆಗಿದ್ದಾಗ ತಾಯಿಯನ್ನು ಕಳೆದುಕೊಂಡಿದ್ದ. ಅವನಿಗೂ ಮದುವೆ ಆಗಿ ಮಗು ಇದೆ ಆ ಮಗುವಿನ ಉಪನಯನಕ್ಕೆ ನನ್ನನ್ನು ನನ್ನ ಮಗಳು ಪ್ರಥಮ ಎಲ್ಲರನ್ನೂ ಆಹ್ವಾನಿಸಿದ್ದ, ನಾವೆಲ್ಲರೂ ಹೋಗಿದ್ದೆವು ನನ್ನ ಮಗಳೇ ಅವನ ಮಗನಿಗೆ ಅಲಂಕಾರ ಮಾಡಿದಳು ಇದನ್ನೆಲ್ಲಾ ನೋಡಿದಾಗ ತುಂಬಾ ಸಮಾಧಾನ ಆಗುತ್ತದೆ.

ಆದರೆ ಆರಂಭದ ದಿನದಲ್ಲಿ ನನಗೂ ಹಾಗೂ ಜ್ಯೋತಿ ಪ್ರಕಾಶ್ ಅವರಿಗೂ ಬಹಳ ಭಯ ಇತ್ತು, ಗೊಂದಲ ಇತ್ತು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂದು. ಆದರೆ ಮಕ್ಕಳು ಕಾಲಕ್ರಮೇಣ ಅರ್ಥ ಮಾಡಿಕೊಂಡರು ಯಾರ ಸಿಂಪತಿಗಾಗಿಯೂ ನಾನು ಇಲ್ಲಿ ನನ್ನ ಕಥೆ ಹೇಳಲು ಇಷ್ಟ ಪಡುವುದಿಲ್ಲ ಆದರೆ ಬದುಕಿನ ಬಗ್ಗೆ ಭರವಸೆ ಇರಬೇಕು ನಿರ್ಧಾರಗಳ ಬಗ್ಗೆ ಬದ್ಧತೆ ಇರಬೇಕು ಎನ್ನುವುದನ್ನು ಅರಿತುಕೊಳ್ಳಲಿ ಎಂದು ಹೇಳುತ್ತಿದ್ದೇನೆ.

ನಾವೇನು ದೇವಮಾನವರಲ್ಲ ನಮ್ಮ ಮಧ್ಯೆಯೂ ಕೂಡ ನೈಸರ್ಗಿಕವಾಗಿ ಎಲ್ಲರ ಕುಟುಂಬದಲ್ಲೂ ಮೂಡುವಂತೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುತ್ತವೆ ಆದರೆ ಜಗಳವು ಆಗುತ್ತವೆ. ಅದನ್ನೆಲ್ಲ ಮೀರಿ ನಿನಗೆ ನಾನಿದ್ದೇನೆ ನನಗೆ ನೀನಿರುವೆ ಎನ್ನುವ ಧೈರ್ಯ ನಂಬಿಕೆ ಬರಬೇಕು. ಜೊತೆಗೆ ಇಬ್ಬರಲ್ಲೂ ಕಾಮನ್ ಇಂಟರೆಸ್ಟ್ ಇದ್ದಾಗ ದಾಂಪತ್ಯ ಗಟ್ಟಿಯಾಗಿ ನಿಲ್ಲುತ್ತದೆ ಆ ವಿಷಯದಲ್ಲಿ ನಾನು ತುಂಬಾ ಲಕ್ಕಿ ನನಗೂ ಹಾಗೂ ಜ್ಯೋತಿ ಪ್ರಕಾಶ್ ಅವರಿಗೂ ಸಂಗೀತ ಸಾಹಿತ್ಯದ ವಿಷಯದಲ್ಲಿ ಅಷ್ಟೇ ಆಸಕ್ತಿ ಇದೆ.

ನಾವಿಬ್ಬರು ಕಳೆಯುವ ತುಂಬಾ ಕ್ವಾಲಿಟಿ ಟೈಮ್ ಅದರ ಕುರಿತೇ ಆಗಿರುತ್ತದೆ. ಹೀಗೆ ಒಬ್ಬರಿಗೊಬ್ಬರು ಒಬ್ಬರ ಕ್ಷೇತ್ರದಲ್ಲಿ ಮತ್ತೊಬ್ಬರು ಸಹಾಯ ಮಾಡಿಕೊಂಡು ಸಂಬಾಳಿಸಿಕೊಂಡು ಸಂತೋಷದಿಂದ ಬದುಕುತ್ತಿದ್ದೇವೆ. ನನಗಂತೂ ಈಗ ನನ್ನ ಬದುಕು ಸಮಾಧಾನ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ 2ನೇ ಮದುವೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

Leave a Comment