Home Entertainment ಅವಳಿ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅಮೂಲ್ಯ ಪತಿ ಜಗದೀಶ್ ಈ ಕ್ಯೂಟ್ ವಿಡಿಯೋ ನೋಡಿ ಮಕ್ಕಳು ಎಷ್ಟು ಮುದ್ದಾಗಿ ಅಪ್ಪನ ಹುಟ್ಟಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

ಅವಳಿ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅಮೂಲ್ಯ ಪತಿ ಜಗದೀಶ್ ಈ ಕ್ಯೂಟ್ ವಿಡಿಯೋ ನೋಡಿ ಮಕ್ಕಳು ಎಷ್ಟು ಮುದ್ದಾಗಿ ಅಪ್ಪನ ಹುಟ್ಟಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

0
ಅವಳಿ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅಮೂಲ್ಯ ಪತಿ ಜಗದೀಶ್ ಈ ಕ್ಯೂಟ್ ವಿಡಿಯೋ ನೋಡಿ ಮಕ್ಕಳು ಎಷ್ಟು ಮುದ್ದಾಗಿ ಅಪ್ಪನ ಹುಟ್ಟಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

 

ಕನ್ನಡದ ಗೋಲ್ಡನ್ ಕ್ಲೀನ್ (Golden queen) ಮುದ್ದುಮುಖದ ಚೆಲುವೆ ಐಶು ಎಂದೆ ಕನ್ನಡಿಗರ ಕಡೆಯಿಂದ ಕರೆಸಿಕೊಡುವ ಅಮೂಲ್ಯ (Amulya) ಅಂದರೆ ಈಗಲೂ ಕೂಡ ಕನ್ನಡದ ಹುಡುಗರಿಗೆ ವಿಶೇಷ ಪ್ರೀತಿ. ಬಾಲ್ಯದಿಂದಲೂ ಅಮೂಲ್ಯ ಅವರು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ಕಾರಣ ಚಿಕ್ಕಂದಿನಿಂದಲೂ ಇವರನ್ನು ನೋಡಿಕೊಂಡು ಬೆಳೆದಿರುವುದರಿಂದ ಇವರು ನಮ್ಮ ಪಕ್ಕದ ಮನೆ ಹುಡುಗಿಯ ಎನಿಸುವಷ್ಟು ಹತ್ತಿರದವರಾಗಿದ್ದಾರೆ.

ಅಮೂಲ್ಯ ಅವರು ಚೆಲುವಿನ ಚಿತ್ತಾರ (Cheluvina chiththara) ಸಿನಿಮಾದ ಮೂಲಕ ಮೊಟ್ಟಮೊದಲ ಬಾರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡರು. ಶಾಲಾ ಹುಡುಗಿ ಪಾತ್ರ ಮಾಡಿದ್ದ ಇವರು ಎಷ್ಟೇ ವಯಸ್ಸಾಗಿದ್ದರು ಈಗಲೂ ಸಹ ಅದೇ ರೀತಿ ಕಾಣಿಸುತ್ತಾರೆ. ಅಮೂಲ್ಯ ಅವರಿಗೆ ಚೆಲುವಿನ ಚಿತ್ತಾರ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಆನಂತರ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ಅವರು ಮಾಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್, ರಾಕಿಂಗ್ ಸ್ಟಾರ್ ಯಶ್, ಅಜಯ್ ಕೃಷ್ಣ, ಚಿರಂಜೀವಿ ಸರ್ಜಾ, ಸೂರಜ್, ದುನಿಯಾ ವಿಜಯ್ ಇನ್ನು ಮುಂತಾದ ಅನೇಕ ನಾಯಕ ನಟರ ಜೊತೆ ಜೋಡಿಯಾಗಿರುವ ಅಮೂಲ್ಯ ಅವರಿಗೆ ಗಣೇಶ್ (Golden star Ganesh) ಅವರು ಜೋಡಿಯಾಗಿರುವ ಸಿನಿಮಾಗಳು ದೊಡ್ಡ ಸಕ್ಸಸ್ ನೀಡಿವೆ. ಗಣೇಶ್ ಹಾಗೂ ಅಮೂಲ್ಯ ಅವರ ಸಂಬಂಧ ಸಿನಿಮಾಗಷ್ಟೇ ಮೀಸಲಿರದೇ ವೈಯಕ್ತಿಕವಾಗಿ ಕೂಡ ಇಬ್ಬರು ಅತ್ಯುತ್ತಮ ಸ್ನೇಹಿತರಾಗಿದ್ದಾರೆ.

ಸ್ವತಃ ಗಣೇಶ್ ದಂಪತಿಗಳೇ ಮುಂದೆ ನಿಂತು ಸ್ವಂತ ಅಣ್ಣನ ಸ್ಥಾನದಲ್ಲಿ ಅಮೂಲ್ಯ ಅವರ ಮದುವೆ ಮಾಡಿಸುವಷ್ಟು ಎರಡು ಕುಟುಂಬದವರು ಆತ್ಮೀಯರಾಗಿದ್ದಾರೆ. ಅಮೂಲ್ಯ ಅವರು ಸಹ ಒಳ್ಳೆ ಒಳ್ಳೆ ಸಿನಿಮಾಗಳ ಅವಕಾಶ ಪಡೆದುಕೊಂಡು ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಸಿನಿ ಕೆರಿಯರ್ ಇಂದ ಬ್ರೇಕ್ ತೆಗೆದುಕೊಂಡು ವೈವಾಹಿಕ ಜೀವನಕ್ಕೆ (Marriage) ಕಾಲಿಟ್ಟಿದ್ದಾರೆ.

ಯುವ ರಾಜಕಾರಣಿ ಹಾಗೂ ಉದ್ಯಮಿ ಸಹ ಆಗಿರುವ ಜಗದೀಶ್ ರಾಮಚಂದ್ರ (Jagadeesh Ramachandra) ಅವರ ಕೈ ಹಿಡಿದಿರುವ ಅಮೂಲ್ಯ ಅವರು ಕಳೆದ ವರ್ಷ ಶಿವರಾತ್ರಿ ಹಬ್ಬದ ದಿನದಂದು ಅವಳಿ ಗಂಡುಮಕ್ಕಳಿಗೆ ಜನ್ಮ ಕೊಟ್ಟಿದ್ದಾರೆ. ಕೆರಿಯರ್ ಗಾಗಿ ಜೀವನವನ್ನೇ ಬಲಿಕೊಟ್ಟಿಕೊಳ್ಳುವ ನಟಿಮಣಿಯರ ಮಧ್ಯದಲ್ಲಿ ಅಮೂಲ್ಯ ನಡತೆ ಎಲ್ಲರಿಗೂ ಮೆಚ್ಚುಗೆ ಆಗಿದ್ದು, ಬಹಳ ಚಿಕ್ಕವಯಸ್ಸಿಗೆ ತುಂಬಾ ಚೆನ್ನಾಗಿ ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಎಂದು ಕನ್ನಡಿಗರಿಂದ ಬೇಷ್ ಎನಿಸಿಕೊಂಡಿದ್ದಾರೆ.

ಕಳೆದ ವರ್ಷ ಅದ್ದೂರಿಯಾಗಿ ಮಕ್ಕಳ್ಳಿಬ್ಬರಿಗೂ ಅಥರ್ವ (Atharv) ಮತ್ತು ಆಧವ್ (Adhav) ಎಂದು ನಾಮಕರಣ ಸಹ ಮಾಡಿದ್ದರು. ತಾಯಿಯಾಗಿರುವ ಅಮೂಲ್ಯ ಅವರು ತಮ್ಮ ಕುಟುಂಬದ ಜೊತೆ ಬಹಳ ಸಮಯ ಕಳೆಯುತ್ತಿದ್ದಾರೆ. ಮತ್ತು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿ ಇದ್ದಾರೆ ಆಗಾಗ ತಮ್ಮ ಸುಂದರ ಕುಟುಂಬದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚಿಗಷ್ಟೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪತಿ ಹಾಗೂ ಇಬ್ಬರು ಮಕ್ಕಳ ಜೊತೆ ತಮ್ಮ ತೋಟಕ್ಕೆ ಹೋಗಿ ಗೋವುಗಳ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಗೋಲ್ಡನ್ ಕ್ವೀನ್, ಕುಟುಂಬದ ಎಲ್ಲರೂ ಗೋಲ್ಡ್ ಬಣ್ಣದ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. ಮತ್ತು ಪ್ರತಿ ತಿಂಗಳೂ ಕೂಡ ಮಕ್ಕಳ ಹುಟ್ಟಿದ ತಿಂಗಳ ಸಂಭ್ರಮವನ್ನು ವರ್ಷದವರೆಗೂ ಆಚರಣೆ ಮಾಡಿರುವ ಅಮೂಲ್ಯ ಅವರು ಆ ಫೋಟೋಗಳನ್ನು ಕೂಡ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಪತಿ ಹಾಗೂ ಮಕ್ಕಳ ಜೊತೆಗಿನ ಅಮೂಲ್ಯ ಅವರ ಬಹಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಎಲ್ಲರೂ ಇವರ ಕುಟುಂಬಕ್ಕೆ ಮೆಚ್ಚುಗೆಯನ್ನು ಲೈಕ್ ಮೂಲಕ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here