ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ನಟ ದರ್ಶನ್, ಜನ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ದಾಸೋಹದಲ್ಲಿ ಪ್ರಸಾದ ಸೇವಿಸಿದ ಡಿ-ಬಾಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ನೂರಾರು ಅಡೆತಡೆಗಳ ನಡುವೆ ತಮ್ಮ ಕ್ರಾಂತಿ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಕಳೆದ ವಾರವಷ್ಟೇ ಕ್ರಾಂತಿ (Kranthi) ಚಿತ್ರವು 100 ಕೋಟಿ ಕ್ಲಬ್ (100cr.club) ಸೇರಿದ ದಾಖಲೆ ಮಾಡಿದೆ. ಕ್ರಾಂತಿ ಚಿತ್ರದ ಇಡೀ ತಂಡ ಒಟ್ಟಿಗೆ ಸೇರಿ ಅದರ ಸಂಭ್ರಮಾಚರಣೆಯನ್ನು ಮಾಡಿ ಸಂತಸ ಪಟ್ಟಿದ್ದಾರೆ ಸಿನಿಮಾ ಗೆದ್ದ ಬೆನ್ನಲ್ಲೇ ದರ್ಶನ್ ಅವರು ಆ ಸಮಯದಲ್ಲಿ ಹಲವಾರು ಕೆಲಸಗಳನ್ನು ಕೈಗೊಂಡಿದ್ದಾರೆ.

ಮೊದಲಿಗೆ ತನ್ನನ್ನು ಪ್ರತಿಬಾರಿ ಬೀಳದಂತೆ ಕೈ ಹಿಡಿದು ಎತ್ತುವ ತನ್ನ ಅಭಿಮಾನಿಗಳನ್ನು ಶಾಶ್ವತವಾಗಿ ನೆನೆಸಿಕೊಳ್ಳುವ ಕಾರಣಕ್ಕಾಗಿ ಎದೆ ಮೇಲೆ ನನ್ನ ಸೆಲೆಬ್ರಿಟೀಸ್ ಎಂದು ಹಚ್ಚೆ (tattoo) ಹಾಕಿಸಿಕೊಂಡು ಅಭಿಮಾನಿ (for fans) ದೇವರುಗಳಿಗೆ ಟ್ರ್ಯುಬ್ಯೂಟ್ ಸಲ್ಲಿಸಿದ್ದಾರೆ. ಮತ್ತು ಇಷ್ಟದೇವತೆಗಳ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಎಲ್ಲಾ ಸ್ಠಾರ್ ಗಳೂ ಕೂಡ ಸಿನಿಮಾ ಗೆದ್ದ ಮೇಲೆ ತಮ್ಮ ನೆಚ್ಚಿನ ದೇವಸ್ಥಾನಕ್ಕೆ ಹೋಗಿ ದೇವರಿಗೆ ಧನ್ಯವಾದಗಳು ಅರ್ಪಿಸಿ ನಮನ ಸಲ್ಲಿಸಿ ಬರುವುದು ಮಾಮೂಲಿ.

ಅಂತೆಯೇ ದರ್ಶನ್ ಅವರು ಸಹ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈ ಮಹದೇಶ್ವರರ (M.M hills) ಸನ್ನಿಧಾನಕ್ಕೆ ಹೋಗಿ ಮಾದಪ್ಪನ ದರ್ಶನ ಪಡೆದಿದ್ದಾರೆ ದರ್ಶನ್ ಅವರು ಮಹದೇಶ್ವರ ಬೆಟ್ಟಕ್ಕೆ ಹೋಗಿರುವುದು, ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಅಲ್ಲಿಯ ದಾಸೋಹ ಭವನಕ್ಕೆ ಹೋಗಿ ಎಲ್ಲರಂತೆ ಸಾಮಾನ್ಯ ಪಂತಿದಲ್ಲಿ ಕುಳಿತು ಊಟ ಮಾಡಿ ಬಂದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ದರ್ಶನ್ ಅವರಿಗೆ ಅವರ ಸ್ನೇಹಿತ ಸಚ್ಚಿದಾನಂದ ಮತ್ತು ಮತ್ತಿಬ್ಬರು ಜೊತೆಯಾಗಿದ್ದಾರೆ ದರ್ಶನ್ ಅವರ ಈ ವಿಡಿಯೋ ಜೊತೆ ಮತ್ತಷ್ಟು ವಿಡಿಯೋಗಳು ಕೂಡ ವೈರಲಾಗುತ್ತಿವೆ. ಅದೇನೆಂದರೆ ದಿಢೀರೆಂದು ನೆಚ್ಚಿನ ನಟ ಎದುರು ಕಾಣಿಸಿಕೊಂಡ ಸಂಭ್ರಮದಲ್ಲಿ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿರುವುದು, ದೇವಸ್ಥಾನದಲ್ಲಿ ದರ್ಶನ ಪಡೆದು ಬರುತ್ತಿರುವಾಗ ಅಭಿಮಾನಿಗಳೆಲ್ಲ ನಮ್ಮ ಕಡೆ ನೋಡಿ ಬಾಸ್ ಎಂದು ಕೂಗುತ್ತಿರುವುದು ಕೂಡ ವೀಡಿಯೋದಲ್ಲಿ ಕೇಳುತ್ತಿದೆ.

ದಾಸೋಹ ಭವನದಲ್ಲಿ ಊಟ ಮಾಡುವಾಗ ಕಿಟಕಿಯಿಂದ ನಿಂತು ಅಚ್ಚರಿಯಂತೆ ಅನೇಕ ಅಭಿಮಾನಿಗಳು ಅವರನ್ನು ನೋಡಿ ಕಣ್ತುಂಬಿ ಕೊಳ್ಳುತ್ತಿದ್ದರು. ನಂತರ ದರ್ಶನ್ ಅವರ ಕಾರಿನ ಬಳಿ ಹೋಗಿ ಮುತ್ತಿಗೆ ಹಾಕಿ ದರ್ಶನ್ ಬಗ್ಗೆ ತಮಗಿರುವ ಪ್ರೀತಿಯನ್ನು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ದರ್ಶನ್ ಅವರ ಸಹ ತಮ್ಮ ಅಭಿಮಾನಿಗಳಿಗೆ ಕೈಬೀಸಿ ಪ್ರತಿಕ್ರಿಯೆ ಕೊಟ್ಟಿದ್ದಾನೆ.

ಆದರೆ ಅಲ್ಲಿನ ಪೊಲೀಸ್ ಸಿಬ್ಬಂದಿಗಂತೂ ಜನರನ್ನು ನಿಯಂತ್ರಿಸಲು ಆಗದೆ ಪರದಾಡುವಂತಾಗಿದೆ. ಒಂದೆಡೆ ದರ್ಶನ್ ಸುರಕ್ಷತೆ ಮತ್ತೊಂದೆಡೆ ಅಭಿಮಾನಿಗಳ ಗಲಾಟೆ. ಇವೆರಡನ್ನು ಪೊಲೀಸರು ಸುಧಾರಿಸುವಷ್ಟರಲ್ಲಿ ಹೈರಾಣಾಗಿ ಹೋಗಿದ್ದಾರೆ. ದರ್ಶನ್ ಅವರನ್ನು ಕಂಡರೆ ಅಭಿಮಾನಿಗಳಿಗೆ ಎಷ್ಟು ಹುಚ್ಚು ಪ್ರೀತಿ ಇದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಇಡೀ ಕರ್ನಾಟಕದಲ್ಲಿ ದರ್ಶನ್ ಅವರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇರುವುದು.

ಉತ್ತರದ ಬೀದರ್ ನಿಂದ ಹಿಡಿದು ದಕ್ಷಿಣದ ಚಾಮರಾಜನಗರದ ಪ್ರತಿ ಹಳ್ಳಿಯಲ್ಲೂ ದರ್ಶನ್ ಗೆ ಡೈ ಹಾರ್ಟ್ ಫ್ಯಾನ್ಸ್ ಇದ್ದಾರೆ. ಈ ರೀತಿ ದರ್ಶನ್ ಅಭಿಮಾನಿಗಳನ್ನು ಉಳಿಸಿಕೊಂಡಿದ್ದಾರೆ. ಇನ್ನು ಎರಡು ದಿನಗಳಲ್ಲಿ ದರ್ಶನ್ ಅವರ ಹುಟ್ಟು ಹಬ್ಬ (birthday) ಕೂಡ ಬರಲಿದೆ. ದರ್ಶನ್ ಅವರು ಯಾವಾಗಲೂ ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ (Mysore Chamundeshwari Temple) ಭೇಟಿ ಕೊಡುತ್ತಾರೆ. ತಾಯಿ ಚಾಮುಂಡೇಶ್ವರಿ ಹಾಗೂ ಮಲೈ ಮಹದೇಶ್ವರ ಆಶೀರ್ವಾದದಿಂದ ದರ್ಶನ್ ಆವರಿಗೆ ಇನ್ನಷ್ಟು ಗೆಲವು ಸಿಗಲಿ, ಮುಂದಿನ ಭವಿಷ್ಯ ಮತ್ತಷ್ಟು ಸುಂದರವಾಗಿರಲಿ ಎಂದು ಹರಸೋಣ.

Leave a Comment