Friday, June 9, 2023
HomeEntertainmentಎದೆಯ ಮೇಲೆ "ನನ್ನ ಸೆಲೆಬ್ರಿಟೀಸ್" ಅಂತ ಟ್ಯಾಟೋ ಹಾಕಿದ ವ್ಯಕ್ತಿಗೆ ದರ್ಶನ್ ಕೊಟ್ಟ ದುಬಾರಿ ಸಂಭಾವನೆ...

ಎದೆಯ ಮೇಲೆ “ನನ್ನ ಸೆಲೆಬ್ರಿಟೀಸ್” ಅಂತ ಟ್ಯಾಟೋ ಹಾಕಿದ ವ್ಯಕ್ತಿಗೆ ದರ್ಶನ್ ಕೊಟ್ಟ ದುಬಾರಿ ಸಂಭಾವನೆ ಏನು ಗೊತ್ತಾ.?

 

ವಿಶ್ವದಲ್ಲೇ ಸ್ಟಾರ್ ನಟನೊಬ್ಬ ತನ್ನ ಅಭಿಮಾನಿಗಳಿಗಾಗಿ ಅವರ ಹೆಸರನ್ನು ಟ್ಯಾಟು (Tatoo) ಹಾಕಿಸಿಕೊಂಡಿದ್ದಾರೆ ಅಂದರೆ ಅದು ಸ್ಯಾಂಡಲ್ವುಡ್ನ ದಾಸ ಮಾತ್ರ. ಡಿ ಬಾಸ್ (D Boss) ಅಭಿಮಾನಿಗಳ (fans) ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎನ್ನುವುದಕ್ಕೆ ಅವರು ಅವರನ್ನು ಅಭಿಮಾನಿಗಳು ಎಂದು ಕರೆಯದೆ ನನ್ನ ಸೆಲೆಬ್ರೆಟೀಸ್ (celebrates) ಎಂದು ಕರೆಯುವುದೇ ಸಾಕ್ಷಿ. ಇನ್ನು ಅಭಿಮಾನಿಗಳ ಪಾಲಿಗಂತೂ ಬಾಕ್ಸಾಫೀಸ್ ಸುಲ್ತಾನನ್ನು ಕಂಡರೆ ಅದೆಂತಹದೋ ವಿಶೇಷ ಪ್ರೀತಿ.

ಇದುವರೆಗೂ ದರ್ಶನ್ ಅವರ ವಿವಾದ ಏನೇ ಇದ್ದರೂ ಎಷ್ಟೇ ಬಾರಿ ಅವರು ಬಿದ್ದಿದ್ದರು ಅವರ ಬೆಂಗಾವಲಾಗಿ ನಿಂತಿರುವುದು ಅವರ ಅಭಿಮಾನಿಗಳೇ. ಈ ಬಾರಿ ಕೂಡ ಅಭಿಮಾನಿಗಳಿಗೆ ಕ್ರಾಂತಿ (Kranthi) ಕೂಡ ದೊಡ್ಡ ಸವಾಲಾಗಿತ್ತು, ಪ್ರಚಾರ ಇಲ್ಲದೆ ಇದ್ದರೂ ನೆಗೆಟಿವ್ ವಿಮರ್ಷೆಗಳ ಪಿತೂರಿ ನಡುವೆಯೂ ಅಭಿಮಾನಿಗಳು ಸಿನಿಮಾವನ್ನು ಗೆಲ್ಲಿಸಿ ನೂರು ಕೋಟಿ ಕ್ಲಬ್ (100 cr. club) ಸೇರಿಸಿದ್ದಾರೆ. ಅವರ ಈ ಪ್ರೀತಿಗೆ ದಚ್ಚು ಕೂಡ ಈಗ ಅಷ್ಟೇ ಪ್ರೀತಿಯಿಂದ ಅಭಿಮಾನದ ಉಡುಗೊರೆ ಕೊಟ್ಟಿದ್ದಾರೆ.

ನನ್ನ ಅಭಿಮಾನಿಗಳಿಗೆ ವಿಶೇಷ ರೀತಿಯಲ್ಲಿ ಟ್ರುಬ್ಯೂಟ್ ಸಲ್ಲಿಸಬೇಕು ಎನ್ನುವ ಕಾರಣಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಎದೆ ಮೇಲೆ ನನ್ನ ಸೆಲೆಬ್ರಿಟಿಸ್ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದೊಂದು ಪರ್ಮನೆಂಟ್ ಟ್ಯಾಟು ಆಗಿದ್ದು ದರ್ಶನ್ ಅವರೇ ಸ್ವತಃ ವಿಡಿಯೋ ಮೂಲಕ ಇದು ನನ್ನನ್ನು ಇಷ್ಟು ಪ್ರೀತಿಸುತ್ತಿರುವ ನನ್ನ ಮೇಲೆ ಇಷ್ಟು ವಿಶ್ವಾಸ ಇಟ್ಟಿರುವ ನನ್ನ ಪ್ರೀತಿಯ ಸೆಲೆಬ್ರಿಟಿಸ್ ಗಳಿಗೆ ಅರ್ಪಣೆ ಎಂದು ಹೇಳಿದ್ದಾರೆ.

ಇದುವರೆಗೆ ತನ್ನ ನೆಚ್ಚಿನ ಸ್ಟಾರ್ ನ ಸಿನಿಮಾ ಹೆಸರನ್ನು ಅಥವಾ ಅವರ ಹೆಸರನ್ನೇ ಅಭಿಮಾನಿಗಳು ಹಾಕಿಸಿಕೊಂಡಿರುವುದನ್ನು ನಾವು ನೋಡುತ್ತಿದ್ದೆವು, ಮೊದಲ ಬಾರಿಗೆ ನಟನೊಬ್ಬ ಈ ರೀತಿ ಅಭಿಮಾನಿಗಳಿಗೆ ಅಭಿಮಾನ ತೋರಿರುವುದು ಇತಿಹಾಸದಲ್ಲೇ ಮೊದಲು. ಇನ್ನು ದರ್ಶನ್ ಅವರು ಈ ಟ್ಯಾಟುವನ್ನು ಬೆಂಗಳೂರಿನ ಅಶೋಕ ನಗರ ಸಮೀಪ ಇರುವ ಬ್ರಹ್ಮ ಟ್ಯಾಟೂಸ್ ಸ್ಟುಡಿಯೋದಲ್ಲಿ (Brahma tattoos studio) ಹಾಕಿಸಿಕೊಂಡಿದ್ದಾರೆ.

ಈ ಸ್ಟುಡಿಯೋ ನ ಆರ್ಟಿಸ್ಟ್ ಮತ್ತು ಓನರ್ ಕೂಡ ಆಗಿರುವ ಗಿರೀಶ್ ಬಿ ವಿ (Girish B V) ಅವರೇ ದರ್ಶನ್ ಅವರಿಗೆ ಈ ಟ್ಯಾಟು ಹಾಕಿದ್ದಾರೆ. ಈಗ ಎಲ್ಲಾ ಕಡೆ ವಿಚಾರ ಪ್ರಚಾರ ಆಗಿದ್ದು ಅಭಿಮಾನಿಗಳಂತೂ ದಿಲ್ ಖುಷ್ ಆಗಿದ್ದಾರೆ. ಈ ಕಾರಣದಿಂದಲೇ ನಾವು ದರ್ಶನ್ ಅವರನ್ನು ಇಷ್ಟು ಇಷ್ಟಪಡುತ್ತಿರುವುದು, ಕೊನೆವರೆಗೂ ನಾನು ಡಿ ಬಾಸ್ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಟ್ಯಾಟು ಹಾಕಿರುವವರಿಗೆ ಕೊಟ್ಟಿರುವ ಸಂಭಾವನೆ ವಿಷಯ ಕೂಡ ಚರ್ಚೆ ಆಗುತ್ತಿದೆ.

ದರ್ಶನ್ ಅವರು ಕಲೆಗೆ ಬೆಲೆ ಕಟ್ಟುವುದು ಅಸಾಧ್ಯ, ಆದರೆ ಇದಕ್ಕಾಗಿ ನಾನು ನಿಮಗೆ ಕೆಲಸದ ಹಣವನ್ನು ಕೊಡದೆ ವಂಚಿಸಲಾರೆ ಹಾಗಾಗಿ ಎಷ್ಟು ಹಣ ಕೊಡಬೇಕು ಎಂದು ಕೇಳಿದ್ದಾರೆ. ಮೊದಲಿಗೆ ಹಣ ತೆಗೆದುಕೊಳ್ಳಲು ಆರ್ಟಿಸ್ಟ್ ಒಪ್ಪದೆ ಹೋದರು ಕೊನೆಗೆ ಅವರ ಒತ್ತಾಯಕ್ಕೆ ಮಣ್ಣಿದು ಟ್ಯಾಟು ಹಾಕಲು ಆದ ಖರ್ಚನ್ನು ಹೇಳಲೇಬೇಕಾಯಿತು. ಆದರೆ ದರ್ಶನ್ ಅವರು ಆ ಖರ್ಚಿನ ಮೂರು ಪಟ್ಟು ಹಣ ಕೊಡುವ ಮೂಲಕ ಆರ್ಟಿಸ್ಟ್ ಗೆ ಸರ್ಪ್ರೈಸ್ ಮಾಡಿದ್ದಾರೆ. ಇದನ್ನು ಸ್ವತಃ ಟ್ಯಾಟು ಹಾಕಿದ ಆರ್ಟಿಸ್ಟ್ ಗಿರೀಶ್ ಬಿ.ವಿ ಅವರೇ ಹೇಳಿಕೊಂಡಿದ್ದಾರೆ. ಇದೆಲ್ಲಾ ಡಿ ಬಾಸ್ ನ ಹೃದಯವಂತಿಕೆ ಎನ್ನುವುದು ಹಾಗೂ ದರ್ಶನ್ ತೆರೆ ಮೇಲೆ ಮಾತ್ರ ಹೀರೊ ಅಲ್ಲ ತೆರೆ ಹಿಂದೆಯೂ ತಾನು ನಾಯಕ ಎನ್ನುವುದನ್ನು ಡಿ ಬಾಸ್ ಸಾಬೀತು ಪಡಿಸಿದ್ದಾರೆ.