Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಪಬ್ಲಿಕ್ ನಲ್ಲೆ ಕಂಠಪೂರ್ತಿ ಕುಡಿದು ಮತ್ತಿನ ಅಮಲಿನಲ್ಲಿ ತೆಳಾಡುತ್ತಿರುವ ನಟಿ ಕಾಜೊಲ್ ಮಗಳು, ಈ ವೈರಲ್ ವಿಡಿಯೋ ನೋಡಿ ಕಣ್ಣಿರಿಟ್ಟ ಕಾಜೋಲ್ & ಅಜಯ್

Posted on February 16, 2023 By Kannada Trend News No Comments on ಪಬ್ಲಿಕ್ ನಲ್ಲೆ ಕಂಠಪೂರ್ತಿ ಕುಡಿದು ಮತ್ತಿನ ಅಮಲಿನಲ್ಲಿ ತೆಳಾಡುತ್ತಿರುವ ನಟಿ ಕಾಜೊಲ್ ಮಗಳು, ಈ ವೈರಲ್ ವಿಡಿಯೋ ನೋಡಿ ಕಣ್ಣಿರಿಟ್ಟ ಕಾಜೋಲ್ & ಅಜಯ್

ನಾವು ತೆರೆ ಮೇಲೆ ನೋಡುವ ಸ್ಟಾರ್ಗಳ (Stars) ಬಗ್ಗೆ ವಿಪರೀತವಾದ ಅಭಿಮಾನ ಬೆಳೆಸಿಕೊಂಡಿರುತ್ತೇವೆ. ನಿಜ ಜೀವನದಲ್ಲಿ ಕೂಡ ಇವರ ಪಾತ್ರರಂತೆ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಭಾವಿಸಿಕೊಂಡಿರುತ್ತೇವೆ. ಅದಕ್ಕೆ ಪೂರಕವಾಗಿ ಎಷ್ಟೋ ಸ್ಟಾರ್ ಗಳು ನಿಜ ಜೀವನದಲ್ಲೂ ಕೂಡ ನಾಯಕರು ಎನಿಸಿಕೊಳ್ಳುವ ಕೆಲಸಗಳನ್ನು ಮಾಡಿ ಸಾರ್ವಜನಿಕರಿಗೆ ಸ್ಪೂರ್ತಿಯೂ ಆಗಿದ್ದಾರೆ. ಆ ಸ್ಟಾರ್ ಗಳಂತೇ ಅವರ ಮಕ್ಕಳು (Star kids) ಕೂಡ ಸೆಲೆಬ್ರಿಟಿಗಳೆ ಆಗಿರುವದರಿಂದ ಜನ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಫಾಲೋ ಮಾಡುತ್ತಾ ಗಮನಿಸುತ್ತಲೇ ಇರುತ್ತಾರೆ.

ಆದರೆ ಇತ್ತೀಚಿಗೆ ಸ್ಟಾರ್ ಮಕ್ಕಳುಗಳು ಪಬ್ಲಿಕಲ್ಲಿ ನಡೆದುಕೊಳ್ಳುತ್ತಿರುವ ರೀತಿ ನೋಡಿ ಮಂದಿ ಬಹಳ ಬೇಸರ ಆಗಿದ್ದಾರೆ ಅದರಲ್ಲೂ ಬಾಲಿವುಡ್ (Bollywood) ನಲ್ಲಿರುವ ದೊಡ್ಡ ದೊಡ್ಡ ತಾರೆಗಳ ಮಕ್ಕಳು ಬೇಜಾಬ್ದಾರಿಯಿಂದ ವರ್ತಿಸುವುದನ್ನು ನೋಡಿ ಈ ಬಾರಿ ಅವರಿಗೆ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಅಜಯ್ ದೇವಗನ್ (Ajay Devgan) ಹಾಗೂ ಕಾಜಲ್ (Khajal) ಪುತ್ರಿ ನೈಸಾ ದೇವಗನ್ (Nysa Devagan) ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿದ್ದರು.

ಸಿದ್ದಾರ್ಥ್ ಮಾಲ್ಹೋತ್ರ ಮತ್ತು ಕಿಯಾರ ಅದ್ವಾನಿ ಅವರ ರಿಸೆಪ್ಶನ್ ಪಾರ್ಟಿ (Party) ಗೆ ಹೋಗಿದ್ದ ನೈಸಾ ಫುಲ್ ಟೈಟಾಗಿ ರೋಡಿಗಿಳಿದಿದ್ದರು. ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಓಲಾಡುತ್ತಿದ್ದ ನೈಸಾ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮತ್ತೊಂದು ವಿಚಾರ ಏನೆಂದರೆ ಇವರು ಇದೇ ಮೊದಲಲ್ಲ. ಈ ಹಿಂದೆ ಕೂಡ ಅನೇಕ ಬಾರಿ ಹೀಗೆ ಕಾಣಿಸಿಕೊಂಡಿದ್ದಾರೆ. ನಿಸಾ ಅವರ ಹಿಂದಿನ ಫೋಟೋಗಳನ್ನು ನೋಡಿದರೆ ಯಾವಾಗಲೂ ಪಾರ್ಟಿಯಲ್ಲಿ ಇರುವುದು, ಮೋಜು-ಮಸ್ತಿ, ಕುಡಿತ ಬಾಯ್ ಫ್ರೆಂಡ್, ಪಾರ್ಟಿ ಇಂತಹ ಫೋಟೋಗಳೇ ಸಿಗುತ್ತವೆ.

ಹಾಗಾಗಿ ಈ ಬಾರಿ ನೈಸಾ ವರ್ತನೆಗೆ ಬಾರಿ ಖಂಡನೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವಾಗಿ ತಂದೆಯನ್ನು ಸಹ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ನೈಸಾ ಫೋಟೋ ವೈರಲ್ ಆಗಿ ಟ್ರೋಲ್ (Troll) ಕೂಡ ಆಗುತ್ತಿದೆ. ಕಮೆಂಟ್ ಮಾಡುವವರು ಅಜಯ್ ದೇವಗನ್ ಅವರನ್ನು ವಿಮಲ್ ತಿನ್ನುವುದು ಬಿಟ್ಟು ನಿಮ್ಮ ಮಗಳ ಕಡೆ ಗಮನ ಕೊಡಿ ಎಂದು ದೇವಗನ್ ಗೆ ಬುದ್ಧಿ ಹೇಳುತ್ತಿದ್ದಾರೆ, ಇನ್ನು ಕೆಲವರು ಸೌತ್ ಇಂಡಿಯನ್ ಸ್ಟಾರ್ ಗಳ ಮಕ್ಕಳನ್ನು ನೋಡಿ ಕಲಿಯಿರಿ ಹೇಗೆ ತಂದೆ ತಾಯಿ ಹೆಸರನ್ನು ಉಳಿಸಬೇಕು ಬೆಳೆಸಬೇಕು ಎನ್ನುವುದನ್ನು ಎಂದು ಬುದ್ಧಿ ಸಹ ಹೇಳಿದ್ದಾರೆ.

ಯಾಕೆಂದರೆ ಬಾಲಿವುಡ್ ಅಂಗಳದ ಬಿಗ್ ಸ್ಟಾರ್ ಗಳ ಮಕ್ಕಳು ಈ ರೀತಿ ಬೇಡದ ವಿಷಯಗಳಲ್ಲಿ ಪಬ್ಲಿಸಿಟಿ ಪಡೆಯುವುದು ಹೆಚ್ಚು. ವರ್ಷಗಳ ಹಿಂದೆ ಅಷ್ಟೇ ಶಾರುಖ್ ಪುತ್ರ ಡ್ರ-ಗ್ ಕೇಸ್ ಅಲ್ಲಿ ತಗಲಿ ಹಾಕಿಕೊಂಡಿದ್ದನ್ನು ಜನ ಮರೆತಿಲ್ಲ ಮತ್ತು ಅಮೀರ್ ಖಾನ್ ಅವರ ಪುತ್ರಿಯ ಬೋಲ್ಡ್ ಫೋಟೋಗಳಂತೂ ನೋಡುಗರಿಗೆ ಬಾರಿ ಬೇಸರ ತರಿಸಿದೆ, ಈಗ ಇದೇ ಹಾದಿಯಲ್ಲಿ ನೈಸಾ ದೇವಗನ್ ಕೂಡ ಮುಂದುವರೆದಿದ್ದಾರೆ.

ನೀವು ನಿಮ್ಮ ಇಷ್ಟ ಬಂದ ಹಾಗೆ ಹೇಗೆ ಆದರೂ ಇರಿ ಆದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಸ್ವಲ್ಪವಾದರೂ ಸಭ್ಯತೆ ಇರಲಿ. ಸ್ಟಾರ್ಗಳನ್ನು ಫಾಲೋ ಮಾಡುವಂತೆ ಅವರ ಮಕ್ಕಳುಗಳನ್ನು ಕೂಡ ಹಲವಾರು ಫಾಲೋ ಮಾಡುತ್ತಿರುತ್ತಾರೆ. ನಿಮ್ಮ ನಡತೆ ಹಲವರನ್ನು ದಾರಿ ತಪ್ಪಿಸಬಹುದು ಎಂದಿದ್ದಾರೆ. ಈ ವಿಚಾರದಲ್ಲಿ ದಕ್ಷಿಣ ಭಾರತದ ತಾರೆಗಳ ಮಕ್ಕಳನ್ನು ಕೊಂಡಾಡಲೇಬೇಕು. ಈಗಷ್ಟೇ ಮಾಧವನ್ ಮಗ ಸ್ವಿಮ್ಮಿಂಗ್ ಅಲ್ಲಿ ದೇಶಕ್ಕೆ ಪದಕ ತಂದಿದ್ದಾರೆ.

ಮಹೇಶ್ ಬಾಬು, ಪುನೀತ್ ರಾಜಕುಮಾರ್, ಸೂರ್ಯ, ವಿಜಯ್ ಈ ರೀತಿ ಯಾವ ತಾರೆ ಮಕ್ಕಳ ಬಗ್ಗೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ವರೆಗೆ ಈ ರೀತಿಯಾಗಿ ಟ್ರೋಲ್ ಆಗಿಲ್ಲ ಜೊತೆಗೆ ಆ ಮಕ್ಕಳು ಕೂಡ ಈ ರೀತಿ ನಡತೆಯನ್ನು ಹೊಂದಿಲ್ಲ. ತಂದೆ ತಾಯಿ ಸಮಕ್ಕೆ ಹೆಸರು ಮಾಡಲು ಆಗದಿದ್ದರೂ ಆ ಹೆಸರನ್ನು ಉಳಿಸಿಕೊಂಡು ಹೋಗುವ ಹಾದಿಯಲ್ಲಿದ್ದಾರೆ. ಇದೇ ಬುದ್ಧಿ ಬಿ ಟೌನ್ ಮಕ್ಕಳಿಗೂ ಬರಲಿ ಎಂದು ಹರಸೋಣ.

Viral News
WhatsApp Group Join Now
Telegram Group Join Now

Post navigation

Previous Post: ಹುಟ್ಟುಹಬ್ಬಕ್ಕೆ ವಿಶ್ ಮಾಡಿ, ದರ್ಶನ್ ಗೆ ಬುದ್ದಿವಾದ ಹೇಳಿದ ಪ್ರಥಮ್, ಈತನ ಮಾತು ಕೇಳಿ ಕೆಂಡಮಂಡಲವಾದ ಫ್ಯಾನ್ಸ್ ಅಷ್ಟಕ್ಕೂ ಪ್ರಥಮ್ ದರ್ಶನ್ ಗೆ ಹೇಳಿದ್ದೇನು ಗೊತ್ತ.?
Next Post: ಮೋದಿ ಭೇಟಿಗೆ ನಿಮ್ಗೆ ಆಹ್ವಾನ ಇರ್ಲಿಲ್ವಾ ಅಂತ ಕೇಳಿದ್ಕೆ ಸುದೀಪ್ ಕೊಟ್ಟ ಉತ್ತರ ಏನು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore