ಹುಟ್ಟುಹಬ್ಬಕ್ಕೆ ವಿಶ್ ಮಾಡಿ, ದರ್ಶನ್ ಗೆ ಬುದ್ದಿವಾದ ಹೇಳಿದ ಪ್ರಥಮ್, ಈತನ ಮಾತು ಕೇಳಿ ಕೆಂಡಮಂಡಲವಾದ ಫ್ಯಾನ್ಸ್ ಅಷ್ಟಕ್ಕೂ ಪ್ರಥಮ್ ದರ್ಶನ್ ಗೆ ಹೇಳಿದ್ದೇನು ಗೊತ್ತ.?

 

ಕನ್ನಡದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರಿಗೆ ಇಂದು ಹುಟ್ಟು ಹಬ್ಬದ (Birthday) ಸಂಭ್ರಮ. 46ನೇ ವಸಂತಕ್ಕೆ ಕಾಲಿಟ್ಟಿರುವ ದರ್ಶನ್ ಅವರ ಮನೆ ಮುಂದೆ ತಡರಾತ್ರಿಯಿಂದಲೇ ಅಭಿಮಾನಿಗಳು ಸೇರಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಮತ್ತು ಈ ಬಾರಿ ದರ್ಶನ್ ಅವರು ಹುಟ್ಟುಹಬ್ಬಕ್ಕೆ ಹಾರ ತುರಾಯಿ ಕೇಕ ತರುವುದು ಬೇಡ ಬದಲಿಗೆ ನಿಮ್ಮ ಕೈಲಾದಷ್ಟು ಧವಸದಾನ್ಯ ತನ್ನಿ ಅವಶ್ಯಕತೆ ಇರುವವರಿಗೆ ತಲುಪಿಸೋಣ ಎನ್ನುವ ಕರೆ ಕೊಟ್ಟಿದ್ದರೆ.

ಅದಕ್ಕೆ ಓಗೊಟ್ಟ ದಚ್ಚು ಸೆಲೆಬ್ರಿಟಿಗಳು ದರ್ಶನ್ ಮನೆಗೆ ಮೂಟೆ ಮೂಟೆ ಗ್ರೋಸರಿ ತಲುಪಿಸಿದ್ದಾರೆ. ಈ ಸಂಭ್ರಮ ನಡುವೆ ಕಣ್ಮರೆಯಾಗಿ ಹೋಗಿತ್ತು. ಎರಡು ವರ್ಷ ಲಾಕ್ಡೌನ್ ಕಾರಣ ಮತ್ತು ಕಳೆದ ವರ್ಷ ಪುನೀತ್ ಅವರ ಅಗಲಿಕೆ ಕಾರಣ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಈಗ ಮತ್ತೆ ಅಭಿಮಾನಿಗಳ ಮನಸಲ್ಲಿ ದೀಪಾವಳಿ ಹಾಗೂ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಇಷ್ಟಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ದರ್ಶನ್ ಅವರಿಗೆ ಅಭಿಮಾನಿಗಳು, ಕಲಾ ರಸಿಕರು ಮತ್ತು ಸಿನಿಮಾ ರಂಗದ ಗಣ್ಯರಿಂದ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ದರ್ಶನ್ ಅವರ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿರುವ ಹಲವು ಮಂದಿ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಶುರು ಕೋರಿದ್ದಾರೆ. ಈ ಸಾಲಿದಲ್ಲಿ ಒಳ್ಳೆ ಹುಡುಗ ಪ್ರಥಮ್ (Olle huduga Pratham) ಕೂಡ ಸೇರಿದ್ದು, ಹುಟ್ಟು ಹಬ್ಬದ ಶುಭಾಶಯಗಳು ಜೊತೆಗೆ ಒಂದಿಷ್ಟು ಬರಹಗಳನ್ನು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ‌

ಪ್ರಥಮ್ ಅವರು ಮಾತಿನ ಮಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ ಸಿನಿಮಾ ರಂಗಕ್ಕೆ ಸಂಬಂಧ ಪಟ್ಟ ಅನೇಕ ವಿಷಯಗಳ ಬಗ್ಗೆ ಸಿನಿಮಾ ವಿಚಾರವಾಗಿ ಸಿನಿಮಾ ತಾರೆಗಳ ವಿಚಾರವಾಗಿ ತಡವಿರದೆ ಮಾತನಾಡುತ್ತಾರೆ ಇವರು. ಇದರೊಡನೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಲು ಸಾಲು ಪೋಸ್ಟ್ಗಳನ್ನು ಈ ಕುರಿತು ಹಾಕುತ್ತಲೇ ಇರುತ್ತಾರೆ.

ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಹೇಳುತ್ತಾ, ಎರಡು ಸಲಹೆಗಳನ್ನು ಕೊಟ್ಟಿದ್ದಾರೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ದರ್ಶನ್ ಸರ್ ಈ ಸಮಯದಲ್ಲಿ ನಾನು ಹೇಳುವ ಈ ಎರಡು ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಹೇಳಿ ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಅವರ ಬಳಿಕ ಸಿಕ್ಕಿರುವ ದೊಡ್ಡ ಮಾಸ್ ಹೀರೋ, ನೀವು ನೋಡಿ ನಿಮಗೆ ಎಷ್ಟೊಂದು ದೊಡ್ಡ ಫ್ಯಾನ್ಸ್ ಬಳಗ ಇದೆ. ಇಷ್ಟಿದ್ದ ಮೇಲೆ ಕೂಲಾಗಿರಿ, ಆರಾಮಾಗಿರಿ.

ಮತ್ತೆ ಎರಡನೆಯದಾಗಿ ನಿಮ್ಮ ಹಾಗೂ ಮಾಧ್ಯಮದವರ ನಡುವಿನರುವ ವೈ ಮನಸು ಆದಷ್ಟ ಬೇಗ ದೂರ ಆಗಲಿ ಇದಕ್ಕೆ ಸಂಬಂಧಪಟ್ಟ ಹಾಗೆ ನಿಮ್ಮ ಹಿತ ಬಯಸುವವರು ಮಧ್ಯಸ್ತಿಕೆ ವಹಿಸಿ ಆದಷ್ಟು ಬೇಗ ಇದನ್ನೆಲ್ಲ ಸರಿ ಮಾಡಲಿ. ಅಂಬರೀಶ್ ಅಣ್ಣ ಇಂದು ಬದುಕಿದ್ದರೆ ಈ ವಿವಾದ ಇಷ್ಟು ಬೆಳೆಯಲು ಬಿಡುತ್ತಿರಲಿಲ್ಲ. ಆದಷ್ಟು ಬೇಗ ಸರಿಪಡಿಸಿಕೊಳ್ಳಿ. ಇದೇ ನಿಮ್ಮ ಕಡೆಯಿಂದ ಅಭಿಮಾನಿಗಳಿಗೆ ಸಿಗುವ ಬರ್ತಡೇ ಗಿಫ್ಟ್ ಆಗಲಿ ಎಂದು ಬರೆದುಕೊಂಡಿದ್ದಾರೆ.

ಆದರೆ ಪ್ರಥಮ್ ಅವರ ಈ ಮಾತಿನ ಬಗ್ಗೆ ಅಭಿಮಾನಿಗಳು ಆ.ಕ್ರೋ.ಶ ಹೊರಹಾಕುತ್ತಿದ್ದಾರೆ. ಪ್ರಥಮ್ ಅವರ ಟ್ವೀಟ್ ಗೆ ರೀ ಟ್ವೀಟ್ ಮಾಡುವ ಮೂಲಕ ಹುಟ್ಟು ಹಬ್ಬದ ವಿಶ್ ಮಾಡಿ ಸುಮ್ಮನಾಗಿ ಹೆಚ್ಚಿನ ವಿಷಯ ನಿಮಗೆ ಬೇಡ ಅವರ ಬಗ್ಗೆ ಸಲಹೆ ಕೊಡುವಷ್ಟು ದೊಡ್ಡವನು ನೀನಲ್ಲ ಎಂಬಿತ್ಯಾದಿ ಮಾತುಗಳಿಂದ ಪ್ರಥಮ್ ಅವರನ್ನು ಖಂಡಿಸುತ್ತಿದ್ದಾರೆ.

 

Leave a Comment