Home Useful Information ರೈತರಿಗೆ 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ, ಏಪ್ರಿಲ್ 1ರಿಂದಲೇ ಹೊಸ ಯೋಜನೆ ಜಾರಿ.

ರೈತರಿಗೆ 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ, ಏಪ್ರಿಲ್ 1ರಿಂದಲೇ ಹೊಸ ಯೋಜನೆ ಜಾರಿ.

0
ರೈತರಿಗೆ 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ, ಏಪ್ರಿಲ್ 1ರಿಂದಲೇ ಹೊಸ ಯೋಜನೆ ಜಾರಿ.

 

ಫೆಬ್ರವರಿ 28ರಂದು ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಕರ್ನಾಟಕದ ರೈತರಿಗೆ ಸಿಹಿ ಸುದ್ದಿ ನೀಡಿದ್ದರು. ಅದೇನೆಂದರೆ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷದವರೆಗೆ ಸಾಲ ಕೊಡುವುದಾಗಿ ತಿಳಿಸಿದ್ದರು. ಈಗಾಗಲೇ ರಾಜ್ಯಪಾಲರ ಅನುಮತಿಗೆ ವರೆಗೆ ಹೋಗಿದೆ, ಏಪ್ರಿಲ್ ಒಂದರಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎನ್ನುವ ಭರವಸೆ ನೀಡಿದ್ದರು.

ಕರ್ನಾಟಕ ಸರ್ಕಾರ ತನ್ನ ಬಜೆಟ್ ಕೂಡ ಮಂಡಿಸಿದೆ ಇದರ ಬೆನ್ನಲ್ಲೇ ರೈತರಿಗೆ ಸಿಹಿ ಸುದ್ದಿ ಕೂಡ ಸರ್ಕಾರದ ಕಡೆಯಿಂದ ಹೊರಬಂದಿದೆ ಅದೇನೆಂದರೆ ಇದುವರೆಗೆ ಸಹಕಾರ ಸಂಘಗಳಲ್ಲಿ ಕೊಡುತ್ತಿದ್ದ ಶೂನ್ಯ ಬಡ್ಡಿ ದರದ ಸಾಲವನ್ನು 5 ಲಕ್ಷದವರೆಗೆ ಹೆಚ್ಚಿಸಲಾಗಿದೆ ಈ ಯೋಜನೆ ಲಾಭ ಪಡೆಯಲು ಇರುವ ನಿಯಮಗಳೇನು ಮತ್ತು ವಿಧಾನ ಹೇಗೆ ಎನ್ನುವ ಮಾಹಿತಿಗಾಗಿ ಪೂರ್ತಿ ಓದಿ.

ಬಿತ್ತನೆ ಬೀಜ, ಗೊಬ್ಬರ, ಔಷಧಿ, ಕೃಷಿಯಂತ್ರ ಬಿಡಿ ಭಾಗ ಖರೀದಿ, ಕುರಿ ಸಾಕಾಣಿಕೆ, ಪಶು ಸಾಕಾಣಿಕೆ, ಹಂದಿ ಸಾಕಾಣಿಕೆ ಇನ್ನು ಮುಂತಾದ ರೈತರಿಗೆ ಅನುಕೂಲವಾಗುವ ಕೃಷಿಗೆ ಸಂಬಂಧಪಟ್ಟ ಕಾರ್ಯಗಳಿಗೆ ಬಳಸಿಕೊಳ್ಳಲು ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪಿಕಾರ್ಡ್ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರಿ ಕೇಂದ್ರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಿದೆ.

ಈವರೆಗೆ ಡಿಸಿಸಿ ಬ್ಯಾಂಕಿಂದ ಇದೇ ರೀತಿಯಾಗಿ ಮೂರು ಲಕ್ಷದವರೆಗೂ ಕೂಡ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು ,ಈಗ ಅದು ಐದು ಲಕ್ಷದ ವರೆಗೂ ಕೂಡ ಹೆಚ್ಚಿಗೆ ಆಗಿದೆ. ಆದರೆ ಇದು ಎಲ್ಲ ರೈತರಿಗೂ ಲಭಿಸುವುದಿಲ್ಲ. ಡಿಸಿಸಿ ಬ್ಯಾಂಕ್ ಇಂದ ಸಾಲ ಪಡೆಯಬೇಕಾದರೆ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪಿಕಾರ್ಡ್ ಅಥವಾ ಜಿಲ್ಲಾ ಸಹಕಾರ ಬ್ಯಾಂಕ್ ಗಳಲ್ಲಿ ಸದಸ್ಯತ್ವ ಹೊಂದಿದ ರೈತರಿಗೆ ಮಾತ್ರ ಈ ಅನುಕೂಲ ಸಿಗಲಿದೆ.

ರೈತರ ಹೆಸರಿನಲ್ಲಿ ಜಮೀನು ಇದ್ದು ಅದರ ಪಹಣಿ ಅವರ ಹೆಸರಿನಲ್ಲಿಯೇ ಇರಬೇಕು ಮತ್ತು ಆಧಾರ್ ಕಾರ್ಡ್ ಮತ್ತು ಅಜ್ಜಿ ಸಲ್ಲಿಸುವವರ ಪಾಸ್ ಬುಕ್ ಜೆರಾಕ್ಸ್ ಇನ್ನು ಮುಂತಾದ ಅಗತ್ಯ ದಾಖಲೆಗಳೆಲ್ಲ ಸರಿಯಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಗಳು ಈ ಅನುಕೂಲತೆಯ ಲಾಭ ಪಡೆಯಲು ಅವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೂಡ ಕಡ್ಡಾಯ.

ರೈತ ವಾಸಿಸುವ ಸ್ಥಳದ ಸಂಘ ಅಥವಾ ಅವರ ಜಮೀನಿನ ವ್ಯಾಪ್ತಿಯಲ್ಲಿ ಇರುವ ಬ್ಯಾಂಕ್ ಗಳಲ್ಲಿ ಮಾತ್ರ ಅವರು ಸಾಲ ಪಡೆಯಲು ಅರ್ಹರಾಗಿರುತ್ತಾರೆ. ವಾಸಸ್ಥಳದ ಸಂಘದಲ್ಲಿ ಸಾಲ ನೀಡಲು ಸಾಧ್ಯವಾಗದೆ ಇದ್ದಾಗ ಅವರಿಂದ ನಿರಪೇಕ್ಷಣ ಪತ್ರ ಪಡೆಯಬೇಕು ಅದನ್ನು ಹತ್ತಿರದ ಡಿಸಿಸಿ ಬ್ಯಾಂಕಿಗೆ ನೀಡಿದರೆ ಅಲ್ಲಿ ಈ ಸಾಲ ಸೌಲಭ್ಯ ದೊರೆಯಲಿದೆ.

ಮತ್ತೊಂದು ಪ್ರಮುಖ ನಿಯಮ ಏನು ಎಂದರೆ ಕಡ್ಡಾಯವಾಗಿ ಈ ರೈತ ಕರ್ನಾಟಕದಲ್ಲಿಯೇ ವಾಸ ಮಾಡುತ್ತಿರಬೇಕು. ಕರ್ನಾಟಕದಲ್ಲಿ ಜಮೀನು ಹೊಂದಿ ಬೇರೆ ಕಡೆ ವಾಸವಿರುವ ರೈತರುಗಳಿಗೆ ಈ ಸಾಲ ಸೌಲಭ್ಯ ಸಿಗುವುದಿಲ್ಲ. ಈ ಹಿಂದೆ ಸರ್ಕಾರ ಎರಡು ಬಾರಿ ಈ ರೀತಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಹಣದ ಮೊತ್ತವನ್ನು ಹೆಚ್ಚಿಸಿದೆ. ಈಗ ಮೂರನೇ ಬಾರಿ ಅದನ್ನು ಐದು ಲಕ್ಷದವರೆಗೂ ಕೂಡ ತಂದಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹತ್ತಿರದ ಪ್ರಾರ್ಥಮಿಕ ಕೃಷಿಪತ್ತಿನ ಸಹಕಾರಿ ಬ್ಯಾಂಕ್ ಇವರ ಬಳಿ ವಿಚಾರಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.

LEAVE A REPLY

Please enter your comment!
Please enter your name here