Sunday, May 28, 2023
HomePublic Vishyaತಾಯಿಯ ರೂಮ್ ನಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್‌ ಮಾಡಿದ ಮಗಳು.! ರೆಕಾರ್ಡ್ ಆಗಿದ್ದ ವೀಡಿಯೊ...

ತಾಯಿಯ ರೂಮ್ ನಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್‌ ಮಾಡಿದ ಮಗಳು.! ರೆಕಾರ್ಡ್ ಆಗಿದ್ದ ವೀಡಿಯೊ ನೋಡಿ ಕುಸಿದು ಬಿದ್ದಳು…! ಅಷ್ಟಕ್ಕೂ ಅದರಲ್ಲಿ ಏನಿತ್ತು ಗೊತ್ತ.?

 

ಕೇರಳದ ಒಂದು ಮಧ್ಯಮ‌ ವರ್ಗದ ಕುಟುಂಬದ ಒಂದು ಹುಡುಗಿ 10 ವರ್ಷ ವಯಸ್ಸಿನ ರೇಖಾ. ಇವಳ ತಂದೆ ಮ.ರ.ಣ ಹೊಂದಿದ್ದರು ಅಂದಿನಿಂದ ರೇಖಾ ತಾಯಿ ತುಂಬಾ ಕಷ್ಟಪಟ್ಟು ಮನೆಗಳಲ್ಲಿ ಕೆಲಸ ಮಾಡಿ ಮಗಳನ್ನು ಸಾಕಿದ್ದರು. ರೇಖಾ ಚೆನ್ನಾಗಿ ಓದಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಅಂದಿನಿಂದ ಆಫೀಸಿನಲ್ಲಿ ನಿಯತ್ತಾಗಿ ಕೆಲಸ ಮಾಡಲು ಪ್ರಾರಂಭಿಸಿದಳು.

ರೇಖಾಳ ಪ್ರಾಮಾಣಿಕತೆ ಮತ್ತು ಕಾರ್ಯವೈಖರಿ ಮೆಚ್ಚಿ ಅವಳಿಗೆ ಪ್ರಮೋಷನ್ ನೀಡಿ ಅಮೇರಿಕಾದಲ್ಲಿರುವ ತಮ್ಮದೇ ಕಂಪನಿಯಲ್ಲಿ ಕೆಲಸ ಮಾಡಬೇಕು ತಿಂಗಳಿಗೆ ಒಂದು ಲಕ್ಷ ಸಂಬಳ ನೀಡುತ್ತೇನೆ ಎಂದು ಮ್ಯಾನೇಜರ್ ಹೇಳಿದರು. ರೇಖಾಗೆ ತುಂಬಾ ಖುಷಿಯಾಗುತ್ತದೆ. ತಾಯಿ ನನ್ನ ಕಷ್ಟ ಪಟ್ಟು ಸಾಕಿದಕ್ಕೂ ಸಾರ್ಥಕವಾಯಿತು ಇನ್ನು ಮುಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಮೇರಿಕಾಗೆ ಅಮ್ಮನನ್ನು ಕೂಡ ಕರೆದುಕೊಂಡು ಹೋಗಬೇಕೆಂದು ಅಂದುಕೊಂಡಳು ಆದರೆ ಆಫೀಸಿನಲ್ಲಿ ರೇಖಾ ಒಬ್ಬಳು ಮಾತ್ರ ಹೋಗಬೇಕು ಎಂದರು.

ಅದೇ ಸಮಯಕ್ಕೆ ತಾಯಿಗೆ ಅನಾರೋಗ್ಯ ಉಂಟಾಗುತ್ತದೆ ಆಗ ಇಲ್ಲೇ ಇದ್ದು ತಾಯಿಯನ್ನು ನೋಡಿಕೊಳ್ಳುವುದೇ ಅಥವಾ ಅಮೇರಿಕಾ ಕೆಲಸಕ್ಕೆ ಹೋಗುವುದೇ ಎಂದು ಗೊಂದಲಕ್ಕೀಡಾಗಿ ತಾಯಿಯ ಹತ್ತಿರ ಚರ್ಚಿಸಿದಾಗ ತಾಯಿಯು ಮಗಳು ಇನ್ನು ಎತ್ತರಕ್ಕೆ ಬೆಳೆಯಬೇಕೆನ್ನುವ ಆಸೆಯಿಂದ ರೇಖಾ ನೀನು ಅಮೇರಿಕಾಗೆ ಹೋಗು ನನ್ನ ಬಗ್ಗೆ ಚಿಂತಿಸಬೇಡ ನನ್ನ ಆರೋಗ್ಯ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

ರೇಖಾಗೆ ತಾಯಿಯನ್ನು ಬಿಟ್ಟು ಹೋಗುವ ಮನಸ್ಸಿಲ್ಲದಿದ್ದರು ಅಮೇರಿಕಾಗೆ ಹೋಗಲು ನಿರ್ಧರಿಸಿದಳು. ತನ್ನ ತಾಯಿಯನ್ನು ನೋಡಿಕೊಳ್ಳಲು ಒಬ್ಬಳು ಮಹಿಳೆಯನ್ನು ನೇಮಿಸಿ ನನ್ನ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳಬೇಕೆಂದು ಹೇಳಿ ಮರು ದಿನವೇ ಅಮೇರಿಕಾಗೆ ಹೊರಡುತ್ತಾಳೆ.

ನಂತರ ದಿನ ತನ್ನ ತಾಯಿಗೆ ಫೋನ್ ಮಾಡಿ ಮಾತಾಡುತ್ತಿದ್ದ ರೇಖಾ ಒಂದು ದಿನ ವೀಡಿಯೊ ಕಾಲ್ ಮಾಡಿ ತನ್ನ ತಾಯಿಯನ್ನು ನೋಡಿದಳು ತಾಯಿಯ ಕಣ್ಣಲ್ಲಿ ಕಣ್ಣೀರು ಬಂತ್ತು ತಾಯಿ ಆರೋಗ್ಯ ತುಂಬಾ ಹದಗೆಟ್ಟಿತ್ತು. ರೇಖಾ ತಾಯಿಯ ಸ್ಥಿತಿ ನೋಡಿ ತಡೆಯಲಾಗದೆ ಮುಂದಿನ ದಿನವೇ ಕೇರಳಗೆ ಬಂದು ಬಿಟ್ಟಳು. ಮನೆಗೆ ಬಂದ ರೇಖಾ ತನ್ನ ತಾಯಿ ಜೊತೆ ಹತ್ತು ದಿನಗಳವರೆಗೂ ಇದ್ದಾಗ ತಾಯಿ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿದೆ.

ಆಗ ತಾನು ಮನೆಯಲ್ಲಿ ಇದ್ದಷ್ಟು ದಿನ ತಾಯಿ ಆರಾಮಾಗಿರುತ್ತಾರೆ ಆದರೆ ನಾನು ಅಮೇರಿಕಾಕ್ಕೆ ಹೋದ ಬಳಿಕ ತಾಯಿ ಅರೋಗ್ಯ ಏಕೆ ಹಾಳಾಗುತ್ತೆ ಎಂದು ಅನುಮಾನಗೊಂಡು ಮನೆ ಪೂರ್ತಿ ಯಾರಿಗೂ ತಿಳಿಯದ ಹಾಗೆ ಸಿಸಿ ಕ್ಯಾಮರಾ ಹಾಕಿಸಿ, ಪುನಃ ಅಮೇರಿಕಾಕ್ಕೆ ಹೋಗುತ್ತಾಳೆ. ಹತ್ತು ದಿನ ರಜಾ ಹಾಕಿದ್ದರಿಂದ ಮೂರು ದಿನಗಳ ಕಾಲ ಬಹಳ ಬ್ಯುಸಿ ಆಗಿರುತ್ತಾಳೆ.

ನಾಲ್ಕನೇ ದಿನ ರೇಖಾ ತನ್ನ ಮೊಬೈಲ್ ನಿಂದ ಕನೆಕ್ಟ್ ಮಾಡಿಕೊಂಡಿದ್ದ ಸಿಸಿಟಿವಿ ದೃಶ್ಯಗಳನ್ನು ನೋಡುತ್ತಾ ಅನಾರೋಗ್ಯ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ಆ ಕೇರ್ ಟೇಕರ್ ಗೆ ಹೆಚ್ಚಿನ ಸಂಬಳ ಮಾಡಿದ್ದರೂ ತಾಯಿಯನ್ನು ನಿಯತ್ತಾಗಿ ನೋಡಿಕೊಳ್ಳದೆ ಬೈಯುವುದು ಹೊಡೆಯುವುದು ಸರಿಯಾದ ಊಟ ನೀಡದೆ ಅಡುಗೆ ಸಾಮಾಗ್ರಿಗಳನ್ನು ಕದ್ದು ತನ್ನ ಮನೆಗೆ ತಗೊಂಡು ಹೋಗುವುದು ಟಿವಿ ನೋಡುವುದು ಮೊಬೈಲ್ ಅಲ್ಲಿ ಮಾತನಾಡುವುದು ಇವುಗಳನ್ನು ಆ ಮಹಿಳೆಯು ಬೆಳ್ಳಿಗ್ಗೆಯಿಂದ ಸಂಜೆವರೆಗೂ ಮಾಡುತ್ತಿದ್ದಳು.

ಇದನ್ನು ನೋಡಿದ ರೇಖಾ ದುಃಖ ಪಟ್ಟು ತನ್ನಿಂದ ತಾಯಿಗೆ ಇಷ್ಟೆಲ್ಲಾ ಕಷ್ಟ ಬಂದಿದೆ ಎಂದು ಕಣ್ಣೀರು ಹಾಕಿ ತಕ್ಷಣ ಅಮೇರಿಕಾದಿಂದ ಕೇರಳದ ತನ್ನ ಮನೆಗೆ ಬಂದು ಆ ಮಹಿಳೆಗೆ ಚೆನ್ನಾಗಿ ಬೈದು ಪೋಲೀಸರಿಗೆ ತಿಳಿಸಿ ಅರೆಸ್ಟ್ ಮಾಡಿಸಿದಳು. ಅಮ್ಮ ನಲ್ಲಿ ಕ್ಷಮೆ ಕೋರಿ ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗಲ್ಲ ಅಂತ ಹೇಳಿ ರೇಖಾ ಅಮೇರಿಕಾ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೇರಳದಲ್ಲಿ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ತನ್ನ ತಾಯಿಯ ಜೊತೆ ಖುಷಿಯಿಂದ ಜೀವನ ಮಾಡುತಿದ್ದಾರೆ.