Sunday, June 4, 2023
HomePublic Vishyaಬಾಲ್ಯದಲ್ಲೇ ಇಬ್ಬರು ಹಿಂದೂ ಹೆಣ್ಣು ಮಕ್ಕಳನ್ನು ದತ್ತು ಪಡೆದ ಮುಸ್ಲಿಂ ವ್ಯಕ್ತಿ. ಮಕ್ಕಳು ದೊಡ್ಡವರಾದ ಮೇಲೆ...

ಬಾಲ್ಯದಲ್ಲೇ ಇಬ್ಬರು ಹಿಂದೂ ಹೆಣ್ಣು ಮಕ್ಕಳನ್ನು ದತ್ತು ಪಡೆದ ಮುಸ್ಲಿಂ ವ್ಯಕ್ತಿ. ಮಕ್ಕಳು ದೊಡ್ಡವರಾದ ಮೇಲೆ ಏನ್ ಮಾಡ್ದ ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ.!

 

ಮಹಾರಾಷ್ಟ್ರ ರಾಜ್ಯದ ಅಹಮದಾಬಾದ್ ನಗರದಲ್ಲಿನ ಬಾಬಾ ಬಾಯಿ ಪಠಣ್ ಎಂಬ ಒಬ್ಬ ವ್ಯಕ್ತಿಯು ಮೂಲತಃ ಮುಸ್ಲಿಂ ಧರ್ಮ ಪಾಲನೆ ಮಾಡುತ್ತಿರುತ್ತಾರೆ. ಬಾಬಾ ಬಾಯಿ ಜೀವನ ನಡೆಸಲು ಗುಜರಿ ವ್ಯಾಪಾರ ಮಾಡುತ್ತಿರುತ್ತಾರೆ. ಈ ವ್ಯಾಪಾರದಿಂದ ಬರುತ್ತಿದ್ದ ಅಲ್ಪ ಸ್ವಲ್ಪ ಹಣದಿಂದಲೇ ಇವರು ತಮ್ಮ ಜೀವನ ಸಾಗಿಸುತ್ತಿದ್ದರು. ಈ ವ್ಯಕ್ತಿಯು 20 ವರ್ಷಗಳ ಹಿಂದೆ ಮನೆ ಮನೆಗೆ ಹೋಗಿ ಹಳೆ ವಸ್ತುಗಳನ್ನು ಖರೀದಿಸುತ್ತಿದ್ದರು.

ಆ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿಸಲು ಹೋದಾಗ ಇಬ್ಬರು ಹೆಣ್ಣು ಮಕ್ಕಳು ಒಂದು ಮನೆಯ ಮುಂದೆ ಕಣ್ಣೀರಿಡುತ್ತಾ ಕುಳಿತಿದ್ದರು. ಆ ಹೆಣ್ಣು ಮಕ್ಕಳು ಕಣ್ಣೀರಿಡುತ್ತಿದ್ದನ್ನು ನೋಡಿದ ಬಾಬಾ ಬಾಯಿ ಅವರಿಗೆ ಬೇಸರವಾಗಿ ತಮ್ಮ ಸೈಕಲ್ ಅನ್ನು ಒಂದು ಬದಿಯಲ್ಲಿ ನಿಲ್ಲಿಸಿ ಅಕ್ಕ ಪಕ್ಕದ ಮನೆಯವರನ್ನು ಆ ಹೆಣ್ಣು ಮಕ್ಕಳ ಬಗ್ಗೆ ಕೇಳುತ್ತಾರೆ. ಈ ಮಕ್ಕಳಿಗೆ ತಂದೆ ತಾಯಿ ಯಾರು ಇಲ್ಲವೇ? ಏಕೆ ಆ ಮಕ್ಕಳು ಅಳುತ್ತಾ ನಿಂತಿದ್ದಾರೆ? ಎಂದು ವಿಚಾರಿಸಿದಾಗ ಪಕ್ಕದ ಮನೆಯಲ್ಲಿ ವಾಸ ಮಾಡುತ್ತಿದ್ದ ಶಂಕರಪ್ಪ ಎಂಬ ವ್ಯಕ್ತಿ ಮಕ್ಕಳ ಜೀವನದ ಕಥೆಯನ್ನು ಹೇಳಿದ್ದಾರೆ.

ಈ ಇಬ್ಬರು ಹೆಣ್ಣು ಮಕ್ಕಳಿಗೆ ಇನ್ನೂ ಕೇವಲ ಎರಡು ವರ್ಷ ವಯಸ್ಸು ಮಾತ್ರ ಈ ಮಕ್ಕಳ ತಂದೆ ತಾಯಿಯು ಈ ವಾರದ ಹಿಂದೆ ಸಾಲ ಬಾಧೆ ತಡೆಯಲಾರದೆ ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗಿದ್ದಾರೆ. ವಾರದಿಂದ ಆ ಇಬ್ಬರು ಹೆಣ್ಣು ಮಕ್ಕಳೇ ಆ ಮನೆಯಲ್ಲಿ ಇದ್ದಾರೆ ಅಕ್ಕ ಪಕ್ಕದಲ್ಲಿ ವಾಸ ಮಾಡುತ್ತಿರುವ ಮನೆಯವರು ಪ್ರತಿ ದಿನ ಈ ಮಕ್ಕಳಿಗೆ ಊಟ ನೀಡುತ್ತಿದ್ದೇವೆ. ಈ ಮಕ್ಕಳು ಈಗ ಅನಾಥ ಮಕ್ಕಳು ಎಂದು ಶಂಕರಪ್ಪ ಬಾಬಾ ಬಾಯಿಗೆ ಹೇಳುತ್ತಾರೆ.

ಈ ಪುಟಾಣಿ ಹೆಣ್ಣು ಮಕ್ಕಳ ಕಥೆಯನ್ನು ಕೇಳಿದ ಬಾಬಾ ಬಾಯಿಗೆ ತುಂಬ ದುಃಖವಾಗಿದೆ. ಆ ಹೆಣ್ಣುಮಕ್ಕಳು ಹಿಂದೂ ಧರ್ಮಕ್ಕೆ ಸೇರಿದವರು ಎಂದು ಬಾಬಾ ಬಾಯಿಗೆ ಗೊತ್ತಾಗಿದ್ದರು ಹಿಂದೆ ಮುಂದೆ ನೋಡದೆ ತಕ್ಷಣ ಸರ್ಕಾರದ ನಿಯಮದ ಅನ್ವಯ ಆ ಹೆಣ್ಣು ಮಕ್ಕಳನ್ನು ದತ್ತು ಪಡೆದು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾರೆ. ಈ ಮಕ್ಕಳಿಗೆ ಅವರ ತಂದೆ ತಾಯಿಗಳು ಆಶಾ ಉಷಾ ಎಂದು ಹೆಸರು ಇಟ್ಟಿರುತ್ತಾರೆ. ಬಾಬಾ ಬಾಯಿ ಅವರು ಈ ಮಕ್ಕಳನ್ನು ದತ್ತು ಪಡೆದ ನಂತರ ಹೆಸರನ್ನು ಬದಲಾಯಿಸದೆ ಮುಸ್ಲಿಂ ಧರ್ಮಕ್ಕು ಮತಾಂತರಿಸದೆ ತನ್ನ ತಂಗಿಯರಂತೆ ಆ ಮಕ್ಕಳನ್ನು ಸಾಕಲು ಪ್ರಾರಂಭಿಸಿದರು. ಒಳ್ಳೆಯ ಶಾಲೆಯಲ್ಲಿ ಉತ್ತಮ ಶಿಕ್ಷಣ ಕೊಡಿಸಿದ್ದರು.

ಆ ಇಬ್ಬರು ಹೆಣ್ಣು ಮಕ್ಕಳಿಗೆ 20 ವರ್ಷ ತುಂಬಿದ ಬಳಿಕ ಸ್ವಂತ ಅಣ್ಣನ ಜವಾಬ್ದಾರಿಯಂತೆ ಇಬ್ಬರಿಗೂ ಕೆಲಸದಲ್ಲಿ ಇರುವಂತಹ ಹಿಂದೂ ಯುವಕರನ್ನು ಹುಡುಕಿ ತನ್ನ ಸ್ವಂತ ಹಣದಲ್ಲಿ ಅದ್ದೂರಿಯಾಗಿ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುತ್ತಾರೆ. ಹೀಗೆ ಇಬ್ಬರು ಅನಾಥ ಹೆಣ್ಣು ಮಕ್ಕಳಿಗೆ ಜೀವನ ರೂಪಿಸಿದ್ದಾರೆ. ಇಲ್ಲಿ ಯಾವುದೇ ಧರ್ಮ ಜಾತಿ ಮುಖ್ಯವಲ್ಲ ಮನುಸ್ಯತ್ವ, ಮಾನವೀಯತೆ ಮುಖ್ಯ ಭೂಮಿ ಮೇಲೆ ಎಲ್ಲ ಮಾನವರು ಒಂದೇ ಎಂಬುದನ್ನು ಇದರಿಂದ ಅರಿತು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ.