ಸಂಸಾರಕ್ಕೆ ಹೆಣ್ಣೇ ಕಣ್ಣು, ಸಂಹಾರದ ಹಾದಿ ಹೆಣ್ಣು, ಶೋಕಿಯ ಮೂಲ ಹೆಣ್ಣು, ಶೋಕಾದ ಮೂಲ ಹೆಣ್ಣು ಈ ಮಾತುಗಳಲ್ಲಿ ಎಷ್ಟು ಅರ್ಥ ಅಡಗಿದೆ ಎಂದರೆ ಅದೇ ಹಾಲಿನಲ್ಲಿ ಬರುವ ಇನ್ನಿತರ ಸಾಲುಗಳು ಇದಕ್ಕೆ ಪುಷ್ಟಿ ನೀಡುತ್ತವೆ ಕಳ್ಳಿ ಹೂವು ಪೂಜೆಗಲ್ಲ, ಕಾಳಿಂಗ ಸಾಕಲಲ್ಲ ಏನೇನು ಎಲ್ಲಿ ಇಡಬೇಕು ತಿಳಿದೇನೇ ಹೋಯಿತು. ಈ ಸಾಲುಗಳನ್ನು ಮೊದಲಿಗೆ ಬರೆಯಲು ಕಾರಣ ಕೂಡ ಇದೆ ಯಾಕೆಂದರೆ ಈ ಹಾಡು ಹೇಳುವಂತೆ ಒಂದು ಮನೆ ಅಥವಾ ಒಂದು ಪರಿವಾರ ಬೆಳಗಬೇಕು ಎಂದರೆ ಅದು ಒಂದು ಹೆಣ್ಣು ಎನ್ನುವ ಶಕ್ತಿಯಿಂದ ಮಾತು ಸಾಧ್ಯ.
ಹೆಣ್ಣಿಲ್ಲದ ಮನೆ ಮನೆಯಲ್ಲ, ಕಣ್ಣಿಲ್ಲದ ಬದುಕು ಬದುಕಲ್ಲ. ಆದರೆ ಬದುಕಲ್ಲಿ ಬರುವ ಹೆಣ್ಣು ಅದೃಷ್ಟ ದೇವತೆ ಆಗಿ ಬರಬೇಕೆ ಹೊರತು ವಿಷಯ ಕನ್ಯೆ ಆಗಿರಬಾರದು.ವಅದರಲ್ಲೂ ಈಗಿನ ಕಾಲದಲ್ಲಿ ನಮ್ಮ ಭಾರತೀಯ ನಾರಿ ಎನ್ನುವ ಕಲ್ಪನೆ ಹೊರಟು ಹೋಗಿದೆ. ಆಧುನಿಕ ಜೀವನಶೈಲಿಗೆ ಮಾರು ಹೋಗಿರುವ ನಮ್ಮ ಹೆಣ್ಣು ಮಕ್ಕಳು ಉಡುಗೆ ತೊಡಗೆಯಲ್ಲಿ ಬದಲಾಗಿರೋದು ಮಾತ್ರ ಅಲ್ಲದೆ ಆಚಾರ-ವಿಚಾರವನ್ನು ಮರೆತು ಅದಕ್ಕಿಂತಲೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದೇಶದ ಘನತೆ ಕಳೆಯುತ್ತಿದ್ದಾರೆ.
ಯಾವ ದೇಶ ಪರದೇಶಗಳಿಗೆ ಆಧ್ಯಾತ್ಮದ ಬಗ್ಗೆ ಕಲಿಸುತ್ತಿತ್ತು, ಯಾವ ಸಂಸ್ಕೃತಿ ಕಂಡು ಜಗತ್ತೇ ಮಾರುಹೋಗಿತ್ತು ಅಂತಹ ದೇಶಗಳ ಮೌಲ್ಯಗಳನ್ನು ಹಾಳುಗೆಡವುವ ಪ್ರಕರಣಗಳಲ್ಲಿ ಬಾಗಿಯಾಗುತ್ತಿದ್ದಾರೆ. ಇತ್ತೀಚಿಗೆ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಹೆಣ್ಣಿನಿಂದ ಆಗುತ್ತಿರುವ ದ್ರೋ.ಹಗಳ ಬಗ್ಗೆ ಕೇಳುತ್ತಲೇ ಇದ್ದೇವೆ, ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಇದುವರೆಗೆ ಕೇಳಿದ್ದ ನಾವು ಈಗ ಪ್ರತಿ ಕ್ರೈಮ್ ನ ಹಿಂದೆ ಯಾವುದೋ ಹೆಣ್ಣಿನ ಕೈವಾಡ ಇರುತ್ತದೆ ಎಂದು ನಂಬುವಂತಾಗಿದೆ.
ಇದೆಲ್ಲಾ ಒಂದು ಕಡೆ ಇನ್ನೊಂದು ಮಟ್ಟದ ಪ್ರಕರಣ ದೇಶದಲ್ಲಿ ದಾಖಲಾಗಿದೆ. ನಮ್ಮ ದೇಶದಲ್ಲಿ ತಾಯಿಯನ್ನು ಕೂಡ ದೇವರೆಂದು ನಂಬುತ್ತೇವೆ. ಅದೇ ಕಾರಣಕ್ಕಾಗಿ ತಾಯಿಗೆ ಪೂಜ್ಯ ಸ್ಥಾನ ನೀಡುತ್ತೇವೆ. ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎನ್ನುವುದನ್ನು ಬಲವಾಗಿ ನಂಬಿದ್ದೇವೆ. ಆದರೆ ನಮ್ಮ ದೇಶದ ಮಹಿಳೆ ಒಬ್ಬಳು ತಾನೆ ಹೆತ್ತ ಮಕ್ಕಳಿಗೆ ವಿಷ ಉಣಿಸಿರುವ ಪ್ರಕರಣ ದಾಖಲಾಗಿದೆ, ಅದು ಕೂಡ ಒಂದು ಅ.ನೈ.ತಿಕ ಸಂಬಂಧಕ್ಕಾಗಿ ಎನ್ನುವುದು ನಾಚಿಕೆಯಿಂದ ತಲೆತಗ್ಗಿಸುವ ಸಂಗತಿ.
ಕನ್ಯಾಕುಮಾರಿ ಜಿಲ್ಲೆಯ ಮಾರ್ತಾಡಂ ನ ಕುಲಕಚ್ಚಿ ಪ್ರದೇಶದಲ್ಲಿ ಜಗದೀಶ್ ಹಾಗೂ ಕಾರ್ತಿಕಾ ಎನ್ನುವ ದಂಪತಿಗಳಿದ್ದರು. ಕಾರ್ತಿಕಾಗೆ ಮೂರು ವರ್ಷದ ಸಂಜನಾ ಮತ್ತು ಒಂದುವರೆ ವರ್ಷದ ಶರಣ್ ಎನ್ನುವ ಮಕ್ಕಳಿದ್ದರು. ಗಂಡ ದುಡಿಯಲು ಹೋಗುತ್ತಿದ್ದ, ಹೆಂಡತಿ ಮನೆಯಲ್ಲಿ ಮಕ್ಕಳನ್ನು ಸಾಕುತ್ತಿದ್ದಳು. ಎಲವೂ ಇದ್ದ ಚಿಕ್ಕ ಚೊಕ್ಕ ಸಖಿ ಸಂಸಾರ ಅದು ಆದರೆ ಕಾರ್ತಿಕಾಳ ದುರ್ಬುದ್ದಿಯಿಂದ ಇಂದು ತನ್ನ ಮಕ್ಕಳನ್ನ ಸ್ಮ.ಶಾನಕ್ಕೆ ಕಳುಹಿಸಿ ತಾನು ಜೈಲು ಪಾಲಾಗುವ ಗತಿ ತಂದಿಟ್ಟುಕೊಂಡಿದ್ದಾಳೆ.
ಇದ್ದಕ್ಕಿದ್ದಂತೆ ಒಂದು ದಿನ ಪತಿಗೆ ಕರೆ ಮಾಡಿದ ಕಾರ್ತಿಕ ಮಕ್ಕಳು ವಿಷ ತಿಂದಿದ್ದಾರೆ ಎಂದು ಹೇಳುತ್ತಾಳೆ. ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಶರಣ್ ಮೃ.ತಪಟ್ಟು, ಸಂಜನಾ ಸ್ಥಿತಿ ಗಂಭೀರವಾಗಿರುತ್ತದೆ. ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಿದಾಗ ಬೇರೆ ಹುಡುಗನೊಂದಿಗೆ ಕಾರ್ತಿಕಾ ಅ.ನೈ.ತಿ.ಕ ಸಂಬಂಧ ಹೊಂದಿದ್ದಳು, ಆತ ಈಕೆ ವಿವಾಹಿತೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದ ಬಳಿಕ ದೂರವಾಗಿದ್ದ, ಆತನ ಮೇಲಿದ್ದ ಅತಿಯಾದ ಮೋಹದಿಂದ ಮಕ್ಕಳು ಅಡ್ಡಿಯಾಗಿದ್ದಾರೆ ಎಂದು ಮಕ್ಕಳಿಗೆ ಇಲಿ ಪಾ.ಷ.ಣದಲ್ಲಿ ಉಪ್ಪು ನೀರು ಬೆರೆಸಿ ತಾನೇ ತಿನಿಸಿ ಹೈಡ್ರಾಮ ಮಾಡಿದ್ದಾಳೆ ಎನ್ನುವುದು ಬೆಳಕಿಗೆ ಬಂದಿದೆ.