ಮದುವೆ ಬಗ್ಗೆ ಮಾತನಾಡುತ್ತಾ ಲೈವ್ ನಲ್ಲೇ ಕಣ್ಣೀರಿಟ್ಟು ಭಾವುಕರಾದ ಆಂಕರ್ ಅನುಶ್ರೀ.

 

ಸೆಲೆಬ್ರಿಗಳು ಆಗಾಗ ಫೇಸ್ ಬುಕ್ ಲೈವ್ ಬಂದು ಅಭಿಮಾನಿಗಳ ಜೊತೆ ಸಮಯ ಕಳೆಯುತ್ತಾರೆ. ಅದೇ ರೀತಿ ಸೆಲೆಬ್ರೆಟಿ ಆಂಕರ್ ಆಗಿರುವ ಅನುಶ್ರೀ ಅವರು ಸಹ ಫೇಸ್ ಬುಕ್ ಲೈವ್ ಬಂದಿದ್ದರು, ಹಾಗೆಯೇ ತಮ್ಮ ಅಭಿಮಾನಿಗಳಿಗೆ ಏನಾದರೂ ಪ್ರಶ್ನೆ ಇದ್ದರೆ ಕೇಳುವಂತೆ ಹೇಳಿ ಮೊದಲಿಗೆ ಮದುವೆ ಬಗ್ಗೆ ಮಾತ್ರ ಕೇಳಬೇಡಿ ಎಂದು ರಿಕ್ವೆಸ್ಟ್ ಮಾಡಿದ್ದರು. ಆದರೂ ಕೂಡ ಅವರಿಗೆ ಸಾಲು ಸಾಲು ಪ್ರಶ್ನೆಗಳು ಯಾವಾಗ ಮದುವೆ ಆಗುತ್ತೀರಾ ಎನ್ನುವುದೇ ಬಂದಿತ್ತು ಜೊತೆಗೆ ನೀವು ಅರೇಂಜ್ ಮ್ಯಾರೇಜ್ ಆಗುತ್ತೀರಾ ಅಥವಾ ಲವ್ ಮ್ಯಾರೇಜ್ ಆಗುತ್ತೀರಾ ಎಂದು ಅಭಿಮಾನಿಗಳು ಕೇಳುತ್ತಿದ್ದರು.

ಕೊನೆಗೆ ಇದೆಲ್ಲದಕ್ಕೂ ಕೂಡ ಉತ್ತರಿಸುವ ಪ್ರಯತ್ನ ಮಾಡಿದರು ಅನುಶ್ರೀ. ಅಭಿಮಾನಿಗಳ ಜೊತೆ ಮದುವೆ ಎನ್ನುವ ಟಾಪಿಕ್ ಗೆ ಸಂಬಂಧಪಟ್ಟ ಹಾಗೆ ಮಾತನಾಡುತ್ತಾ ಮಧ್ಯದಲ್ಲಿ ಭಾವುಕರಾದರು. ಮದವೆ ಬಗ್ಗೆ ಮಾತು ಶುರು ಮಾಡಿದ ಅನುಶ್ರೀ ಅವರು ಎಲ್ಲರೂ ಹೇಳುತ್ತಾರೆ ನಿಮಗೆ ಏಜ್ ಆಗಿದೆ ಮದುವೆಯಾಗಿ ಬಿಡಿ, ವಯಸ್ಸು ಮೀರಿತ್ತಿದೆ ಮದುವೆಯಾಗಿಬಿಡಿ ಎಂದು ಅವರು ಆ ರೀತಿ ಹೇಳುತ್ತಾರೆ ಎಂದು ಮದುವೆಯಾಗಲು ಸಾಧ್ಯವಿಲ್ಲ.

ನಾನು ಎಲ್ಲೇ ಹೋದರು ಕೂಡ ಎಲ್ಲರು ಮೊದಲು ಕೇಳುವುದು ಮದುವೆ ಬಗ್ಗೆ ಈ ರೀತಿ ಎಲ್ಲ ಪ್ರಶ್ನೆ ಮಾಡುತ್ತಾರೆ ಎಂದು ಮದುವೆಯಾಗುವುದಕ್ಕೆ ಆಗುತ್ತದೆಯಾ, ಅದಕ್ಕೆ ಸಮಯ ಕೂಡಿ ಬರಬೇಕು. ಮದುವೆ ಎನ್ನುವುದು ಒಂದು ಬ್ಯೂಟಿಫುಲ್ ಸಂಬಂಧ. ಅದರ ಒಳಗೆ ಇಬ್ಬರು ಸಹ ಹೋಗಬೇಕು. ಮದುವೆ ಎನ್ನುವುದನ್ನು ಯಾಕೆ ಯಾವ ಕಾರಣಕ್ಕಾಗಿ ಆಗುತ್ತದೆ ಎಂದು ಅರ್ಥ ಮಾಡಿಕೊಂಡಿರಬೇಕು.

ಅಷ್ಟೊಂದು ಪ್ರಾಮುಖ್ಯತೆ ಇರುವ ಸಂಬಂಧ ಅದು ಅದನ್ನು ಜೀವನ ಪೂರ್ತಿ ಉಳಿಸಿಕೊಳ್ಳಬೇಕು ಇಂತಹ ಸಂಬಂಧದ ಬಗ್ಗೆ ಬೇಕಾ ಬಿಟ್ಟಿಯಾಗಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಯಾಕೆಂದರೆ ನನ್ನನ್ನು ಒಂದು ಭಯ ಯಾವಾಗಲೂ ಕಾಡುತ್ತಿರುತ್ತದೆ ಅದೇನೆಂದರೆ ಯಾರಾದರೂ ನನ್ನ ಜೀವನದಲ್ಲಿ ಬಂದು ಮತ್ತೆ ನನ್ನನ್ನು ಬಿಟ್ಟು ಹೋಗಿ ಬಿಟ್ಟರೆ ಎಂದು ಹೇಳುತ್ತಲೇ ಭಾವುಕರಾಗಿದ್ದಾರೆ.

ಮತ್ತೆ ನನ್ನ ಅಮ್ಮ ಮನೆಯಲ್ಲಿ ಏನೇ ಆದರೂ ಕೂಡ ಮದುವೆ ಬಗ್ಗೆ ಮಾತನಾಡುತ್ತಾರೆ. ತೆಂಗಿನ ಮರದಿಂದ ಕಾಯಿ ಬಿದ್ದರೂ ಕೂಡ ನೀನು ಮದುವೆಯಾಗು ಸರಿಹೋಗುತ್ತದೆ ಎನ್ನುತ್ತಾರೆ. ಈ ರೀತಿ ಎಲ್ಲರೂ ಪೋರ್ಸ್ ಮಾಡುತ್ತಾರೆ ಎಂದು ಮದುವೆಯಾಗುವುದಕ್ಕೆ ಸಾಧ್ಯನಾ ಎಂದು ಮದುವೆ ಬಗ್ಗೆ ತಮ್ಮ ಮನಸಲ್ಲಿ ಇರೋದನ್ನೆಲ್ಲ ಆಚೆ ಹಾಕಿದ್ದಾರೆ. ಜೊತೆಗೆ ನಾನು ಲವ್ ಮ್ಯಾರೇಜ್ ಆಗುತ್ತೇನಾ, ಅರೆಂಜ್ ಮ್ಯಾರೇಜ್ ಆಗುತ್ತೇನಾ ನಾನಿನ್ನೂ ನಿರ್ಧರಿಸಿಲ್ಲ.

ಅಷ್ಟಕ್ಕೂ ನಮ್ಮನ್ನೆಲ್ಲಾ ಯಾರು ಲವ್ ಮಾಡ್ತಾರೆ ಬಿಡಿ ಎಂದಿದ್ದಾರೆ. ಕೊನೆಗೆ ಮದುವೆ ವಿಷಯ ಸಂಪೂರ್ಣವಾಗಿ ನನ್ನ ದೇವರು ಕೊರಗಜ್ಜನ ಮೇಲೆ ಹಾಕಿದ್ದೇನೆ ಆತ ಹೇಗೆ ತೋರಿಸುತ್ತಾನೆ ಹಾಗೆ ನಾನು ಮಾಡುತ್ತೇನೆ ಎಂದು ಹೇಳಿ ಮದುವೆ ವಿಷಯಕ್ಕೆ ಇಲ್ಲಿತನಕ ಎಲ್ಲರೂ ಕೇಳುತ್ತಿದ್ದ ಪ್ರಶ್ನೆಗಳಿಗೆ ತಿಲಾಂಜಲಿ ಇಡುವ ಪ್ರಯತ್ನವನ್ನು ಮಾಡಿದ್ದಾರೆ.

ನಟಿ ಅನುಶ್ರೀ ಅವರು ಯಾವ ಹೀರೋಯಿನ್ ಕಡಿಮೆ ಇಲ್ಲದಂತ ಸುಂದರಿ. ಜೊತೆಗೆ ಸ್ವಂತ ಪರಿಶ್ರಮದಿಂದ ಮೇಲೆ ಬಂದಿರುವ ಅಪ್ಪಟ ಪ್ರತಿಭೆ ಹಾಗೂ ಶ್ರಮಜೀವಿ. ನಾಲ್ಕಾರೂ ಕಾರಣಕ್ಕಾಗಿ ಇಡಿ ಮಹಿಳಾ ಕುಲಕ್ಕೆ ಸ್ಪೂರ್ತಿ ಆಗಿರುವ ಅನುಶ್ರೀಯವರು ಮದುವೆ ವಿಚಾರವಾಗಿ ಮಾತ್ರ ಯಾವಾಗಲೂ ಚರ್ಚೆ ಆಗುತ್ತಿರುತ್ತಾರೆ. ಆದಷ್ಟು ಬೇಗ ಇವರಿಗೂ ಸಹ ಕಂಕಣ ಭಾಗ್ಯ ಕೂಡಿ ಬರಲಿ, ಇವರ ಇಚ್ಛೆಯಂತಹ ಒಂದೊಳ್ಳೆ ಅರ್ಥಪೂರ್ಣ ಬದುಕು ಇವರಿಗೂ ಸಿಗಲಿ ಎಂದು ಹರಸೋಣ.

Leave a Comment