ಕರ್ನಾಟಕ ಕಂಡ ಶ್ರೇಷ್ಠ ಕಲಾವಿದ, ಮೇರು ನಟ, ನಟಸಾರ್ವಭೌಮ, ಸಕಲಕಲವಲ್ಲಭ, ಡಾ. ರಾಜ್ ಕುಮಾರ್ ಅವರು ಅಭಿನಯದ ವಿಷಯದಲ್ಲಿ ಇವರು ಗೌರಿ ಶಂಕರ. ಬರೋಬ್ಬರಿ 250 ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಧೀಮಂತ. ಕನ್ನಡ ಚಲನಚಿತ್ರ ರಂಗ ಇಂದು ಇಂಟರ್ನ್ಯಾಷನಲ್ ಲೆವೆಲ್ ಅಲ್ಲಿ ಸದ್ದು ಮಾಡಲು ಅಡಿಪಾಯ ಹಾಕಿಕೊಂಡು ಅಂತಹ ಮಹಾನ್ ವ್ಯಕ್ತಿ. ಇಂದು ಕನ್ನಡ ಸಿನಿಮಾ ರಂಗ ಎಂದರೆ ಮೊದಲಿಗೆ ಕೇಳಿಬರುವ ಹೆಸರೇ ಡಾ. ರಾಜಕುಮಾರ್. ಸಿನಿಮಾ ವಿಷಯದಲ್ಲಿ ಈತನನ್ನು ಮೀರಿಸುವ ಇನ್ನೊಬ್ಬ ಕಲಾವಿದ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಹುಟ್ಟಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.
ಆ ರೀತಿ ತನ್ನ ಪ್ರತಿಯೊಂದು ಸಿನಿಮಾದಲ್ಲ ವಿಶೇಷತೆಯನ್ನು ಕ್ರಿಯೇಟ್ ಮಾಡಿ ದಾಖಲೆ ಮಾಡುತ್ತಿದ್ದಂತಹ ಮಹಾನ್ ಮೇಧಾವಿ. ಚಿತ್ರರಂಗದಲ್ಲಿ ರಾಜ್ ಕುಮಾರ್ ಅವರು ಮಾಡಿದ ಈ ರೀತಿ ಸಾಧನೆ ಮಾಡುವಂತಹ ಮತ್ತೊಬ್ಬ ಕಲಾವಿದ ಹುಟ್ಟಲು ಸಾಧ್ಯವೇ ಇಲ್ಲ ಎಂದು ಗಟ್ಟಿಯಾಗಿ ಹೇಳಬಹುದು. ಆದರೆ ಡಾಕ್ಟರ್ ರಾಜಕುಮಾರ್ ಅವರು ಮಾಡಿದಂತಹ ಒಂದೇ ಒಂದು ದಾಖಲೆಯನ್ನು ಮತ್ತೊಬ್ಬರು ಬ್ರೇಕ್ ಮಾಡಿದ್ದಾರೆ, ಅದು ಕೂಡ ಕನ್ನಡದ ಒಬ್ಬ ನಟಿ ಅದನ್ನು ಬ್ರೇಕ್ ಮಾಡಿದ್ದಾರೆ. ಕನ್ನಡದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ನಟಿ ಮಾಲಾಶ್ರೀ ಅವರು ಒಬ್ಬ ಸ್ಟಾರ್ ನಟನಿಗೆ ಸರಿಸಮವಾದ ಇಮೇಜ್ ಹೊಂದಿದಂತಹ ನಟಿ.
90ರ ದಶಕದಲ್ಲಿ ಇವರನ್ನು ನಟರಿಗೆ ಸಮಾನವಾದ ಸಂಭಾವನೆಯನ್ನು ಕೊಟ್ಟು ಸಿನಿಮಾಗಳಿಗೆ ಹಾಕಿಕೊಳ್ಳಲಾಗುತ್ತಿತ್ತು. ಈ ರೀತಿ ತನ್ನ ಸಿನಿ ಕೆರಿಯರ್ ಆರಂಭದ ದಿನಗಳಲ್ಲೇ ಇಂತಹ ಒಂದು ಛಾಪು ಮೂಡಿಸಿದ್ದ ನಟಿ ಮಾಲಾಶ್ರೀ ಅವರು ಡಾ.ರಾಜಕುಮಾರ್ ಅವರ ಒಂದು ದಾಖಲೆಯನ್ನೇ ಮುರಿದಿದ್ದರು. ಅದೇನೆಂದರೆ ಡಾ.ರಾಜಕುಮಾರ್ ಅವರು 1968ರಲ್ಲಿ ಒಂದೇ ವರ್ಷ 18 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅದೇ ರೀತಿ ಕನಸಿನ ರಾಣಿ ನಟಿ ಮಾಲಾಶ್ರೀ ಅವರು 1992 ರಲ್ಲಿ ಒಂದೇ ವರ್ಷ 19 ಸಿನಿಮಾಗಳಲ್ಲಿ ನಟಿಸುವ ಮೂಲಕ ಅಣ್ಣಾವ್ರು ಮಾಡಿದ್ದ ಆ ದಾಖಲೆಯನ್ನು ಮುರಿದರು.
ಅಂದಿನಿಂದ ಇಂದಿನವರೆಗೂ ಯಾರು ಸಹ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಅಲ್ಲದೆ ಸಂಸ್ಕಾರದ ವಿಷಯದಲ್ಲಿ ಅಥವಾ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ನೋಡುಗರ ಹುಬ್ಬೇರುವಂತೆ ಅಭಿನಯಿಸುವುದರಲ್ಲಿ, ರಾಜಕುಮಾರ್ ಅವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಪೌರಾಣಿಕ ಪಾತ್ರವಾಗಲಿ, ಐತಿಹಾಸಿಕ ಸಿನಿಮಾವಾಗಲಿ ಅಥವಾ ಸಾಮಾಜಿಕ ಚಿತ್ರಗಳೇ ಆಗಲಿ ಕಣ್ಣಿಗೆ ಕಟ್ಟಿದಂತೆ ಆ ಪಾತ್ರಕ್ಕೆ ಜೀವ ತುಂಬಿ ನೋಡುಗರ ಮನಸ್ಸಿನಲ್ಲಿ ಮುಟ್ಟಲು ಅಣ್ಣಾವ್ರ ಸಮಕ್ಕೆ ಮತ್ಯಾರಿಂದಲೂ ಸಾಧ್ಯವಿಲ್ಲ.
ಆದರೆ ಸಿನಿಮಾಗಳ ಸಂಖ್ಯೆ ವಿಚಾರವಾಗಿ ಮಾತ್ರ ಮಾಲಾಶ್ರೀ ಅವರು ಆ ದಾಖಲೆಯನ್ನು ಮುರಿಯಲು ಸಾಧ್ಯವಾಯಿತು. ಇಷ್ಟೊಂದು ಬೇಡಿಕೆಯಲ್ಲಿದ್ದ ಪ್ರತಿಭಾನ್ವಿತ ನಟಿ ಮಾಲಾಶ್ರೀ ಅವರಿಗೆ ಇತ್ತೀಚೆಗೆ ಅವಕಾಶ ಇಲ್ಲದಿರುವುದು ಅದೃಷ್ಟದ ಆಟ ಎನ್ನಬಹುದು. ಒಟ್ಟಿನಲ್ಲಿ ಈ ದಾಖಲೆಯನ್ನು ಬಹುಶಃ ಇನ್ನೂ ಮುಂದೆ ಸಹ ಯಾವ ಸ್ಟಾರ್ ನಟರಿಗೂ ಮುರಿಯಲು ಸಾಧ್ಯವಿಲ್ಲ ಎನಿಸುತ್ತದೆ. ಯಾಕೆಂದರೆ ಈಗ ಒಂದು ಸಿನಿಮಾಗಾಗಿ ಹಲವು ವರ್ಷಗಳ ಸಮಯ ತೆಗೆದುಕೊಂಡು ತಯಾರು ಮಾಡಿ ಬಿಡುಗಡೆ ಮಾಡುವ ಟ್ರೆಂಡ್ ಸೃಷ್ಟಿಯಾಗಿದೆ. ಹಾಗಾಗಿ ಮತ್ತೊಮ್ಮೆ ಈ ದಾಖಲೆ ಮುರಿಯಲು ಯಾರಿಗೂ ಸಾಧ್ಯವಿಲ್ಲ ಎಂದು ನಿಖರವಾಗಿ ಹೇಳಬಹುದು.