ತಾವೇ ಕಷ್ಟದಲ್ಲಿದ್ರೂ ಕೂಡ ಮನೆಗೆ ಬಂದ ತೆಲಗು ಸ್ಟಾರ್ ನಟ ನಾನಿಗೆ ದುಬಾರಿ ಉಡುಗೊರೆ ಕೊಟ್ಟ ರವಿಚಂದ್ರನ್. ಕನಸುಗಾರನ ದೊಡ್ಡ ಮನಸ್ಸು ಇದು ಎನ್ನುತ್ತಿರುವ ನೆಟ್ಟಿಗರು.

 

 

ಕ್ರೇಜಿಸ್ಟಾರ್ ರವಿಚಂದ್ರನ್ ಹೆಸರಿಗೆ ತಕ್ಕ ಹಾಗೆ ಸಿನಿಮಾ ಬಗ್ಗೆ ವಿಶೇಷ ಕ್ರೇಝ್ ಹೊಂದಿರುವ ಸ್ಟಾರ್. ಆ ಕಾರಣಕ್ಕಾಗಿ ಇಡೀ ಇಂಡಸ್ಟ್ರಿ ಇವರನ್ನು ಕನಸುಗಾರ ಎಂದು ಕೂಡ ಕರೆಯುತ್ತಾರೆ. ರವಿಚಂದ್ರನ್ ಒಬ್ಬ ಅದ್ಭುತ ಕಲಾವಿದ ಇವರಿಗೆ ಲವರ್ ಬಾಯ್ ಇಮೇಜ್, ಕಾಮಿಡಿ ಸೆನ್ಸ್ ಎಲ್ಲವೂ ಸಹ ಇದೆ. ಇದರೊಂದಿಗೆ ಇವರೆಂತಹ ನಿರ್ದೇಶಕ ಎನ್ನುವುದನ್ನು ಪ್ರೇಮಲೋಕ, ರಣಧೀರ ಇಂತಹ ಸಿನಿಮಾಗಳ ಕಾಲದಿಂದಲೂ ನೋಡಿದ್ದೇವೆ.

ನಿರ್ಮಾಪಕ, ಸಂಗೀತ ನಿರ್ದೇಶಕ ಹಾಗೆಯೇ ಸಿನಿಮಾ ಭವಿಷ್ಯವನ್ನು ಸಿನಿಮಾ ನೋಡಿದ ಘಳಿಗೆಯಲ್ಲೇ ಅಳೆಯಬಲ್ಲ ಅನುಭವಿ ಎಂದು ಹೇಳಬಹುದು. ಈ ರೀತಿ ಸಿನಿಮಾ ಮೇಧಾವಿ ಆಗಿರುವ ಇವರನ್ನು ಕನ್ನಡ ಇಂಡಸ್ಟ್ರಿ ಮಾತ್ರ ಅಲ್ಲದೆ ಪರಭಾಷಿಕ ನಿರ್ದೇಶಕರು ಮತ್ತು ನಟರು ಸಹ ತಮ್ಮ ಚಿತ್ರದ ಬಗ್ಗೆ ವಿಮರ್ಶೆ ಮಾಡಲು ಕೇಳಿಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿ ತೆಲುಗು ನಟ ನಾಣಿ ಅವರು ರವಿಚಂದ್ರನ್ ಅವರ ಮನೆಗೆ ಬಂದಿದ್ದಾರೆ.

ಇಂದು ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಎಲ್ಲಾ ಶುರುವಾದ ಮೇಲೆ ಇಂಡಸ್ಟ್ರಿ ಇಂಡಸ್ಟ್ರಿಗಳ ನಡುವೆ ಇಲ್ಲ ಯಾವ ಭೇದವು ಇಲ್ಲ. ಇಡೀ ಭಾರತವೇ ಒಂದು ಇಂಡಸ್ಟ್ರಿ ಅನ್ನುವಂತೆ ಭಾಸವಾಗುತ್ತಿದೆ ಎಂದರು ತಪ್ಪಲ್ಲ. ಹೀಗಾಗಿ ಎಲ್ಲಾ ಭಾಷೆಗಳಿಗೂ ಹತ್ತಿರವಾಗಿರುವ ರವಿಚಂದ್ರನ್ ಅವರನ್ನು ತಮ್ಮ ದಸರಾ ಸಿನಿಮಾ ಪ್ರಯುಕ್ತ ನಾನಿ ಭೇಟಿ ಆಗಿದ್ದಾರೆ. ದಸರಾ ಸಿನಿಮಾ ಟಾಲಿವುಡ್ ನ ಬಹು ನಿರೀಕ್ಷಿತ ಚಿತ್ರ ಆಗಿದ್ದು, ಇದು ಸಹ ಒಂದು ರಕ್ತ ಚರಿತ್ರೆಯ ಬಗ್ಗೆ ಬೆಳಕು ಚೆಲ್ಲಲು ಬರುತ್ತಿದೆ.

ಕೀರ್ತಿ ಸುರೇಶ್, ನಾನಿ ಜೊತೆ ಕನ್ನಡದವರಾದ ನಾಗಿಣಿ ಧಾರಾವಾಹಿ ಮತ್ತು ದಿಯಾ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರು ಸರಿಸಾಮನಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಕನ್ನಡಿಗರು ಖುಷಿಪಡುವ ವಿಷಯ. ಇದೇ ಮಾರ್ಚ್ 30ರಂದು ದೇಶದಾದ್ಯಂತ ದಸರಾ ಚಿತ್ರ ಬಿಡುಗಡೆ ಆಗುತ್ತಿದೆ. ಹಾಗಾಗಿ ಇಡೀ ದಸರಾ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಓಡಾಡುತ್ತಿದೆ. ನಾಯಕ ನಟ ನಾನಿ ಸಹಾ ಬೆಂಗಳೂರಿನಲ್ಲಿರುವ ರವಿಚಂದ್ರನ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅವರು ರವಿಚಂದ್ರನ್ ಜೊತೆ ಕುಳಿತು ಮಾತನಾಡುತ್ತಿರುವುದು, ಕೊನೆಗೆ ರವಿಚಂದ್ರನ್ ಅವರಿಂದ ಉಡುಗೊರೆ ಪಡೆದಿರುವುದು ಈ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಸಮಯದಲ್ಲಿ ದೀಕ್ಷಿತ್ ಶೆಟ್ಟಿ ಕೂಡ ನಾನಿ ಅವರಿಗೆ ಜೊತೆಯಾಗಿದ್ದಾರೆ. ರವಿಚಂದ್ರನ್ ಅವರು ಇತ್ತೀಚೆಗೆ ತಮ್ಮ ಸ್ವಂತ ಮನೆಯನ್ನು ಮಾರಿ ಬಾಡಿಗೆ ಫ್ಲ್ಯಾಟ್ ಅಲ್ಲಿ ಇದ್ದಾರೆ ಎಲ್ಲರಿಗೂ ಗೊತ್ತಿರುವ ವಿಷಯ ಇನ್ನು ಸಹ ಆತ ಕೊಡು ಗೈ ಆಗಿಯೇ ಉಳಿದಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಆಕಾಶದ ನೋಡದ ಕೈ ಎಂದು ರವಿಮಾಮನನ್ನು ಕರೆಯಬಹುದು. ಇವರು ಹುಟ್ಟಿದ್ದು ರಾಯಲ್ ಆಗಿ, ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು ರಾಯಲ್ ಆಗಿ, ಈಗ ಬದುಕಿನ ಇಷ್ಟು ಸುಖ-ದುಃಖ ಲಾಭ-ನಷ್ಟ ಕಂಡ ಮೇಲೂ ಸಹ ಬದುಕುತ್ತಿರುವುದು ಕೂಡ ರಾಯಲ್ ಆಗಿಯೇ. ಅದೇ ಕಾರಣಕ್ಕಾಗಿ ಮನೆಗೆ ಬಂದ ಈ ವಿಶೇಷ ಅತಿಥಿಗಾಗಿ ರಾಯಲ್ ಆದ ಒಂದು ಉಡುಗೊರೆಯನ್ನು ಕೂಡ ಕೊಟ್ಟಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಶುಭವಾಗಲಿ ಎಂದು ಮನಸಾರೆ ಹರಸಿ ಕಳುಹಿಸಿದ್ದಾರೆ. ನಾವು ಸಹ ದಸರಾ ಚಿತ್ರಕ್ಕೆ ಶುಭವಾಗಲಿ ಎಂದು ಹರಸೋಣ.

Leave a Comment