ಗಜ ಸಿನಿಮಾ ಬಿಡುಗಡೆ ಸಮಯದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಸಿನಿಮಾಗಳು ಪೈಪೋಟಿ ಕೊಟ್ಟು ಬಿಡುಗಡೆ ಆಗಿದ್ದವು. ಆದ್ರೆ ಕೊನೆಗೆ ಗೆದ್ದ ಸಿನಿಮಾ ಯಾವ್ದು ಗೊತ್ತ.?

ಗಜ ಎನ್ನುವ ಕನ್ನಡ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನವ್ಯನಾಯರ್ ಅವರ ಮುಖ್ಯ ಭೂಮಿಯಲ್ಲಿ 2008ರಲ್ಲಿ ಬಿಡುಗಡೆಯಾದ ರೋಮ್ಯಾಂಟಿಕ್ ಆಕ್ಷನ್ ಚಿತ್ರ. ದೇವರಾಜ್, ಶೋಭರಾಜ್, ಗೌರವ್, ಸಂಗೀತ, ಶ್ರೀನಾಥ್, ಮಾಸ್ಟರ್ ಹಿರಣ್ಣಯ್ಯ, ಕೋಮಲ್ ಇನ್ನು ಮುಂತಾದ ಅನೇಕ ದಿಗ್ಗಜರುಗಳು ಒಂದಾಗಿ ಮಾಡಿದ್ದ ಮನೆ ಮಂದಿಯಲ್ಲ ಒಟ್ಟಾಗಿ ಕುಳಿತು ನೋಡುವಂತಹ ಕೌಟುಂಬಿಕ ಚಿತ್ರ.

ಈ ಚಿತ್ರ ಬಿಡುಗಡೆಯಾಗಿ ಇಷ್ಟು ವರ್ಷಗಳಾಗಿದ್ದರೂ ಕೂಡ ಈ ಸಿನಿಮಾಗಳ ಹಾಡು ಎಂದಿಗೂ ಜನರ ನಂಬರ್ ಒನ್ ಫೇವರೆಟ್. ಸಿನಿಮಾದಲ್ಲಿದ್ದ ಪ್ರತಿ ಹಾಡು ಕೂಡ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿ ಸಿನಿಮಾವನ್ನು ಗೆಲ್ಲಿಸಿತ್ತು. ಆದರೆ ಗಜ ಸಿನಿಮಾ ರಿಲೀಸ್ ಆದ ವೇಳೆಯೇ ಕನ್ನಡದ ಇನ್ನೂ ಮೂರು ಸ್ಟಾರ್ ಹೀರೋಗಳ ಸಿನಿಮಾಗಳು ಕೂಡ ಬಿಡುಗಡೆ ಆಗಿ ಅದಕ್ಕೆ ಟಫ್ ಫೈಟ್ ನೀಡಿದ್ದವು.

ಆಗ ತಾನೇ ಕರ್ನಾಟಕದಲ್ಲಿ ಗೋಲ್ಡನ್ ಸ್ಟಾರ್ ಎಂದು ಹವಾ ಕ್ರಿಯೇಟ್ ಮಾಡಿದ್ದ ಗಣೇಶ್ ಅವರ ಗಾಳಿಪಟ ಚಿತ್ರ ರಿಲೀಸ್ ಆಗಿತ್ತು. ಗಣೇಶ್ ಮತ್ತು ಯೋಗರಾಜ್ ಭಟ್ ಅವರ ನಿರ್ದೇಶನದ ಎಲ್ಲಾ ಚಿತ್ರಗಳು ಕೂಡ ಗೆಲ್ಲುತ್ತಿದ್ದ ಕಾರಣ ಗಾಳಿಪಟ ಸಿನಿಮಾ ಮೇಲೂ ಸಹ ಭಾರಿ ನಿರೀಕ್ಷೆ ಇತ್ತು. ಸಿನಿಮಾ ಕೂಡ ಹೊಸತನ ಇದ್ದ ಕಾರಣ ಹೆಚ್ಚಿನ ಜನರಿಂದ ಆಕರ್ಷಣೆ ಪಡೆದಿತ್ತು.

ಜೊತೆಗೆ ಕಿಚ್ಚ ಸುದೀಪ್ ಮತ್ತು ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರ ಕಾಂಬಿನೇಷನ್ನ ನಾಲ್ಕನೇ ಚಿತ್ರ ಜಸ್ಟ್ ಮಾತ್ ಮಾತಲ್ಲಿ ಸಹ ಅದೇ ವೇಳೆ ರಿಲೀಸ್ ಆಗಿತ್ತು. ಸಿನಿಮಾ ಬಿಡುಗಡೆ ಮುನ್ನವೇ ಸಿನಿಮಾದ ಪ್ರಮುಖ ಆಕರ್ಷಣೆ ರಘು ದೀಕ್ಷಿತ್ ಅವರ ಸಂಗೀತಾ ನಿರ್ದೇಶನದ ಹಾಡುಗಳು ಎಲ್ಲರಿಗೂ ಮುಟ್ಟಿದ್ದವು. ಜಸ್ಟ್ ಮಾತ್ ಮಾತಲ್ಲಿ ಸಹ ಒಂದು ಪ್ರಯೋಗಾತ್ಮಕ ಚಿತ್ರ ಆಗಿದ್ದ ಕಾರಣ ಸಿನಿಮಾ ಮೇಲೆ ಜನರಿಗೆ ಬಾರಿ ನಿರೀಕ್ಷೆ ಇತ್ತು.

ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಿಂದಾಸ್ ಸಿನಿಮಾ ಕೂಡ ಅದೇ ಟೈಮ್ ಅಲ್ಲಿ ರಿಲೀಸ್ ಆಗಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಹನ್ಸಿಕಾ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದ ಅಂಡರ್ ಗ್ರೌಂಡ್ ಕಥೆಯ ಎಳೆ ಹೊಂದಿದ್ದ ಪ್ರೇಮ ಕಥೆ ಬಿಂದಾಸ್ ಸಿನಿಮಾ ಸಹ ಗಜ ಸಿನಿಮಾ ಬಿಡುಗಡೆ ಆದ ವೇಳೆಗೆ ಬಿಡುಗಡೆ ಆಗಿ ಗಜ ಚಿತ್ರಕ್ಕೆ ಸವಾಲಾಗಿತ್ತು. ಆದರೂ ಕೂಡ ಈ ಎಲ್ಲಾ ಸಿನಿಮಾಗಳ ಪೈಪೋಟಿ ನಡೆವೆ ಗಜ ಸಿನಿಮಾವೇ ಹೆಚ್ಚು ಗಳಿಕೆ ಮಾಡಿ, ಗಲ್ಲಾ ಪೆಟ್ಟಿಗೆ ಉಡೀಸ್ ಮಾಡಿತ್ತು. ಇದೇ ಕಾರಣಕ್ಕೆ ಅನಿಸುತ್ತದೆ ದರ್ಶನ್ ಅವರನ್ನು ಇಂದಿಗೂ ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೆಯುವುದು.

ಈ ವಿಷಯವನ್ನು ಗಜ ಚಿತ್ರದ ನಿರ್ದೇಶಕರಾದ ಕೆ.ಮಾದೇಶ್ ಅವರೇ ಒಂದು ಸಂದರ್ಶನದಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ. ಇದರ ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಡಿ ಬಾಸ್ ಬಗ್ಗೆ, ಡಿ ಬಾಸ್ ಸಿನಿಮಾ ಬಗ್ಗೆ ಹೇಳಿರುವ ಈ ಮಾತುಗಳನ್ನು ಕೇಳಿ ದಚ್ಚು ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಸದಾ ದರ್ಶನ್ ಅವರಿಗೆ ಇಂತಹ ಗೆಲುವುಗಳು ಜೊತೆಯಾಗಲಿ, ಕನ್ನಡಿಗರಿಗೆ ಇನ್ನಷ್ಟು ಒಳ್ಳೆ ಒಳ್ಳೆ ಸಿನಿಮಾಗಳು ದರ್ಶನ್ ಅವರ ಕಡೆಯಿಂದ ಸಿಗುವಂತಾಗಲಿ ಎಂದು ಕನ್ನಡ ಸಿನಿಮಾ ಅಭಿಮಾನಿಗಳಾಗಿ ನಾವು ಹರಸೋಣ.

Leave a Comment