Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹರೀಶ್ ರಾಯ್ ಕ್ಯಾನ್ಸರ್ ನಿಂದ ಕಷ್ಟ ಅನುಭವಿಸುತ್ತಿದ್ದಾಗ ಅವರ ಜೀವ ಉಳಿಸಿದ ವ್ಯಕ್ತಿ ಯಾರು ಎಂಬ ಸತ್ಯ ಬಿಚ್ಚಿಟ್ಟ ದರ್ಶನ್

Posted on March 20, 2023 By Kannada Trend News No Comments on ಹರೀಶ್ ರಾಯ್ ಕ್ಯಾನ್ಸರ್ ನಿಂದ ಕಷ್ಟ ಅನುಭವಿಸುತ್ತಿದ್ದಾಗ ಅವರ ಜೀವ ಉಳಿಸಿದ ವ್ಯಕ್ತಿ ಯಾರು ಎಂಬ ಸತ್ಯ ಬಿಚ್ಚಿಟ್ಟ ದರ್ಶನ್

 

ನಿನ್ನೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಮಹಿಳಾ ಸಮಾವೇಶ ಕಾರ್ಯಕ್ರಮ ನಡೆಸಿದೆ. ನಟ ದರ್ಶನ್ ಅವರು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ ಸಲುವಾಗಿ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸುಮಲತ ಅಂಬರೀಶ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ದರ್ಶನ್ ಅವರು ಸತೀಶ್ ರೆಡ್ಡಿ ಅವರ ಬಗ್ಗೆ ಮಾತನಾಡುತ್ತಾ, ಅವರು ಜನರ ಕಷ್ಟಕ್ಕೆ ಹೇಗೆ ನೆರವಾಗುತ್ತಾರೆ ಎನ್ನುವುದನ್ನು ಉದಾಹರಣೆ ಸಮೇತ ವಿವರಿಸಿದ್ದಾರೆ.

ಚಿತ್ರರಂಗದ ವಿಷಯಕ್ಕೆ ಬರುವುದಾದರೆ ನಾವೆಲ್ಲ ಇವರ ಪ್ರಚಾರಕ್ಕಾಗಿ ಇಷ್ಟು ಮಾಡುತ್ತೇವೆ ನಮಗಾಗಿ ಏನು ಮಾಡಿದ್ದೀರಾ ಎಂದು ಒಮ್ಮೆ ಕೇಳಿಕೊಂಡಾಗ ಅವರು ಎಂಥ ದೊಡ್ಡ ಉಪಕಾರ ಮಾಡಿದರು ಗೊತ್ತಾ ಎಂದು ಹಳೆ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಕಳೆದ ವರ್ಷ ಹರೀಶ್ ರಾಯ್ ಎನ್ನುವ ಕನ್ನಡದ ಕಲಾವಿದನೊಬ್ಬನಿಗೆ ಕ್ಯಾನ್ಸರ್ ಎನ್ನುವಂತಹ ಮಾರಣಾಂತಿಕ ಖಾಯಿಲೆ ಕಾಡಿತ್ತು. ಆ ಕಾಯಿಲೆಯಲ್ಲಿ ಬಳಲುತ್ತಿದ್ದ ಅವರಿಗೆ ಇದರ ವಿರುದ್ಧ ಚಿಕಿತ್ಸೆ ಪಡೆದುಕೊಂಡು ಹೋರಾಡುವಷ್ಟು ಹಣಕಾಸಿನ ಅನುಕೂಲ ಇರಲಿಲ್ಲ.

ಅದನ್ನು ನೋಡಿದ ದರ್ಶನ್ ಅವರು ಸತೀಶ್ ರೆಡ್ಡಿ ಅವರು ಹಾಗೂ ಅವರ ಸ್ನೇಹಿತರ ಜೊತೆ ಕಲಾವಿದನೊಬ್ಬನಿಗೆ ಹೀಗಾಗಿದೆ ನೀವು ಏನು ಮಾಡಿತ್ತೀರಾ ಎಂದು ಒಂದು ಮಾತು ಹೇಳಿದ್ದಕ್ಕಾಗಿ ಸಂಪೂರ್ಣ ಚಿಕಿತ್ಸೆಯ ವೆಚ್ಚ ಭರಿಸಿದರು. ಅದು ಮಾತ್ರ ಅಲ್ಲದೆ ಇನ್ನು ಅನೇಕ ಸಹಾಯವನ್ನು ಅವರು ಮಾಡಿದ್ದಾರೆ. ಮುಂದುವರೆದು ಈಗ ಬೊಮ್ಮನಹಳ್ಳಿ ಕ್ಷೇತ್ರದವರ ಸೇವೆ ಮಾಡಬೇಕೆಂದು ನಿಂತಿದ್ದಾರೆ. ನಿಮ್ಮ ಶಾಸಕನನ್ನು ಮಂತ್ರಿ ಮಾಡುವ ಅವಕಾಶ ನಿಮ್ಮ ಕೈಲಿದೆ ಸರಿಯಾದ ನಿರ್ಧಾರ ಮಾಡಿ ಆರಿಸಿ ಎಂದು ಸಲಹೆ ಕೊಟ್ಟಿದ್ದಾರೆ.

ಮೊದಲಿನಿಂದಲೂ ದರ್ಶನ್ ಅವರು ರಾಜಕೀಯ ವ್ಯಕ್ತಿಗಳ ಪರವಾಗಿ ಪ್ರಚಾರಕ್ಕೆ ಹೋಗುವುದು ಮಾಮೂಲಿ ಆಗಿದೆ. ಅದರಲ್ಲೂ ಬಿಜೆಪಿ ಪಕ್ಷದ ಕ್ಯಾಂಡಿಡೇಟ್ ಗಳ ಬಗ್ಗೆ ಅವರು ಹೆಚ್ಚು ಪ್ರಚಾರಕ್ಕೆ ಹೋಗುತ್ತಾರೆ. ಈ ಹಿಂದೆ ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಿದ್ದರು, ನಂತರ ಮಂಡ್ಯ ಕಣದಲ್ಲಿ ಸುಮಲತಾ ಅಂಬರೀಶ್ ಅವರು ಎಲೆಕ್ಷನ್ ಗೆ ನಿಂತಿದ್ದಾಗ ಯಶ್ ಅವರ ಜೊತೆ ಜೋಡೆತ್ತಾಗಿ ನಿಂತು ಅವರ ಗೆಲುವಿಗೆ ಕಾರಣಕರ್ತರಾಗಿದ್ದರು.

ಇತ್ತೀಚಿಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಇವರು ಈ ಬಾರಿ ಸತೀಶ್ ರೆಡ್ಡಿ ಅವರಿಗಾಗಿ ಬಹಿರಂಗವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಜೊತೆಗೆ ಸತೀಶ್ ರೆಡ್ಡಿ ಅವರು ಮಾಡಿರುವ ಸೇವೆಗಳ ಬಗ್ಗೆ ಜನರಿಗೆ ತಿಳಿಸಿ ಇಂತಹ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ದರ್ಶನ್ ಅವರು ಸಹ ತಮ್ಮ ಮನೆ ಮುಂದೆ ಸಹಾಯಕ್ಕಾಗಿ ಹೋದವರನ್ನು ಎಂದು ಬರಿ ಗೈ ನಲ್ಲಿ ಕಳುಹಿಸಿದವರಲ್ಲ. ವರ್ಷಕ್ಕೆ ಎರಡು ಕೋಟಿ ರೂಪಾಯಿಗಳು ನನಗೆ ಇದಕ್ಕಾಗಿಯೇ ಬೇಕಾಗುತ್ತದೆ ಎಂದು ಅವರು ಈ ಹಿಂದೆ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಇನ್ನು ಮುಂದೆ ನಾನು ಪ್ರಚಾರಕ್ಕೆ ಹೋಗುವಾಗ ನನ್ನನ್ನು ಕರೆಯುವವರಲ್ಲಿ ಒಂದು ಭರವಸೆ ತೆಗೆದುಕೊಳ್ಳುತ್ತೇನೆ. ಏನೆಂದರೆ ನಾವು ಕಳಿಸುವ ಜನರಿಗೆ ವೈದ್ಯಕೀಯ ಚಿಕಿತ್ಸೆ ಇರಲಿ ಅಥವಾ ವಿದ್ಯಾಭಾಸಕ್ಕೆ ನೆರವು ಇರಲಿ ಸಂಪೂರ್ಣವಾಗಿ ಎಲ್ಲವೂ ನಾವೇ ಮಾಡಲು ಸಾಧ್ಯವಾಗಲ್ಲ.

ಜನರ ಪರವಾಗಿ ಆಯ್ಕೆಯಾಗುವವರು ಅದರಲ್ಲಿ ಭಾಗಿಯಾಗಿ ಅವರ ಸಮಸ್ಯೆ ಪರಿಹಾರ ಜವಾಬ್ದಾರಿ ತೆಗೆದುಕೊಳ್ಳಲಿ ಎಂದಿದ್ದರು. ಈಗ ಹರೀಶ್ ರಾಯ್ ಅವರ ಉದಾಹರಣೆ ಹೇಳಿದ ಮೇಲೆ ಈಗಾಗಲೇ ದರ್ಶನ್ ಅವರು ಪ್ರಚಾರವಿಲ್ಲದೆ ಈ ರೀತಿ ಒಳ್ಳೆ ಕೆಲಸಗಳನ್ನು ಮಾಡಲು ಶುರು ಮಾಡಿದ್ದಾರೆ ಎನಿಸುತ್ತಿದೆ.

Entertainment Tags:Darshan, Harish Roy
WhatsApp Group Join Now
Telegram Group Join Now

Post navigation

Previous Post: ಮೆಗಾಸ್ಟಾರ್ ಚಿರಂಜೀವಿ ಮಗನಾದ ನೀವು ಹೀರೋ, ಬಸ್ ಡ್ರೈವರ್ ಮಗ ಯಶ್ ಕೂಡ ಹೀರೋ ಅಂದಿದಕ್ಕೆ ರಾಮ್ ಚರಣ್ ಕೊಟ್ಟ ಉತ್ತರವೇನು ಗೊತ್ತಾ.?
Next Post: ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore