ಮೆಗಾಸ್ಟಾರ್ ಚಿರಂಜೀವಿ ಮಗನಾದ ನೀವು ಹೀರೋ, ಬಸ್ ಡ್ರೈವರ್ ಮಗ ಯಶ್ ಕೂಡ ಹೀರೋ ಅಂದಿದಕ್ಕೆ ರಾಮ್ ಚರಣ್ ಕೊಟ್ಟ ಉತ್ತರವೇನು ಗೊತ್ತಾ.?

 

ರಾಮ್ ಚರಣ್ ಅವರು ಬಹಳ ಸಂಭ್ರಮದಲ್ಲಿದ್ದಾರೆ. ಇದಕ್ಕೆ ಎರಡು ಕಾರಣಗಳು ಒಂದು ಅಂತರಾಷ್ಟ್ರೀಯ ಸಿನಿಮಾ ಶ್ರೇಷ್ಠ ಅಕಾಡೆಮಿ ಅವಾರ್ಡ್ ಆಸ್ಕರ್ ಅವರ RRR ಚಿತ್ರದ ನಾಟು ನಾಟ ಹಾಡಿಗೆ ಬಂದಿರುವುದು ಜೊತೆಗೆ ಅವರ ಮನೆಗೆ ಪುಟ್ಟ ಕಂದಮ್ಮನ ಆಗಮನ ಆಗುತ್ತಿರುವುದು. ಸದ್ಯಕ್ಕೆ ರಾಮ್ ಚರಣ್ ಅವರೂ RRR ಗೆದ್ದ ಖುಷಿಯಲ್ಲಿ ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ.

ಆ ಹಾಡಿನ, ಸಿನಿಮಾದ ಅನುಭವ ಹಾಗೂ ಹಾಡಿಗೆ ಪಟ್ಟ ಶ್ರಮದ ಬಗ್ಗೆ ಹೇಳಿಕೊಂಡು ಜೊತೆಗೆ ಜೀವನದ ಅನುಭವಗಳು ಹಾಗೂ ಅವರ ಸ್ಟಾರ್ ಡಂ ಇತ್ಯಾದಿ ಬಗ್ಗೆ ಎಲ್ಲದರ ಬಗ್ಗೆ ಕೂಡ ಪ್ರಬುದ್ದತೆಯಿಂದ ಮಾತುಗಳನ್ನಾಡಿದ್ದಾರೆ. ಹಾಗೆ ದಿ ಇಂಡಿಯಾ ಟುಡೇ ಕಾಲ್ಕ್ಲೇವ್ ಅಲ್ಲಿ ಕೂಡ ರಾಮ್ ಚರಣ್ ಅವರ ಸಂದರ್ಶನ ನಡೆದಿದೆ.

ಸಿನಿಮಾಗೆ ಸಂಬಂಧಪಟ್ಟ ಹಲವು ಚರ್ಚೆಗಳು ನಡೆದವು, ರಾಮಚರಣ್ ಅವರ ಸಹ ನಿರೂಪಕರು ಕೇಳುತ್ತಿದ್ದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುತ್ತಿದ್ದರು. ನಡುವೆ ವಿರುಪಕರ ಕಡೆಯಿಂದ ನಿರೀಕ್ಷೆ ಮಾಡಿರದ ಪ್ರಶ್ನೆ ಎದುರಾಯಿತು. ಅದೇನೆಂದರೆ ಈಗ ರಾಕಿಂಗ್ ಸ್ಟಾರ್ ಹವಾ ದೇಶದಾದ್ಯಂತ ಎಲ್ಲಾ ಕಡೆ ಇದೆ. ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಬಗ್ಗೆ ದೇಶದ ಎಲ್ಲಾ ಭಾಷೆಯ ಮಾಧ್ಯಮಗಳು ವರದಿ ಮಾಡುತ್ತವೆ ಹಾಗೂ ಎಲ್ಲಾ ಭಾಷೆಯ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಕೂಡ ಇವರ ಕುರಿತು ಪ್ರಶ್ನೆ ಇರುತ್ತದೆ.

ಹಾಗೆಯೇ ಇಲ್ಲೂ ಸಹ ರಾಮಚರಣ್ ಅವರಿಗೆ ಯಶ್ ಕುರಿತು ಪ್ರಶ್ನೆ ಕೇಳಲಾಗಿದೆ. ಜೊತೆಗೆ ಯಶ್ ಅವರ ಜೊತೆ ರಾಮ್ ಚರಣ್ ಅವರನ್ನು ತಾಳೆ ಹಾಕಿ ಅವರಿಗೆ ಪ್ರಶ್ನೆ ಕೇಳಿ ಉತ್ತರ ತರಿಸುವ ಪ್ರಯತ್ನ ಮಾಡಲಾಗಿದೆ. ಅದಕ್ಕೆ ರಾಮಚರಣ್ ಕಡೆಯಿಂದ ಸಿಕ್ಕ ಉತ್ತರ ಮಾತ್ರ ಬಹಳ ಶ್ಲಾಘನೀಯವಾಗಿತ್ತು.

ನಿರೂಪಕರು ಸ್ಟಾರ್ ಗಿರಿ ಬಗ್ಗೆ ಮಾತನಾಡುತ್ತಾ ಮೆಗಾಸ್ಟಾರ್ ಚಿರಂಜೀವಿ ಪುತ್ರ ನೀವು, ನೀವು ಕೂಡ ಸ್ಟಾರ್ ಆಗಿದ್ದೀರಾ ಹಾಗೆ ಬಸ್ ಡ್ರೈವರ್ ಮಗ ಆಗಿದ್ದ ಯಶ್ ಕೂಡ ಸ್ಟಾರ್ ಆಗಿದ್ದಾರೆ. ಆರು ತಿಂಗಳ ಹಿಂದೆ ಇದೇ ಸಂದರ್ಶನದಲ್ಲಿ ಯಶ್ ಪಾಲ್ಗೊಂಡಿದ್ದರು ಈಗ ಆ ಜಾಗದಲ್ಲಿ ನೀವು ಇದ್ದೀರಾ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ, ರಾಮ್ ಚರಣ್ ಅವರು ಹೌದು ನಾನು ಯಶ್ ಅವರು ಪಾಲ್ಗೊಂಡಿದ್ದ ಎಪಿಸೋಡ್ ನೋಡಿದ್ದೇನೆ.

ಅವರು ಬಹಳ ಚೆನ್ನಾಗಿ ಮಾತನಾಡಿದರು. ಈ ವಿಷಯದ ಬಗ್ಗೆ ನಾನು ಹೇಳುವುದು ಇಷ್ಟೇ ಅಂತಿಮವಾಗಿ ಪ್ರತಿಭೆ ಮಾತ್ರ ಮಾತನಾಡುತ್ತದೆ. ಯಾರು ಯಾವುದೇ ಬ್ಯಾಗ್ರೌಂಡ್ ಇಂದ ಬಂದರು ಅಥವಾ ಇಲ್ಲದೇ ಬಂದರು ಅವರಲ್ಲಿ ಪ್ರತಿಭೆ ಇದ್ದರೆ ಮಾತ್ರ ಅವರು ಬೆಳಗಲು ಸಾಧ್ಯ. ಅದು ಇಲ್ಲಿ ಸಾಬೀತು ಆಗಿದೆ ಎಂದಿದ್ದಾರೆ. ಈ ಮಾತುಗಳನ್ನು ಎಲ್ಲರೂ ಒಪ್ಪಲೇಬೇಕು ಯಾಕೆಂದರೆ ಸಿನಿಮಾ ಬ್ಯಾಗ್ರೌಂಡ್ ಇಂದ ಅಥವಾ ಸ್ಟಾರ್ ಮಕ್ಕಳಾಗಿ ಬಂದ ಕಾರಣಕ್ಕೆ ಅವರಿಗಳಿಗೆ ಸುಲಭವಾಗಿ ಮೊದಲ ಅವಕಾಶ ಸಿಗಬಹುದು ಹೊರತು ಅವರು ಸಾಧನೆ ಮಾಡಲಾಗದು, ಇಲ್ಲಿ ಟ್ಯಾಲೆಂಟೆ ಎಲ್ಲದಕ್ಕೂ ಮುಖ್ಯ ಎಂದ ಅವರ ಮಾತು ಅಕ್ಷರಶಃ ಸತ್ಯ ಎನಿಸುತ್ತದೆ.

ಯಾಕೆಂದರೆ ಆರಂಭದಲ್ಲಿ ಬ್ಯಾಗ್ರೌಂಡ್ ಇದ್ದವರು ಇಲ್ಲಿ ಗ್ರಾಂಡ್ ಆಗಿ ಲಾಂಚ್ ಆಗಬಹುದು ಅಥವಾ ಒಂದೆರಡು ಸಿನಿಮಾ ಅವಕಾಶ ಅವರನ್ನೇ ಹುಡುಕಿ ಹೋಗಬಹುದು ಆದರೆ ಅದನ್ನು ಹಾಗೆ ಉಳಿಸಿಕೊಳ್ಳುವುದಕ್ಕೆ, ಹೆಮ್ಮರವಾಗಿ ಚಿತ್ರರಂಗದಲ್ಲಿ ಬೆಳೆದು ನಿಲ್ಲುವುದಕ್ಕೆ ಅವರ ಸ್ವಂತ ಪರಿಶ್ರಮ ಹಾಗೂ ಅವರದೇ ಆದ ಪ್ರತಿಭೆ ಖಂಡಿತ ಮುಖ್ಯ. ಈ ಎರಡು ರಾಮ್ ಚರಣ್ ಮತ್ತು ಯಶ್ ಅವರಲ್ಲಿ ಇದ್ದ ಕಾರಣ ಇಬ್ಬರೂ ಸಹ ಇದು ದಕ್ಷಿಣ ಭಾರತದ ಖ್ಯಾತ ತಾರೆಗಳಾಗಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Comment