Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

830 ಅಡಿ ಎತ್ತರದ ಜೋಗ್ ಫಾಲ್ಸ್ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್ ಮಾಡಿದ ವಿಡಿಯೋ ನೋಡಿ.

Posted on March 19, 2023 By Kannada Trend News No Comments on 830 ಅಡಿ ಎತ್ತರದ ಜೋಗ್ ಫಾಲ್ಸ್ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್ ಮಾಡಿದ ವಿಡಿಯೋ ನೋಡಿ.

 

830 ಅಡಿ ಎತ್ತರದ ಜಲಪಾತ ಎಂದು ಹೇಳಿದ ತಕ್ಷಣವೇ ಹಲವರಿಗೆ ತಲೆ ಸುತ್ತು ಬಂದಿರುತ್ತದೆ, ಆದರೆ ಅಷ್ಟು ಎತ್ತರದ ಜಲಪಾತ ತುದಿಯಲ್ಲಿ ನಿಂತು ಪುಶ್ ಅಪ್ಸ್ ಹೊಡೆಯೋದು ಎಂದರೆ ಅದಕ್ಕೆ ಡಬ್ಬಲ್ ಗುಂಡಿಗೆ ಬೇಕು. ಇಂತಹದೊಂದು ಸಾಹಸವನ್ನು ಮಾಡಿಯೇ ತೀರಿದ್ದಾರೆ ನಮ್ಮ ಇಂಡಸ್ಟ್ರಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು, ಈ ಕಾರಣಕ್ಕಾಗಿ ಅವರನ್ನು ಇಂಡಸ್ಟ್ರಿಯ ಎನರ್ಜಿಟಿಕ್ ಸ್ಟಾರ್ ಎಂದು ಕರೆಯಬಹುದು.

ಅಭಿನಯ ಡ್ಯಾನ್ಸಿಂಗ್ ಸಿಂಗಿಂಗ್ ಟ್ರಕ್ಕಿಂಗ್ ಸ್ಟಂಟ್ಸ್ ಈ ರೀತಿ ಅಪ್ಪು ಕಲಿಯದ ವಿದ್ಯೆಯೇ ಇಲ್ಲ. ಸದಾ ಹೊಸ ಸಾಹಸಗಳಿಗೆ ತನ್ನನ್ನು ಒಪ್ಪಿಸಿಕೊಂಡು ತನ್ನಂತೆ ಇತರರು ಕೂಡ ಜೀವನವನ್ನು ಮತ್ತೊಂದು ದೃಷ್ಟಿಕೋನದ ನೋಡಿ ಎಂಜಾಯ್ ಮಾಡಬೇಕು ಈ ರೀತಿ ಬದುಕನ್ನು ಸಹಜವಾಗಿಯೇ ಸಿಗುವ ಸಂತೋಷವನ್ನು ಪಡೆಯಬೇಕು ಎಂದು ಸ್ಪೂರ್ತಿ ತುಂಬುತ್ತಿದ್ದವರು ಅಪ್ಪು. ಅದಕ್ಕಾಗಿಯೇ ಇಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಕರ್ನಾಟಕದ ಮಂದಿ ಇನ್ಸ್ಪಿರೇಷನ್ ಡೇ ಎಂದು ಆಚರಿಸುತ್ತಿದ್ದಾರೆ.

ಪುನೀತ್ ರಾಜಕುಮಾರ್ ಅವರು 830 ಅಡಿ ಎತ್ತರದ ಜೋಕ್ ಫಾಲ್ಸ್ ಮೇಲೆ ಹೋಗಿ ಪುಶ್ ಅಪ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಹುಶಃ ಇದು ಗಂಧದ ಗುಡಿ ಸಿನಿಮಾ ಶೂಟಿಂಗ್ ವೇಳೆ ಮಾಡಿರುವ ವಿಡಿಯೋ ಇರಬಹುದು, ಅಪ್ಪು ಜೊತೆಯಲ್ಲಿ ಅವರ ಸ್ನೇಹಿತರೊಬ್ಬರು ಕ್ಯಾಮರಾ ಹಿಡಿದು ಅಪ್ಪು ಪುಷ್ಪಪ್ಸ್ ಹೊಡಿಯೋದನ್ನು ಸೆರೆ ಹಿಡಿಯುತ್ತಿದ್ದಾರೆ. ಅಲ್ಲಿದ್ದ ತುದಿಯ ಬಂದ ಮೇಲೆ 50 ಪುಷಪ್ಸ್ ಗಳನ್ನು ತಡೆಯಿಲ್ಲದೆ ಮಾಡಿದ ಪುನೀತ್ ಅವರು ಬಹಳ ರೋಮಾಂಚನಗೊಂಡು ಖುಷಿ ಪಟ್ಟು 50 ಹೊಡೆದೆ ಆರಾಮಾಗಿತ್ತು ಸದ್ಯ ಸ್ಲೋಪ್ ಆಗಿ ಇರಲಿಲ್ಲ ಅದಕ್ಕೆ ಆಯ್ತು.

ಎಂದು ಆ ಕ್ಷಣದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಹಿಂದೊಮ್ಮೆ ಅಪ್ಪು ಅವರ ಆಕಾಶದಿಂದ ಸ್ಕೈ ಡೈವಿಂಗ್ ಮಾಡಿದ್ದ ವಿಡಿಯೋಗಳು ಸಹ ನೋಡಿದ್ದೇವು ಮತ್ತು ಕಡಲ ಕಿನಾರೆಯಲ್ಲಿ ನಿಂತು ಅಲ್ಲಿದ್ದ ಶಾರ್ಕ್ ತಿಮಿಂಗಲಗಳೇ ನಾಚುವಂತೆ ಬ್ಯಾಕ್ ಫ್ಲಿಫ್ ಹೊಡೆದಿದ್ದ ಸ್ಟಂಟ್ ಗಳನ್ನು ನೋಡಿದ್ದೇವೆ ಹಾಗೆ ಅಪ್ಪು ವರ್ಕೌಟ್ ಕೂಡ ಅದೇ ರೀತಿ ಹುಬ್ಬೇರಿಸುವಂತೆ ಇರುತ್ತಿತ್ತು. ಜೊತೆಗೆ ಸಿನಿಮಾಗಳು ಕೂಡ ಯಾವುದೇ ಡೂಪಿಂಗ್ ಇಲ್ಲದೆ ಫೈಟ್ಗಳನ್ನು ಮಾಡುತ್ತಿದ್ದ ಏಕೈಕ ಹೀರೋ ಇವರು.

ಸದಾ ಇದೇ ರೀತಿ ಅಡ್ವೆಂಚರ್ ಲೈಫ್ ಅಲ್ಲಿ ಬದುಕಲು ಇಷ್ಟಪಡುತ್ತಿದ್ದ ಅವರು ಬದುಕನ್ನು ಒಂದು ಸುಂದರವಾದ ಪ್ರಯಾಣದ ರೀತಿ ಕಳೆದು ಅಂತಿಮವಾಗಿ ತನ್ನ ಅದೇ ಆಸೆಗಳನ್ನು ಗಂಧದಗುಡಿ ಸಿನಿಮಾದಲ್ಲಿ ತಾನಾಗಿ ಅಭಿನಯಿಸಿ ಅದನ್ನು ತಾನೇ ನಿರ್ಮಾಣ ಕೂಡ ಮಾಡಿ ಬದುಕು ಎಂದರೇನು ಬದುಕದಲ್ಲಿ ದೈನಂದಿಕ ಆಗುಹೋಗುಗಳ, ಜಂಜಾಟಗಳ ನಡುವೆಯೂ ಕೂಡ ಪ್ರಕೃತಿದತ್ತವಾಗಿ ಹೇಗೆಲ್ಲ ಸಂತೋಷವಾಗಿ ನಮ್ಮನ್ನು ನಾವು ಪ್ರಕೃತಿಗೆ ಹೊಂದಿಸಿಕೊಂಡು ಬದುಕಬಹುದು ಇತ್ಯಾದಿಗಳನ್ನು ತೋರಿಸಿಕೊಟ್ಟು ಹೋದರು.

ಅಪ್ಪು ಇಂದು ನಮ್ಮ ಜೊತೆ ಇಲ್ಲದಿದ್ದರೂ ಕೂಡ ಅವರು ಮಾಡಿದ ಸಮಾಜ ಸೇವೆ ಅವರು ಅಭಿನಯಿಸಿದಂತ ಸಿನಿಮಾಗಳ ಪಾತ್ರಗಳ ಮೂಲಕ ಮತ್ತು ಇಂತಹ ಯುವ ಜನತೆಗೆ ಸ್ಪೂರ್ತಿ ಆಗುವಂತಹ ವಿಷಯಗಳ ಮೂಲಕ ಶಾಶ್ವತವಾಗಿ ಕನ್ನಡಿಗರ ಮನದಲ್ಲಿ ಯುವ ರತ್ನ ಆಗಿರುತ್ತಾರೆ.

ದೊಡ್ಮನೆಯ ರಾಜಕುಮಾರನಾಗಿ ಹುಟ್ಟಿ ಇಡೀ ಕರ್ನಾಟಕ ಮನೆ ಮಗನಾಗಿ ಬದುಕನ್ನು ಪೂರ್ತಿಗೊಳಿಸಿದ ಅಪ್ಪು ಅವರ ಎಷ್ಟು ವಿಡಿಯೋಗಳನ್ನು ನೋಡಿದರೆ ಕೂಡ ಸಾಕು ಎನಿಸುವುದಿಲ್ಲ ಈಗ ಮತ್ತೊಂದು ಅವರ ಹೊಸ ಈ ಹೊಸ ವಿಡಿಯೋ ನೀವು ಈ ವಿಡಿಯೋನೋಡಿಲ್ಲ ಅಂದ್ರೆ ನೋಡಿ ಅಪ್ಪು ಅವರ ಲೈಫ್ ಬಗ್ಗೆ ನಿಮ್ಮ ಅಭಿಪ್ರಾಯ ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Entertainment Tags:Appu, Puneeth
WhatsApp Group Join Now
Telegram Group Join Now

Post navigation

Previous Post: 9 ತಿಂಗಳ ತುಂಬು ಗರ್ಭಿಣಿ – ಹೆರಿಗೆಗೂ ಹಣವಿಲ್ಲದೆ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಕನ್ನಡದ ಈ ನಟಿಯ ಸ್ಥಿತಿ ಯಾವ ಹೆಣ್ಣಿಗೂ ಬರದಿರಲಿ.
Next Post: ಮೆಗಾಸ್ಟಾರ್ ಚಿರಂಜೀವಿ ಮಗನಾದ ನೀವು ಹೀರೋ, ಬಸ್ ಡ್ರೈವರ್ ಮಗ ಯಶ್ ಕೂಡ ಹೀರೋ ಅಂದಿದಕ್ಕೆ ರಾಮ್ ಚರಣ್ ಕೊಟ್ಟ ಉತ್ತರವೇನು ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore