ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಕನಸುಗಾರ. ಸಿನಿಮಾವನ್ನೇ ತನ್ನ ಉಸಿರಾಗಿಸಿಕೊಂಡು, ಬದುಕಾಗಿಸಿಕೊಂಡ ಹಠವಾದಿ. ಕನ್ನಡಿಗರಿಗೆ ಹೊಸದಾದ ಪ್ರೇಮಲೋಕ ಪರಿಚಯಿಸಿದ ರಣಧೀರ. ಚಿನ್ನ, ರಸಿಕ, ಜಾಣ, ಮಲ್ಲ, ಕಲಾವಿದನಾಗಿ ಪ್ರೀತಿ ಪಾಠವನ್ನು ಹೇಳಿಕೊಡುತ್ತಿದ್ದ ಹಳ್ಳಿ ಮೇಷ್ಟ್ರು. ಹೀಗಾಗಿ ಇವರನ್ನು ಪ್ರೀತಿಯಿಂದ ರವಿಮಾಮ ಎಂದು ಕೂಡ ಕರೆಯುತ್ತಾರೆ. ಇಂದಿಗೂ ಕೂಡ ಅದೆಷ್ಟೋ ಎಂಗೆಳೆಯರಿಗೆ ಸಿನಿಮಾ ಮೂಲಕ ಪ್ರೀತಿ ಪಾಠ ಹೇಳಿಕೊಡುತ್ತಿರುವ ಪ್ರೇಮ ಬ್ರಹ್ಮಸ್ಮಿ ಇವರು.
ಪ್ರಶ್ನಿಸಿದವರಿಗೆ ಪ್ರೀತ್ಸೋದ್ ತಪ್ಪಾ ಎಂದು ಕೇಳುವ ಸಿಪಾಯಿ. ಇದಷ್ಟೇ ಅಲ್ಲದೆ ಕೌಟುಂಬಿಕ ಚಿತ್ರಗಳಲ್ಲೂ ಕೂಡ ಕನ್ನಡಿಗರ ಮನ ಗೆದ್ದು ಪುಟ್ಟಂಜ, ಮೊಮ್ಮಗ, ಚಿಕ್ಕೆಜಮಾನ್ರು ಇಂತಹ ಹಳ್ಳಿ ಸೊಗಡಿನ ಸಿನಿಮಾದಲ್ಲೂ ರೈತನ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡ ಅಂಜದಗಂಡು. ಕನ್ನಡ ಚಲನಚಿತ್ರರಂಗದಲ್ಲಿ ಹಲವು ದಶಕಗಳಿಂದ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಸಂಗೀತ ನಿರ್ದೇಶಕನಾಗಿ, ಸ್ಕ್ರಿಪ್ಟ್ ರೈಟರ್ ಆಗಿ ಈಗ ಪೋಷಕ ಪಾತ್ರದಲ್ಲೂ ಕೂಡ ಬೇಡಿಕೆಯಲ್ಲಿರುವ ನಟ.
ರವಿಚಂದ್ರನ್ ಅವರು ಇವುಗಳೆಲ್ಲರ ಜೊತೆಗೆ ಬಹಳ ಚೆನ್ನಾಗಿ ಸಿನಿಮಾಗಳನ್ನು ವಿಮರ್ಶೆ ಕೂಡ ಮಾಡುತ್ತಾರೆ. ಈ ಕಾರಣಕ್ಕಾಗಿ ಕನ್ನಡದಲ್ಲಿ ಯಾವುದೇ ಸಿನಿಮಾ ತಯಾರಾದರೂ ಆ ನಿರ್ದೇಶಕರು ಹಾಗೂ ನಟರು ತಮ್ಮ ಸಿನಿಮಾ ಮತ್ತು ನಟನೆಯನ್ನು ಜಡ್ಜ್ ಮಾಡಲು ಅವರ ಸಿನಿಮಾದ ಪ್ರೀಮಿಯರ್ ಶೋಗೆ ರವಿಚಂದ್ರನ್ ಅವರನ್ನು ಅತಿಥಿಯಾಗಿ ಕರೆಸುತ್ತಾರೆ. ಇತ್ತೀಚೆಗೆ ಕಿರುತೆರೆ ಕಾರ್ಯಕ್ರಮಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿರುವ ರವಿಚಂದ್ರನ್ ಅವರು ಈ ಹಿಂದೆ ಕಲರ್ ಕನ್ನಡದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಎನ್ನುವ ಡ್ಯಾನ್ಸಿಂಗ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಗುರುಪ್ರಸಾದ್, ರಕ್ಷಿತ ಮತ್ತು ರವಿಚಂದ್ರನ್ ಅವರು ಡ್ಯಾನ್ಸಿಂಗ್ ಸ್ಟಾರ್ ಸೀಸನ್ 1ರ ತೀರ್ಪುಗಾರರಾಗಿದ್ದರು. ಅದೇ ಮೊದಲು ಕಿರುತಕರ ಕಾರ್ಯಕ್ರಮ ಒಂದಕ್ಕೆ ರವಿಚಂದ್ರನ್ ಅವರು ತೀರ್ಪುಗಾರರಾಗಿ ಆಗಮಿಸಿದ್ದು. ಆಗಿನಿಂದ ಕಿರುತೆರೆ ಪ್ರೇಕ್ಷಕರ ಜೊತೆ ಹೊಸದೊಂದು ನಂಟು ರವಿಚಂದ್ರನ್ ಅವರಿಗೆ ಬೆಸೆದುಕೊಂಡಿದೆ. ಪ್ರತಿ ವಾರ ಕೂಡ ರಿಯಾಯಿತಿ ಶೋಗಳ ಮುಖಾಂತರ ಕಿರುತೆರೆ ಪ್ರೇಕ್ಷಕರ ಎದುರು ಕಾಣಿಸಿಕೊಳ್ಳುವುದರಿಂದ ಸಿನಿಮಾ ಗಿಂತ ಹೆಚ್ಚಿನ ಜನರಿಗೆ ಅವರು ರೀಚ್ ಆಗುತ್ತಿದ್ದಾರೆ.
ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಸಹ ಕಿರುತೆರೆ ರಿಯಾಲಿಟಿ ಶೋಗಳನ್ನು ಆಸಕ್ತಿಯಿಂದ ನೋಡುವುದರಿಂದ ಎಲ್ಲರ ಮನಸಿಗೂ ಬಹಳ ಹತ್ತಿರ ಆಗುತ್ತಿದ್ದಾರೆ. ಹೀಗಾಗಿ ಮತ್ತೊಮ್ಮೆ ಅವರು ಮತ್ತೊಂದು ರಿಯಾಲಿಟಿ ಶೋ ಗೆ ತೀರ್ಪುಗಾರರಾಗಿ ಕಾಣಿಸಿಕೊಳ್ಳಲು ಒಪ್ಪಿಕೊಂಡು ಈ ಬಾರಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಅಮ್ಮ ಜೂನಿಯರ್ಸ್ ದ ಸೀಸನ್ 4 ಗಾರರಾಗಿ ಬಂದಿದ್ದರು. ಡ್ರಾಮಾ ಜೂನಿಯರ್ ಸೀಸನ್ 4 ಗೆ ಜಡ್ಜಸ್ ಆಗಿ ಕ್ರೇಜಿಸ್ಟಾರ್ ರವಿಚಂದ್ರನ್, ಡಿಂಪಲ್ ಕ್ವೀನ್ ರಕ್ಷಿತಾ ಮತ್ತು ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರು ಕಾಣಿಸಿಕೊಂಡಿದ್ದರು.
ಈ ಕಾರ್ಯಕ್ರಮವು ಜೀ ವಾಹಿನಿ ಹೆಮ್ಮೆಯ ಕಾರ್ಯಕ್ರಮವಾಗಿದೆ. ಪುಟ್ಟ ಪುಟ್ಟ ಮಕ್ಕಳು ತಮ್ಮ ಅಭಿನಯ ಚಾತುರ್ಯವನ್ನು ಹಾಸ್ಯ ,ಕೌಟುಂಬಿಕ, ಪೌರಾಣಿಕ, ಐತಿಹಾಸಿಕ ಸ್ಕಿಟ್ ಗಳ ಮೂಲಕ ತೋರುತ್ತಿದ್ದಾರೆ. ಇದು ಪ್ರೇಕ್ಷಕರಿಗೆ ಮನೋರಂಜನೆಯನ್ನು ಸಹ ನೀಡುತ್ತಿದ್ದು ಜೊತೆಗೆ ತೀರ್ಪುಗಾರರು ಕೂಡ ಕಾರ್ಯಕ್ರಮದ ಮಧ್ಯೆ ಹಂಚಿಕೊಳ್ಳುವ ಮಾತುಗಳು, ನೆನಪುಗಳು, ಅನುಭವಗಳು ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ.
ರವಿಚಂದ್ರನ್ ಅವರು ತಮ್ಮ ಗೋಲ್ಡನ್ ಟೈಂ ಬಗ್ಗೆ ಯಾವಾಗಲೂ ವೇದಿಕೆ ಮೇಲೆ ಮಾತನಾಡುತ್ತಿರುತ್ತಾರೆ. ಹೀಗೆ ಹಿಂದಿನ ತಮ್ಮ ಸಿನಿಮಾ ಗಳ ಬಗ್ಗೆ ಹೇಳುವಾಗ ಹೂವ ರೋಜಾ ಹೂವ ಹಾಡಿನ ಬಗ್ಗೆ ಹೇಳುವ ಸಂದರ್ಭ ಡ್ರಾಮಾ ಜೂನಿಯರ್ ಸೀಸನ್ 4 ಮೆಗಾ ಅಡಿಷನ್ ಅಲ್ಲಿ ಬರುತ್ತದೆ. ನಂತರ ಆ ಹಾಡಿಗೆ ರಚಿತರಾಮ್ ಜೊತೆ ನೃತ್ಯ ಸಹ ಮಾಡುತ್ತಾರೆ. ಈ ವಿಡಿಯೋಗಳು ಈಗ ಮತ್ತೊಮ್ಮೆ ವೈರಲ್ ಆಗಿವೆ. ಇದನ್ನು ನೀವು ಸಹ ನೋಡಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.