ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಚಟುವಟಿಕೆಗಳು ಬಾರಿ ಜೋರಾಗಿ ನಡೆಯುತ್ತಿದೆ. ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಬಿಡುಗಡೆ ಆದ ಹಿನ್ನೆಲೆ ಸರ್ವ ಪಕ್ಷಗಳು ಕೂಡ ಟಿಕೆಟ್ ಹಂಚಿಕೆ, ನಾಮಪತ್ರ ಸಲ್ಲಿಕೆ ಮತ್ತು ಪ್ರಚಾರ ಕಾರ್ಯದ ಬಗ್ಗೆ ಭಾರಿ ರಣತಂತ್ರ ಹೂಡುತ್ತಿವೆ. ಎಲ್ಲರ ಕಣ್ಣು ಈಗ ಸಿನಿಮಾರಂಗದವರ ಮೇಲಿದ್ದು ಸ್ಟಾರ್ ನಟರುಗಳು ಈ ಬಾರಿ ಯಾರಿಗೆ ಬೆಂಬಲ ನೀಡಲಿದ್ದಾರೆ ಎಂದು ಎದುರು ನೋಡುತ್ತಿದ್ದಾರೆ.
ಈ ವರ್ಷದ ಆರಂಭದಿಂದಲೂ ಸುದೀಪ್ ಅವರ ರಾಜಕೀಯ ಪ್ರವೇಶದ ಬಗ್ಗೆ ಸಾಕಷ್ಟು ಊಹಾಪೋಹಗಳು ಇತ್ತು. ಕಾಂಗ್ರೆಸ್ ಪಕ್ಷವು ಸುದೀಪ್ ಅವರನ್ನು ತನ್ನ ಪಾಳಯಕ್ಕೆ ಎಳೆದುಕೊಳ್ಳುವುದಕ್ಕೆ ತಯಾರಾಗಿದೆ, ಈ ಬಗ್ಗೆ ಅವರಿಗೆ ಆಫರ್ ಕೂಡ ನೀಡಲಾಗಿದೆ, ಮೊದಲ ಹಂತದ ಮಾತು ಕಥೆಯು ನಡೆದಿದೆ ಎನ್ನುವ ಸುದ್ದಿ ಬಹಳ ಹಬ್ಬಿತ್ತು. ಸುದೀಪ್ ಅವರು ಕೂಡ ಮಾತುಕತೆ ವಿಚಾರವನ್ನು ಒಪ್ಪಿಕೊಂಡಿದ್ದರು.
ಆದರೆ ಅವರ ನಿಲುವನ್ನು ಸ್ಪಷ್ಟಪಡಿಸಿರಲಿಲ್ಲ. ಯಾಕೆಂದರೆ ಸರ್ವ ಪಕ್ಷಗಳಲ್ಲೂ ಕೂಡ ಸುದೀಪ್ ಅವರಿಗೆ ಆತ್ಮೀಯರು ಇದ್ದಾರೆ. ಅದರಲ್ಲೂ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಸುದೀಪ್ ಅವರಿಗೆ ಬಹಳ ಆತ್ಮೀಯರು. ಹೀಗಾಗಿ ಅವರು ಒಂದು ಅರ್ಥದಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದರು. ಆದರೆ ಇಂದು ನಡೆದ ಬಸವರಾಜ ಬೊಮ್ಮಾಯಿ ಅವರ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ.
ಸುದೀಪ್ ಅವರು ತಮ್ಮ ಬೆಂಬಲ ಬಸರಾಜ್ ಬೊಮ್ಮಾಯಿ ಅವರಿಗೆ ಎಂದು ಹೇಳಿದ್ದಾರೆ. ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ ಈ ಸವಿ ಸಂದರ್ಭದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರಿಗೆ ಮಾಧ್ಯಮಗಳಿಂದ ಸಾಕಷ್ಟು ಪ್ರಶ್ನೆಗಳು ಕೂಡ ಎದುರಾಗಿವೆ. ಅದಕ್ಕೆಲ್ಲ ಕಿಚ್ಚ ತಮ್ಮ ಜಾಣ್ಮೆಯಿಂದ ಉತ್ತರ ಕೊಟ್ಟಿದ್ದಾರೆ.
ಮೊದಲಿಗೆ ಭ್ರಷ್ಟಾಚಾರದ ಕುರಿತು ಸುದೀಪ್ ಅವರನ್ನು ಪ್ರಶ್ನಿಸಲಾಯಿತು. ರಾಜ್ಯದ ಬಿಜೆಪಿ ಪಕ್ಷದ ಮೇಲೆ 40% ಕಮಿಷನ್ ಪಡೆಯುವ ಆರೋಪ ಇದೆ. ನೀವು ಕೂಡ ಅದೇ ಪಕ್ಷಕ್ಕೆ ಸಪೋರ್ಟ್ ಮಾಡುತ್ತಿದ್ದೀರಾ ಹಾಗಾದ್ರೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಸುದೀಪ್ ಅವರು ನನಗೆ ದೇಶದ ಕಾನೂನಿನ ಮೇಲೆ ಬಹಳ ಗೌರವವಿದೆ ಅದು ನಿಜ ಆಗಿದ್ದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ.
ನಾನು ಬಿಜೆಪಿ ಪಕ್ಷದ ಒಳ್ಳೆಯ ಅಂಶಗಳಿಗಷ್ಟೇ ಬೆಂಬಲ ಸೂಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಮತ್ತೊಬ್ಬ ವರದಿಗಾರನಿಂದ ದರ್ಶನ್ ಅವರ ಕುರಿತು ಪ್ರಶ್ನೆ ಎದುರಾಗಿದೆ. ದರ್ಶನ್ ಅವರು ಸಹ ಬಿಜೆಪಿ ಪಕ್ಷಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ. ಇಬ್ಬರು ಒಟ್ಟಿಗೆ ಕ್ಯಾಂಪೇನ್ ಮಾಡುವ ಸಂದರ್ಭ ಬಂದರೆ ಹೋಗುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಉತ್ತರ ಕೊಡುವ ಮೊದಲೇ ಬಸವರಾಜು ಬೊಮ್ಮಾಯಿ ಅವರು ಉತ್ತರಿಸಿ ಬಿಟ್ಟರು.
ಈ ರೀತಿಯ ಹೈಪೋಥೀಸ್ ಪ್ರಶ್ನೆಗಳನ್ನು ಕೇಳುವುದು ಬೇಡ ಎಂದು ತಡೆದ ಬಸವರಾಜ್ ಬೊಮ್ಮಾಯಿ ಅವರು ಇದು ನನ್ನ ವೈಯಕ್ತಿಕ ಸುದ್ದಿಗೋಷ್ಠಿ, ಅವರು ಬಿಜೆಪಿ ಪಕ್ಷ ಸೇರುವುದರ ಬಗ್ಗೆ ಒಪ್ಪಿಗೆ ನೀಡಿಲ್ಲ ನನ್ನ ಜೊತೆಗಿರುವ ನಂಟು ಹಾಗೂ ಆತ್ಮೀಯತೆಗೆ ಬೆಲೆಕೊಟ್ಟು ನನ್ನ ಸಲುವಾಗಿ ಪ್ರಚಾರ ಕಾರ್ಯಕ್ಕೆ ಬಂದಿದ್ದಾರೆ. ಇದು ನನಗೆ ಸೂಚಿಸುತ್ತಿರುವ ಬೆಂಬಲ ಅಷ್ಟೇ ಪಕ್ಷದ ಸುದ್ದಿಗೋಷ್ಠಿ ಇದ್ದಿದ್ದರೆ ಅದು ಕಚೇರಿಯಲ್ಲಿ ನಡೆಯುತ್ತಿತ್ತು ಎಂದು ಹೇಳಿದ್ದಾರೆ. ಆದರೆ ದರ್ಶನ ಅವರ ಹೆಸರು ಹೇಳುತ್ತಿದ್ದಂತೆ ಸುದೀಪ್ ಅವರ ಮುಖದಲ್ಲಿ ನಗು ಬಂದಿರುವುದನ್ನು ಎಲ್ಲರ ಕಣ್ಮಿಗೂ ಬಿದ್ದಿದೆ.