Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸಿನಿಮಾದವರಿಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಸಿಡಿದೆದ್ದ ನಟ ಡಾಲಿ. ನಿಜ ಜೀವನದಲ್ಲಿ ಹೆಣ್ಣು ಕೊಡದಿದ್ರೆ ಏನಂತೆ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಎಂದು ಬ್ರೋಕರ್ ಮೇಲೆ ಗರಂ ಆದ ಧನಂಜಯ್.

Posted on April 11, 2023 By Kannada Trend News No Comments on ಸಿನಿಮಾದವರಿಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಸಿಡಿದೆದ್ದ ನಟ ಡಾಲಿ. ನಿಜ ಜೀವನದಲ್ಲಿ ಹೆಣ್ಣು ಕೊಡದಿದ್ರೆ ಏನಂತೆ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಎಂದು ಬ್ರೋಕರ್ ಮೇಲೆ ಗರಂ ಆದ ಧನಂಜಯ್.

 

ನಟ ರಾಕ್ಷಸ ಡಾಲಿ ಧನಂಜಯ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯ ಹೀರೋ ಎನ್ನಬೇಕೋ ವಿಲ್ಲನ್ ಎನ್ನಬೇಕೋ ಗೊತ್ತಿಲ್ಲ. ನಾನು ವಿಲನ್ ನೇ ಎಂದು ಹೇಳಿಕೊಳ್ಳುವ ಇವರು ವರ್ಷಕ್ಕೆ ಅತಿ ಹೆಚ್ಚು ಸಿನಿಮಾಗಳನ್ನು ಮಾಡುವ ಹೀರೋ ಎನ್ನುವ ಖ್ಯಾತಿಗೂ ಒಳಗಾಗಿದ್ದಾರೆ. ಸಿನಿಮಾ ತೆರೆ ಮೇಲೆ ಲವರ್ ಬಾಯ್ ಆಗಿ, ಪತಿಯಾಗಿ ಪಾತ್ರ ಮಾಡಿರುವ ಇವರು ನಿಜ ಜೀವನದಲ್ಲಿ ಇನ್ನೂ ಸಿಂಗಲ್ ಅನ್ನುವುದೇ ಎಲ್ಲರಿಗೂ ಆಶ್ಚರ್ಯ.

ಈ ಕಾರಣಕ್ಕಾಗಿ ಇವರು ಯಾವುದೇ ಇಂಟರ್ವ್ಯೂಗೂ ಹೋದರು, ಎಲ್ಲೇ ಮಾಧ್ಯಮದವರಿಗೆ ಕಾಣಿಸಿಕೊಂಡರು ಕೂಡ ಮೀಡಿಯಾ ಸೋಶಿಯಲ್ ಮೀಡಿಯಾದಲೆಲ್ಲ ಇವರ ಮದುವೆ ಬಗ್ಗೆ ಪ್ರಶ್ನೆಗಳು ಎದುರಾಗುತ್ತವೆ. ಇದುವರೆಗೆ ಅವರು ಮದುವೆಯಾಗಲು ಹೆಣ್ಣೇ ಸಿಗುತ್ತಿಲ್ಲ ಎಂದು ಕಾಗೆ ಹಾರಿಸಿಕೊಂಡೆ ಬಂದಿದ್ದಾರೆ. ಇತ್ತೀಚಿಗೆ ಮಂಡ್ಯದಿಂದ ಮದುವೆ ವಯಸ್ಸು ಮೀರಿದರು ಮದುವೆಯಾಗದಿರುವ ಗಂಡು ಹೈಕಳೆಲ್ಲಾ ಮಾದಪ್ಪನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗಿದ್ದಾಗ ಅವರ ಮುಂದಾಳತ್ವವನ್ನು ಕೂಡ ಧನಂಜಯ್ ಅವರೇ ಹೊತ್ತಿದ್ದರು.

ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಬ್ರೋಕರ್ ಅನ್ನು ಅವರು ಬಯ್ಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಸಿನಿಮಾದವರಿಗೆ ಹೆಣ್ಣು ಕೊಡದಿದ್ದರೆ ಏನಯ್ಯ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಬಿಡು ಎಂದು ಅವರ ಮೇಲೆ ರೇಗಿದ್ದಾರೆ ಡಾಲಿ. ಅಷ್ಟಕ್ಕೂ ಹೀಗಾಗಲು ಕಾರಣ ಏನು ಎಂದರೆ ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಹಾಡು ಎಂದೇ ಹೇಳಬಹುದು.

ಎತ್ತಣ ರಾಘವೇಂದ್ರ ಸ್ಟೋರ್ಸ್ ಎತ್ತಣ್ಣ ಡಾಲಿ ಧನಂಜಯ್ ಇವರಿಬ್ಬರಿಗೂ ಏನು ಸಂಬಂಧ ಎಂದು ಹಲವರಿಗೆ ಕನ್ಫ್ಯೂಸ್ ಆಗಬಹುದು. ಅದಕ್ಕೆಲ್ಲಾ ಕ್ಲಾರಿಟಿ ಇಲ್ಲಿದೆ ನೋಡಿ. ವರ್ಷದ ಹಿಂದೆಯೇ ಸಣ್ಣ ಟೀಸರ್ ರೆಡಿ ಮಾಡಿ ಕನ್ನಡಿಗರಿಗೆ ಕುತೂಹಲ ಹೆಚ್ಚಿಸಿರುವ ಚಿತ್ರ ರಾಘವೇಂದ್ರ ಸ್ಟೋರ್ಸ್. ಹಾಸ್ಯ ದಿಗ್ಗಜ ನವರಸ ನಾಯಕ ಜಗ್ಗೇಶ್ ಅವರ ಬಹು ನಿರೀಕ್ಷಿತ ಚಿತ್ರವಾದ ರಾಘವೇಂದ್ರ ಸ್ಟೋರ್ಸ್ ಅವರ ಶಿಷ್ಯನೇ ಆದ ಸಂತೋಷ್ ಆನಂದ ರಾಮ್ ಅವರು ನಿರ್ದೇಶನ ಮಾಡಿದ್ದಾರೆ.

ಇದೀಗ ಆ ಸಿನಿಮಾ ರಿಲೀಸ್ ಹಂತಕ್ಕೆ ತಲುಪಿದ್ದು ಸಿನಿಮಾದ ಮೊದಲ ಹಾಡನ್ನು ವಿಶೇಷವಾಗಿ ರಿಲೀಸ್ ಮಾಡುವ ಸಲುವಾಗಿ ಇಷ್ಟೆಲ್ಲ ಸಾಹಸ ಮಾಡಲಾಗಿದೆ. ಸಿನಿಮಾದ ಮೊದಲ ಹಾಡಾಗಿ ಬ್ರಹ್ಮಚಾರಿ ಬಾರ್ಡರ್ ಅಲ್ಲಿದ್ದೀಯ ಬ್ಯಾಡ ಶೋಭಾನ ಎನ್ನುವ ಹಾಡನ್ನು ಎಲ್ಲಾ ಸಿಂಗಲ್ಸ್ ಗಾಗೆ ಮಾಡಲಾಗಿದ್ದು ಈ ಹಾಡನ್ನು ಕನ್ನಡದ ಸಿಂಗಲ್ ಇಂದ ಬಿಡುಗಡೆ ಮಾಡಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.

ವೀಡಿಯೋದಲ್ಲಿ ಹಾಡಿಗೆ ಸಂಗೀತ ನೀಡಿರುವ ಅಜನೀಶ್ ಲೋಕೇಶ್ ಮತ್ತು ಸಿನಿಮಾ ನಟ ನಾಗಶೇಖರ್ ಹಾಗೂ ಡಾಲಿ ಧನಂಜಯ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಂದ ಈ ವಿಷಯ ಮುಟ್ಟಿಸುವ ಸಲುವಾಗಿ ಈ ರೀತಿಯಾಗಿ ವಿಶೇಷ ಪ್ರಯತ್ನ ಮಾಡಲಾಗಿದೆ. ವೀಡಿಯೋದಲ್ಲಿ ಸಿಂಗಲ್ಸ್ ಗಳ ಬಗ್ಗೆ ಮಾತುಕತೆ ಜೋರಾಗಿದ್ದು ಕೊನೆಗೆ ಕನ್ನಡದಲ್ಲಿ ಸಿಂಗಲ್ ಗಳಿಗೆ ಆಗಿ ರೆಡಿ ಆಗಿರುವ ಸಿಂಗಲ್ ಹಾಡನ್ನು ಏಪ್ರಿಲ್ 12ರಂದು ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್ ರಿಲೀಸ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಸ್ಯಾಂಡಲ್ ವುಡ್ ಸಿಂಗಲ್ಸ್ ಗಳ ಬಾಯಲ್ಲಿ ಸಿಂಗಲ್ ಸುಂದರ!
Calling all the singles out there! 📣🎶 Anthem for all the independent souls! Embrace your freedom and groove to the beat of #SingerSundara 🎶 from #RaghavendraStores 🕺https://t.co/Odv9uuPGkk

Song Launch by @rakshitshetty on… pic.twitter.com/50ZlhG8IYt

— Hombale Films (@hombalefilms) April 10, 2023

ವಿಡಿಯೋ ಕೊನೆಯಲ್ಲಿ ಡಾಲಿ ಧನಂಜಯ್ ಅವರು ನಾನು ಒಬ್ಬನೇನಾ ಸಿಂಗಲ್ಸ್ ಇರುವುದು ರಕ್ಷಿತ್ ಶೆಟ್ಟಿ ಕೂಡ ಸಿಂಗಲ್ ಅವರ ಕೈಯಲ್ಲಿ ರಿಲೀಸ್ ಮಾಡಿಸಿ ಎಂದಿದ್ದಾರೆ. ಅಂದ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಈ ಸಿಂಗಲ್ಸ್ ಹಾಡನ್ನು ಏಪ್ರಿಲ್ 12 ರಂದು ಸಂಜೆ 5:00 ಕ್ಕೆ ರಕ್ಷಿತ್ ಶೆಟ್ಟಿ ಅವರೇ ರಿಲೀಸ್ ಮಾಡಲಿದ್ದಾರೆ. ವಿಜಯ್ ಪ್ರಕಾಶ್ ಮತ್ತು ನವೀನ್ ಸಜ್ಜು ಅವರೇ ಈ ಸಿಂಗಲ್ಸ್ ಹಾಡಿಗೆ ದನಿಯಾಗಿದ್ದಾರೆ.

Entertainment Tags:Daali, Dali Dhananjay
WhatsApp Group Join Now
Telegram Group Join Now

Post navigation

Previous Post: ಮೈಸೂರಿನಲ್ಲಿ ಕಾಟೇರ ಶೂಟಿಂಗ್, ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು.
Next Post: ತಾತನ ಥರಾನೇ ಖಡಕ್ ಡೈಲಾಗ್ ಹೊಡೆದ ವಜ್ರಮುನಿ ಮೊಮ್ಮಗ. ಈ ವಿಡಿಯೋ ನೋಡಿ ನಿಜಕ್ಕೂ ಬೆರಗಾಗಿ ಹೋಗ್ತಿರಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore