Sunday, May 28, 2023
HomeEntertainmentಮೈಸೂರಿನಲ್ಲಿ ಕಾಟೇರ ಶೂಟಿಂಗ್, ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು.

ಮೈಸೂರಿನಲ್ಲಿ ಕಾಟೇರ ಶೂಟಿಂಗ್, ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು.

 

ದರ್ಶನ್ ಅವರ 56ನೇ ಚಿತ್ರ ಕಾಟೇರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ ಆಗಿದೆ. ಯಾಕೆಂದರೆ ಕುರುಕ್ಷೇತ್ರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಬಿಟ್ಟರೆ ಆನಂತರ ದಚ್ಚು ಹೆಚ್ಚಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರ ಮುಂದಿನ ಸಿನಿಮಾ ಕಾಟೇರ ಕಥೆ ಸ್ವಲ್ಪ ವಿಭಿನ್ನವಾಗಿದೆ. 70ರ ದಶಕದ ಕಥಾಂದರ ಹೊಂದಿರುವ ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು ದರ್ಶನ್ ಮತ್ತು ತರುಣ್ ಸುಧೀರ್ ಅವರ ಕಾಂಬಿನೇಷನ್ ಮತ್ತೊಂದು ಚಿತ್ರವಾಗಿದೆ.

ಸಿನಿಮಾ ತಂಡ ಫಸ್ಟ್ ಲುಕ್ ಮೋಶನ್ ಪೋಸ್ಟರ್ ರಿಲೀಸ್ ಮಾಡಿದ ದಿನದಿಂದಲೂ ಕೂಡ ದರ್ಶನ್ ಅವರ ಲುಕ್ ಬಗ್ಗೆ ಜನ ಸಕ್ಕತ್ ಇಂಪ್ರೆಸ್ ಆಗಿದ್ದಾರೆ, ಮೊದಲ ಬಾರಿಗೆ ರೆಟ್ರೋ ಸ್ಟೈಲಲ್ಲಿ ದಾಸ ನಟಿಸುತ್ತಿದ್ದಾರೆ. ಪೋಸ್ಟರಲ್ಲಿರುವ ಕೆಂಪು ಬಣ್ಣದ ಅಂಗಿ ಹಾಗೂ ಕಂದು ಬಣ್ಣದ ಲುಂಗಿ ದರ್ಶನ್ ಅವರಿಗೆ ಸಕ್ಕತ್ತಾಗಿ ಸೂಟ್ ಆಗಿ ಸಿನಿಮಾ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ. ಸಿನಿಮಾ ಬಗೆಗಿನ ಮತ್ತಷ್ಟು ಅಪ್ಡೇಟ್ಸ್ ಎಂದರೆ ಮಾಲಾಶ್ರೀ ಪುತ್ರಿ ರಾಧನರಾಮ್ ಅವರು ನಾಯಕಿಯಾಗಿ ಲಾಂಚ್ ಆಗುತ್ತಿರುವ ಸಿನಿಮಾ ಇದು.

ಹಾಗೆ ಖಡಕ್ ವಿಲನ್ ಪಾತ್ರದಲ್ಲಿ ತೆಲುಗು ಹೀರೋ ಜಗಪತಿ ಬಾಬು ಅವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಕ್ಲೈನ್ ವೆಂಕಟೇಶ್ ಅವರು ಬಜೆಟ್ ಹೂಡುತ್ತಿರುವ ಈ ಸಿನಿಮಾಗೆ ಬಹುತೇಕ ರಾಬರ್ಟ್ ಚಿತ್ರತಂಡದಲ್ಲಿದ್ದ ಎಲ್ಲಾ ತಾಂತ್ರಿಕ ವರ್ಗವು ಕೂಡ ಕೆಲಸ ಮಾಡುತ್ತಿದೆ. ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ದಿನದಂದು ಕನಕಪುರ ಬಳಿ ಇರುವ ಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಚಿತ್ರದ ಮುಹೂರ್ತ ಕಾರ್ಯ ನಡೆದಿತ್ತು. ನಂತರ ಕ್ರಾಂತಿ ಸಿನಿಮಾದ ಪ್ರಚಾರಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಡಿ.56 ಸಿನಿಮ ಕುರಿತ ಅಪ್ಡೇಟ್ ಅನ್ನು ಬಿಟ್ಟುಕೊಟ್ಟಿರಲಿಲ್ಲ.

ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾಗೆ ಕಾಟೇರ ಎಂದು ಟೈಟಲ್ ಫಿಕ್ಸ್ ಕೂಡ ಮಾಡಲಾಯಿತು.ಅಂದಿನಿಂದ ಚಿತ್ರಿಕರಣ ಬರದಲ್ಲಿ ಸಾಗುತ್ತಿದೆ. ಈಗಾಗಲೇ ಸಿನಿಮಾದ 40% ಶೂಟಿಂಗ್ ಮುಗಿದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.ಅಸಹಾಯಕರ ಮತ್ತು ಶೋಷಿತರ ವಿರುದ್ಧ ಬಂಡಾಯ ಏಳುವ ನಾಯಕನಾಗಿ ದರ್ಶನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಕನಕಪುರದ ಸುತ್ತಮುತ್ತ 15 ದಿನಗಳ ಶೂಟಿಂಗ್ ಅನ್ನು ಚಿತ್ರತಂಡ ಮಾಡಿತ್ತು.

ಈಗ ಮೈಸೂರಿನ ಬಳಿ ಇರುವ ಸುತ್ತೂರಿನ ತೋಟವೊಂದರಲ್ಲಿ ಪೋಸ್ಟರ್ ಅಲ್ಲಿ ಕಾಣಿಸಿಕೊಂಡಿದ್ದ ಲುಕ್ ನಲ್ಲಿ ದರ್ಶನ್ ದರ್ಶನವಾಗಿದೆ. ಅಂದರೆ ಕಥೆಯ ಮುಖ್ಯ ಭಾಗದ ಶೂಟಿಂಗ್ ಈಗ ಅಲ್ಲಿ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕಾಟೇರ ಚಿತ್ರೀಕರಣದ ಸಮಯದಲ್ಲಿ ಅಭಿಮಾನಿಗಳು ದರ್ಶನ್ ಅವರನ್ನು ನೋಡಲು ಮುಗಿಬಿದ್ದಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ.

ಹಲವರು ದರ್ಶನ್ ಅವರ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕ್ಯಾರಾವನ್ ಇಳಿದು ದರ್ಶನ್ ಅವರು ಕಾಟೇರ ಗೆಟಪ್ ಅಲ್ಲಿ ಹೋಗುತ್ತಿರುವುದು ಜೊತೆಗೆ ಶಾಟ್ ಮುಗಿಸಿ ಬರುತ್ತಿರುವುದು, ಅಭಿಮಾನಿಗಳು ಡಿ ಬಾಸ್ ಎಂದು ಕೂಗಿದಾಗ ಅವರ ಕಡೆ ಕೈ ಬೀಸಿ ಪ್ರೀತಿ ತೋರುತ್ತಿರುವುದು ಕಂಡು ಬಂದಿದೆ. ನಾನಾ ಕಾರಣಗಳಿಂದ ಕಾಟೇರ ಸಿನಿಮಾ ಕುರಿತ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದ್ದು.

ಚಿತ್ರತಂಡ ಕೂಡ ಡಿಸೆಂಬರ್ ವೇಳೆಗೆ ಸಿನಿಮಾ ರಿಲೀಸ್ ಮಾಡುವುದಾಗಿ ಭರವಸೆ ಕೊಟ್ಟಿದೆ. ಹೀಗಾಗಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಸೆಲೆಬ್ರಿಟಿಗಳ ಸೆಲೆಬ್ರಿಟಿ ದರ್ಶನ್ ಅವರ ಈ ಕಾಟೇರ ಲುಕ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

https://www.instagram.com/reel/CqvfrvbMoLG/?igshid=YmMyMTA2M2Y=