Sunday, May 28, 2023
HomeEntertainmentರಚಿತಾ ರಾಮ್ ಒಂದು ಸಿನಿಮಾ ಮಾಡೋಕೆ ತೆಗೆದುಕೊಳ್ಳುವ ದುಬಾರಿ ಸಂಭಾವನೆ ಎಷ್ಟು ಗೊತ್ತ.? .

ರಚಿತಾ ರಾಮ್ ಒಂದು ಸಿನಿಮಾ ಮಾಡೋಕೆ ತೆಗೆದುಕೊಳ್ಳುವ ದುಬಾರಿ ಸಂಭಾವನೆ ಎಷ್ಟು ಗೊತ್ತ.? .

 

ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಇರುವ ನಟಿ. ದರ್ಶನ್, ಸುದೀಪ್, ಉಪೇಂದ್ರ, ಗಣೇಶ್, ಶಿವಣ್ಣ, ಪುನೀತ್ ಹೀಗೆ ಸ್ಟಾರ್ ನಟರ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಪ್ರಜ್ವಲ್, ನೀನಾಸಂ ಸತೀಶ್, ನಿಖಿಲ್, ಅಜಯ್ ರಾವ್, ಮುರಳಿ ಅಂತಹ ಟ್ಯಾಲೆಂಟೆಡ್ ಆಕ್ಟರ್ಗಳ ಕಂಟೆಂಟ್ ಓರಿಯಂಟ್ ಸಿನಿಮಾಗಳ ಭಾಗವಾಗುವುದರಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಚಿತಾ ರಾಮ್ ಅವರಿಗೆ ಬಹಳ ಬೇಡಿಕೆ ಇದೆ.

ಹಿಂದೊಮ್ಮೆ ಇವರ ಸಣ್ಣ ಕಲಾವಿದನ ಸಿನಿಮಾಗೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಕ್ಕೆ ವಿವಾದ ಆಗಿದ್ದು ಇದೆ. ಆದರೆ ನಟಿ ಹೇಳುವುದು ನನಗೆ ಸಿನಿಮಾ ಕಂಟೆಂಟ್ ಮುಖ್ಯ, ನನ್ನ ಪಾತ್ರ ಮುಖ್ಯ ಹೀಗಿದ್ದಾಗ ನಾನು ಯಾರಿಗೆ ಬೇಕಾದರೂ ನಟಿ ಆಗುತ್ತೇನೆ ಎಂದು ಹೇಳಿಕೊಳ್ಳುವ ಇವರು ವರ್ಷಪೂರ ಸಿನಿಮಾಗಳಲ್ಲಿ ಬಿಜಿ ಇರುತ್ತಾರೆ. ಅವರ ಸಂಭಾವ್ಯ ಸಿನಿಮಾಗಳ ಹೆಸರುಗಳನ್ನು ನೋಡಿದರಾದರೆ ದೊಡ್ಡಪಟ್ಟಿಯ ಇರುತ್ತದೆ.

ಸದ್ಯಕ್ಕಿಗ ಕ್ರಾಂತಿ ಸಿನಿಮಾ ನಂತರ ಅವರ ವೀರಂ ಸಿನಿಮಾ ರಿಲೀಸ್ ಗೆ ರೆಡಿ ಆಗಿದೆ. ರಚಿತರಾಮ್ ಅವರು ಬೆಳ್ಳಿತರೆ ಮಾತವಲ್ಲದೆ ಕಿರುತೆರೆಯಲ್ಲೂ ಕೂಡ ಹೆಸರು ಮಾಡಿದವರು. ಇವರು ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು ಕಿರುತೆರೆ ಧಾರಾವಾಹಿಯ ಮೂಲಕ ಅರಸಿ ಎನ್ನುವ ಧಾರವಾಹಿಯಲ್ಲಿ ನೆಗೆಟಿವ್ ಮಾಡುತ್ತಿದ್ದಾಗ ಬುಲ್ ಬುಲ್ ಸಿನಿಮಾ ತಂಡದ ಕಣ್ಣಿಗೆ ಬಿದ್ದ ಇವರು ಬುಲ್ ಬುಲ್ ಸಿನಿಮಾ ಆದ ನಂತರ ಅತಿ ದೊಡ್ಡ ಬ್ರೇಕ್ ಪಡೆದುಕೊಂಡರು.

ಇಂದು ಕನ್ನಡದಲ್ಲಿ ನಂಬರ್ ಒನ್ ನಟಿ ಆಗುವ ಹತ್ತಿರಕ್ಕೆ ಬೆಳೆಯುತ್ತಿರುವ ಇವರು ಈಗಲೂ ಸಹ ಕಿರುತೆರೆ ನಂಟು ಕಳೆದುಕೊಂಡಿಲ್ಲ. ಇಷ್ಟು ಬ್ಯುಸಿ ಶೆಡ್ಯೂಲ್ ನಡುವೆ ಹಿಂದಿನಿಂದಲೂ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರಿಗೂ ಹತ್ತಿರವಾಗಿರುವ ಇವರ ಸಂಭಾವನೆ ಎಷ್ಟಿರಬಹುದು ಎಂದು ಎಲ್ಲರ ಕುತೂಹಲ.

ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ ರೀತಿ ಸಂಭಾವನೆ ವಿಚಾರವಾಗಿ ನಾಯಕನಟರುಗಳು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಜೊತೆಗೆ ಅವರಿಗೆ ಗೊತ್ತಿಲ್ಲದಂತೆ ಈ ವಿಚಾರವಾಗಿ ಒಂದು ರೇಸ್ ಆರಂಭವಾಗಿದೆ ಎಂದರು ಅದು ಸುಳ್ಳಲ್ಲ. ಆದರೆ ನಟಿ ಮಣಿಯರು ತೆಗೆದುಕೊಳ್ಳುವ ಸಂಭಾವನೆ ಬಗ್ಗೆ ಚರ್ಚೆ ಆಗುವುದು ಕಡಿಮೆ ಆದರೆ ರಚಿತಾ ರಾಮ್ ಅವರು ಇಷ್ಟೆಲ್ಲಾ ಬಿಸಿ ಇರುವ ಕಾರಣಕ್ಕಾಗಿ ಅವರು ಎಷ್ಟು ಸಂಪಾದನೆ ಮಾಡುತ್ತಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಯುವ ಜನತೆಗೆ.

ರಚಿತಾ ರಾಮ್ ಅವರು ಅಂದದ ಜೊತೆ ಅದೃಷ್ಟವನ್ನು ಹೊಂದಿರುವ ಪ್ರತಿಭಾನ್ವಿತ ನಟಿ. ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಕನ್ನಡ ಸಿನಿಮಾಗಳಲ್ಲಿ ಸಾಂಪ್ರದಾಯಿಕ ಹುಡುಗಿ ಪಾತ್ರ, ಗ್ಲಾಮರ್ ಡಾಲ್ ಲುಕ್ , ಅಥವಾ ಬೋಲ್ಡ್ ಪಾತ್ರಗಳಿಗೂ ತನ್ನನ್ನು ತಾನು ಒಗ್ಗಿಸಿಕೊಂಡು ನಟಿಸುವಂತಹ ಡೆಡಿಕೇಟೆಡ್ ಹೀರೋಯಿನ್.

ಹೀಗಾಗಿ ಇವರನ್ನು ನಿರ್ದೇಶಕರ ನಟಿ ಎಂದು ಕರೆಯುತ್ತಾರೆ ಇನ್ನು ಸಂಭಾವನೆ ವಿಚಾರ ಕೇಳಿದರೆ ಇವರು ನಿರ್ಮಾಪಕರ ನಟಿ ಎಂದು ಸಹ ನೀವು ಒಪ್ಪಬಹುದು. ಯಾಕೆಂದರೆ ಇಷ್ಟೆಲ್ಲ ಶ್ರಮ ಹಾಕಿ ಎಲ್ಲದಕ್ಕೂ ಸಮಯ ತೂಗಿಸಿಕೊಂಡು ಸಿನಿಮಾ ಮಾಡುವ ಇವರು ಒಂದು ಸಿನಿಮಾಗಾಗಿ ತೆಗೆದುಕೊಳ್ಳುವುದು 40 ರಿಂದ 60 ಲಕ್ಷ ಮಾತ್ರ.

ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾ ಗೆ ಈ ಹಣದ ಮೊತ್ತ ಸ್ವಲ್ಪ ಹೆಚ್ಚು ಕಮ್ಮಿ ಆಗಬಹುದು. ಆದರೆ ಇದುವರೆಗೆ ಅವರು ತೆಗೆದುಕೊಂಡಿರುವ ಸಿನಿಮಾ ಪ್ರಾಜೆಕ್ಟ್ ಗೆ ಸಂಬಂಧಿತ ಸಂಭಾವನೆ 60 ಲಕ್ಷಕ್ಕಿಂತ ಮೀರಿಲ್ಲ ಎನ್ನುತ್ತದೆ ಮೂಲಗಳು. ನಿಮ್ಮ ಪ್ರಕಾರ ರಚಿತರಾಮ್ ಅವರಿಗೆ ಎಷ್ಟು ಸಂಭಾವನೆ ಸಿಗಬೇಕು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.