ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ನಟ ಯಾರು ಗೊತ್ತ.? ಸಮೀಕ್ಷೆ ವರದಿ ನೋಡಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗಬಹುದು.

 

ಕನ್ನಡ ಚಲನಚಿತ್ರರಂಗ ಡಾ. ರಾಜಕುಮಾರ್ ಅವರ ಕಾಲದಿಂದ ಹಿಡಿದು ಈಗಿನ ರಾಕಿಂಗ್ ಸ್ಟಾರ್ ಯಶ್ ಅವರವರಿಗೆ ಹಲವು ನಾಯಕರನ್ನು ಕಂಡಿದೆ ಇಂಥವರಲ್ಲಿ ಅಣ್ಣಾವ್ರು, ವಿಷ್ಣುವರ್ಧನ್, ಶಂಕರ್ ನಾಗ್, ಸುನಿಲ್, ದರ್ಶನ್, ಸುದೀಪ್, ಉಪೇಂದ್ರ, ಗಣೇಶ್, ಯಶ್, ರಕ್ಷಿತ್ ಮುಂತಾದವರು ಅಗ್ರಸ್ಥಾನದಲ್ಲಿ ಉಳಿಯುತ್ತಾರೆ. ಈ ಎಲ್ಲರ ಹೆಸರಿನಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ದಾಖಲೆಗಳು ಆಗಿರುತ್ತವೆ.

ಉದಾಹರಣೆಗೆ ಡಾ. ರಾಜಕುಮಾರ್ ಅವರು ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಜನಪ್ರಿಯ ನಾಯಕ ನಟ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರು ಅತಿ ಹೆಚ್ಚು ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಸ್ಟಾರ್ ನಟ. ನಟ ದರ್ಶನ್ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟ ಹೀಗೆ ಈ ಪಟ್ಟಿಯಲ್ಲಿ ಅತಿ ಹೆಚ್ಚು ಮಹಿಳಾ ಅಭಿಮಾನಿಗಳು ಹೊಂದಿರುವ ನಟ ಯಾರು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ.

ಅದಕ್ಕಾಗಿ ಈ ಅಂಕಣದಲ್ಲಿ ಅದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಕಿಚ್ಚ ಸುದೀಪ್ ಎಂದರೆ ಕನ್ನಡಿಗರಿಗೆ ಮಾತ್ರವಲ್ಲದೆ ಇಡಿ ಭಾರತ ದೇಶಕ್ಕೆ ಗೊತ್ತು. ಕನ್ನಡ ಚಿತ್ರರಂಗ ಮಾರ್ತವಲ್ಲದೆ ತಮಿಳು ತೆಲುಗು ಹಿಂದಿ ಹೀಗೆ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ದೇಶದಾದ್ಯಂತ ಹೆಸರು ಪಡೆದಿರುವ ಕಿಚ್ಚ ಸುದೀಪ್ ಅವರಿಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಮಹಿಳಾ ಅಭಿಮಾನಿಗಳು ಇದ್ದಾರೆ.

ಹಿಂದೊಮ್ಮೆ ಅವರು ಬರಿ ಕಾಲ್ನಡಿಗೆಯಲ್ಲಿ ಬಂದು ಸುದೀಪ್ ಅವರ ಮನೆ ಸೇರಿದ ಉದಾಹರಣೆಗಳು ಇವೆ. ಸದ್ಯಕ್ಕೆ ಈಗ ಟಾಪ್ ಒನ್ ನಂಬರಲ್ಲಿ ಸುದೀಪ್ ಅವರು ಇದ್ದಾರೆ. ಇವರ ನಂತರ ರಾಕಿಂಗ್ ಸ್ಟಾರ್ ಯಶ್ ಅವರು ಬರುತ್ತಾರೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಸಹ ಕರ್ನಾಟಕದಲ್ಲಿ ಅತಿ ಹೆಚ್ಚು ಮಹಿಳಾ ಅಭಿಮಾನಿಗಳು ಇಷ್ಟಪಡುತ್ತಾರಂತೆ.

ಅವರ ಮೊಗ್ಗಿನ ಮನಸ್ಸು, ರಾಜಾಹುಲಿ, ಗೂಗ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಕೆಜಿಎಫ್ ಸರಣಿಗಳು ಇಂತಹ ಸಿನಿಮಾಗಳು ಅವರ ಮಹಿಳಾ ಅಭಿಮಾನಿಗಳ ಸಂಖ್ಯೆಗಳನ್ನು ಹೆಚ್ಚಿಸಿದೆ ಎಂದೇ ಹೇಳಬಹುದು. ಇವರ ನಂತರ ಈ ಲಿಸ್ಟಲ್ಲಿ ಬರುವ ಮತ್ತೊಂದು ಹೆಸರು ಯಾರದ್ದು ಎಂದರೆ ಕರ್ನಾಟಕದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎನಿಸಿಕೊಂಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ರಕ್ಷಿತ್ ಶೆಟ್ಟಿ ಅವರು ತಮ್ಮದೇ ಆದ ವಿಭಿನ್ನ ರೀತಿಯ ಪ್ರಯೋಗಾತ್ಮಕ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ನಿರ್ದೇಶಕನಾಗಿ ನಾಯಕ ನಟನಾಗಿ ಕೂಡ ಕನ್ನಡಿಗರಿಗೆ ಹತ್ತಿರವಾಗಿರುವ ಇವರು ಸುದೀಪ್ ಯಶ್ ನಂತರ ಮೂರನೇ ಸ್ಥಾನದಲ್ಲಿ ಬರುತ್ತಾರೆ. ಇನ್ನು ಮುಂದೆ ಈ ಲಿಸ್ಟ್ ಅಲ್ಲಿ ದರ್ಶನ್ ಅವರ ಹೆಸರು ಎಲ್ಲರ ಹೆಸರನ್ನು ಹಿಂದೆ ಹಾಕಿ ಮೇಲೆ ತಲುಪುವ ಸಾಧ್ಯತೆ ಇದೆ. ಯಾಕೆಂದರೆ ಇತ್ತೀಚೆಗೆ ನಡೆದ ದರ್ಶನ್ ಅವರ ಹುಟ್ಟು ಹಬ್ಬದಂದು ಮಹಿಳಾ ಅಭಿಮಾನಿಗಳ ದಂಡೋಪ ದಂಡಲ್ಲಿ ಅವರ ಮನೆಯೆತ್ತ ಬಂದಿದ್ದರು.

ಹಾಗಾಗಿ ಇತ್ತೀಚಿಗೆ ದರ್ಶನ್ ಅವರಿಗೆ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳು ಇದ್ದಾರೆ ಎನ್ನುವುದು ನಿರೂಪಿಸಿದಂತಾಗತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ನಿಮ್ಮ ನೆಚ್ಚಿನ ನಟ ಯಾರು ಮತ್ತು ಯಾವ ಕಾರಣಕ್ಕಾಗಿ ಎನ್ನುವ ಅನಿಸಿಕೆಯನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Leave a Comment