ಹಿಂದೂಗಳ ನಂಬಿಕೆಗಳ ಪ್ರಕಾರ, ಪುರಾಣಗಳಲ್ಲಿ ಉಲ್ಲೇಖ ಆಗಿರುವ ಪ್ರಕಾರ ಒಟ್ಟಾರೆಯಾಗಿ 330 ಕೋಟಿ ದೇವತೆ ಹಾಗೂ ದೇವರುಗಳು ಇದ್ದಾರೆ. ಹಿಂದೂಗಳು ದೇವತೆಗಳನ್ನು ಬಹಳವಾಗಿ ನಂಬುತ್ತಾರೆ ಹಾಗೂ ಅವರ ನಂಬಿಕೆಗಳು ಹುಸಿಯಾಗದಂತೆ ದೇವತೆಗಳು ಕೂಡ ತನ್ನ ಭಕ್ತಾದಿಗಳ ಕಷ್ಟವನ್ನು ತೀರಿಸಿ ಕಾಪಾಡುತ್ತಾರೆ. ಇಂದಿಗೂ ಸಹ ಮನುಷ್ಯರು ತಾವು ಬಗೆಹರಿಸಲಾಗದ ಸಮಸ್ಯೆಗಳು ಬಂದಾಗ ದೇವರ ಮೊರೆ ಹೋಗುತ್ತಾರೆ.
ದೇವರುಗಳಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ತಮ್ಮ ಕಷ್ಟ ಪರಿಹಾರ ಆದ ಬಳಿಕ ಅಥವಾ ಇಷ್ಟಾರ್ಥ ಸಿದ್ಧಿಯಾದ ಬಳಿಕ ಬಂದು ಆ ಹರಕೆಗಳನ್ನು ತೀರಿಸುತ್ತಾರೆ. ಇದು ಅನಾಧಿಕಾರದಿಂದಲೂ ಕೂಡ ನಡೆದುಕೊಂಡು ಬಂದಿರುವ ಪದ್ಧತಿ. ಇದೆ ರೀತಿ ಹಣಕಾಸಿನ ಸಮಸ್ಯೆ ಬಂದಾಗ ಕರ್ನಾಟಕದಲ್ಲಿ ಒಂದು ದೇವತೆ ಬಹಳ ಎಲ್ಲರಿಗೂ ನೆನಪಾಗುತ್ತದೆ ಅದರಲ್ಲೂ ಬೆಂಗಳೂರಿನಲ್ಲಿಯೇ ನೆಲೆಸಿರುವ ಈ ತಾಯಿಯ ಶಕ್ತಿಯ ಬಗ್ಗೆ ಎಲ್ಲರೂ ಸಹ ಕೇಳಿರುತ್ತೀರಿ.
ಶಿವಾಜಿನಗರದಲ್ಲಿರುವ ಮುತ್ಯಾಲಮ್ಮ ತಾಯಿ ಬಗ್ಗೆ ಒಂದು ಬಾರಿಯಾದರೂ ನೀವು ಕೇಳಿಯೇ ಇರುತ್ತೀರಿ. ಮುತ್ಯಾಲಮ್ಮ ತಾಯಿ ಎಂದರೆ ತಾಯಿ ಕಾಳಿ ಮತ್ತೆ ಹಾಗೂ ದುರ್ಗಾ ಮಾತೆ ಒಟ್ಟಿಗೆ ಒಂದು ಶಕ್ತಿ ಆಗಿರುವುದು ಎಂದರ್ಥ. ಈ ತಾಯಿಯ ಶಕ್ತಿ ಎಷ್ಟಿದೆ ಎಂದರೆ ಹಣಕಾಸಿನ ಸಮಸ್ಯೆ ಇದ್ದವರು ಈ ದೇವಸ್ಥಾನಕ್ಕೆ ಬಂದು ಹರಕೆ ಕಟ್ಟಿಕೊಂಡರೆ 30 ದಿನಗಳಲ್ಲಿ ಪರಿಹಾರ ಆಗುತ್ತದೆ ಎನ್ನುವುದು ಪ್ರಚಲಿತದಲ್ಲಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ.
ಮುತ್ಯಾಲಮ್ಮ ದೇವಿಯ ದೇವಸ್ಥಾನ ಒಂದು ಹೈದರಾಬಾದ್ ಅಲ್ಲಿ ಇದೆ. 1870ರಲ್ಲಿ ಹೈದರಾಬಾದ್ ನ ಒಂದು ದೇವಸ್ಥಾನದ ಒಂದು ಘಟನೆ ಜರುಗುತ್ತದೆ. ಅದೇನೆಂದರೆ ದೇವಾಲಯ ಒಂದರದಲ್ಲಿ ಇಬ್ಬರು ಹೆಣ್ಣು ಮಕ್ಕಳ ಕೆಲಸ ಮಾಡುತ್ತಿರುತ್ತಾರೆ. ಒಂದು ದಿನ ದಿನ ಇದ್ದಕ್ಕಿದ್ದಂತೆ ಅವರಿಬ್ಬರು ಶಿಲೆಯಾಗಿ ಬಿಡುತ್ತಾರೆ. ಅದನ್ನು ನೋಡಿದ ಪುರೋಹಿತರಿಗೆ ಅಂದು ತಿಳಿಯುತ್ತದೆ ಅವರಿಬ್ಬರು ಕಾಳಿ ಹಾಗೂ ದುರ್ಗಾ ಅವತಾರ ಎಂದು ಅಂದಿನಿಂದ ಆ ಶಕ್ತಿ ಅವತಾರರನ್ನು ಮುತ್ಯಾಲಮ್ಮ ಎಂದು ಪೂಜಿಸಿಕೊಂಡು ಬರಲಾಗಿದೆ.
ಹೈದ್ರಾಬಾದ್ ಭಾಗದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮುತ್ಯಾಲಮ್ಮ ದೇವಿಯ ದೇವಾಲಯಗಳು ಇವೆ. ಈ ರೀತಿ ಅಂದು ಶಿಲೆಯಾಗಿ ನಿಂತ ಆ ದೇವತೆಗಳ ಫೋಟೋವನ್ನು ಕೂಡ ತೆಗೆದು ದೇವಲಾಯದ ಆವರಣದಲ್ಲಿ ಹಾಕಲಾಗಿದೆ, ಇಂದಿಗೂ ಕೂಡ ಹೈದರಾಬಾದಿನ ಮುತ್ಯಾಲಮ್ಮ ದೇವಾಲಯದಲ್ಲಿ ಈ ಫೋಟೋವನ್ನು ಕಾಣಬಹುದು. ಹಾಗೆ ಅಂದಿನ ಬ್ರಿಟಿಷ್ ಗವರ್ನರ್ ಆಗಿದ್ದ ಎಡ್ವರ್ಡ್ ಅವರು ಕೂಡ ಈ ತಾಯಿ ಶಕ್ತಿಗೆ ಸೋತು ಶರಣಾಗಿ ನಮಿಸಿದ್ದ.
ತಾಯಿಯು ಶಿಲೆಯಾಗಿ ನಿಂತ 2 ಗಂಟೆಗಳ ಒಳಗೆ ತೆಗೆದ ಫೋಟೋ ಇಂಗ್ಲೆಂಡಿನಲ್ಲಿರುವ ಎಡ್ವರ್ಡ್ ಮನೆಯಲ್ಲಿಯೂ ಇರುವುದನ್ನು ಕಾಣಬಹುದು. ಇಂದಿಗೂ ಸಹ ಎಡ್ವರ್ಡ್ ಮನೆತನದವರು ಹೈದರಾಬಾದ್ ನಲ್ಲಿರುವ ಈ ಮುತ್ಯಾಲಮ್ಮ ದೇವಿ ದೇವಾಲಯಕ್ಕೆ ವರ್ಷಕೊಮ್ಮೆ ಬಂದು ಪೂಜೆ ಸಲ್ಲಿಸುತ್ತಾರೆ. ಬೆಂಗಳೂರಿನಲ್ಲಿರುವ ಈ ಮುತ್ಯಾಲಮ್ಮ ದೇವಿ ದೇವಸ್ಥಾನದಲ್ಲಿಯೂ ವರ್ಷಕ್ಕೊಮ್ಮೆ ಅದ್ದೂರಿಯಾಗಿ ಉತ್ಸವ ನಡೆಯುತ್ತದೆ. ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಈ ತಾಯಿಗೆ ಭಕ್ತರಾಗಿದ್ದಾರೆ.
ಹರಕೆಗಳನ್ನು ಹೊರುವುದಕ್ಕೆ ಹಾಗೂ ತೀರಿಸುವುದಕ್ಕಾಗಿಯೇ ಈ ದೇವಾಲಯಕ್ಕೆ ಬರುತ್ತಾರೆ. ಈ ದೇವಾಲಯಕ್ಕೆ ಹಣಕಾಸಿನ ಸಮಸ್ಯೆ ಇದ್ದಾಗ ಬಂದು ಹರಕೆ ಹೊತ್ತುಕೊಂಡು 21 ಪ್ರದಕ್ಷಿಣೆ ಹಾಕಿ ಹೋದರೆ ಖಂಡಿತವಾಗಿಯೂ ಆ ಸಮಸ್ಯೆ ಪರಿಹಾರ ಆಗಿರುತ್ತದೆ. ನಂತರ ಒಂದು ದಿನ ಬಂದು ಹರಕೆ ತಿಳಿಸಬಹುದು. ಈ ರೀತಿ ಬೆಂಗಳೂರಿಗರನ್ನು ಕಾಯುತ್ತಿರುವ ಕರ್ನಾಟಕದ ಮನೆ ಮನೆಯಲ್ಲೂ ಹೆಸರಾಗಿರುವ ಮುತ್ಯಾಲಮ್ಮ ದೇವಿ ಆಶೀರ್ವಾದ ನಾಡಿನ ಜನರ ಮೇಲೆ ಸದಾ ಇರಲಿ ಎಂದು ಕೇಳಿಕೊಳ್ಳೋಣ.