Sunday, June 4, 2023
HomePublic Vishyaನಟಿ ರಶ್ಮಿಕಾ 1 ತಿಂಗಳಿಗೆ ಎಷ್ಟು ಆದಾಯ ಪಡೆಯುತ್ತಾರೆ ಗೊತ್ತಾ. ಇವರ ಆದಾಯ ಕೇಳಿದ್ರೆ ಪಕ್ಕಾ...

ನಟಿ ರಶ್ಮಿಕಾ 1 ತಿಂಗಳಿಗೆ ಎಷ್ಟು ಆದಾಯ ಪಡೆಯುತ್ತಾರೆ ಗೊತ್ತಾ. ಇವರ ಆದಾಯ ಕೇಳಿದ್ರೆ ಪಕ್ಕಾ ಶಾ-ಕ್ ಆಗ್ತೀರಾ.

 

ಕೊಡಗಿನ ಕುವರಿ ರಶ್ಮಿಕ ಮಂದಣ್ಣ ಈಗ ಪ್ಯಾನ್ ಇಂಡಿಯ ತಾರೆ. ನ್ಯಾಷನಲ್ ಕ್ರಷ್ ಎನ್ನುವ ಬಿರುದು ಕೂಡ ಪಡೆದಿರುವ ಈಕೆ ಅತಿ ಕಡಿಮೆ ವಯಸ್ಸಿಗೆ ಭಾರತದ ಎಲ್ಲಾ ಪ್ರಮುಖ ಚಿತ್ರರಂಗಗಳಲ್ಲೂ ಗುರುತಿಸಿಕೊಂಡಿರುವ ನಟಿಯಾಗಿದ್ದಾರೆ. 2016 ರಲ್ಲಿ ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗಲೇ ರಿಷಬ್ ಶೆಟ್ಟಿ ಅವರ ನಿರ್ದೇಶನದ ರಕ್ಷಿತ್ ಶೆಟ್ಟಿ ನಿರ್ಮಾಣ ಮತ್ತು ನಟನೆಯ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದ ಮೂಲಕ ಚಿತ್ರರಂಗ ಎಂಟ್ರಿಕೊಟ್ಟ ಈಕೆ ಆನಂತರ ಹಿಂತಿರುಗಿ ನೋಡಿದ್ದೇ ಇಲ್ಲ.

ಕಿರಿಕ್ ಪಾರ್ಟಿ ಸಿನಿಮಾ ನಂತರ ದರ್ಶನ್, ಪುನೀತ್, ಧ್ರುವ ಸರ್ಜಾ, ಗಣೇಶ್ ರಂತಹ ಸ್ಟಾರ್ಗಳ ಜೊತೆ ತೆರೆ ನಟಿಸಿದ ಈಕೆ ಚಲೋ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ವಿಜಯ ದೇವರಕೊಂಡ ಜೊತೆ ನಟಿಸಿದ ಗೀತಾಗೋವಿಂದಂ ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ನೀಡಿತು. ಇವರಿಬ್ಬರ ತೆರೆ ಮೇಲಿನ ಕೆಮೆಸ್ಟ್ರಿಯನ್ನು ಜನ ಮೆಚ್ಚಿಕೊಂಡರು. ಇದೇ ಕಾಂಬಿನೇಷನ್ ಡಿಯರ್ ಕಾಮ್ರೆಡ್ ಸಿನಿಮಾದಲ್ಲೂ ಕೂಡ ಸಕ್ಸಸ್ ಕಂಡಿತು.

ಮಹೇಶ್ ಬಾಬು, ಅಲ್ಲು ಅರ್ಜುನ್ ಅಂತಹ ಸ್ಟಾರ್ಗಳ ಜೊತೆ ತೆರೆ ಹಂಚಿಕೊಳ್ಳುವ ಅದೃಷ್ಟವೂ ಒಲಿಯಿತು. ಅದರಲ್ಲೂ ಕಳೆದ ವರ್ಷ ತೆರೆಕಂಡ ಪುಷ್ಪ -2 ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಶ್ರೀ ವಲ್ಲಿ ಆಗಿ ಕಾಣಿಸಿಕೊಂಡು ಈಕೆ ಆ ಮೂಲಕ ಪಾನ್ ಇಂಡಿಯಾ ನಟಿ ಆದರು. ಇದೇ ಸಿನಿಮಾದ ಸಕ್ಸಸ್ ನಿಂದ ತಮಿಳಿನ ವಿಜಯ್ ದಳಪತಿ ಜೊತೆ ವಾರಿಸು ಸಿನಿಮಾ ಮಾಡುವ ಅವಕಾಶ ಪಡೆದುಕೊಂಡರು.

ನಂತರ ಮಲಯಾಳಂನಲ್ಲೂ ಕೂಡ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡು ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ಹೆಸರುವಾಸಿಯಾದ ನಟಿ ಎನಿಸಿಕೊಂಡರು. ಈಗ ಬಾಲಿವುಡ್ ಕಡೆ ಹಾರಿರುವ ರಶ್ಮಿಕ ಮೊದಲ ಸಿನಿಮಾದಲ್ಲಿ ಅಮಿತಾ ಬಚ್ಚನ್ ಜೊತೆ ಅಭಿನಯಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದೆಲ್ಲಾ ಸಿನಿಮಾಗಳ ಕಥೆ ಆದರೆ ಸಿನಿಮಾ ಹೊರತುಪಡಿಸಿ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಜೊತೆಗೆ ಅನೇಕ ಜಾಹಿರಾತುಗಳಲ್ಲೂ ಕೂಡ ಕಂಪನಿಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಕಲ್ಯಾಣ್ ಜುವೆಲ್ಲರ್ಸ್ ಗೂ ಕೂಡ ರಾಯಭಾರಿ ಆಗಿರುವ ಈಕೆ ಇದೆಲ್ಲದರಿಂದ ಸಂಪಾದಿಸುತ್ತಿರುವ ಹಣ ಎಷ್ಟಿರಬಹುದು ಎಂದು ಜನರಿಗೆ ಆಶ್ಚರ್ಯ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ವಿಚಾರ ಬಂದಾಗ ಅವರ ಮೇಲೆ ಆದ ಐಟಿ ರೈಡ್ ಬಗ್ಗೆಯೂ ನೆಟ್ಟಿಗರು ಚರ್ಚೆ ಮಾಡುತ್ತಾರೆ. ಹಾಗೆಯೇ ಇಷ್ಟೆಲ್ಲಾ ಬಿಝಿ ಆಗಿರೋ ರಶ್ಮಿಕ ಎಷ್ಟು ಸಂಪಾದನೆ ಮಾಡುತ್ತಿರಬಹುದು ಎಂದು ಲೆಕ್ಕ ಹಾಕುತ್ತಾರೆ. ಬಲವಾದ ಮೂಲಗಳ ಪ್ರಕಾರ ರಶ್ಮಿಕ ಮಂದಣ್ಣ ಒಂದು ಸಿನಿಮಾಗೆ 4 ಕೋಟಿ ಸಂಭಾವನೆ ಡಿಮಾಂಡ್ ಮಾಡುತ್ತಾರಂತೆ.

ಇವರ ಮಾಸಿಕ ಆದಾಯ 60 ಲಕ್ಷಕ್ಕಿಂತ ಹೆಚ್ಚು ಇರುತ್ತದೆ ಎನ್ನುವುದನ್ನು ಮೂಲ ತಿಳಿಸಿದೆ. ವರ್ಷಪೂರ್ತಿ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಈ ನಟಿ ಈಗಾಗಲೇ 64 ಕೋಟಿ ಓಡತಿ ಎನ್ನುವುದು ಮಾಧ್ಯಮಗಳಲ್ಲಿ ವರದಿ ಆಗಿದೆ. ವರ್ಷದಿಂದ ವರ್ಷಕ್ಕೆ ರಶ್ಮಿಕ ಮಂದಣ್ಣ ಆದಾಯ, ಸಂಭಾವನೆ ಎಲ್ಲವೂ ಹೆಚ್ಚಾಗುತ್ತಿದ್ದು ಹಲವು ಕಡೆ ಐಷಾರಾಮಿ ಬಂಗಳೆಗಳನ್ನು ಮತ್ತು ಫ್ಲಾಟ್ ಗಳನ್ನು ಕೂಡ ಖರೀದಿಸಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ ಕೂಡ ಅರಮನೆಂತಹ ಮನೆ ಹೊಂದಿರುವ ರಶ್ಮಿಕ ಮಂದಣ್ಣ ಸದ್ಯದಲ್ಲಿ ಮುಂಬೈನಲ್ಲಿ ಮನೆ ಖರೀದಿಸುವ ಸಾಧ್ಯತೆ ಇದೆ. ಯಾಕೆಂದರೆ ಬಿ ಟೌನ್ ವಲಯದಲ್ಲಿ ನೆಲೆಯೂರಲು ಬಯಸಿರುವ ಈಕೆ ಅಲ್ಲೇ ಕಳೆದು ಹೋದರು ಅನುಮಾನ ಇಲ್ಲ. ಏನೇ ಆಗಲಿ ನಮ್ಮ ನಾಡಿನ ನಟಿಯೊಬ್ಬರು ದೇಶದಾದ್ಯಂತ ಸೌಂಡ್ ಮಾಡುತ್ತಿರುವುದು ಕನ್ನಡಿಗರಾದ ನಾವು ಹೆಮ್ಮೆಪಡುವ ವಿಷಯವೇ ಸರಿ.