ಬಿಲ್ವಾಣಂ ದರ್ಶನಂ ಪುಣ್ಯಂ, ಸ್ಪರ್ಶನಂ ಪಾಪ ನಾಶನಂ॥ ಎನ್ನುವ ಸ್ತೋತ್ರವನ್ನು ನಾವು ಕೇಳಿದ್ದೇವೆ ಈ ಸ್ತ್ರೊತ್ರದಲ್ಲಿರುವ ಪ್ರತಿಯೊಂದು ಪದವು ಕೂಡ ಅಕ್ಷರಶಃ ಸತ್ಯ. ಈಗಾಗಲೇ ನಾವು ಈ ರೀತಿ ಶಿವ ಹಾಗೂ ಶಿವನ ಮಹಾತ್ಮೆಯನ್ನು ಕುರಿತ ಸಾಕಷ್ಟು ಪುರಾಣ ಕಥೆಗಳನ್ನು ಕೇಳಿದ್ದೇವೆ. ಈ ಜಗತ್ತಿಗೆ ಒಬ್ಬನೇ ಒಡೆಯ ಅದು ಈಶ್ವರ ಮಾತ್ರ ಎನ್ನುವುದನ್ನು ನಂಬಿ ಜಗತೌ ಪಿತರೌ ಒಂದೇ ಪಾರ್ವತಿ ಪರಮೇಶ್ವರಃ ಎಂದು ಜಪಿಸಿದ್ದೇವೆ.
ಓಂಕಾರ ಸ್ವರೂಪಿಯಾದ ಈ ಶಿವನನ್ನು ನಾವೆಲ್ಲರೂ ಲಿಂಗ ಸ್ವರೂಪಿಯಾಗಿ ಕಾಣುತ್ತೇವೆ ಹಾಗೂ ಪೂಜಿಸುತ್ತೇವೆ. ಶಿವನ ಹೆಸರಿಗೆ ಎಷ್ಟು ಶಕ್ತಿ ಇದೆಯೋ ಅಷ್ಟೇ ಪ್ರಮಾಣದ ಪವಾಡವನ್ನುಂಟು ಮಾಡುವ ಶಕ್ತಿಯು ಶಿವಲಿಂಗಗಳೂ ಕೂಡ ಇವೆ ಎನ್ನುವುದನ್ನು ಸಾರುವ ಅನೇಕ ಕಥೆಗಳನ್ನು ಕೂಡ ಕೇಳಿದ್ದೇವೆ.
ಇಂದಿಗೂ ಸಹ ಆ ಚಮತ್ಕಾರಿಗಳು ಜಗತ್ತಿನಾದ್ಯಂತ ನಡೆಯುತ್ತಲೇ ಇವೆ. ಅದರಲ್ಲೂ ಕೂಡ ಶಿವನನ್ನು ಅತಿ ಹೆಚ್ಚಾಗಿ ಆರಾಧಿಸುವ ದೇಶವಾದ ನಮ್ಮ ಭಾರತ ದೇಶದ ಪೂರ್ತಿ ಅನೇಕ ಶಿವಾಲಯಗಳು ಇದ್ದು, ಇಲ್ಲಿ ಪ್ರತಿಯೊಂದು ದೇವಾಲಯದಲ್ಲೂ ಕೂಡ ವಿಭಿನ್ನ ರೀತಿಯಲ್ಲಿ ಶಿವನ ಸಾಕ್ಷಾತ್ಕಾರವನ್ನು ಅನುಭವಿಸಬಹುದು. ಇವನ 12 ಜ್ಯೋತಿರ್ಲಿಂಗ ಕ್ಷೇತ್ರಗಳು ಮಾತ್ರವಲ್ಲದೆ ಇನ್ನು ಅನೇಕ ಶಿವನ ದೇವಾಲಯಗಳು ಶಿವನಿಗೆ ಇರುವ ಶಕ್ತಿಯ ಬಗ್ಗೆ ಸಾರಿ ಸಾರಿ ಹೇಳುತ್ತಿವೆ.
ಈ ಕಲಿಕಾಲದಲ್ಲೂ ಕೂಡ ಶಿವನನ್ನೇ ನಂಬಿ ಹೋಗುವ ಅನೇಕ ಭಕ್ತಾದಿಗಳು ಶಿವನ ಕೃಪೆಗೆ ಒಳಗಾಗಿ ತಮಗೆ ಬರುವ ಸಂಕಷ್ಟಗಳಿಂದ ಪಾರಾಗಿ ಬರುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ನಡೆದ ಒಂದು ಘಟನೆಯನ್ನು ಈ ಅಂಕಣದಲ್ಲಿ ವಿವರಿಸುತ್ತಿದ್ದೇವೆ ಶಿವನು ಭಕ್ತರ ಯಾವುದೇ ರೂಪದ ಕಷ್ಟವನಾದರೂ ಕೂಡ ತಕ್ಷಣವೇ ಪರಿಹರಿಸುತ್ತಾರೆ.
ಶಿವನನ್ನು ಕುರಿತು ಜಪಿಸುವವರಿಗೆ ಕೇಳಿದ ವರಗಳ ಆಗಲೇ ನೀಡುವುದರಿಂದ ಈತನಿಗೆ ಸಾಂಬಸದಾ ಶಿವ ಎನ್ನುವ ಹೆಸರು ಇದೆ. ಹೀಗೆ ಜನರು ನಾನ ಕಾರಣಗಳಿಗಾಗಿ ಈಶ್ವರನನ್ನು ಪೂಜಿಸುತ್ತಾರೆ. ಅದರಲ್ಲಿ ಆರೋಗ್ಯ ಸಮಸ್ಯೆ ಕೂಡ ಒಂದು. ಶಿವನಿಗೆ ವೈಧ್ಯನಾಥೇಶ್ವರ ಎನ್ನುವ ಹೆಸರು ಕೂಡ ಇದೆ ಎನ್ನುವುದು ನಮ್ಮೆಲ್ಲರಿಗೂ ತಿಳಿದೆ ಇದೆ. ಹೆಸರಿನಲ್ಲಿ ವೈದ್ಯನಾಗಿರುವ ಶಿವನು ಮನುಷ್ಯರ ಆರೋಗ್ಯ ಸಮಸ್ಯೆಯನ್ನು ಪರಿಹರಿಸದೆ ಇರಲಾರ.
ಭಾರತದ ಪ್ರಖ್ಯಾತ ಹೃದಯ ತಜ್ಞ ಡಾ.ಪ್ರಕಾಶ್ ಮರ್ಮ ಎನ್ನುವವರ ಬಳಿ ಹೃದಯದ ಪರೀಕ್ಷೆ ಮಾಡಿಸಲು ವ್ಯಕ್ತಿಯೊಬ್ಬರು ಹೋಗಿದ್ದರು. ಇವರ ಹಾರ್ಟ್ ಚೆಕ್ ಅಪ್ ಮಾಡಿದ ಡಾಕ್ಟರ್ ಇವರಿಗೆ ಹೃದಯದ ಕ್ಯಾನ್ಸರ್ ಇರುವುದಾಗಿ ಹೇಳಿ ಇದಕ್ಕೆ ಚಿಕಿತ್ಸೆ ಇಲ್ಲ ನೀವು ಇನ್ನು ದಿನಗಳಷ್ಟೇ ಉಳಿಯಬಹುದು ಎನ್ನುವುದನ್ನು ಹೇಳಿದ್ದರು. ಆದರೆ ಆತ ವೈದ್ಯಲೋಕಕ್ಕೆ ಸವಾಲು ಹಾಕುತ್ತೇನೆ ಎಂದು ಡಾಕ್ಟರ್ ಗೆ ಚಾಲೆಂಜ್ ಮಾಡಿ ಝಾರ್ಖಂಡ್ ರಾಜ್ಯದಲ್ಲಿರುವ ಡೀಯೋಗ ಹಳ್ಳಿಯ ವೈಧ್ಯನಾಥೇಶ್ವರ ದೇವಸ್ಥಾನಕ್ಕೆ ಹೋಗಿ ಸೇವೆ ಮಾಡಿ 36 ದಿನಗಳಲ್ಲಿ ಸಂಪೂರ್ಣವಾಗಿ ತನ್ನ ರೋಗದಿಂದ ಹೊರ ಬಂದಿದ್ದಾರೆ.
ಹೃದ್ರೋಗ ಮಾತ್ರವಲ್ಲದೆ ಜನಸಾಮಾನ್ಯನನ್ನು ದಿನನಿತ್ಯ ಕಾಡಿ ಹಿಂಸಿಸುವ ಮಂಡಿ ನೋವು, ಬೆನ್ನು ನೋವು, ಸೊಂಟ ನೋವು ಮುಂತಾದ ಯಾವುದೇ ಬಗೆಯ ನೋವುಗಳು ಕಾಯಿಲೆಗಳು ಇದ್ದರೂ ಕೂಡ ಈ ವೈದ್ಯನಾಥೇಶ್ವರನ ದರ್ಶನದಿಂದ ಮತ್ತು ಇಲ್ಲಿರುವ ವೈದ್ಯನಾಥೇಶ್ವರ ಲಿಂಗವನ್ನು ಸ್ಪರ್ಷ ಮಾಡಲು ಭಕ್ತರಿಗೆ ಅವಕಾಶ ಕೊಡುವುದರಿಂದ ಸ್ಪರ್ಶದಿಂದಲೇ ಆ ನೋವುಗಳೆಲ್ಲ ಗುಣವಾಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ನಂಬಿಕೆ. ಅದಕ್ಕಾಗಿ ಪ್ರತಿದಿನವೂ ಸುಮಾರು 5000 ಕ್ಕಿಂತ ಹೆಚ್ಚಿನ ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವೈದ್ಯಲೋಕಕ್ಕೆ ಅಚ್ಚರಿ ಆಗಿರುವ ಈ ದೇವಸ್ಥಾನಕ್ಕೆ ನೀವು ಕೂಡ ಒಮ್ಮೆಯಾದರೂ ಭೇಟಿಕೊಡಿ.