Sunday, May 28, 2023
HomeJob Newsಅಬಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 65 ಸಾವಿರ

ಅಬಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 65 ಸಾವಿರ


ಕರ್ನಾಟಕದಲ್ಲಿರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೂ ಸಿಹಿ ಸುದ್ದಿ. ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇಲಾಖೆ ವತಿಯಿಂದ ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಅಧಿಸೂಚನೆ ಬಿಡುಗಡೆ ಆಗಲಿದೆ. ಖಾಲಿ ಇರವ ಹುದ್ದೆಗಳ ಅಂಕಿ ಅಂಶಗಳನ್ನು ಕೂಡ ಇಲಾಖೆ ಕಲೆಹಾಕಿದ್ದು, ಖಾಲಿ ಇರುವ ಈ ಎಲ್ಲಾ ಪೋಸ್ಟ್ ಗಳಲ್ಲಿ ಭರ್ತಿಗಾಗಿ ಅರ್ಜಿ ಆಹ್ವಾನಿಸುತ್ತದೆ ಎನ್ನುವ ನಿರೀಕ್ಷೆ ಇದೆ.

ಹಾಗಾಗಿ ಈ ವಿವರಗಳನ್ನು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ತಿಳಿದುಕೊಂಡು ಆಸಕ್ತಿ ಇದ್ದವರು ಈಗಲೇ ತಯಾರಿ ಆರಂಭಿಸಲಿ ಎನ್ನುವ ಉದ್ದೇಶದಿಂದ ಈ ಅಂಕಣದಲ್ಲಿ ಪ್ರಮುಖ ಅಂಶಗಳ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ, ವೇತನ ಶ್ರೇಣಿ, ಈ ಹುದ್ದೆಗಳಿಗೆ ಕೇಳಲಾಗುವ ಶೈಕ್ಷಣಿಕ ಅರ್ಹತೆ, ವಯೋಮಿತಿ, ವಯೋಮಾನ ಸಡಿಲಿಕೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗಿರುತ್ತದೆ ಬೇಕಾಗುವ ದಾಖಲೆಗಳು, ಅರ್ಜಿ ಸ್ವೀಕಾರ ಪ್ರಕ್ರಿಯೆ ಯಾವಾಗಲಿಂದ ಆಗುತ್ತದೆ, ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಇವುಗಳ ಮಾಹಿತಿ ಈ ಅಂಕಣದಲ್ಲಿದೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಕೊಡಬಹುದು.

ಇಲಾಖೆ:- ಅಬಕಾರಿ ಇಲಾಖೆ.
ಕೆಲಸದ ಸ್ಥಳ:- ಕರ್ನಾಟಕದಾದ್ಯಂತ…

ಹುದ್ದೆಯ ಸಂಖ್ಯೆ:-
● ಗ್ರೂಪ್ ಎ – 60 ಹುದ್ದೆಗಳು
● ಗ್ರೂಪ್ ಬಿ – 8 ಹುದ್ದೆಗಳು
● ಗ್ರೂಪ್ ಸಿ – 1633 ಹುದ್ದೆಗಳು
● ಗ್ರೂಪ್ ಡಿ – 1755 ಹುದ್ದೆಗಳು

ಹುದ್ದೆಗಳ ವಿವರ:-
● ಹಿರಿಯ ವಾಹನ ಚಾಲಕರು – 14 ಹುದ್ದೆಗಳು
● ಅಬಕಾರಿ ಕಾನ್ಸ್ಟೇಬಲ್ ಗಳು – 573 ಹುದ್ದೆಗಳು
● ಮುಖ್ಯಪೇದೆ – 165 ಹುದ್ದೆಗಳು
● ಬೆರಳಚ್ಚುಗಾರರು – 46 ಹುದ್ದೆಗಳು
● ದ್ವಿತೀಯ ದರ್ಜೆ ಸಹಾಯಕರು – 137 ಹುದ್ದೆಗಳು
● ಶೀಘ್ರಲಿಪಿದಾರರು – 34 ಹುದ್ದೆಗಳು
● ಪ್ರಥಮ ದರ್ಜೆ ಸಹಾಯಕರು – 136 ಹುದ್ದೆಗಳು
● ಅಬಕಾರಿ ಉಪನಿರೀಕ್ಷಕರು – 353 ಹುದ್ದೆಗಳು
● ಅಬಕಾರಿ ನಿರೀಕ್ಷಕರು – 60 ಹುದ್ದೆಗಳು
● ಲ್ಯಾಬ್ ಸಹಾಯಕ – 02 ಹುದ್ದೆಗಳು

ವೇತನ ಶ್ರೇಣಿ:- ಆಯಾ ಹುದ್ದೆಗಳಿಗೆ ಅನುಸಾರವಾಗಿ ಮಾಸಿಕವಾಗಿ 30,000 ದಿಂದ 65,000 ರೂಗಳು.
ಶೈಕ್ಷಣಿಕ ವಿದ್ಯಾರ್ಹತೆ:- ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ SSLC, PUC, ಪದವಿ ಮತ್ತು ತತ್ಸಮಾನ ತರಗತಿ ಉತ್ತೀರ್ಣವಾಗಿರುವವರು ಅರ್ಜಿ ಸಲ್ಲಿಸಬಹುದು.

ವಯಸ್ಸಿನ ಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 30 ವರ್ಷಗಳು
ವಯೋಮಿತಿ ಸಡಿಲಿಕೆ:-
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
● OBC ಅಭ್ಯರ್ಥಿಗಳಿಗೆ 3 ವರ್ಷಗಳು.

ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ…

ಕೇಳಲಾಗುವ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
● ಆಧಾರ್ ಕಾರ್ಡ್
● ಇನ್ಯಾವುದೇ ಒಂದು ಗುರುತಿನ ಚೀಟಿ
● ಶೈಕ್ಷಣಿಕ ಅಂಕ ಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಕನ್ನಡ ಮತ್ತು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
● ಯಾವುದೇ ಪ್ರಮುಖ ದಾಖಲೆ ಪ್ರತಿಗಳು

ಆಯ್ಕೆ ಪ್ರಕ್ರಿಯೆ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – ಶೀಘ್ರದಲ್ಲೇ ಇಲಾಖೆ ವತಿಯಿಂದ ಅಧಿಸೂಚನೆ ಹೊರ ಬೀಳಲಿದೆ.

ಆದರೆ ಅಭ್ಯರ್ಥಿಗಳು ಈಗಿನಿಂದಲೇ ತಯಾರಿ ಶುರು ಮಾಡಿಕೊಂಡರೆ ಹೆಚ್ಚಿನ ಉದ್ಯೋಗ ಅವಕಾಶಗಳು ಈ ಬಾರಿ ಇರುವುದರಿಂದ ಖಂಡಿತವಾಗಿಯೂ ಸರ್ಕಾರಿ ಹುದ್ದೆ ಹೊಂದುವ ಕನಸನ್ನು ನನಸಾಗಿಸಿಕೊಳ್ಳಬಹುದು. ಆದ್ದರಿಂದ ಈಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.