ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕದ ಮತದಾರರ ಗಮನ ಸೆಳೆದು ಮನವೊಲಿಸಿ ಮತ ಹಾಕಿಸಿಕೊಳ್ಳುವುದಕ್ಕಾಗಿ ಪಂಚಾಖಾತ್ರಿ ಯೋಜನೆಗಳ ಅಸ್ತ್ರವನ್ನು ಪ್ರಯೋಗಿಸಿತ್ತು. ಇದಕ್ಕೆ ಗ್ಯಾರಂಟಿ ಕಾರ್ಡ್ ಗಳನ್ನು ಸಹಿ ಮಾಡಿ ನೀಡಿದ ಪಕ್ಷದ ವರಿಷ್ಠರುಗಳು ತಮ್ಮ ಸರ್ಕಾರ ಸ್ಥಾಪನೆ ಆದಲ್ಲಿ ಕಡಾ ಖಂಡಿತವಾಗಿ ಇವುಗಳನ್ನು ಜಾರಿಗೆ ತರುತ್ತೇವೆ ಅದರಲ್ಲೂ ಮೊದಲ ಸಚಿವ ಸಂಪುಟದಲ್ಲಿಯೇ ಆದೇಶ ನೀಡಲಿದ್ದೇವೆ ಎನ್ನುವ ಮಾತನ್ನು ಕೊಟ್ಟಿದ್ದರು.
ಅಂತೆಯೇ ಕಾಂಗ್ರೆಸ್ ಪಕ್ಷವು ಅಧಿಕಾರ ಸ್ಥಾಪಿಸಿ ಮಾನ್ಯ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಕುರ್ಚಿ ಅಲಂಕರಿಸಿದ್ದಾರೆ. ತಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಮೊದಲ ಸಚಿವ ಸಪುಟ ಸಭೆಯಲ್ಲಿ ಚರ್ಚಿಸಿ ತಾತ್ವಿಕ ಅನುಮೋದನೆ ನೀಡಿ ಆದೇಶ ಪತ್ರವನ್ನು ಕೂಡ ಹೊರಡಿಸಿದ್ದರು.
ಜೂನ್ 1ನೇ ತಾರೀಖಿನಿಂದ ಕರ್ನಾಟಕದಾದ್ಯಂತ ಈ ಯೋಜನೆಗಳು ಜಾರಿಗೆ ಬರುತ್ತವೆ ಎಂದು ಊಹಿಸಲಾಗಿತ್ತು ಮತ್ತು ಅಂದು ಘೋಷಣೆ ಆಗುವ ಸಾಧ್ಯತೆ ಇತ್ತು. ಈಗ ಜೂನ್ ಎರಡರಂದು ಮತ್ತೊಂದು ಕ್ಯಾಬಿನೆಟಿಂಗ್ ಇದ್ದ ಕಾರಣ ಮುಖ್ಯಮಂತ್ರಿಗಳು ಶುಕ್ರವಾರದ ಶುಭ ಮಧ್ಯಾಹ್ನ ಕರ್ನಾಟಕ ಜನತೆಗೆ ಭರ್ಜರಿ ಸಿಹಿ ಸುದ್ದಿಗಳ ಮಹಾಪೂರವನ್ನು ಹರಿಸಿದ್ದಾರೆ.
ಅದರಲ್ಲೂ ಗ್ಯಾರಂಟಿ ಕಾರ್ಡ್ 5 ಯೋಜನೆಗಳ ಬಗ್ಗೆ ಮಾತನಾಡಿರುವ ಇವರು ಎಲ್ಲಾ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನಕ್ಕೆ ಇರುವ ಮಾರ್ಗಸೂಚಿಗಳು ಮತ್ತು ಯಾವ ಯೋಜನೆಗಳು ಯಾವಾಗ ಲಾಂಚ್ ಆಗುತ್ತವೆ ಎನ್ನುವುದನ್ನು ಕೂಡ ವಿವರವಾಗಿ ತಿಳಿಸಿದ್ದಾರೆ. ಜೊತೆಗೆ ಮಾಹಿತಿಗಳ ಸಂಗ್ರಹಣೆ, ಪರಿಶೀಲನೆ ಮತ್ತು ತಾಂತ್ರಿಕ ದೋಷಗಳ ಕಾರಣ ಕೆಲ ಯೋಜನೆಗಳು ವಿಳಂಬವಾದರೂ ಈ ಆರ್ಥಿಕ ವರ್ಷದಲ್ಲಿ ಕಡಾ ಖಂಡಿತವಾಗಿಯೂ ಜಾರಿಗೆ ಬರುತ್ತವೆ ಎನ್ನುವ ಭರವಸೆಯನ್ನು ನೀಡಿದ್ದಾರೆ.
ಮೇ 20ರಂದು ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ಜೂನ್ 2ರಂದು ಇವುಗಳ ಘೋಷಣೆ ಮಾಡಿದ್ದಾರೆ. ಅಲ್ಲಿಯವರೆಗೂ ಕೂಡ ಗ್ಯಾರೆಂಟಿ ಕಾರ್ಡ್ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಎಷ್ಟು ಹಣ ಬೇಕಾಗಬಹುದು ಎನ್ನುವ ವಿವರ ಮತ್ತು ಇದಕ್ಕೆ ಸಂಬಂಧಪಟ್ಟ ಹಾಗೆ ಇನ್ನು ಕೆಲವು ಮಾಹಿತಿಗಳ ಸಾಧಕ ಬಾಧಕಗಳನ್ನು ಪಟ್ಟಿ ಮಾಡಿ ತರಲು ಇಲಾಖೆಗಳಿಗೆ ಸೂಚನೆ ನೀಡಿದ್ದರು.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಭಾಷಣದಲ್ಲಿ ಎಲ್ಲಾ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕವಾಗಿ 50 ಸಾವಿರ ಕೋಟಿ ಆದಾಯ ಬೇಕಾಗಬಹುದು ಎನ್ನುವುದನ್ನು ಲೆಕ್ಕ ಹಾಕಿದ್ದೇವೆ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನಗಳು ಆದಾಯ ತೆರಿಗೆ ಬಾಕಿಗಳು ಬರಬೇಕು ಈ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಯಾವುದೇ ಬೆಲೆಯನ್ನಾದರೂ ತೆತ್ತು ಯೋಜನೆಗಳನ್ನು ಗ್ಯಾರಂಟಿಯಾಗಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದರು.
ಬಲವಾದ ಮೂಲಗಳ ಪ್ರಕಾರ ಈ ಎಲ್ಲ ಯೋಜನೆಗಳ ಬಜೆಟ್ 70-80 ಸಾವಿರ ಕೋಟಿ ಗಡಿ ದಾಟಬಹುದು ಎಂದು ಊಹಿಸಲಾಗಿದೆ. ಹೀಗಾಗಿ ಹೆಚ್ಚುವರಿ ಆದಾಯಕ್ಕೆ ಸರ್ಕಾರ ಮೂಲಗಳನ್ನು ಹುಡುಕುತ್ತಿದೆ. ಅದಕ್ಕಾಗಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕೇಸ್ ಹಾಕಿ ದಂಡ ವಸೂಲಿ ಮಾಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.
ಪ್ರತಿ ಪೊಲೀಸ್ ಠಾಣೆಯಲ್ಲೂ ಒನ್ ವೇ, ತ್ರಿಬಲ್ ರೈಡಿಂಗ್, ಹೆಲ್ಮೆಟ್ ಇಲ್ಲದೆ ಸವಾರಿ, ನೋ ಪಾರ್ಕಿಂಗ್ ಅಲ್ಲಿ ಪಾರ್ಕಿಂಗ್ ಇಂಥಹ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಪ್ರತಿ ದಿನ 300 ಕೇಸ್ ಗಳನ್ನು ಹಾಕಿ ದಂಡ ಅಸ್ತ್ರದ ಪ್ರಯೋಗ ಮಾಡಲು ಸೂಚನೆ ಹೋಗಿದೆ ಎನ್ನುವ ವಿಚಾರವನ್ನು BJP ಸಾಮಾಜಿಕ ಜಾಲತಾಣ ಉಲ್ಲೇಖಿಸಿದೆ. ಇದರ ಸತ್ಯಾನು ಸತ್ಯತೆ ಎಷ್ಟಿದೆಯೋ ಗೊತ್ತಿಲ್ಲ ಆದರೆ ವಾಹನ ಸವಾರರು ಸರಿಯಾಗಿ ಸಂಚಾರ ನಿಯಮಗಳನ್ನು ಪಾಲಿಸುವುದು ಮತ್ತು ಎಲ್ಲಾ ದಾಖಲೆಗಳನ್ನು ಜೊತೆಯಲ್ಲಿ ಇಟ್ಟುಕೊಂಡು ಪ್ರಯಾಣ ಮಾಡುವುದು ಒಳ್ಳೆಯದು.