ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಭಕ್ತಾದಿಗಳನ್ನು ಹೊಂದಿರುವ ದೇವರು ಹನುಮಂತ. ಒಂದು ಸಣ್ಣ ಹಳ್ಳಿಯಾಗಿರಲಿ ಅಥವಾ ದೊಡ್ಡ ನಗರವಾಗಿರಲಿ ಅಲ್ಲಿ ಒಂದು ಹನುಮಂತನ ದೇವಸ್ಥಾನ ಇದ್ದೇ ಇರುತ್ತದೆ ಆಂಜನೇಯ ಸ್ವಾಮಿ ಹಿಮಾಲಯ ತಪ್ಪಲಿನಲ್ಲಿ ಸಾಕಷ್ಟು ಬಾರಿ ಕಂಡು ಬಂದಿರುವಂತಹ ವಿಚಾರ ಆಗಾಗ ಕೇಳಿ ಬರುತ್ತಿರುತ್ತದೆ.
ಭಾರತ ದೇಶದಲ್ಲಿ ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಮಾತ್ರ ಅತಿ ಹೆಚ್ಚು ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಾವು ನೋಡಬಹುದು. ಅದರಲ್ಲೂ ಬಹಳ ವಿಶೇಷ ಮತ್ತು ಪವಾಡ ಆಂಜನೇಯ ಸ್ವಾಮಿ ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ ಇದೆ. ಹೌದು ಈ ದೇವಸ್ಥಾನ ಎಷ್ಟು ಶಕ್ತಿಶಾಲಿ ಎಂದರೆ
ಈ ದೇವಸ್ಥಾನದ ಸಕ್ಸಸ್ ರೇಟ್ ನೂರಕ್ಕೆ ನೂರು ಇದೆ. ಕೆಲವೇ ಕೆಲವು ಗಂಟೆಗಳಲ್ಲಿ ಕಷ್ಟ ಪರಿಹಾರ ಆಗಿರುವಂತಹ ಸಾಕಷ್ಟು ಉದಾಹರಣೆ ಗಳು ನಮ್ಮ ಕಣ್ಣ ಮುಂದೆಯೇ ಕಂಡುಬರುತ್ತದೆ. ಈ ವಿಶೇಷವಾದಂತಹ ಹನುಮಂತನ ದೇವಸ್ಥಾನಕ್ಕೆ ಬಂದು ತೆಂಗಿನಕಾಯಿಯನ್ನು ಕಟ್ಟಿದರೆ ಸಾಕು ಎಂತದ್ದೇ ಕಷ್ಟ ಇದ್ದರೂ ಪರಿಹಾರವಾಗುತ್ತದೆ.
ಈ ದೇವಸ್ಥಾನಕ್ಕೆ ಬಂದು ಬೇಡಿಕೊಂಡು ಹೋದ ಮೇಲೆ ಕಷ್ಟ ಪರಿಹಾರ ಆಗದೆ ಇರುವ ಭಕ್ತರು ಯಾರು ಇಲ್ಲ ಎಂದು ಕೂಡ ಹೇಳಬಹುದು. ಹೀಗೆ ಇಷ್ಟೆಲ್ಲಾ ಪವಾಡವನ್ನು ಸೃಷ್ಟಿ ಮಾಡುತ್ತಿರುವಂತಹ ಈ ಒಂದು ಹನುಮಂತನ ದೇವಸ್ಥಾನ ಇರುವುದಾದರೂ ಎಲ್ಲಿ ಯಾವ ಒಂದು ಸ್ಥಳದಲ್ಲಿ ಇದು ಕಂಡು ಬರುತ್ತದೆ, ಇದರ ಸಂಪೂರ್ಣವಾದಂತಹ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ಪುಸಿದ್ಧ ಗಿರಿ ನಗರಕ್ಕೆ ಹೋಗಬೇಕು ಗಿರಿನಗರದ ಮೂರನೇ ಅಡ್ಡ ರಸ್ತೆಯಲ್ಲಿ ಸಾಗಿದರೆ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ಕಂಡುಬರುತ್ತದೆ. ಈ ಒಂದು ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ವಿಶೇಷವಾದಂತಹ ಹರಕೆಯನ್ನು ಹೊತ್ತರೆ ಕೇವಲ 48 ದಿನಗಳಲ್ಲಿ ನಿಮ್ಮ ಇಚ್ಛೆಗಳು ನೆರವೇರುತ್ತದೆ.
ಅಥವಾ ಕೆಲವೇ ಗಂಟೆಗಳಲ್ಲಿಯೂ ಕೂಡ ನೆರವೇರುವಂತಹ ಸಾಧ್ಯತೆಗಳು ಕೂಡ ಇದೆ. ಕರ್ನಾಟಕದ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನಗಳ ಪಟ್ಟಿಯಲ್ಲಿ ಈ ಕಾರ್ಯಸಿದ್ಧಿ ಹನುಮಂತನ ದೇವಸ್ಥಾನವು ಮೊದಲ ಸ್ಥಾನದಲ್ಲಿ ಇದೆ. ಭಾರತ ದೇಶದ ದೊಡ್ಡ ದೊಡ್ಡ ವಿಜ್ಞಾನಿಗಳು ಕೂಡ ಈ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತು ಹೋಗಿದ್ದಾರೆ.
ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುವಂತಹ ಈ ಎರಡು ವಿಚಾರಗಳು ತುಂಬಾ ಆಶ್ಚರ್ಯವನ್ನು ಉಂಟುಮಾಡುತ್ತದೆ. ಈ ರೀತಿಯ ಒಂದು ದೃಶ್ಯಾವಳಿ ಭಾರತ ದೇಶದಲ್ಲಿಯೇ ಬೇರೆ ಎಲ್ಲಿ ಯೂ ಯಾವುದೇ ದೇವಸ್ಥಾನದಲ್ಲಿಯೂ ಕೂಡ ನೀವು ಕಾಣಲು ಸಾಧ್ಯವಿಲ್ಲ. ಈ ದೇವಸ್ಥಾನದ ವಾತಾವರಣ ನೋಡುತ್ತಿದ್ದರೆ ಈ ದೇವಸ್ಥಾನದಿಂದ ಹೊರಗೆ ಹೋಗಲು ಮನಸ್ಸೇ ಬರುವುದಿಲ್ಲ ಅಷ್ಟು ಪ್ರಶಾಂತವಾಗಿ ಇರುತ್ತದೆ.
ಈ ದೇವಸ್ಥಾನದಲ್ಲಿ ಸಾವಿರಾರು ಸಿಪ್ಪೆಯನ್ನೇ ಬಿಡಿಸದ ತೆಂಗಿನಕಾಯಿಯನ್ನು ಕಟ್ಟಿರುವಂತಹ ದೃಶ್ಯವನ್ನು ನೋಡ ಬಹುದು ಅಷ್ಟೇ ಅಲ್ಲದೆ ಸಾವಿರಾರು ಭಕ್ತರು ದೇವಸ್ಥಾನದಲ್ಲಿಯೇ ಸತತವಾಗಿ ಪ್ರದಕ್ಷಿಣೆ ಹಾಕುತ್ತಿರುವಂತಹ ದೃಶ್ಯವು ಕೂಡ ಕಂಡುಬರು ತ್ತದೆ. ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಆಂಜನೇಯ ಸ್ವಾಮಿಯು ನಮಸ್ಕಾರ ಮಾಡುತ್ತಿರುವಂತಹ ರೂಪದಲ್ಲಿ ಕಂಡುಬರುತ್ತದೆ.
ಈ ದೇವಸ್ಥಾನದಲ್ಲಿಯೇ ಸಿಪ್ಪೆ ತೆಗೆಯದೆ ಇರುವಂತಹ ತೆಂಗಿನ ಕಾಯಿಯನ್ನು ನೀವು ತೆಗೆದುಕೊಳ್ಳಬೇಕು ಅದರ ಮೇಲೆ ನಿಮ್ಮ ಹೆಸರು ಒಂದು ಸಂಖ್ಯೆ ದಿನಾಂಕವನ್ನು ಬರೆದು ಭಕ್ತರಿಗೆ ಕೊಡುತ್ತಾರೆ. ಆನಂತರ ನೀವು ಆ ತೆಂಗಿನ ಕಾಯಿಯನ್ನು ಹಿಡಿದುಕೊಂಡು ನಿಮ್ಮ ಮನಸ್ಸಿನಲ್ಲಿ ನಿಮ್ಮ ಇಷ್ಟಾರ್ಥವನ್ನು ಹೇಳಿಕೊಂಡು ಅದನ್ನು ಕಟ್ಟಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.