ಮೊಬೈಲ್ ಕಳೆದು ಹೋದರೆ ಟೆನ್ಶನ್ ಬೇಡ, ಇನ್ಮುಂದೆ ಸರ್ಕಾರವೇ ನಿಮ್ಮ ಫೋನ್ ಹುಡುಕಿ ಕೊಡುತ್ತದೆ.!

ಪ್ರತಿಯೊಬ್ಬರ ಕೈಗೂ ಈಗ ಆಂಡ್ರಾಯ್ಡ್ ಫೋನ್ ಗಳು ಬಂದಿವೆ. ಆಂಡ್ರಾಯ್ಡ್ ಫೋನ್ಗಳ ಉಪಯೋಗ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವುದರಿಂದ ಗೃಹಿಣಿಯರಿಂದ ಹಿಡಿದು ಉದ್ಯಮಿಗಳವರೆಗೆ, ಕಾಲೇಜು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೂಡ ಸ್ಮಾರ್ಟ್ ಫೋನ್ ಗಳಿಗೆ ಆಂಡ್ರಾಯ್ಡ್ ಫೋನ್ ಗಳಿಗೆ ಡಿಪೆಂಡ್ ಆಗಿದ್ದಾರೆ. ಇಂತಹ ಫೋನ್ ಗಳಲ್ಲಿ ಅವರ ಬ್ಯಾಂಕ್ ಖಾತೆಯ ವಿವರ ಸೇರಿದಂತೆ ಅನೇಕ ಅತ್ಯಮೂಲವಾದ ವಿಷಯಗಳು ಇರುತ್ತವೆ.

ಆಪ್ತರು ಕುಟುಂಬದವರು ಸ್ನೇಹಿತರ ಜೊತೆಗೆ ಸಮಯ ಕಳೆದ ಸನ್ನಿವೇಶದಲ್ಲಿ ತೆಗೆಸಿಕೊಂಡ ಫೋಟೋಗಳು, ವಿಡಿಯೋಗಳು ಕೆಲವು ವೈಯುಕ್ತಿಕ ಸಂದೇಶಗಳ ಮಾಹಿತಿಗಳು ಮತ್ತು ಇಂಪಾರ್ಟೆಂಟ್ ಆದ ಮೊಬೈಲ್ ನಂಬರ್ ಗಳು ಸೇರಿದಂತೆ ಅವರ ಬದುಕಿನ ಬಹು ಮುಖ್ಯ ಭಾಗ ಈಗ ಮೊಬೈಲ್ ಒಳಕ್ಕೆ ಸೇರಿ ಕುಳಿತಿದೆ ಎಂದರೂ ತಪ್ಪಾಗುವುದಿಲ್ಲ.

ಈ ರೀತಿ ನಾವು ಮೊಬೈಲ್ ಮೇಲೆ ಅಡಿಕ್ಟ್ ಆಗುತ್ತಿದ್ದಂತೆ ಅದರ ಕಳೆದುಕೊಳ್ಳುವಿಕೆಯ ಭಯವು ಕೂಡ ಹೆಚ್ಚಾಗಿದೆ. ಯಾಕೆಂದರೆ ಮೊಬೈಲ್ ಕಳ್ಳತನದ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಸ್ವೀಕರಿಸಿ ರೋಸಿ ಹೋಗಿರುವ ಪೊಲೀಸ್ ಇಲಾಖೆ ಒಂದು ಕಡೆ ಆದರೆ ಮೊಬೈಲ್ ಕಳೆದುಹೋದ ವಿಚಾರಕ್ಕೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಏರಬೇಕಲ್ಲ ಎನ್ನುವ ಇರಿಸು ಮುರಿಸು ಇನ್ನೊಂದು ಕಡೆ.

ಆದರೆ ಹಾಗೆಂದು ಇದು ಕೈ ತೊಳೆದುಕೊಳ್ಳುವ ವಿಷಯವು ಅಲ್ಲ. ಮೊಬೈಲ್ ಎಷ್ಟೇ ದುಬಾರಿ ಬೆಲೆಯದ್ದು ಆಗಿದ್ದರೂ ಕೂಡ ಮೊಬೈಲ್ ಕಳೆದು ಹೋಯಿತು ಎನ್ನುವ ಚಿಂತೆಗಿಂತ ಅದರಲ್ಲಿರುವ ಮಾಹಿತಿಗಳು ಸೋರಿಕೆ ಆದರೆ ಎನ್ನುವ ಭಯವೇ ಹೆಚ್ಚು. ಹಾಗಾಗಿ ಪ್ರತಿಯೊಬ್ಬರಿಗೂ ಸಹ ಅವರ ಮೊಬೈಲ್ ತೀರ ಪರ್ಸನಲ್ ವಿಷಯ ಆಗಿದೆ. ಆದ್ದರಿಂದ ಇವುಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಸರ್ಕಾರ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಮೇ 17ರಂದು ವಿಶ್ವ ಟೆಲಿಕಾಂ ದಿನ. ಆ ದಿನವೇ ಇದರ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೇಂದ್ರ ಟೆಲಿಕಾಂ ಸಚಿವ ಅಶ್ವಿನ್ ವೈಷ್ಣವ್ ಅವರು ಇದರ ಬಗ್ಗೆ ಮಾತನಾಡಿ ಕೇಂದ್ರ ಸರ್ಕಾರವು ಈ ರೀತಿ ಮೊಬೈಲ್ ಕಳೆದು ಹೋದಾಗ ಅದನ್ನು ಶೀಘ್ರವಾಗಿ ಪತ್ತೆ ಹಚ್ಚಿ ಅದರ ಮಾಲೀಕರಿಗೆ ವಾಪಸ್ಸು ಮಾಡಲು ಅನುಕೂಲವಾಗುವ ಒಂದು ಪೋರ್ಟಲ್ ಅನ್ನು ಸಿದ್ಧಪಡಿಸಿದೆ ಎಂದು ಹೇಳಿದ್ದಾರೆ.

ಸಂಚಾರ್ ಸಾಥಿ ಪೋರ್ಟಲ್ ಎನ್ನುವ ಕೇಂದ್ರ ಸರ್ಕಾರದ ಈ ಅನುಕೂಲತೆಯಿಂದ ಕಳೆದುಹೋದ ಅಥವಾ ಕಳ್ಳತನವಾದ ನಿಮ್ಮ ಮೊಬೈಲ್ ಫೋನ್ ಅನ್ನು ಶೀಘ್ರವಾಗಿ ಟ್ರೇಸ್ ಮಾಡಿ ವಾಪಸ್ಸು ಪಡೆಯಬಹುದು ಅಥವಾ ಅದನ್ನು ಸ್ವಿಚ್ ಆಫ್ ಮಾಡಬಹುದು. ಜನರಿಂದ ಕದ್ದ ವಸ್ತುಗಳನ್ನು ಪತ್ತೆ ಹಚ್ಚುವುದೇ ಇದರ ಮೂಲ ಉದ್ದೇಶ ಆಗಿದ್ದು ಮೇ 17ರಂದೇ ಈ ಫೋರ್ಟಲ್ ಅನಾವರಣಗೊಂಡಿದೆ.

ಆಪಲ್ ಫೋನ್ ಗಳಲ್ಲಿ ಫೈಂಡ್ ಮೈ ಫೋನ್ ಎನ್ನುವ ಆಪ್ಷನ್ ಇದೆ ಇದರ ಮೂಲಕ ನಿಮ್ಮ ಆಪಲ್ ಫೋನ್ ಎಲ್ಲಿದೆ ಎಂದು ತಿಳಿದುಕೊಳ್ಳಬಹುದಾಗಿತ್ತು. ಈಗ ಕೇಂದ್ರ ಸರ್ಕಾರದ ಈ ಪೋರ್ಟಲ್ ಕೂಡ ಇದೇ ಮಾದರಿಯಲ್ಲಿ ಕೆಲಸ ಮಾಡಲಿದೆ. ಇದರ ಮೂಲಕ ಆಂಡ್ರಾಯ್ಡ್ ಮೊಬೈಲ್ ಫೋನ್ ಗಳು ಜನಜಂಗುಳಿ ಮಧ್ಯೆ ಬಸ್ಸಿನಲ್ಲಿ ಕಳ್ಳತನ ಆಗಿದ್ದರು ಅಥವಾ ನೀವೇ ಅದನ್ನು ಮರೆತು ಎಲ್ಲಾದರೂ ಬಿಟ್ಟಿದ್ದರು ಕೂಡ ಅದು ಎಲ್ಲಿದೆ ಎಂದು ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ಸದ್ಯದಲ್ಲೇ ಇಲಾಖೆಯು ಇದು ಹೇಗೆ ಕಾರ್ಯ ನಿರ್ವಹಿಸಲಿದೆ ಎನ್ನುವುದರ ಕುರಿತು ಮಾಹಿತಿಯನ್ನು ತಿಳಿಸಲಿದೆ. ಹಾಗಾಗಿ ಇನ್ನು ಮುಂದೆ ನಿಮ್ಮ ಫೋನ್ ಕಳೆದು ಹೋದ ಸಂದರ್ಭದಲ್ಲಿ ಈ ಪೋಈರ್ ಉಪಯೋಗ ಪಡೆದುಕೊಳ್ಳಿ. ಮತ್ತು ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಶೇರ್ ಮಾಡಿ.

Leave a Comment