ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಎನ್ನುವ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆ ಮೂಲಕ ರೈತರು ತಾವು ಬೆಳೆದ ಬೆಳೆಗಳಿಗೂ ಕೂಡ ವಿಮೆ ಕಂಪನಿಯಲ್ಲಿ ಪ್ರೀಮಿಯಂ ಪಾವತಿ ಕಟ್ಟಬಹುದು.
ತಮ್ಮ ಜಿಲ್ಲೆಗಳಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಹತ್ತು ಆಯ್ದ ಬೆಳೆಗಳಲ್ಲಿ ಒಂದನ್ನು ಆರಿಸಿಕೊಂಡು ಅದನ್ನು ಕೃಷಿ ಮಾಡುವ ರೈತನು ಆ ಬೆಳೆಗೆ ಪ್ರೀಮಿಯಂ ಗಳನ್ನು ಪಾವತಿಸಿಕೊಂಡು ಬಂದರೆ ಒಂದು ವೇಳೆ ನೈಸರ್ಗಿಕ ವಿಕೋಪಗಳು ಸಂಭವಿಸಿ ಬೆಳೆ ಹಾನಿ ಉಂಟಾದಾಗ ವಿಮಾ ಕಂಪನಿಗಳಿಗೆ ಮಾಹಿತಿ ತಿಳಿಸಿದರೆ ವಿಮೆ ಮೊತ್ತವು DBT ಮೂಲಕ ರೈತರ ಖಾತೆಗೆ ಜಮೆ ಆಗುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಹಲವಾರು ರೈತರು ಬೆಳೆ ವಿಮೆ ಕಟ್ಟಿ ಪ್ರೀಮಿಯಂ ಗಳನ್ನು ಪಾವತಿಸಿದರು ಕೂಡ ಬೆಳೆ ಹಾನಿ ಆದ ಸಂದರ್ಭದಲ್ಲಿ ನೆರವು ಸಿಗುತ್ತಿಲ್ಲ. ಈ ಬಗ್ಗೆ ರೈತ ವರ್ಗಕ್ಕೆ ಬಹಳ ಬೇಸರವಿದೆ. ಈಗ ಇದಕ್ಕೆ ಸರ್ಕಾರವನ್ನೇ ಹೊಣೆ ಮಾಡಿರುವ ರೈತರುಗಳು ಸರ್ಕಾರಗಳು ವಿಮೆ ಕಂಪನಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ರೀತಿ ರೈತರಿಂದ ಹಣ ಕೀಳುತ್ತಿವೆ ಎಂದು ಧೂಷಿಸುತ್ತಿದ್ದಾರೆ.
ಆದರೆ ನಿಜವಾದ ಫ್ಯಾಕ್ಟ್ ಏನೆಂದರೆ ರೈತರಿಗೆ ಯಾಕೆ ಹಣ ಜಮೆ ಆಗುತ್ತಿಲ್ಲ ಎನ್ನುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳ ಬಗ್ಗೆ ವಿವರವಾಗಿ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ರೈತರು ಬೆಳೆದ ಬೆಳೆ ಯಾವುದೇ ನೈಸರ್ಗಿಕ ಅವಘಡಗಳಿಂದ ಹಾನಿ ಆದಾಗ ಬೆಳೆ ಸಮೀಕ್ಷೆ ಆಪ್ ಅಲ್ಲಿ ಅದರ ಮಾಹಿತಿಯನ್ನು ಅಪ್ಲೋಡ್ ಮಾಡಬೇಕು.
ಆಗ ಆ ರೈತನಿಗೆ ಫಸಲ್ ಭೀಮಾ ಯೋಜನೆಯ ವಿಮೆ ಸಿಗುತ್ತದೆ. ಒಂದು ವೇಳೆ ಇದು ರೈತನಿಗೆ ತಿಳಿದಿಲ್ಲ ಎಂದರೆ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ಬೆಳೆ ಸಮೀಕ್ಷೆ ಮಾಡಿಸಬಹುದು. ಬೆಳೆ ವಿಮೆ ಮಾಡಿಸಿದ ಕಂಪನಿಗಳಿಗೆ 72 ಗಂಟೆ ಒಳಗಡೆ ಈ ಮಾಹಿತಿಯನ್ನು ಕರೆ ತಾವು ಪ್ರೀಮಿಯಂ ಪಾವತಿಸಿದ್ದ ವಿಮಾ ಕಂಪನಿಗೆ ಕರೆ ಮಾಡಿ ತಿಳಿಸಬೇಕು.
ನಿಮ್ಮ ಕಂಪನಿಗಳಿಂದ ಬರುವ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವಿವರ ಸಲ್ಲಿಸುತ್ತಾರೆ. ಬಳಿಕ ಕೆಲ ದಿನಗಳ ನಂತರ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆ ವಿಮೆ ಹಣ ಜಮೆ ಆಗುತ್ತದೆ. ಆದರೆ ಅನೇಕ ರೈತರಿಗೆ ಈ ರೀತಿ ಮಾಡಿದ್ದರು ಕೂಡ ಅವರ ಪರಿಹಾರದ ಹಣ ಖಾತೆಗಳಿಗೆ ಜಮೆ ಆಗಿಲ್ಲ. ಅಲ್ಲದೆ ಅವರು ಕಟ್ಟಿದ್ದ ಪ್ರೀಮಿಯಂ ಮೊತ್ತ ಕೂಡ ಸಿಗದೆ ವಂಚಿತರಾಗಿ ಸಂ’ತ್ರ’ಸ್ಥರಾಗಿದ್ದಾರೆ.
ಇದಕ್ಕೆಲ್ಲ ನಿಜವಾದ ಕಾರಣವೇನೆಂದರೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು. ರೈತರಿಗೆ ಈ ಹಿಂದೆಯೇ ಬ್ಯಾಂಕ್ ಖಾತೆಗಳಿಗೆ ತಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ತಿಳಿಸಲಾಗಿತ್ತು. ಸರ್ಕಾರದ ಆದೇಶದಂತೆ ಆಧಾರ್ ಕಾರ್ಡ್ ಲಿಂಕ್ ಮಾಡಿ NPCI ಮ್ಯಾಪಿಂಗ್ ಆಗಿರದ, ಇ-ಕೆವೈಸಿ ಅಪ್ಡೇಟ್ ಮಾಡಿಸಿದ ರೈತರು 13ನೇ ಕಂತಿನ PM ಕಿಸಾನ್ ಸಮ್ಮಾನ್ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ.
ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದ ಕಾರಣ ಅನೇಕ ರೈತರು ಈ ರೀತಿ PM ಕಿಸಾನ್ ಮಾತ್ರವಲ್ಲದೇ ಪಿಎಮ್ ಫಸಲ್ ಭೀಮಾ ಯೋಜನೆಯ ಹಣದಿಂದ ಕೂಡ ವಂಚಿತರಾಗಿದ್ದಾರೆ. ಅನೇಕರ ರೈತರು ಈ ಮಾಹಿತಿಯನ್ನು ಲಘುವಾಗಿ ತೆಗೆದುಕೊಂಡಿದ್ದಾರೆ, ಅನೇಕ ಬಾರಿ ಸರ್ಕಾರ ಇದಕ್ಕೆ ಕಡೆ ಗಡುವನ್ನು ಕೂಡ ನೀಡಿ ಎಚ್ಚರಿಸಿದೆ ಆದರೂ ರೈತರು ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿಲ್ಲ.
ಇದೇ ಕಾರಣದಿಂದಾಗಿ ಫಸಲು ಭೀಮಾ ಯೋಜನೆಯ ವಿಮೆ ಹಣ ಫಲಾನುಭವಿ ರೈತರ ಖಾತೆಗೆ ಜಮೆಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸರ್ಕಾರವು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಆಂದೋಲನ ಏರ್ಪಡಿಸಿ ರೈತರು ಬ್ಯಾಂಕ್ ಗಳಿಗೆ ಆಧಾರ್ ಜೋಡಿಗೆ ಮಾಡಿಸಿ NPCI ಮ್ಯಾಪಿಂಗ್ ಮಾಡಿಸಬೇಕು ಎಂದು ಸೂಚಿಸಿದೆ.
ಎಲ್ಲ ರೈತರು ಈ ಕೂಡಲೇ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ NPCI ಮ್ಯಾಪಿಂಗ್ ಮಾಡಿಸಿದರೆ ಸರ್ಕಾರದ ಎಲ್ಲಾ ಸಹಾಯಧನವನ್ನು ಪಡೆಯಲು ಸಾಧ್ಯವಾಗುತ್ತದೆ.