ಎಲ್ಲರಿಗೂ ತಿಳಿದಿರುವಂತೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಪ್ರಾರಂಭವಾಗಿದ್ದು. ಪ್ರತಿಯೊಬ್ಬ ಮಹಿಳೆಯು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ರೇಷನ್ ಕಾರ್ಡ್ ಹೊಂದಿರುವಂತಹ ಮನೆಯ ಯಜಮಾನಿ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದ್ದು. ಪ್ರತಿಯೊಬ್ಬರೂ ಕೂಡ ಈಗಾಗಲೇ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಮುಂದಾಗಿದ್ದಾರೆ ಎಂದು ಹೇಳಬಹುದು.
ಆದರೆ ಹೆಚ್ಚಿನ ಜನಕ್ಕೆ ಈ ಒಂದು ಯೋಜನೆ ಯನ್ನು ನಾವು ಯಾವ ಒಂದು ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು ಎನ್ನುವಂತಹ ಮಾಹಿತಿ ತಿಳಿದಿಲ್ಲ. ಅಂದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವಂತಹ ಜನರು ಗ್ರಾಮ 1 ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಅದೇ ರೀತಿಯಾಗಿ ಪಟ್ಟಣ ಪ್ರದೇಶದಲ್ಲಿ ಇರುವಂತಹ ಜನರು ಬೆಂಗಳೂರು 1 ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಅದೇ ರೀತಿಯಾಗಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಾದಂತಹ ವಿಳಾಸಗಳು ಇದ್ದು ಆ ಒಂದು ಕೇಂದ್ರಗಳಿಗೆ ಹೋಗಿ ಅವರು ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಹೌದು ಬದಲಿಗೆ ನೀವೇ ನಿಮ್ಮ ಮೊಬೈಲ್ ನಲ್ಲಿ ಈ ಒಂದು ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ ಏಕೆಂದರೆ ಕಳೆದ ಬಾರಿ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಎಲ್ಲಾ ಕಂಪ್ಯೂಟರ್ ಕೇಂದ್ರಗಳಲ್ಲಿಯೂ ಕೂಡ ಅರ್ಜಿಯನ್ನು ಸಲ್ಲಿಸುವಂತಹ ಅವಕಾಶ ಇತ್ತು.
ಅಂತಹ ಸಮಯದಲ್ಲಿ ಜನರಿಂದ ಹೆಚ್ಚಿನ ಹಣವನ್ನು ಪಡೆದಿರುವಂತಹ ಕಾರಣದಿಂದ ಈ ಬಾರಿ ಈ ಒಂದು ಯೋಜನೆಯನ್ನು ಈ ಒಂದು ಕೇಂದ್ರಗಳನ್ನು ಹೊರತುಪಡಿಸಿ ಬೇರೆ ಯಾರು ಕೂಡ ಅರ್ಜಿಯನ್ನು ಹಾಕಬಾರದು ಜನರು ಹಣವನ್ನು ಕಳೆದುಕೊಳ್ಳಬಾರದು ಎನ್ನುವ ಉದ್ದೇಶದಿಂದ ಈ ರೀತಿಯಾದಂತಹ ಯೋಜನೆಯನ್ನು ಅಂದರೆ ಈ ರೀತಿಯ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಸುವಂಥದ್ದು ಅಂದರೆ ಯಾವ ಸ್ಥಳದಲ್ಲಿರುವ ಜನರು ಯಾವ ಸ್ಥಳಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ ಯಾವ ದಿನಾಂಕದಂದು ಹೋಗಿ ಅವರು ಅರ್ಜಿಯನ್ನು ಸಲ್ಲಿಸಬಹುದು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಮೊದಲು ನೀವು ಬ್ರೌಸರ್ ಅಂದರೆ ಗೂಗಲ್ ಗೆ ಹೋಗಿ ಸೇವಾ ಸಿಂಧು ವೆಬ್ಸೈಟ್ ಅನ್ನು ಓಪನ್ ಮಾಡಬೇಕಾಗುತ್ತದೆ. ಅಲ್ಲಿ ನಿಮಗೆ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾಗಿದೆ ಎನ್ನುವಂತಹ ಆಯ್ಕೆ ತೋರಿಸುತ್ತದೆ.
• ಆನಂತರ ನೀವು ಗೃಹಲಕ್ಷ್ಮಿ ಯೋಜನೆ ಎನ್ನುವಂತಹ ಆಯ್ಕೆಯ ಮೇಲೆ ಓಕೆ ಒತ್ತಬೇಕು.
• ಆನಂತರ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಕೇಳುತ್ತದೆ ಅದನ್ನು ಹಾಕಿದ ಮೇಲೆ
• ಅಲ್ಲಿ ವೆರಿಫಿಕೇಶನ್ ಕೋಡ್ ಎನ್ನುವಂತಹ ಆಯ್ಕೆ ಬರುತ್ತದೆ ಅದರ ಮೇಲೆ ನೀವು ಸರಿಯಾದ ಜಾಗಕ್ಕೆ ಓಕೆ ಮಾಡಿದರೆ ಅಲ್ಲಿ ವೆರಿಫಿಕೇಶನ್ ಅಪ್ಲೈ ಎನ್ನುವಂತಹ ಆಯ್ಕೆ ಬರುತ್ತದೆ.
• ಆನಂತರ ಕೆಳಗೆ ನೀವು ಎಲ್ಲಿ ಒಂದು ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಯಾವ ದಿನಾಂಕದಂದು ಹೋಗಿ ಅರ್ಜಿಯನ್ನು ಸಲ್ಲಿಸಬೇಕು ಎನ್ನುವಂತಹ ಆಯ್ಕೆಯನ್ನು ಅದು ತೋರಿಸುತ್ತದೆ.
ಆನಂತರ ನೀವು ಆ ದಿನಾಂಕದಂದು ಆ ಸ್ಥಳಗಳಿಗೆ ಹೋಗಿ ಈ ಒಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ನೆನ್ನೆ ಈ ಒಂದು ಆಯ್ಕೆ ಓಪನ್ ಆಗುತ್ತಿರಲಿಲ್ಲ ಏಕೆಂದರೆ ಸರ್ವರ್ ಬಿಸಿ ಎಂದೂ ಬರುತ್ತಿತ್ತು. ಆದರೆ ಇಂದಿನಿಂದ ಯಾವುದೇ ರೀತಿಯಾದಂತಹ ಸಮಸ್ಯೆ ಬರುವುದಿಲ್ಲ. ಬದಲಿಗೆ ಸುಲಭವಾಗಿ ಈ ಒಂದು ಆಯ್ಕೆಯನ್ನು ನೀವು ನಿಮ್ಮ ಮೊಬೈಲ್ ಗ, ಕಂಪ್ಯೂಟರ್ ಸೆಂಟರ್ ಗಳಲ್ಲಿ, ಲ್ಯಾಪ್ಟಾಪ್ ಗಳಲ್ಲಿ ನೋಡಬಹುದಾಗಿದೆ.