ಅಮೇರಿಕಾ, ರಷ್ಯಾ ಗೆ 4 ದಿನ ಸಾಕು, ಭಾರತಕ್ಕೆ ಚಂದ್ರನತ್ತ ಹೋಗಲು 40 ದಿನ ಆಗ್ತಿದೆ ಯಾಕೆ.? ಚಂದ್ರಯಾನ-3 ಲೇಟ್ ಆಗುತ್ತಿರುವುದಕ್ಕೆ ಇಲ್ಲಿದೆ ನೋಡಿ ಕಾರಣ.!

 

1959 ರಲ್ಲಿ ಸೋವಿಯತ್ ಒಕ್ಕೂಟವು ಲೂನಾ-2 ಚಂದ್ರನನ್ನು 34 ಗಂಟೆಗಳಲ್ಲೇ ತಲುಪಿತ್ತು, ಇದು ಚಂದ್ರನನ್ನು ತಲುಪಿದ್ದ ಮೊದಲ ಬಾಹ್ಯಾಕಾಶ ನೌಕೆಯದು. ನಂತರ 1969 ರಲ್ಲಿ ಅಮೇರಿಕಾದ ಅಪೊಲೋ-11 ಚಂದ್ರನನ್ನು 4 ದಿನ 6 ಗಂಟೆಗಳಲ್ಲಿ ತಲುಪಿತ್ತು. ಅಮೇರಿಕಾ ಹೇಳುವ ಪ್ರಕಾರ ಇದು ಮಾನವನು ಚಂದ್ರನ ಮೇಲೆ ಕಾಲಿಟ್ಟಂತಹ ಮೊದಲ ಸಾಹಸ.

2013 ರಲ್ಲಿ ಚೀನಾದ ಚಾಂಗ್-3 ಚಂದ್ರನನ್ನು 13 ದಿನಗಳಲ್ಲಿ ತಲುಪಿತ್ತು. ಈಗ 2023 ರಲ್ಲಿ ಭಾರತದ ಚಂದ್ರಯಾನ-3 ಗೆ ಚಂದ್ರನನ್ನು ತಲುಪಲು 40 ದಿನ ತಗಲುತ್ತಿದೆ. ಸೋವಿಯತ್ ಒಕ್ಕೂಟ, ಅಮೆರಿಕಾ ಮತ್ತು ಚೀನಾದ ಸ್ಪೇಸ್ ಮಿಷನ್ ಗಳು ಕೆಲವೇ ದಿನಗಳಲ್ಲಿ ಇದನ್ನು ಮುಗಿಸಿದರೂ ಭಾರತದ ಚಂದ್ರಯಾನಕ್ಕೆ 40 ದಿನ ತಗಲುತ್ತಿದೆ.

ಈ ಐದು ದಶಕಗಳ ಹಿಂದೆಯೇ ಕೆಲವೇ ದಿನಗಳಲ್ಲಿ ಉಳಿದ ದೇಶಗಳು ಮುಗಿಸಿದ ಈ ಮಿಷನ್ ಗೆ ಭಾರತ ಈಗಲೂ ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಭಾರತ ಮತ್ತು ಚಂದ್ರನ ನಡುವಿನ ವ್ಯತ್ಯಾಸವೇನು ಬದಲಾಗಿಲ್ಲ ಆದರೂ ಈಗಿನ ಆಧುನಿಕ ವಿದ್ಯಾಮಾನಗಳ ಕಾಲದಲ್ಲಿ ಭಾರತದ ಈ ಚಂದ್ರಯಾನ ಮಿಷನ್ ಗೆ ಇಷ್ಟು ಸಮಯ ತಗಲುತ್ತಿರುವುದಕ್ಕೆ ಕಾರಣವೇನು ಎನ್ನುವ ಸಂಶಯ ಬರದೇ ಇರದು.

ಅದರ ಬಗ್ಗೆ ಕೆಲ ವಿವರಗಳನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಲೂನಾ-2 ಮತ್ತು ಅಪೊಲೋ-11 ಮಿಷನ್ ಗಳಿಗಿಂತ ಭಾರತದ ಚಂದ್ರಯಾನ-3 ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದಕ್ಕೆ ಮೂರು ಪ್ರಮುಖ ಕಾರಣಗಳಿವೆ.

● ಚಂದ್ರನನ್ನು ತಲುಪಲು ಆಯ್ದುಕೊಂಡ ಪಥವೂ ಒಂದು ಕಾರಣ. ನಾಸಾದ ಅಪೊಲೊ ಮಿಷನ್ ನನ್ನು ಚಂದ್ರನತ್ತ ತಲುಪಿಸಲು ಟ್ರಾನ್ಸ್ ಲೂನರ್ ಇಂಜಕ್ಷನ್ TLI ಎನ್ನುವ ಮಾರ್ಗವನ್ನು ಆ ದೇಶದ ವಿಜ್ಞಾನಿಗಳು ಆಯ್ದುಕೊಂಡಿದ್ದರು. ಇದರಲ್ಲಿ ಶಕ್ತಿಶಾಲಿ ಸ್ಯಾಟನ್ 5 ರಾಕೆಟ್ ಅಪೋಲೋ ನೌಕೆಯನ್ನು ಲೋವರ್ ಅರ್ಥ್ ಆರ್ಬಿಟ್ ಗೆ ತಲುಪಿಸಿತ್ತು. ಅಲ್ಲಿ ಭೂಮಿಯನ್ನು ಒಂದೂವರೆ ಸುತ್ತು ಮಾತ್ರ ಸುತ್ತಿದ ರಾಕೆಟ್ ಮೂರನೇ ಸ್ಟೇಜ್ ಉರಿಸಿ ನೌಕೆಯನ್ನು ಚಂದ್ರನ ಕಡೆಗೆ ಕಳುಹಿಸಲಾಗಿತ್ತು.

ಇದರಿಂದ ಅಪೊಲೋ ನೌಕೆ ಕೆಲವೇ ದಿನದಲ್ಲಿ ಚಂದ್ರನನ್ನು ತಲುಪಲು ಸಾಧ್ಯವಾಯಿತು. ಆದರೆ ನಮ್ಮ ದೇಶದ ಚಂದ್ರಯಾನ-3 ಟ್ರಾನ್ಸ್ ಲೂನರ್ ಇಂಜೆಕ್ಷನ್ TLI ಪಥವನ್ನು ಆರಿಸಿಕೊಂಡಿಲ್ಲ. ಚಂದ್ರಯಾನ-3 ರಲ್ಲಿ ಭೂಮಿಯ ಸುತ್ತಲೂ ನಿಧಾನವಾಗಿ ಸುತ್ತುತ್ತಾ ನೌಕೆಯು ಭೂಮಿಯ ಕಕ್ಷೆಯನ್ನು ಕಳೆದುಕೊಂಡು ಚಂದ್ರನ ಕಕ್ಷೆ ಸೇರಿ ನಂತರ ನಿಧಾನವಾಗಿ ಚಂದ್ರನ ಮೇಲೆ ಲಾಂಚ್ ಆಗುತ್ತಿದೆ. ಹಾಗಾಗಿ ಈ ಪ್ರೋಸೆಸ್ ಗೆ ಹೆಚ್ಚು ಸಮಯ ತಗಲುತ್ತಿದೆ.

● ಸ್ಪೇಸ್ ನಲ್ಲಿ ಲಾಂಗ್ ಡಿಸ್ಟ್ಯಾನ್ಸ್ ಕವರ್ ಮಾಡಬೇಕು ಎಂದರೆ ಹೈ ಸ್ಪೀಡ್ ನಲ್ಲಿ ಮತ್ತು ನೇರವಾದ ಪಥದಲ್ಲಿ ಹೋಗಬೇಕಾಗುತ್ತದೆ. ಅಪೊಲೋ-11 ಲಾಂಚ್ ಮಾಡಲು ನಾಸಾ ಬಳಿ ಪವರ್ ಫುಲ್ ಸ್ಯಾಟರ್ನ್ 5 ನಂತಹ ಹೆವಿ ಲಿಫ್ಟ್ ಲಾಂಚರ್ ಇತ್ತು. ಇದು ಗಂಟೆಗೆ 39,000 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿತ್ತು ಹೀಗಾಗಿ ಅವರ ಮಿಷನ್ ಗೆ ಕಡಿಮೆ ಸಮಯ ತಗುಲಿತ್ತು.

● ಈ ಮಿಷನ್ ಗಳಿಗೆ ತಗಲುವ ವೆಚ್ಚದಲ್ಲಿ ನೋಡಿದರೂ ಕೂಡ ಅಪೊಲೋ-11 ಮಿಷನ್ ಗೆ 185 ಖರ್ಚು ಮಾಡಿತ್ತು. ಅದರ ಅಂದಾಜು ಮೊತ್ತ ಈಗ ಭಾರತೀಯ ಮೌಲ್ಯದಲ್ಲಿ ಲೆಕ್ಕ ಹಾಕುವುದಾದರೆ 12,000 ಕೋಟಿ ಆಗುತ್ತದೆ. ಇದರಲ್ಲಿ ಸುಮಾರು 7,500 ಕೋಟಿಯಷ್ಟು ಸಾಟರ್ನ್ 5 ರಾಕೆಟ್ ತಯಾರಿಕೆಗೆ ಖರ್ಚಾಗಿತ್ತು. ನಮ್ಮ ಹೆಮ್ಮೆಯ ಚಂದ್ರಯಾನ-3 615 ಕೋಟಿ ವೆಚ್ಚದಲ್ಲಿ ಆಗುತ್ತಿದೆ.

ನಮ್ಮ ISRO ಇಷ್ಟು ಕಡಿಮೆ ಖರ್ಚಿನಲ್ಲಿ ಸ್ಪೇಸ್ ಮಿಷನ್ ನಡೆಸುವುದಕ್ಕೆ ವಿಶ್ವವಿಖ್ಯಾತಿ. ಮಂಗಳ ಗ್ರಹಕ್ಕೆ ಕೂಡ ಕಡಿಮೆ ಖರ್ಚಿನಲ್ಲಿ ಸ್ಯಾಟಲೈಟ್ ಕಳಿಸಿದ ಖ್ಯಾತಿ ISROಗೆ ಸಲ್ಲುತ್ತದೆ. ಇದೆಲ್ಲಾ ಕಾರಣದಿಂದಾಗಿ ತಡವಾದರೂ ಯಶಸ್ವಿಯಾಗಿ ಚಂದ್ರಯಾನ-3 ಪೂರ್ಣಗೊಳ್ಳುತ್ತದೆ ಎಂದು ಸಂತಸ ಪಡೋಣ. ಈ ವಿಚಾರವಾಗಿ ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment