ಮನೆ ಎಂದ ಮೇಲೆ ಕೆಲವೊಂದಷ್ಟು ಉಪಾಯಗಳನ್ನು ಅಂದರೆ ಕೆಲವೊಂದು ಸಮಯಕ್ಕೆ ಅನುಕೂಲವಾಗುವಂತಹ ವಿಷಯಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು. ಯಾವುದಾದರೂ ಸಮಯದಲ್ಲಿ ಏನಾದರೂ ತೊಂದರೆ ಆಗಿದ್ದರೆ ಅದನ್ನು ಹೇಗೆ ಸರಿಪಡಿಸಬೇಕು ಎನ್ನು ವಂತಹ ವಿಷಯವಾಗಿರಬಹುದು.
ಅವೆಲ್ಲವನ್ನು ಹೇಗೆ ಸಮಯದಲ್ಲಿ ಸರಿಪಡಿಸುವುದು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಹಾಗೂ ತುಂಬಾ ಅನುಕೂಲಕ್ಕೆ ಬರುತ್ತದೆ ಎಂದು ಹೇಳಬಹುದು. ಹಾಗಾದರೆ ಈ ದಿನ ಯಾವ ಕೆಲವು ವಿಷಯಗಳು ಪ್ರತಿಯೊಬ್ಬರಿಗೂ ಸಮಯಕ್ಕೆ ಸರಿಯಾಗಿ ಅನುಕೂಲವಾಗುತ್ತದೆ.
ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಹಾಗೂ ಈ ಟಿಪ್ಸ್ ಗಳು ಪ್ರತಿಯೊಬ್ಬ ರಿಗೂ ಕೂಡ ಅನುಕೂಲವಾಗುತ್ತದೆ ಎಂದೇ ಹೇಳಬಹುದಾಗಿದೆ. ಹಾಗಾದರೆ ಆ ಟಿಪ್ಸ್ ಗಳು ಯಾವುದು ಹಾಗೂ ಅದು ಯಾವ ಸಮ ಯಕ್ಕೆ ಅನುಕೂಲವಾಗುತ್ತದೆ ಎನ್ನುವಂತಹ ಕೆಲವೊಂದಷ್ಟು ಮಾಹಿತಿ ಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಹಾಗೂ ಯಾವ ಕೆಲವು ಸೂಚನೆಗಳು ಘಟನೆಗಳು ನಿಮ್ಮ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಅದು ನಿಮಗೆ ಒಳ್ಳೆಯದಾಗುತ್ತದೆ ಅಂದರೆ ಒಳ್ಳೆಯ ಸೂಚನೆಯಾಗಿರುತ್ತದೆ ಹೀಗೆ ಈ ಎಲ್ಲ ವಿಷಯಕ್ಕೆ ಸಂಬಂಧಿ ಸಿದ ಕೆಲವೊಂದಷ್ಟು ಮಾಹಿತಿಗಳನ್ನು ನೋಡೋಣ.
• ಮನೆಯಲ್ಲಿ ಇರುವೆಗಳಾದರೆ ಸ್ವಲ್ಪ ಅರಿಷಿಣ ಅಥವಾ ಶುದ್ಧ ಕರ್ಪೂರ ಪುಡಿಯನ್ನು ಆ ಜಾಗದಲ್ಲಿ ಉದುರಿಸಿದರೆ ಇರುವೆಗಳು ಅಲ್ಲಿ ಸುಳಿಯುವುದಿಲ್ಲ. ಬದಲಿಗೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿ ಅವುಗಳನ್ನು ಹಾಕಿ ಅದರಿಂದ ತೊಂದರೆಗಳನ್ನು ಬರುವ ಹಾಗೆ ಮಾಡುವುದರ ಬದಲು ಈ ಉಪಾಯ ಮಾಡುವುದು ಉತ್ತಮ.
• ಮನೆಯಲ್ಲಿ ಧವಸ ಧಾನ್ಯಗಳಿಗೆ ಹುಳು ಆಗದಿರಲು ಬೇವಿನ ಸೊಪ್ಪು, ಮೆಣಸುಕಾಳು, ಬೆಳ್ಳುಳ್ಳಿ, ತುಳಸಿ ಎಲೆ, ಇವುಗಳಲ್ಲಿ ಯಾವುದಾದರೂ ಸೇರಿಸಿಟ್ಟರೆ ಒಳ್ಳೆಯದು.
• ಮನೆಯಲ್ಲಿ ಇಲಿಗಳಾದರೆ ಅದರ ಬಿಲಕ್ಕೆ ಖಾರದ ಪುಡಿ ಅಥವಾ ಪಕ್ವವಾದ ಪೇರು ಹಣ್ಣನ್ನು ಅಂದರೆ ಸೀಬೆ ಹಣ್ಣನ್ನು ತುಂಡು ಮಾಡಿ ಬಿಲದ ಬಾಯಿಯಲ್ಲಿ ಇಟ್ಟರೆ ಓಡಿಹೋಗುತ್ತವೆ.
• ಮನೆಯಲ್ಲಿ ನೊಣವು ಹೆಚ್ಚಾದರೆ ನೆಲ ಒರೆಸುವ ನೀರಿಗೆ ಕರ್ಪೂರ ಅಥವಾ ಗೋಮೂತ್ರ ಹಾಕಿ ಒರೆಸಬೇಕು. ಈ ರೀತಿ ಮಾಡುವುದರಿಂದ ನೊಣಗಳ ಕಾಟದಿಂದ ಮುಕ್ತಿಯನ್ನು ಪಡೆಯಬಹುದು.
• ಅನ್ನವು ಬೆಳ್ಳಗಾಗಲು ಹಾಗೂ ಉದುರಾಗಲು 1 ಚಮಚ ಅಡುಗೆ ಎಣ್ಣೆ ಮತ್ತು ಸ್ವಲ್ಪ ನಿಂಬೆರಸ ಹಿಂಡುವುದು ಉತ್ತಮ.
• ಪಾತ್ರೆತೊಳೆಯಲು ಮನೆಯಲ್ಲಿ ಬಂದ ಬೂದಿ ಅಥವಾ ಚಹಾ ಪುಡಿ ಕಾಫಿ ಪುಡಿಯೊಂದಿಗೆ ಸ್ವಲ್ಪ ಅಂಟಾಳ್‌ಕಾಯಿ ಪುಡಿ ಹಾಗೂ ಕೆಮ್ಮಣ್ಣು ಸೇರಿಸಿ ತೊಳೆದರೆ ಸ್ವಚ್ಛವಾಗುತ್ತವೆ ಹಾಗೂ ಪಾತ್ರೆಗಳು ಪಳಪಳನೆ ಕಾಣುತ್ತದೆ.
• ಮನೆಯಲ್ಲಿ ವಿಷಕ್ರಿಮಿಗಳು ಬಾರದಿರಲು ಆಗಾಗ ಮನೆಗೆ ಗೋಮೂತ್ರ ಸಿಂಪಡಿಸಬೇಕು ಹಾಗೂ ಹೋಮ ಮಾಡಬೇಕು. ಇದು ಆರೋಗ್ಯದ ದೃಷ್ಟಿಯಿಂದ ಆಗಿರಬಹುದು ಮನೆಗೆ ಒಳ್ಳೆಯದಾಗಲಿ ಎನ್ನುವ ದೃಷ್ಟಿಯಿಂದ ಈ ವಿಧಾನ ತುಂಬಾ ಒಳ್ಳೆಯದು.
• ರಂಗೋಲಿಯನ್ನು ಸುಣ್ಣದ ಪುಡಿ ಅಥವಾ ಅರಿಷಿಣದಿಂದ ಹಾಕಿದರೆ ಮನೆಯ ಒಳಗೆ ಕ್ರಿಮಿಕೀಟಗಳು ಪ್ರವೇಶಿಸುವುದಿಲ್ಲ. ಹಾಗೂ ಇದು ಶುಭ ಸಂಕೇತ ಎಂದೇ ಹೇಳಬಹುದು.
• ದನಗಳ ಮೈಯಲ್ಲಿ ಉಣ್ಣೆಯಾದರೆ ಮೈಗೆ ಅನ್ನದ ಗಂಜಿ ಲೇಪಿಸಿ ಬಿಸಿಲಿಗೆ ಕಟ್ಟಬೇಕು 4 ಗಂಟೆಯ ನಂತರ ಮೈ ತೊಳೆಯಬೇಕು. ಈ ರೀತಿ ಮಾಡೋದ್ರಿಂದ ದನಗಳ ಮೈಯಲ್ಲಿ ಆಗಿರುವಂತಹ ಉಣ್ಣೆ ಕಡಿಮೆ ಯಾಗುತ್ತದೆ.
• ಅಡುಗೆ ಉಪ್ಪಾಗಿದ್ದರೆ ಸ್ವಲ್ಪ ಗೋದಿ ಹಿಟ್ಟು ಕಲಸಿ ಉಂಡೆ ಮಾಡಿ ಅದರಲ್ಲಿ ಹಾಕಿ ಇಟ್ಟರೆ ಉಪ್ಪು ಕಡಿಮೆ ಆಗುತ್ತದೆ. ಈ ಒಂದು ವಿಧಾನ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಹಾಗೂ ಸಮಯಕ್ಕೆ ಈ ಒಂದು ಟಿಪ್ಸ್ ತುಂಬಾ ಕೆಲಸಕ್ಕೆ ಬರುತ್ತದೆ ಎಂದು ಹೇಳಬಹುದು.