ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಪ್ರಾರಂಭವಾಗಿದ್ದು. ಪ್ರತಿಯೊಬ್ಬ ಮನೆಯ ಮಹಿಳೆಯು ಅಂದರೆ ಮನೆಯ ಒಡತಿ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಹಲ ವಾರು ದಿನ ಕಳೆದಿದ್ದು ಅವರು ಅಧಿಕಾರಕ್ಕೆ ಬರುವ ಮುಂಚೆಯೇ ಹೊರಡಿಸಿದ್ದಂತಹ 5 ಯೋಜನೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.
ಹೌದು 5 ಗ್ಯಾರಂಟಿ ಯನ್ನು ಕೊಡುತ್ತೇವೆ ಹಾಗೂ ಅದು ಅವರಿಗೆ ತುಂಬಾ ಅನುಕೂಲವಾಗ ಬೇಕು ಅಂತಹ ಒಂದು ಗ್ಯಾರಂಟಿಯನ್ನು ಕೊಡುತ್ತೇವೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದರು. ಅದರಂತೆ ಅವರು ಅಧಿಕಾರಕ್ಕೆ ಬಂದ ತಕ್ಷಣ ಅವರು ಯಾವ 5 ಗ್ಯಾರಂಟಿಯನ್ನು ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ಕೊಟ್ಟಿದ್ದರೋ ಅದನ್ನು ಈಡೇರಿಸುವಲ್ಲಿ ಬಹಳ ಪ್ರಮುಖವಾದಂತಹ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಹೌದು ಅದರಲ್ಲೂ ಬಹಳ ಮುಖ್ಯವಾಗಿ ಪ್ರತಿಯೊಬ್ಬ ಮಹಿಳೆಗೂ ಕೂಡ ನಮ್ಮ ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಉಚಿತವಾಗಿ KSRTC ಬಸ್ ಗಳಲ್ಲಿ ಪ್ರಯಾಣಿಸಬಹುದು ಎನ್ನುವಂತಹ ಮಾತನ್ನು ಹೇಳಿದ್ದು. ಈ ಒಂದು ಯೋಜನೆಯನ್ನು ಪ್ರತಿಯೊಬ್ಬ ಮಹಿಳೆಯು ಕೂಡ ಪಡೆದು ಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು. ಅದರಂತೆಯೇ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗಾಗಿರಬಹುದು ಕೆಲವೊಂದಷ್ಟು ದೂರದ ಊರುಗಳಿಗೆ ಪ್ರಯಾಣಿಸುವಂತಹ ಮಹಿಳೆಯರಿಗೆ ಇದು ತುಂಬಾ ಅನುಕೂಲವಾಗಿದೆ ಎಂದೇ ಹೇಳಬಹುದು.
ಆದರೆ ಇದರ ಒಂದು ಯೋಜನೆಯು ಶಾಲಾ-ಕಾಲೇಜುಗಳಿಗೆ ಹೋಗುವಂತಹ ಮಕ್ಕಳಿಗೆ ತುಂಬಾ ಅನಾನುಕೂಲವನ್ನು ಉಂಟು ಮಾಡಿದೆ. ಹೌದು ಹೆಚ್ಚಿನ ಸಂಖ್ಯೆ ಯಲ್ಲಿ ಮಹಿಳೆಯರು ಬೇರೆ ಕಡೆ ಪ್ರಯಾಣಿಸುತ್ತಿರುವುದರಿಂದ ಈ ರೀತಿಯಾದಂತಹ ಸಮಸ್ಯೆ ಎದುರಾಗುತ್ತಿದೆ. ಅದನ್ನು ಹೊರತುಪಡಿಸಿ ಈ ಒಂದು ಯೋಜನೆ ತುಂಬಾ ಯಶಸ್ವಿಯಾಗಿ ನಡೆಯುತ್ತಿದೆ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಕೆಲವೊಂದಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಯಾವ ರೀತಿ ಹಾಕಬೇಕು ಎನ್ನುವಂತಹ ಗೊಂದಲದಲ್ಲಿಯೇ ಇದ್ದಾರೆ. ಹಾಗಾದರೆ ಈ ದಿನ ಮನೆಯ ಒಡತಿ ಈ ಒಂದು ಗೃಹಲಕ್ಷ್ಮಿ ಯೋಜನೆ ಯನ್ನು ಪಡೆದುಕೊಳ್ಳಬೇಕು ಎಂದರೆ ಎಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕು.
ಹಾಗೂ ಯಾವುದೆಲ್ಲ ದಾಖಲಾತಿಗಳನ್ನು ಇಟ್ಟುಕೊಂಡು ಈ ಒಂದು ಅರ್ಜಿ ಸಲ್ಲಿಕೆಗೆ ಮುಂದಾಗಬಹುದು ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲೇ ಹೇಳಿದಂತೆ ಈ ಒಂದು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ನಿಮ್ಮ ಹತ್ತಿರದ ಗ್ರಾಮ 1, ಬೆಂಗಳೂರು 1, ಬಾಪೂಜಿ ಸೇವ ಕೇಂದ್ರ.
ಇಲ್ಲಿ ನೀವು ಹೋಗಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
ಹಾಗಾದರೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
• ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರುವಂತದ್ದು.
• ನಿಮ್ಮ ರೇಷನ್ ಕಾರ್ಡ್
• ನಿಮ್ಮ ಬ್ಯಾಂಕ್ ಪಾಸ್ ಬುಕ್ ಪ್ರತಿ.
• ನಿಮ್ಮ ಮೊಬೈಲ್
ಹೀಗೆ ಇಷ್ಟು ದಾಖಲಾತಿಗಳು ಇದ್ದರೆ ಸಾಕು ನೀವು ಮೇಲೆ ಹೇಳಿದಂತಹ ಸ್ಥಳಗಳಿಗೆ ಹೋಗಿ ಅರ್ಜಿ ಸಲ್ಲಿಕೆ ಮಾಡಬಹುದು. ನಿಮಗೆ ಯಾವುದೇ ರೀತಿಯ ಸಂದೇಶ ಬಂದಿಲ್ಲ ಎಂದರು ಕೂಡ ಈ ಕೇಂದ್ರಗಳಿಗೆ ಹೋಗಿ ನೀವು ಅರ್ಜಿ ಸಲ್ಲಿಕೆ ಮಾಡುವುದು ಉತ್ತಮ.
ಕೆಲವೊಂದು ಪ್ರದೇಶಗಳಲ್ಲಿ ಈ ಕೇಂದ್ರಗಳು ಇರುವುದಿಲ್ಲ ಅಂತಹ ಸಮಯದಲ್ಲಿ ನಿಮ್ಮ ಹತ್ತಿರದ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಇಲ್ಲಿ ಹೋಗಿ ನೀವು ಮಾಹಿತಿಯನ್ನು ತಿಳಿದು ಆನಂತರ ನೀವು ಅರ್ಜಿ ಸಲ್ಲಿಕೆಗೆ ಮುಂದಾಗಬಹುದು.