ಕುಟುಂಬದ ಯಾವ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಕೇಳಬಹುದು:-
● ಮೂರು ತಲೆಮಾರಿನಿಂದ ವರ್ಗಾವಣೆ ಆಗಿಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸುವುದರಿಂದ ಪಿತ್ರಾಜಿತವಾಗಿ ಬಂದ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಹಕ್ಕು ಇರುತ್ತದೆ. ಹಾಗಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳು ಪಾಲು ಕೇಳಬಹುದು.
● ಒಂದು ಕೂಡು ಕುಟುಂಬದಲ್ಲಿ ತಂದೆ ತಂದೆಯ ಸಹೋದರರು ಎಲ್ಲರೂ ಒಟ್ಟಿಗೆ ವಾಸ ಮಾಡುತ್ತಿದ್ದಾಗ ಒಟ್ಟು ಕುಟುಂಬದ ಸದಸ್ಯರು ಗಳಿಸಿದ ಆಸ್ತಿಯಲ್ಲಿಯೂ ಕೂಡ ಹೆಣ್ಣುಮಕ್ಕಳಿಗೆ ಸಮಾನವಾದ ಅಧಿಕಾರ ಇರುತ್ತದೆ.
● ಕೂಡ ಕುಟುಂಬದ ಯಾವುದೋ ಒಬ್ಬ ಸದಸ್ಯ ತನ್ನ ಸ್ವಂತ ದುಡಿಮೆಯಿಂದ ಆಸ್ತಿ ಒಂದನ್ನು ಖರೀದಿಸಿ ಅದರ ಅನುಭೋಗವನ್ನು ಕೂಡು ಕುಟುಂಬಕ್ಕೆ ಬಿಟ್ಟುಕೊಟ್ಟಿದ್ದರೆ ಕೂಡು ಕುಟುಂಬದ ಎಲ್ಲರೂ ಎಷ್ಟು ಲಾಭ ಪಡೆಯುತ್ತಿದ್ದಾರೋ ಆ ಕುಟುಂಬದ ಹೆಣ್ಣು ಮಕ್ಕಳಿಗೂ ಕೂಡ ಅದರಲ್ಲಿ ಅಷ್ಟೇ ಹಕ್ಕು ಇರುತ್ತದೆ.
● ಒಟ್ಟು ಕುಟುಂಬದ ಆಸ್ತಿಯ ಬಂಡವಾಳದಿಂದ ಖರೀದಿಸಿದ ಆಸ್ತಿಯ ಮೇಲೂ ಕೂಡ ಹೆಣ್ಣು ಮಕ್ಕಳಿಗೆ ಅಷ್ಟೇ ಅಧಿಕಾರ ಇರುತ್ತದೆ.
● ಪಿತ್ರಾರ್ಜಿತ ಆಸ್ತಿಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಿ ಆ ಹಣದಿಂದ ಬೇರೆ ಆಸ್ತಿ ಖರೀದಿ ಮಾಡಿದ್ದರೆ ಖರೀದಿ ಮಾಡಿದ ಆಸ್ತಿಯ ಮೇಲೂ ಕೂಡ ಹೆಣ್ಣು ಮಕ್ಕಳಿಗೆ ಹಕ್ಕು ಇರುತ್ತದೆ.
● 2005ರಲ್ಲಿ ಕಾನೂನು ತಿದ್ದುಪಡಿಯಾದ ಸಮಯದಲ್ಲಿ ವಿಭಾಗ ಆಗದೆ ಉಳಿದ ಆಸ್ತಿಯ ಮೇಲೂ ಕೂಡ ಹೆಣ್ಣು ಮಕ್ಕಳಿಗೆ ಹಕ್ಕು ಇರುತ್ತದೆ.
ಈ ಸುದ್ದಿ ನೋಡಿ:- ಅಂಚೆ ಕಚೇರಿಯ ಹೊಸ ಬಂಪರ್ ಯೋಜನೆ.! ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು 35 ಲಕ್ಷ ಪಡೆಯಬಹುದು.!
● 2005ರ ಕಾನೂನು ತಿದ್ದುಪಡಿ ಆದಮೇಲೆ ಕುಟುಂಬದ ಗಂಡು ಮಕ್ಕಳು ಹೆಣ್ಣು ಮಕ್ಕಳಿಗೆ ತಿಳಿಸದಂತೆ ಆ ಆಸ್ತಿಯನ್ನು ವಿಭಾಗ ಮಾಡಿಕೊಂಡಿದ್ದರೆ, ಹೆಣ್ಣು ಮಕ್ಕಳಿಂದ ಹಕ್ಕು ಬಿಡುಗಡೆ ಪತ್ರ ಪಡೆದಿಲ್ಲ, ಯಾವುದೇ ರೀತಿ ಸಹಿ ಕೂಡ ಪಡೆದಿಲ್ಲ ಎಂದರೆ ಆಗಲು ಕೂಡ ಹೆಣ್ಣು ಮಕ್ಕಳು ಆ ಆಸ್ತಿಯ ಮೇಲೆ ಹಕ್ಕು ಹೊಂದಿರುತ್ತಾರೆ.
ಯಾವ ಆಸ್ತಿಗಳ ಮೇಲೆ ಹೆಣ್ಣು ಮಕ್ಕಳಿಗೆ ಅಧಿಕಾರ ಇರುವುದಿಲ್ಲ:-
● ತಾಯಿಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಇರುವುದಿಲ್ಲ. ತಾಯಿಗೆ ಅವರ ತವರು ಮನೆಯಿಂದ ಬಂದ ಆಸ್ತಿಗೆ ತಾಯಿಯೇ ಯಜಮಾನಿ ಆಗಿರುತ್ತಾರೆ, ಆ ಆಸ್ತಿಯನ್ನು ತಾಯಿಯು ಯಾರಿಗೆ ಬೇಕಾದರೂ ಕೊಡಬಹುದು. ಅದರಲ್ಲಿ ಹೆಣ್ಣು ಮಕ್ಕಳು ತಮಗೂ ಪಾಲಿದೆ ಎಂದು ಕೇಳಲು ಸಾಧ್ಯವಿಲ್ಲ.
● ತಂದೆಗೆ ಆ ಆಸ್ತಿಯು, ಅವರ ತಾಯಿಯಿಂದ ಅಂದರೆ ನಿಮ್ಮ ಅಜ್ಜಿಯಿಂದ ಬಂದಿದ್ದರೆ ಅ ಆಸ್ತಿಯಲ್ಲಿ ಕೂಡ ಹೆಣ್ಣು ಮಕ್ಕಳು ಪಾಲು ಬೇಕು ಎಂದು ಕೇಳಲು ಸಾಧ್ಯವಿಲ್ಲ.
● ತಂದೆಗೆ ವೀಲ್ ಮೂಲಕ ಅಥವಾ ದಾನದ ಮೂಲಕ ಯಾವುದಾದರು ಆಸ್ತಿ ಬಂದಿದ್ದರೆ ಅದರಲ್ಲಿ ಹೆಣ್ಣು ಮಕ್ಕಳು ಪಾಲು ಕೇಳಲು ಬರುವುದಿಲ್ಲ.
ಈ ಸುದ್ದಿ ನೋಡಿ:- ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ಶುರುವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!
● ತಂದೆಗೆ ಸರ್ಕಾರದಿಂದ ಮಂಜೂರಾದ ಆಸ್ತಿಗಳಲ್ಲಿ ತಂದೆ ಬದುಕಿರುವಾಗಲೇ ಹೆಣ್ಣುಮಕ್ಕಳಿಗೆ ಅದರಲ್ಲಿ ಪಾಲು ಕೇಳಲು ಅಧಿಕಾರ ಇರುವುದಿಲ್ಲ.
● ತಂದೆಯು ತನ್ನ ಸ್ವಂತ ದುಡಿಮೆಯಿಂದ ಸ್ವಯಾರ್ಜಿತವಾಗಿ ಸಂಪಾದನೆ ಮಾಡಿದಂತಹ ಆಸ್ತಿಗಳಲ್ಲಿ ತಂದೆಯ ಜೀವಿತಾವಧಿಯಲ್ಲಿ ಮಗಳು ಪಾಲು ಕೇಳಲು ಸಾಧ್ಯವಿಲ್ಲ. ಆದರೆ ತಂದೆಯ ಮರಣದ ನಂತರ ಅದು ಯಾರಿಗೆ ಸೇರಬೇಕು ಎಂದು ವಿಲ್ ಮಾಡದೆ ಹೋಗಿದ್ದಲ್ಲಿ ಅಥವಾ ಯಾರಿಗೂ ತಮ್ಮ ಆಸ್ತಿಯ ಹಕ್ಕನ್ನು ವರ್ಗಾವಣೆ ಮಾಡದೆ ಹೋಗಿದ್ದಲ್ಲಿ, ತಂದೆಯ ಎಲ್ಲ ಮಕ್ಕಳು ಅದರಲ್ಲಿ ಸಮಾನ ಹಕ್ಕುದಾರರಾಗಿರುತ್ತಾರೆ.
● 2005ಕ್ಕೂ ಮುಂಚೆಯೇ ಆಸ್ತಿ ವಿಭಾಗ ಆಗಿದ್ದರೆ ತಂದೆ ಹಾಗೂ ಗಂಡು ಮಕ್ಕಳು ಅದರ ಪಾಲುಗಳನ್ನು ಪಡೆದುಕೊಂಡಿದ್ದರೆ ಆ ಆಸ್ತಿಯ ಮೇಲೆ ಹೆಣ್ಣು ಮಕ್ಕಳು ಹಕ್ಕು ಕೇಳಲು ಬರುವುದಿಲ್ಲ.
● ಕೂಡು ಕುಟುಂಬದ ಆಸ್ತಿ ವಿಭಜನೆ ಆಗುವ ಸಮಯದಲ್ಲಿ ಆಸ್ತಿಯ ಬದಲು ಬೇರೆ ಯಾವುದಾದರೂ ಉಡುಗೊರೆ ಪಡೆದು ಆಸ್ತಿ ಮೇಲಿನ ಹಕ್ಕನ್ನು ಹಕ್ಕು ಬಿಡುಗಡೆ ಪತ್ರದ ಮೂಲಕ ಬಿಟ್ಟುಕೊಟ್ಟಿದರೆ ಆಗಲು ಹೆಣ್ಣು ಮಕ್ಕಳು ಮತ್ತೆ ಬಂದು ಪಾಲು ಕೇಳಲು ಸಾಧ್ಯವಿಲ್ಲ.