ಪ್ರೀತಿಯ ಹಾದಿಯು ಹೂವಿನ ಹಾಸಿಗೆಯಲ್ಲ, ಆದರೆ ಅದನ್ನು ದಾಟಿ ಹೋಗದ ಮನುಷ್ಯನಿಲ್ಲ. ಸಾಮಾನ್ಯನಿಂದ ಹಿಡಿದು ಸೆಲೆಬ್ರಿಗೂ ಕೂಡ ಪ್ರತಿಯೊಕಬ್ಬನ ಜೀವನದಲ್ಲೂ ಪ್ರೀತಿ, ಪ್ರೇಮ, ಪ್ರಣಯ, ಬ್ರೇ’ಕ’ಪ್ ಮದುವೆ ಇತ್ಯಾದಿಗಳು ಸರ್ವೇಸಾಮಾನ್ಯ. ಆದರೆ ಮೊದಲ ಪ್ರೀತಿ ಅದೇನೋ ವಿಶೇಷ, ಮನಸನ್ನು ಕಾಡಿದ ಆ ಪ್ರೀತಿಯನ್ನು ಉಳಿಸಿಕೊಳ್ಳಲಾಗದಿದ್ದರೂ ಬದುಕಿನ ಕೊನೆವರೆಗೂ ನೆನೆಸಿಕೊಳ್ಳುತ್ತಾರೆ.
ಈಗ ತಮ್ಮ ಮೊದಲನೇ ಪ್ರೀತಿಯ ಬಗ್ಗೆ ಸ್ಯಾಂಡಲ್ ವುಡ್ ನಟ ರಾಜ್ ಬಿ ಶೆಟ್ಟಿ (Actor Raj B Shetty) ಮಾತನಾಡಿದ್ದಾರೆ. ತಮ್ಮದೇ ಆದ ವಿಶೇಷ ಅಭಿನಯ ಮತ್ತು ನಿರ್ದೇಶನದಿಂದ ಸೌತ್ ದುನಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ರಾಜ್ ಬಿ. ಶೆಟ್ಟಿಯವರ ಟೋಬಿ ಸಿನಿಮಾ (Toby Movie) ರಿಲೀಸ್ ಗೆ ರೆಡಿಯಾಗಿದೆ. ಇದರ ಪ್ರಮೋಷನ್ ಗಾಗಿ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದಕ್ಕೆ ಬಂದಿದ್ದ ರಾಜ್ ಶೆಟ್ಟರು ವೇದಿಕೆಯಲ್ಲಿ ಪ್ರೀತಿ ಬಗ್ಗೆ ಕೂಡ ಮಾತನಾಡಿದ್ದಾರೆ.
ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!
ರಾಜ್ ಶೆಟ್ಟಿ ಅವರಿಗೆ ಕಾರ್ಯಕ್ರಮದಲ್ಲಿ ಪ್ರೀತಿಯ (Love relationship) ಬಗ್ಗೆ ಪ್ರಶ್ನೆ ಎದುರಾಗಿದೆ. ಆಗ ಮಾತನಾಡಿದ ರಾಜ್ ಬಿ ಶೆಟ್ಟಿಯವರು ನಾನು ಪದವಿಗೆ ಹೋಗುತ್ತಿದ್ದಾಗ ಮೊದಲ ಬಾರಿಗೆ ಪ್ರೀತಿಯಾಯಿತು, ನಾನು ಅಂದೇ ಅವಳಿಗೆ ಹೇಳಿದ್ದೆ ಒಂದು ವೇಳೆ ನೀನು ಹೋಗುವುದಾದರೆ ನಾನು ಕಾರಣ ಕೇಳುವುದಿಲ್ಲ ಎಂದು ಆದರೆ ಅದ್ಯಾವ ಘಳಿಗೆಯಲ್ಲಿ ಅದನ್ನು ಹೇಳಿದೆನೋ ಅದು ಅದೇ ರೀತಿ ಆಯ್ತು.
ಬಹಳ ದಿನಗಳವರೆಗೆ ನನಗೆ ಆ ಪ್ರೀತಿ ಕಾಡುತ್ತಿತ್ತು ಆದರೆ ಅವಳು ಹೋಗಲಿಲ್ಲ ಎಂದರೆ ನಾನು ಒಳ್ಳೆಯ ಮನುಷ್ಯನೇ ಆಗುತ್ತಿರಲಿಲ್ಲ. ಈಗ ನಾನು ಒಳ್ಳೆಯವನಾಗಿದ್ದೇನೆ ಎಂದು ಅರ್ಥವಲ್ಲ, ಆದರೆ ನಾನು ಇಷ್ಟು ಕೂಡ ಇರುತ್ತಿರಲಿಲ್ಲ ನಾನು ಹೀಗಿರುವುದಕ್ಕೆ ಅವಳೇ ಕಾರಣ. ಅವಳು ಬಿಟ್ಟು ಹೋದ ಮೇಲೆ ನನಗೆ ಅನಿಸಿತು ನಾನು ಅವಳಿಗೆ ಪ್ರೀತಿಯನ್ನೇ ಕೊಡಲಿಲ್ಲ ಎಂದು.
ಆಕೆಯ ಬಗ್ಗೆ ಯಾವುದೇ ಬೇಸರ ಇಲ್ಲ ಅವಳ ನಿರ್ಧಾರವನ್ನು ನಾನು ಗೌರವಿಸುತ್ತೇನೆ ನಾನು ಯೋಗ್ಯನಲ್ಲ ಎಂದು ಅವಳು ಅರ್ಥ ಮಾಡಿಸಿದಳು. ಅದರ ಬಳಿಕವೂ ಒಂದು ಪ್ರೀತಿ ಆಯಿತು, ಆದರೆ ಅದು ಕೂಡ ಹೆಚ್ಚಿನ ದಿನ ಉಳಿಯಲಿಲ್ಲ. ಈಗಲೂ ಸಹ ಒಂದು ರಿಲೇಷನ್ಶಿಪ್ ನಲ್ಲಿ ಇದ್ದೇನೆ ಈಗಲೂ ನಾವೀಗ ಇಬ್ಬರೂ ಸೇರಿ ಜೀವನವನ್ನು ಹುಡುಕುತ್ತಿದ್ದೇವೆ ಅವಳಿಗೂ ಸಾಕಷ್ಟು ಹುಡುಕಾಟಗಳಿವೆ ನನಗೂ ಹುಡುಕಾಟಗಳಿವೆ.
ನಂದೇನೂ ರೂಲ್ಸ್ ಇಲ್ಲ, ಅವಳದ್ದೂ ಏನೂ ರೂಲ್ಸ್ ಇಲ್ಲ. ಇಬ್ಬರು ಹ್ಯಾಪಿಯಾಗಿರಬೇಕು ಅಷ್ಟೇ. ನೀನು ಬದುಕು ಕಲಿ, ನಾನೂ ಕಲಿಯುತ್ತೇನೆ. ನೋಡೋಣ ಎಂದಿದ್ದಾರೆ. ಒಟ್ನಲ್ಲಿ ನಡೆಯುತ್ತಿದೆ ಎಂದಿದ್ದಾರೆ ರಾಜ್ ಶೆಟ್ಟರು. ನನ್ನ ಪ್ರಕಾರ ಲವ್ ಮ್ಯಾರೇಜ್ ಬೆಟರ್ ಎನಿಸುತ್ತದೆ. ಪ್ರೀತಿ ಇದೆ ಎನ್ನುವ ಕಾರಣಕ್ಕೆ ಮದುವೆ ಆಗಬೇಕು ಹೊರತು ಮದುವೆ ಆಗಿದ್ದೇವೆ ಎನ್ನುವ ಕಾರಣಕ್ಕೆ ಪ್ರೀತಿ ಮಾಡಬಾರದು ಅಥವಾ ಒಟ್ಟಿಗೆ ಇರಬಾರದು.
ಒಂದು ವೇಳೆ ವಿ’ಚ್ಚೇ’ದ’ನಾದರೂ ಕೂಡ ಅದರ ಬಗ್ಗೆ ನನಗೆ ದೊಡ್ಡದಾಗಿ ಏನು ಅನಿಸುವುದಿಲ್ಲ ಯಾಕೆಂದರೆ ಇಬ್ಬರೂ ಒಟ್ಟಿಗೆ ಪ್ರೀತಿಯಿಂದ ಬದುಕಲು ಆಗುತ್ತಿಲ್ಲ ಎಂದರೆ ಬೇರೆ ಹೋಗುವುದೇ ಒಳ್ಳೆಯದು ಎನಿಸುತ್ತದೆ ಎಂದು ತಾವು ಕಂಡುಕೊಂಡ ಪ್ರೀತಿಯ ಹಾಗೂ ಬದುಕಿನ ಅರ್ಥವನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ. ರಾಜ್ ಬಿ ಶೆಟ್ಟಿ ಯವರ ಟೋಬಿ ಚಿತ್ರಕ್ಕೆ ಶುಭವಾಗಲಿ. ಅವರ ನಿರ್ದೇಶನ ಮತ್ತು ನಟನೆಯ ಮೂಲಕ ಇನ್ನಷ್ಟು ಒಳ್ಳೆ ಸಿನಿಮಾಗಳು ಸಿಗಲಿ ಎಂದು ನಾವು ಶುಭ ಹಾರೈಸೋಣ.