ಶ್ರೀಮಂತರಾಗಲು ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರ ಪ್ರಯತ್ನದ ಹಿಂದಿನ ಉದ್ದೇಶವು ಕೂಡ ಹಣ ಮಾಡುವುದೇ ಆಗಿದೆ. ಕಲಿಯುಗವು ನಡೆಯುತ್ತಿರುವುದೇ ಹಣದಿಂದ ಎಂದರೂ ಕೂಡ ಆ ಮಾತು ಸುಳ್ಳಲ್ಲ. ಯಾಕೆಂದರೆ ಒಮ್ಮೆ ನಮ್ಮ ಸುತ್ತ ಇರುವ ಪ್ರಪಂಚವನ್ನು ನಾವು ನೋಡಿದರೆ ಎಲ್ಲರ ಕಾರ್ಯ ಚಟುವಟಿಕೆಗಳ ಹಿಂದೆ ಇರುವ ಉದ್ದೇಶ ಎಲ್ಲವೂ ಎಲ್ಲರೂ ಓಡುತ್ತಿರುವುದು ಹಣದ ಹಿಂದೆಯೇ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.
ಹಣ ಮಾಡುವುದಕ್ಕೆ ಖಂಡಿತವಾಗಿಯೂ ಕ’ಷ್ಟ ಪಡಲೇಬೇಕು, ಹೆಚ್ಚು ಹಣವನ್ನು ಆಕರ್ಷಿಸಬಲ್ಲ ಹಾಗಾಗಿ ಹಣ ಮಾಡುವ ಆಸೆಯನ್ನು ಪ್ರತಿಯೊಬ್ಬರೂ ಹೊಂದಿರಲೇಬೇಕು. ಇಲ್ಲವಾದಲ್ಲಿ ಬದುಕುವ ಆಸಕ್ತಿಯೇ ಇರುವುದಿಲ್ಲ. ಹಣ ಮಾಡಲು ಚೆನ್ನಾಗಿ ಓದಬೇಕು, ಒಂದಷ್ಟು ಐಡಿಯಾ ಗಳನ್ನು ಬಳಸಿ ಬಿಜಿನೆಸ್ ಮಾಡಬೇಕು ಅಥವಾ ಈಗಾಗಲೇ ಹಣ ಇದ್ದರೆ ಅದನ್ನು ಮತ್ತೊಂದೆಡೆ ಹೂಡಿಕೆ ಮಾಡಿ ಅದರಿಂದ ಹಣ ಉತ್ಪತ್ತಿ ಆಗುವ ರೀತಿ ಮಾಡಬೇಕು.
ಆದರೆ ಇದು ಯಾವುದು ಮಾಡದೆ ಅನಿರೀಕ್ಷಿತವಾಗಿ ಯಾವುದಾದರೂ ಒಂದು ಮೂಲದಿಂದ ಅಪಾರವಾದ ಹಣ ನಿಮಗೆ ಒಲಿಯುತ್ತದೆ ಎಂದರೆ ನೀವು ನಂಬುತ್ತೀರಾ ಇದು ಬಹಳ ಆಶ್ಚರ್ಯ ಆದರೂ ಕೂಡ ಈ ಮಾತು ಸತ್ಯ. ಆದರೆ ಇದನ್ನು ನೀವು ನೂರಕ್ಕೆ ನೂರರಷ್ಟು ನಂಬಬೇಕು ಅಷ್ಟೇ, ಸಮ್ಮೋಹನ ಶಾಸ್ತ್ರದಿಂದಲು ಕೂಡ ಹಣ ಗಳಿಸಬಹುದು ಎನ್ನುವುದನ್ನು ಖ್ಯಾತ ಸಮ್ಮೋಹನ ಶಾಸ್ತ್ರಜ್ಞರೇ ಹೇಳಿದ್ದಾರೆ.
ಇದನ್ನು ಒಂದು ರೀತಿಯಲ್ಲಿ ಮನಸ್ಸಿನ ಶಾಸ್ತ್ರ ಎಂದೂ ಹೇಳಬಹುದು. ಎದ್ಭಾವಂ ತದ್ಭವತಿ ಎನ್ನುವ ಮಾತೇ ಇದೆ ಇದರರ್ಥ ಮನಸಿದ್ದಂತೆ ಬದುಕು. ಮೊದಲಿಗೆ ಭಾವನೆ ಬದಲಾಗಬೇಕು ಭಾವನೆ ಬದಲಾದ ಬಳಿಕ ಅದೇ ರೀತಿಯಾಗಿ ಬದುಕು ಕೂಡ ಬದಲಾಗುತ್ತದೆ. ನಮ್ಮ ಮನಸ್ಸು ಶುದ್ದವಾಗಿ ನಂಬಿಕೆಯಿಂದ ಏನನ್ನು ನಂಬುತ್ತದೆ ಅದು ಏನನ್ನು ಒಪ್ಪುತದೆಯೋ ಅದು ಖಂಡಿತ ನಡೆಯುತ್ತದೆ.
ನಮ್ಮ ಹಿರಿಯರು ಯಾವಾಗಲೂ ಒಳ್ಳೆಯದನ್ನೀ ಮಾತನಾಡಬೇಕು ಅಶ್ವಿನಿ ದೇವತೆಗಳು ಅಸ್ತು ಎನ್ನುತ್ತಿರುತ್ತಾರೆ. ಅವರು ಅಸ್ತು ಎಂದಾಗ ಹೇಳಿದ್ದು ಆಗುತ್ತದೆ ಎಂದು ಹೇಳಿರುವುದನ್ನು ನಾವೆಲ್ಲ ಕೇಳಿರುತ್ತೇವೆ. ಹಾಗಾಗಿ ಯಾವಾಗಳು ಒಳ್ಳೆಯದನ್ನು ನಡೆಯುತ್ತಿದ್ದರೆ ಅದು ಖಂಡಿತ ನಡೆಯುತ್ತದೆ ಎನ್ನುತ್ತದೆ ಸಮ್ಮೋಹಿನಿ ಶಾಸ್ತ್ರ. ಇದನ್ನು ಯುನಿವರ್ಸಿಗೆ ಕಳಿಸುವ ಮೆಸೇಜ್ ಎಂದು ಕೂಡ ಎನ್ನುತ್ತಾರೆ. ಹಾಗಾಗಿ ಪದೇ ಪದೇ ನಾನು ಶ್ರೀಮಂತನಾಗುತ್ತೇನೆ, ನನಗೆ ಹಣ ಬರುತ್ತದೆ, ನನ್ನ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಹೇಳಿಕೊಳ್ಳುತ್ತಲೇ ಇರಬೇಕು.
ಇದನ್ನು ಯಾವ ರೀತಿ ಹೇಳಬೇಕು ಎಂದರೆ 21 ದಿನಗಳವರೆಗೆ ಪ್ರತಿದಿನವೂ ಕೂಡ ಈ ರೀತಿ ಪಾಸಿಟಿವ್ ಆಗಿ ನನಗೆ ಹಣ ಬರುತ್ತದೆ, ನನಗೆ ಉದ್ಯೋಗ ಸಿಗುತ್ತದೆ, ನನ್ನ ಸಮಸ್ಯೆ ಪರಿಹಾರ ಆಗುತ್ತದೆ, ನಾನು ಶ್ರೀಮಂತ ಆಗುತ್ತೇನೆ ಎಂದು ಬಹಳ ನಂಬಿಕೆಯಿಂದ ಮನಸ್ಸಿನಲ್ಲಿಯಾದರೂ ಸರಿ, ಗಟ್ಟಿಯಾಗಿಯಾದರೂ ಸರಿ ಹೇಳಿಕೊಳ್ಳುತ್ತಲೇ ಬಂದರೆ ಖಂಡಿತವಾಗಿಯೂ ಅದು ನಡೆಯುತ್ತದೆ. ಯಾವುದಾದರೂ ಒಂದು ಅನ್ ಸೀನ್ ಮೂಲದಿಂದಾಗಿ ನಿಮಗೆ ಹಣದ ಅನುಕೂಲತೆ ಸಿಗುತ್ತದೆ.
ಲಾಟರಿ ಹೊಡೆಯಬಹುದು ಅಥವಾ ಯಾರಾದರೂ ನಿಮಗೆ ಹಣದ ಸಹಾಯ ಮಾಡಬಹುದು ಅಥವಾ ನೀವೇ ಉದ್ಯೋಗದಲ್ಲಿ ಬಡ್ತಿ ಹೊಂದಬಹುದು ಅಥವಾ ನಿಮ್ಮ ಅದೃಷ್ಟ ಕೈ ಗೂಡಿ ನೀವು ಕೈ ಹಾಕಿದ ಕೆಲಸ ಅತಿ ಹೆಚ್ಚು ಲಾಭ ಕೊಡಬಹುದು. ಹಾಗಾಗಿ ಮೊದಲು ನಿಮ್ಮ ಮನಸ್ಸನ್ನು ಅದಕ್ಕೆ ಸಿದ್ಧಗೊಳಿಸಿಕೊಂಡು ಅದಕ್ಕೆ ಆ ರೀತಿ ಆಟಿಟ್ಯೂಡ್ ನಿಂದ ಬದುಕಲು ಆರಂಭಿಸಿ.