ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನು ಈ ರೀತಿ ದರ್ಶನ ಮಾಡಿದ್ರೆ ನಿಮ್ಮ ಎಲ್ಲಾ ಕೋರಿಕೆಗಳು ತಕ್ಷಣ ನೇರವೆರುತ್ತವೆ. ಆದರೆ ತಿರುಪತಿಯಲ್ಲಿ ಈ 5 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.!

ಭಾರತದ ಅತಿ ಶ್ರೀಮಂತ ದೇವರು ಎಂದು ಕರೆಸಿಕೊಂಡಿರುವ ತಿರುಪತಿ ತಿಮ್ಮಪ್ಪನ ಪುಣ್ಯಕ್ಷೇತ್ರವಾದ ತಿರುಮಲೆಯ ತೀರ್ಥ ಯಾತ್ರೆಯನ್ನು ಅನೇಕರು ಕೈಗೊಳ್ಳುತ್ತಾರೆ. ಆದರೆ ಭಗವಂತನ ಅನುಗ್ರಹ ಇಲ್ಲದೆ ಯಾರು ಕೂಡ ಆ ಬೆಟ್ಟವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಪ್ರತಿಯೊಂದು ದೇವಾಲಯಕ್ಕೂ ಕೂಡ ಅದರದ್ದೇ ಆದ ಪದ್ಧತಿ ನಿಯಮಗಳು ಇವೆ.

ಆ ಪ್ರಕಾರವಾಗಿ ನಡೆದುಕೊಂಡು ದೇವರುಗಳ ದರ್ಶನಕ್ಕೆ ಹೋದಾಗ ಅದರ ಪೂರ್ತಿ ಫಲ ಸಿಗುತ್ತದೆ. ಹಾಗೆಯೇ ಕೆಲವು ಸ್ಥಳಗಳಲ್ಲಿ ಸ್ಥಳ ವಿಶೇಷಗಳು ಇರುತ್ತವೆ. ಆ ಸ್ಥಳಕ್ಕೆ ತಕ್ಕ ನಿಯಮಗಳ ಪ್ರಕಾರ ನಡೆದುಕೊಂಡಾಗ ಆ ಕ್ಷೇತ್ರಾಧಿಪತಿಯ ಕೃಪಕಟಾಕ್ಷಕ್ಕೆ ಇನ್ನಷ್ಟು ಹತ್ತಿರವಾಗಬಹುದು ಹಾಗಾಗಿ ತಿರುಪತಿ ತಿಮ್ಮಪ್ಪನ ಕ್ಷೇತ್ರಕ್ಕೆ ಹೋಗುವವರು ಪಾಲಿಸಬೇಕಾದ ಕೆಲವು ವಿಶೇಷ ಸೂಚನೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ, ಯಾರೆಲ್ಲಾ ಅರ್ಹರು ಏನೆಲ್ಲಾ ದಾಖಲೆಗಳನ್ನು ಹೊಂದಿರಬೇಕು ಅರ್ಜಿ ಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೋಗಲು ಬಸ್, ಟ್ರೈನ್ ಅಥವಾ ಸ್ವಂತ ವಾಹನ ಯಾವುದರಲ್ಲಿ ಹೋದರು ಮೊದಲಿಗೆ ಮನೆಯಲ್ಲಿ ವೆಂಕಟೇಶ್ವರನಿಗೆ ಪ್ರಾರ್ಥನೆ ಮಾಡಿ ದೀಪ ಹಚ್ಚಿ ಯಾತ್ರೆ ಕೈಗೊಳ್ಳಬೇಕು. ತಿರುಪತಿ ತಿಮ್ಮಪ್ಪನ ಬೆಟ್ಟ ತಲುಪುವ ಮುನ್ನ ಸಮೀಪದಲ್ಲಿಯೇ ಇರುವ ಕಾಣಿಪಾಕದ ಗಣೇಶನ ದರ್ಶನ ಮಾಡಬೇಕು. ಯಾಕೆಂದರೆ ಹಿಂದೂ ಧರ್ಮದ ಪ್ರಕಾರ ನಮ್ಮಲ್ಲಿ ಎಷ್ಟೇ ದೇವತೆಗಳಿದ್ದರೂ ಮೊದಲ ದರ್ಶನ, ಮೊದಲ ಪೂಜೆ ಗಣಪತಿಗೆ.

ಈ ರೀತಿ ಗಣಪತಿ ದರ್ಶನ ಮಾಡಿ ಪ್ರಯಾಣ ಕೈಗೊಂಡರೆ ಮುಂದಿನ ಎಲ್ಲಾ ದೇವತೆಗಳ ದರ್ಶನವು ಸಲ್ಲಿಸಾಗಿ ಆಗುತ್ತದೆ ಇದಾದ ನಂತರ ನೇರವಾಗಿ ತಿರುಚಾನೂರಿನ ಪದ್ಮಾವತಿ ಅಮ್ಮನವರ ದೇವಸ್ಥಾನಕ್ಕೆ ಬಂದು ಎಲ್ಲಾ ಕೋರಿಕೆಗಳನ್ನು ಹೇಳಿಕೊಳ್ಳಬೇಕು. ಸತಿಪತಿಗಳಲ್ಲಿ ಸತಿಗೆ ಮೊದಲ ಸ್ಥಾನ ಇರುವುದರಿಂದ ಅಮ್ಮನವರ ದರ್ಶನ ಆದ ನಂತರ ವೆಂಕಟೇಶ್ವರ ದರ್ಶನ ಮಾಡಬೇಕು.

ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ, ರೇಷನ್ ಕಾರ್ಡ್ ತಿದ್ದುಪಡಿಗಾಗಿ ಕಾಯುತ್ತಿರುವವರಿಗೆ ಮತ್ತೊಂದು ಅವಕಾಶ.!

ನಂತರ ಕಪಿಲ ತೀರ್ಥ ಸಿಗುತ್ತದೆ. ತೀರ್ಥಕ್ಷೇತ್ರದಲ್ಲಿ ಸ್ನಾನ ಮಾಡುವುದರಿಂದ ಪಾಪ ಕಡಿಮೆ ಆಗುವುದರಿಂದ ಅಲ್ಲಿ ಸ್ನಾನ ಮಾಡಿ ಕಾಲ್ನಾಡಿಗೆಯಲ್ಲಿ ಬೆಟ್ಟ ಹತ್ತುವುದಕ್ಕೆ ಆರಂಭಿಸಬಹುದು. ಮತ್ತು ಮಾರ್ಗ ಮಧ್ಯೆ ಮುಡಿ ಕೊಡುವ ಮನಸಿದ್ದರೆ ಕೊಡಬಹುದು. ಕಾಡಿನ ಮಧ್ಯೆ ಅನೇಕ ಪ್ರಾಣಿಗಳು ಎದುರಾಗುತ್ತವೆ.

ಯಾವ ಪ್ರಾಣಿಗೂ ಕೂಡ ತೊಂದರೆ ಕೊಡದೆ ನಮ್ಮಷ್ಟಕ್ಕೆ ನಾವು ಪ್ರಯಾಣ ಬೆಳೆಸಿ ತಿರುಮಲದಲ್ಲಿರುವ ಪುಷ್ಕರಣಿಯಲ್ಲಿ ಮತ್ತೊಮ್ಮೆ ಮಿಂದೇಳಬಹುದು. ನಂತರ ತಿಮ್ಮಪ್ಪನ ದರ್ಶನಕ್ಕೂ ಮುನ್ನ ವರಹಾ ಸ್ವಾಮಿಯ ದರ್ಶನ ಮಾಡಬೇಕು ಯಾಕೆಂದರೆ ನಾರಾಯಣನು ವರಹಾ ಸ್ವಾಮಿಯಿಂದ ತಿರುಮಲ ಕ್ಷೇತ್ರವನ್ನು ಪಡೆದಾಗ ತನ್ನ ಭಕ್ತರು ಮೊದಲಿಗೆ ನಿನ್ನ ದರ್ಶನ ಪಡೆದು ಬಂದರೆ ಮಾತ್ರ ಅವರ ಕೋರಿಕೆಯನ್ನು ನೆರವೇರಿಸುತ್ತೇನೆ ಎಂದು ಪ್ರಮಾಣ ಮಾಡಿರುತ್ತಾರೆ.

FDA, SDA ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ 58,250/- ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ಹಾಗಾಗಿ ವರಹಾ ಸ್ವಾಮಿಯ ದರ್ಶನ ಪಡೆದರೆ ಮಾತ್ರ ತಿರುಪತಿ ತಿಮ್ಮಪ್ಪನ ಕೃಪಾಕಟಾಕ್ಷ ನಿಮಗೆ ಸಿಗುವುದು ನಂತರ ತಿಮ್ಮಪ್ಪನ ದರ್ಶನ ಮಾಡಿ ನಿಮಗೆ ಎಷ್ಟು ಬಾರಿ ಸಾಧ್ಯ ಅಷ್ಟು ಬಾರಿ ಗೋವಿಂದ ನಾಮಸ್ಮರಣೆ ಮಾಡಿ ನಿಮ್ಮ ಕೋರಿಕೆಗಳನ್ನೆಲ್ಲ ದೇವರಿಗೆ ತಿಳಿಸಿ. ದರ್ಶನವಾದ ಮೇಲೆ ಹುಂಡಿ ಇರುತ್ತದೆ ನಿಮ್ಮ ಕಾಣಿಕೆಯನ್ನು ಅರ್ಪಿಸಿ. ಸ್ವಲ್ಪ ಸಮಯ ಅಲ್ಲೇ ಕಳೆದು ಲಡ್ಡು ಪ್ರಸಾದ ಸಿಗುತ್ತದೆ ತೆಗೆದುಕೊಂಡು ಅನ್ನಪ್ರಸಾದ ವ್ಯವಸ್ಥೆ ಅದನ್ನು ಕೂಡ ಸೇವಿಸಿ ಬಳಿಕ ತಪ್ಪದೆ ವೆಂಕಟೇಶ್ವರ ಅಣ್ಣನಾದ ಗೋವಿಂದರಾಯಸ್ವಾಮಿಯ ದರ್ಶನವನ್ನು ಮಾಡಬೇಕು.

ಹತ್ತಿರದಲ್ಲಿಯೇ ಕಾಳಹಸ್ತಿ ದೇವಸ್ಥಾನ ಇರುತ್ತದೆ ಅಲ್ಲಿರುವ ವಾಯು ಲಿಂಗ ದರ್ಶನ ಕೂಡ ಶ್ರೇಷ್ಠ. ಇದರ ಜೊತೆಗೆ ಅಲ್ಲೇ ಅಕ್ಕಪಕ್ಕ ಇರುವ ಇನ್ನೆಲ್ಲ ಪುಣ್ಯಕ್ಷೇತ್ರಗಳ ದರ್ಶನ ಕೂಡ ಮಾಡಬಹುದು ಆಗ ನೀವು ಕೈಕೊಂಡ ಯಾತ್ರೆ ಸಂಪೂರ್ಣ ಫಲ ಸಿಗುತ್ತದೆ. ಆದರೆ ಯಾವುದೇ ಕಾರಣಕ್ಕೂ ತಿಮ್ಮಪ್ಪನ ಕ್ಷೇತ್ರಕ್ಕೆ ಈ ತಪ್ಪುಗಳನ್ನು ಮಾಡಬಾರದು.

ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕರು ಹಾಗೂ ಆಡಳಿತ ಸಹಾಯಕರು ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ 22,000/-

● ಕೆಟ್ಟದಾದ ಭಾಷೆಗಳನ್ನು ಬಳಸಿ ಮಾತನಾಡುವುದು
● ಧೂಮಪಾನ, ಮಧ್ಯಪಾನ, ಗುಟ್ಕಾ ತಂಬಾಕು ಇವುಗಳ ಸೇವನೆ ಮಾಡಿ ದರ್ಶನಕ್ಕೆ ಹೋಗುವುದು
● ಚಪ್ಪಲಿ ಹಾಕಿಕೊಂಡು ತಿರುಮಲ ಬೆಟ್ಟದಲ್ಲಿ ಓಡಾಡುವುದು
● ತಿರುಮಲ ಬೆಟ್ಟದಲ್ಲಿ ಶೃಂಗಾರ ಮಾಡುವುದು
● ಹೆಣ್ಣು ಮಕ್ಕಳು ಹೂವು ಮುಡಿಯುವುದು ಕೂಡ ಮಾಡಬಾರದು. ಯಾಕೆಂದರೆ, ತಿರುಮಲ ಬೆಟ್ಟದ ಮೇಲೆ ಇರುವ ಎಲ್ಲಾ ಹೂಗಳು ಕೂಡ ವೆಂಕಟೇಶ್ವರನಿಗೆ ಮೀಸಲಾಗಿರುವುದು ಎನ್ನುವ ಮಾತಿದೆ ಹಾಗಾಗಿ ಆ ಕ್ಷೇತ್ರದಲ್ಲಿ ಮಾತ್ರ ಹೂ ಮುಡಿಯುವಂತಿಲ್ಲ.

Leave a Comment