ನಮ್ಮ ಹಿಂದೂ ಸಂಪ್ರದಾಯದ ಆಚಾರ ವಿಚಾರ ಆಚರಣೆಗಳು ಬಹಳ ವಿಶೇಷ. ನಮ್ಮ ಹಿರಿಯರು ಮಾಡಿಟ್ಟು ಹೋಗಿರುವ ಈ ಅಚ್ಚುಕಟ್ಟಾದ ವ್ಯವಸ್ಥೆ ಹಿಂದೆ ಖಂಡಿತವಾಗಿಯೂ ಒಂದು ಸಕಾರಣ ಇದ್ದೇ ಇರುತ್ತದೆ. ಅದರ ಪ್ರಕರಣ ನಡೆದುಕೊಳ್ಳುವುದರಿಂದ ಜೀವನದಲ್ಲಿ ಬರುವ ಸಮಸ್ಯೆಗಳಿಂದ ತಪ್ಪಿಸಿಕೊಂಡು ನೆಮ್ಮದಿಯಾದ ಜೀವನ ನಡೆಸಬಹುದು.
ತಲೆಗೆ ಸ್ನಾನ ಮಾಡುವ ವಿಚಾರದಲ್ಲಿ ಯಾವ ವಾರದಲ್ಲಿ ಸ್ನಾನ ಮಾಡಿದರೆ ಯಾವ ರೀತಿ ಫಲ ನೀಡುತ್ತದೆ ಎನ್ನುವುದರ ಮೂಲಕವೂ ಕೂಡ ಅವರ ಅದೃಷ್ಟ ಹಾಗೂ ದುರಾದೃಷ್ಟಗಳು ನಿರ್ಧಾರ ಆಗುತ್ತದೆ. ಕೆಲವು ದಿನಗಳಲ್ಲಿ ತಲೆ ಸ್ನಾನ ಮಾಡುವುದು ಪುರುಷನಿಗೆ ನಿಷಿದ್ಧವಾಗಿದ್ದರೆ ಇನ್ನು ಕೆಲವು ದಿನಗಳ ಮಹಿಳೆಯರಿಗೆ ನಿಷಿದ್ಧ ಆಗಿರುತ್ತದೆ ಯಾರು ಯಾವ ದಿನ ತಲೆ ಸ್ನಾನ ಮಾಡಿದರೆ ಏನು ಫಲ ಸಿಗುತ್ತದೆ ಎನ್ನುವುದರ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಮನೆ ಬಾಗಿಲಿಗೆ ಯಾವುದೇ ಕಾರಣಕ್ಕೂ ಈ ರೀತಿ ಮ್ಯಾಟ್ ಗಳನ್ನು ಹಾಕಬಾರದು, ಕ’ಷ್ಟಗಳು ತಪ್ಪೋದಿಲ್ಲ ಸಾಲ ತೀರಲ್ಲ.!
● ಪುರುಷರು ಸೋಮವಾರ ತಲೆ ಸ್ನಾನ ಮಾಡುವುದರಿಂದ ಸೌಂದರ್ಯ ವೃದ್ಧಿ, ಆರ್ಥಿಕ ಪ್ರಗತಿ, ಹಣದ ಹರಿವು ಹೆಚ್ಚುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಣಕಾಸಿನ ಕೊರತೆ ಇರುವುದಿಲ್ಲ ನೆಮ್ಮದಿ ಇರುತ್ತದೆ. ನೀವು ಮಾಡುವ ನೌಕರಿ ಹಾಗೂ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಮಹಿಳೆಯರು ಕೂಡ ಸೋಮವಾರ ತಲೆ ಸ್ನಾನ ಮಾಡಬಹುದು ಇದರಿಂದ ಸೌಂದರ್ಯ ವೃದ್ದಿಯಾಗುತ್ತದೆ. ದಾಂಪತ್ಯ ಅನ್ಯೋನ್ಯತೆ ಹೆಚ್ಚಾಗುತ್ತದೆ.
● ಪುರುಷರು ಮಂಗಳವಾರ ತಲೆ ಸ್ನಾನ ಮಾಡಕೂಡದು. ಮಂಗಳವಾರದಂದು ಪುರುಷರ ತಲೆ ಸ್ನಾನ ಮಾಡಿದರೆ ಕಷ್ಟಗಳು ಹೆಚ್ಚಾಗುತ್ತವೆ. ಹಣಕಾಸಿನ ನಷ್ಟ, ಉದ್ಯೋಗ ನಷ್ಟ, ವ್ಯಾಪಾರದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಮಹಿಳೆಯರಿಗೂ ಕೂಡ ಇದೇ ರೀತಿಯ ಅಶುಭ ಫಲಗಳು ಎದುರಾಗುತ್ತವೆ ಹಾಗಾಗಿ ಮಂಗಳವಾರ ತಲೆ ಸ್ನಾನ ಮಾಡಬಾರದು.
● ಪುರುಷರು ಬುಧವಾರ ತಲೆ ಸ್ನಾನ ಮಾಡುವುದರಿಂದ ಏಳಿಗೆ ಆಗುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರಗಳು ಹೇಳಿವೆ. ದಂಪತಿಗಳಲ್ಲಿ ಹೊಂದಾಣಿಕೆ ಸಕಲ ಕಾರ್ಯಗಳನ್ನು ಕೂಡ ಅಭಿವೃದ್ಧಿ ಇಂತಹ ಅದ್ಭುತ ಫಲಗಳು ಸಿಗುತ್ತವೆ. ಬುಧವಾರದಂದು ಸ್ತ್ರೀಯರು ತಲೆ ಸ್ನಾನ ಮಾಡುವುದರಿಂದ ಅವರಿಗೂ ಹಾಗೂ ಪತಿಗೂ ಲಕ್ಷ್ಮಿ ಪ್ರಾಪ್ತಿಯಾಗುತ್ತದೆ. ಆದರೆ ಒಬ್ಬನೇ ಸಹೋದರ ಇರುವ ಮಹಿಳೆಯರು ಬುಧವಾರ ತಲೆ ಸ್ನಾನ ಮಾಡುವಂತಿಲ್ಲ.
● ಪುರುಷರು ಗುರುವಾರ ತಲೆ ಸ್ನಾನ ಮಾಡಬಾರದು ಎಂದು ಶಾಸ್ತ್ರ ಹೇಳುತ್ತದೆ. ಈ ರೀತಿ ಮಾಡುವುದರಿಂದ ಸಾಲ ಹೆಚ್ಚಾಗುತ್ತದೆ. ಹಣಕಾಸಿನ ಬೆಳವಣಿಗೆ, ವ್ಯವಹಾರ ಬೆಳವಣಿಗೆ ಇಳಿಮುಖವಾಗುತ್ತದೆ. ಗುರುವಾರ ಮಹಿಳೆಯರು ತಲೆ ಸ್ನಾನ ಮಾಡುವುದರಿಂದ ಸಂಪತ್ತು ಕ್ಷೀಣ ಆಗುತ್ತದೆ ಹಾಗಾಗಿ ನಿಷಿದ್ಧ.
● ಶುಕ್ರವಾರದ ಬಗ್ಗೆ ಹೇಳುವುದಾದರೆ, ಶುಕ್ರಗ್ರಹದ ಸ್ವಭಾವವು ಎಲ್ಲಿ ಶುಚಿ ಸ್ವಚ್ಛತೆ ಮಡಿ ಇರುತ್ತದೆ ಅಲ್ಲಿ ನೆಲೆಸುವುದು, ಅಂತಹ ಸ್ಥಳಗಳಲ್ಲಿ ಮಹಾಲಕ್ಷ್ಮಿಯ ಆವಾಸ ಕೂಡ ಇರುತ್ತದೆ. ನೀವು ಕೂಡ ಮಡಿಯಾಗಿ ಸ್ವಚ್ಛವಾಗಿ ಇರುವುದರಿಂದ ನಿಮಗೂ ಶುಕ್ರ ಗ್ರಹದ ಅನುಗ್ರಹ ಸಿಗುತ್ತದೆ. ಹಾಗಾಗಿ ಶುಕ್ರವಾರದಂದು ತಲೆ ಸ್ಥಾನ ಮಾಡಿದರೆ ಶುಭ. ಶುಕ್ರವಾರ ಸ್ನಾನ ಮಾಡಿದರೆ ಪುರುಷರಿಗೆ ಹಣಕಾಸಿನ ಸಮಸ್ಯೆ ನಿವಾರಣೆ ಆಗುತ್ತದೆ, ಧನಕನಕಗಳ ವೃದ್ಧಿಯೂ ಆಗುತ್ತದೆ. ಸ್ತ್ರೀಯರಿಗೂ ಕೂಡ ಇದೇ ರೀತಿಯ ಫಲಗಳು ಸಿಗುತ್ತವೆ.
● ಪುರುಷರು ಶನಿವಾರದಂದು ತಲೆ ಸ್ನಾನ ಮಾಡುವುದರಿಂದ ಶುಭಫಲಗಳನ್ನೇ ಪಡೆಯುತ್ತಾರೆ. ಬಹಳ ದಿನಗಳಿಂದ ಮನಸ್ಸಿನಲ್ಲಿದ್ದ ಕೋರಿಕೆಗಳು ನೆರವಾಗುತ್ತದೆ. ಹಾಗಾಗಿ ಶನಿವಾರದಂದು ಪುರುಷರು ತಲೆ ಸ್ನಾನ ಮಾಡಲು ಅಡ್ಡಿ ಇಲ್ಲ. ಮಹಿಳೆಯರು ಕೂಡ ಶನಿವಾರದಂದು ತಲೆ ಸ್ನಾನ ಮಾಡಬಹುದು.
● ಪುರುಷರು ಭಾನುವಾರ ತಲೆ ಸ್ನಾನ ಮಾಡುವುದರಿಂದ ಇಲ್ಲಸಲ್ಲದ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ ಹಾಗಾಗಿ ಭಾನುವಾರದಂದು ತಲೆ ಸ್ನಾನ ಮಾಡದೇ ಇರುವುದೇ ಒಳ್ಳೆಯದು. ಮಹಿಳೆಯರಿಗೂ ಕೂಡ ಇದೇ ರೀತಿಯ ಫಲಗಳು ಎದುರಾಗುತ್ತವೆ. ಹಾಗಾಗಿ ಭಾನುವಾರದಂದು ಮಹಿಳೆಯರು ತಲೆ ಸ್ನಾನ ಮಾಡದೆ ಇರುವುದು ಉತ್ತಮ.
● ಅಮಾವಾಸ್ಯೆ ದಿನಗಳ ತಲೆ ಸ್ನಾನ ಮಾಡದೇ ಇರುವುದೇ ಉತ್ತಮ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ ಜೊತೆಗೆ ಕೆಲವು ಅನಿವಾರ್ಯ ದಿನಗಳಲ್ಲಿ ಯಾವುದೇ ವಾರವಿದ್ದರೂ ಕೂಡ ತಲೆ ಸ್ನಾನ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಆಗ ನೀರಿಗೆ ಅರಿಶಿನ ಪುಡಿ ಹಾಕಿ ಕೂದಲಿಗೆ ಸಿಂಪಡಣೆ ಮಾಡಿಕೊಂಡರೆ ಸ್ನಾನ ಮಾಡಿದಷ್ಟೇ ಫಲ ಸಿಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.