ಸರ್ಕಾರಿ ಹುದ್ದೆ (Government job) ಪಡಿಯಬೇಕು ಎಂದು ಇಚ್ಛೆ ಹೊಂದಿರುವವರಿಗೆ ಕೇಂದ್ರ ಸರ್ಕಾರದ ವತಿಯಿಂದ ಸಿಹಿಸುದ್ದಿ ಇದೆ. ಸರ್ಕಾರಿ ಹುದ್ದೆಗಳನ್ನು ಹೊಂದಬೇಕು ಎಂದು ಅಭ್ಯಾಸ ಮಾಡುತ್ತಿರುವ ಎಲ್ಲಾ ಆಕಾಂಕ್ಷಿಗಳು (aspirants) ಕೂಡ ಈ ಸದವಕಾಶವನ್ನು ಬಳಸಿಕೊಳ್ಳಬಹುದು. ನೌಕಾಪಡೆಯಲ್ಲಿ ಕೆಲಸ ಮಾಡುವುದು ಒಂದು ಹೆಮ್ಮೆ ಇದಕ್ಕಾಗಿ ಹಲವರು ಬಾಲ್ಯದಿಂದಲೂ ಕನಸು ಕಟ್ಟಿಕೊಂಡಿರುತ್ತಾರೆ.
ಈಗ ಅವರಿಗೆಲ್ಲಾ ಕನಸನ್ನು ನನಸಾಗಿಸಿಕೊಳ್ಳುವ ಸಮಯ. ಭಾರತೀಯ ನೌಕಾಪಡೆಯು (Indian NAVY Recruitment) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಅದರ ಸಲುವಾಗಿ ಈಗಷ್ಟೆ ಪ್ರಕಟಣೆ ಕೂಡ ಹೊರಡಿಸಿದೆ. ಈ ಹುದ್ದೆಗಳ ಕುರಿತಾದ ವಿವರಗಳನ್ನು ಒಳಗೊಂಡ ಅಧಿಸೂಚನೆ ಅದಾಗಿದ್ದು 10ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ ಇನ್ನುಳಿದಂತೆ ಏನೆಲ್ಲ ಮಾನದಂಡಗಳಿವೆ, ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂಬಿತ್ಯಾದಿ ವಿವರಗಳನ್ನು ತಿಳಿದುಕೊಳ್ಳಲು ಅಂಕಣವನ್ನು ಪೂರ್ತಿಯಾಗಿ ಓದಿ.
ಈ ಕಾಳಿ ಮಂತ್ರ ಜಪಿಸಿದರೆ ಕೇವಲ ಒಂದು ಗಂಟೆಯಲ್ಲಿ ನಿಮ್ಮ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತದೆ.!
ಉದ್ಯೋಗ ಸಂಸ್ಥೆ:- ಭಾರತೀಯ ನೌಕಾಪಡೆ
ಹುದ್ದೆ ಹೆಸರು:- ಟ್ರೇಡ್ಸ್ ಮೆನ್ ಮೇಟ್
ಉದ್ಯೋಗ ಸ್ಥಳ:- ಅಂಡಮಾನ್ ಮತ್ತು ನಿಕೋಬಾರ್
ಹುದ್ದೆಗಳ ವಿವರ:-
● ಮೇಷಿನಿಸ್ಟ್
● ಡ್ರೈವರ್ ಕ್ರೇನ್ ಮೊಬೈಲ್
● ಶಿಪ್ ರೈಟ್
● ಪೇಂಟರ್
● ಫಿಟ್ಟರ್
● ಎಲೆಕ್ಟ್ರಿಷಿಯನ್
ಒಟ್ಟು ಹುದ್ದೆಗಳ ಸಂಖ್ಯೆ:- 362
ವೇತನ ಶ್ರೇಣಿ:-
ಈ ಮೇಲ್ಕಂಡ ಹೋತೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕವಾಗಿ 18,000ರೂ. ದಿಂದ 56,900 ವೇತನ ಸಿಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
ಈ ಮೇಲ್ಕಂಡ ಹುದ್ದೆಗಳಿಗೆ ಆಯಾ ಹುದ್ದೆಗಳಿಗೆ ಅನುಸಾರವಾಗಿ SSLC ಅಥವಾ ITI ಯಲ್ಲಿ ಆ ಟ್ರೇಡ್ ಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 25 ವರ್ಷಗಳು.
ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● SC / ST ಅಭ್ಯರ್ಥಿಗಳಿಗೆ 5 ವರ್ಷಗಳು
● PwBD ಅಭ್ಯರ್ಥಿಗಳಿಗೆ 10 ವರ್ಷಗಳು
● ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷಗಳು.
ಈ 3 ಬ್ಯಾಂಕ್ ಗಳಲ್ಲಿ ಅಕೌಂಟ್ ಇದ್ದವರಿಗೆ ಸೆಪ್ಟೆಂಬರ್ 1 ರಿಂದ ಹೊಸ ರೂಲ್ಸ್ ಜಾರಿ ತಪ್ಪದೆ ಈ ಮಾಹಿತಿ ನೋಡಿ.!
ಆಯ್ಕೆ ವಿಧಾನ:-
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ.
● ಲಿಖಿತ ಪರೀಕ್ಷೆ ಏರ್ಪಡಿಸಿ ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ನಡೆಸುವ ಮೂಲಕ ಆಯ್ದುಕೊಳ್ಳಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:-
● ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ ಆದ https://www.joinindiannavy.gov.in/ ಗೆ ಭೇಟಿ ಕೊಡಬೇಕು.
● Register ಎನ್ನುವ ಆಪ್ಷನ್ ಕಾಣುತ್ತದೆ ಕ್ಲಿಕ್ ಮಾಡಿ, ಕೇಳುವ ವಿವರಗಳನ್ನು ತುಂಬಿಸಿ ಮೊದಲು Register ಆಗಿ
● User Name ಮತ್ತು Password ಪಡೆದು Log in ಆಗಿ
ಅಪ್ಲಿಕೇಶನ್ ಫಾರಂ ಮೇಲೆ ಕ್ಲಿಕ್ ಮಾಡಿ ಫಾರಂ ನಲ್ಲಿ ಕೇಳಿರುವ ಮಾಹಿತಿಗಳನ್ನು ತುಂಬಿಸಿ.
● ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆಗೆ ಸಂಬಂಧಪಟ್ಟ ಹಾಗೆ ಕೇಳಲಾಗುವ ಅಗತ್ಯ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
● ಭವಿಷ್ಯದ ಬಳಕೆ ಉದ್ದೇಶದಿಂದ ಅರ್ಜಿ ಸಲ್ಲಿಕೆ ಪೂರ್ತಿಯಾದ ಬಳಿಕ ತಪ್ಪದೇ ಅರ್ಜಿ ಸ್ವೀಕೃತಿ ಪ್ರಿಂಟ್ ಔಟ್ ಪತ್ರವನ್ನು ಪಡೆದುಕೊಳ್ಳಿ ಅಥವಾ ರೆಫರೆನ್ಸ್ ನಂಬರನ್ನು ಬರೆದುಕೊಳ್ಳಿ.
ಹನಿ ನೀರಾವರಿಗೆ ಸರ್ಕಾರದಿಂದ ಸಹಾಯಧನ ಘೋಷಣೆ, ಆಸಕ್ತ ರೈತರು ತಪ್ಪದೆ ಅರ್ಜಿ ಸಲ್ಲಿಸಿ.!
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 26.08.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 25.09.2023.