ಕೂದಲು ಕಸಿ ಮಾಡುವುದು ಎಷ್ಟು ನಿಜ.? ಕೂದಲು ಉದುರಿ ಹೋಗದಿರಲು, ಬೊಕ್ಕ ತಲೆ ಆಗದಂತೆ ತಡೆಯಲು ಇಷ್ಟು ಮಾಡಿ ಸಾಕು.!

 

ತಲೆಕೂದಲಿನ ಸಮಸ್ಯೆಗಳ ಬಗ್ಗೆ ಜನ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಯಾಕೆಂದರೆ, ಕೂದಲು ಉದುರಿ ತಲೆ ಬೋಳಾದರೆ, ವಯಸ್ಸಾಗುವ ಮುಂಚೆ ಕೂದಲು ಬಿಳಿ ಕೂದಲಾದರೆ ಸೌಂದರ್ಯ ಕಡಿಮೆಯಾಗುತ್ತದೆ ಎಂದು ಜನರಿಗೆ ಈ ಬಗ್ಗೆ ಕಾಳಜಿ ಹೆಚ್ಚು ಜೊತೆಗೆ ಕೂದಲು ಉದುರುವ ಸಮಸ್ಯೆ ವಂಶ ಪಾರಂಪರ್ಯವಾಗಿ ಬರುತ್ತದೆ.

ಮನೆಯಲ್ಲಿ ತಂದೆಗೆ ಕೂದಲು ಉದುರಿ ಹೋಗಿದ್ದರೆ ಖಂಡಿತವಾಗಿ ಮಕ್ಕಳಿಗೂ ಕೂಡ ತಲೆ ಕೂದಲು ಉದುರುತ್ತದೆ ಎನ್ನುವ ನಂಬಿಕೆ ಅನೇಕರಲ್ಲಿ ಆದರೆ ಇದಕ್ಕೆ ವಿಜ್ಞಾನ ಹೇಳುವ ಸತ್ಯವೆಂದರೆ ಒಂದು ಮನೆಯಲ್ಲಿ ಎಲ್ಲಾ ಸದಸ್ಯರು ಕೂಡ ಒಂದೇ ರೀತಿಯಾದ ಆಹಾರ ಪದ್ಧತಿ ರೂಢಿಸಿಕೊಂಡಿದ್ದಾರೆ ಇದೇ ಕಾರಣ.

ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶ, ಆಸಕ್ತರು ಅರ್ಜಿ ಅರ್ಜಿ ಸಲ್ಲಿಸಿ ವೇತನ 56,900

ಅದು ಹೇಗೆಂದರೆ, ಆ ಮನೆಗೆ ಅಡುಗೆ ಮಾಡುವ ಗೃಹಿಣಿಯು ತನಗೆ ಇಷ್ಟವಾಗದ ಯಾವುದೋ ಪದಾರ್ಥವನ್ನು ಅಡುಗೆಗೆ ಹಾಕುತ್ತಿರುವುದಿಲ್ಲ. ಹಾಗಾಗಿ ಅದರ ಮೂಲಕ ಸೇರಬೇಕಾದ ಕೆಲ ಪೋಷಕಾಂಶಗಳಿಂದ ಆಕೆಯ ಪತಿಯು ವಂಚಿತರಾಗಿ ಅವರಿಗೆ ಕೂದಲಿಗೆ ಸಮಸ್ಯೆ ಬಂದರೆ ಮುಂದೆ ಅದೇ ಶೈಲಿ ಆಹಾರವನ್ನು ಆಕೆಯ ಮಕ್ಕಳು ಕೂಡ ಸೇವಿಸುವುದರಿಂದ ಅವರಿಗೂ ಆ ಪೋಷಕಾಂಶಗಳ ಕೊರತೆ ಬರುವುದರಿಂದ ಅವರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಅದು ಕೂದಲಿನ ಸಮಸ್ಯೆಯಾಗಿದ್ದರೂ ಅಥವಾ ಮತ್ಯಾವುದೇ ರೀತಿಯ ಸಮಸ್ಯೆ ಆಗಿದ್ದರೂ ಕೂಡ ಅದರ ಮೂಲ ಇದೆ ರೀತಿ ಆರಂಭವಾಗಿರುತ್ತದೆ. ಕೂದಲನ್ನು ಎರಡು ರೀತಿ ಕಾಪಾಡಿಕೊಳ್ಳಬಹುದು. ಹೇಗೆಂದರೆ, ಉದುರಿ ಹೋಗಿರುವ ಕೂದಲುಗಳು ಮತ್ತೆ ಬರುವ ರೀತಿ ಹಾಗೂ ಈಗಿರುವ ಕೂದಲು ಹಾಳಾಗದ ರೀತಿ.

ಆಹಾರ ಪದ್ಧತಿಯಲ್ಲಿ ವ್ಯತ್ಯಾಸಗಳಾದಾಗ ಈ ರೀತಿ ಆಗುತ್ತದೆ. ಯಾಕೆಂದರೆ ನಮ್ಮ ದೇಹಕ್ಕೆ ಯಾವುದೇ ಪೋಷಕಾಂಶ ಸಿಗಬೇಕು ಎಂದರು ಕೂಡ ಅದು ನಾವು ಸೇವನೆ ಮಾಡುವ ಆಹಾರದ ಮೂಲಕ ಹೋಗುತ್ತದೆ. ಆರೋಗ್ಯಕ್ಕೆ ಅನುಕೂಲ ಕೊಡುವ ಪೋಷಕಾಂಶಗಳು ದೇಹವನ್ನು ಸೇರದೆ ಹೋದಾಗ ಅದರ ಕೊರತೆಗಳು ಉಂಟಾದಾಗ ಈ ರೀತಿ ಸಮಸ್ಯೆಗಳು ಸಾಮಾನ್ಯ.

ಈ ಕಾಳಿ ಮಂತ್ರ ಜಪಿಸಿದರೆ ಕೇವಲ ಒಂದು ಗಂಟೆಯಲ್ಲಿ ನಿಮ್ಮ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತದೆ.!

ಇದಕ್ಕಿಂತ ಮುಖ್ಯವಾದ ವಿಷಯ ಏನೆಂದರೆ ಈ ರೀತಿ ಕೂದಲಿನ ಉದುರುವಿಕೆ ಅಥವಾ ಕೂದಲು ಬಿಳಿಯಾಗುವ ಸಮಸ್ಯೆಯಾದಾಗ ಅದನ್ನು ಒಪ್ಪಿಕೊಳ್ಳುವುದು ಮುಖ್ಯ. ಅದರ ಬದಲಿಗೆ ಚಿಕಿತ್ಸೆಗಳಾಗಿ ದುಬಾರಿ ಬೆಲೆಗಳ ಕೆಮಿಕಲ್ ಯುಕ್ತ ಸೋಪು ಶಾಂಪೂ ಕಂಡೀಷನರ್ಗಳ ಬಳಕೆ ಮಾಡಿದರೆ ಇದು ಕೂಡ ಇನ್ನೊಂದು ರೀತಿ ದುಷ್ಪರಿಣಾಮವನ್ನು ಬೀರುತ್ತದೆ.

ಹಾಗಾಗಿ ಆಹಾರ ಪದ್ಧತಿಯ ಮೂಲಕ ಇದನ್ನು ಸುಧಾರಿಸಿಕೊಳ್ಳಲು ಪ್ರಯತ್ನ ಪಡಬೇಕು. ಇತ್ತೀಚಿನ ದಿನಗಳಲ್ಲಿ ಹೇರ್ ಪ್ಲಾಂಟಿಂಗ್ ಬಗ್ಗೆ ಹೆಚ್ಚಿನ ಜನ ಮಾತನಾಡುತ್ತಾರೆ. ಗಲ್ಲಿ ಗಲ್ಲಿಯಲ್ಲಿ ಕೂಡ ಈ ರೀತಿ ಹೇರ್ ಫಿಕ್ಸಿಂಗ್ ಮಾಡುವ ಕೂದಲಿನ ನಾಟಿ ಮಾಡುವ ಶಾಪ್ ಗಳು ಇವೆ. ಈ ಚಿಕಿತ್ಸೆ ಕೂಡ ಪರಿಣಾಮಕಾರಿ ಆದರೆ ಅದು ಅಷ್ಟೇ ದುಬಾರಿಯೂ ಹೌದು.

ಒಂದೇ ಒಂದು ನಿಂಬೆಹಣ್ಣಿನಿಂದ 24 ಗಂಟೆಯಲ್ಲಿ ನೆಗೆಟಿವ್ ಎನರ್ಜಿ ತೆಗೆಯಬಹುದು, ಏಳಿಗೆ ಆಗದಂತೆ ಮಾ.ಟ ಮಂ.ತ್ರ ಮಾಡಿಸಿದ್ದರೆ ಪರಿಹಾರ.!

ಇದನ್ನು ಚಿಕಿತ್ಸೆ ಮಾಡಿಸಿಕೊಳ್ಳುವುದು ಮಾತ್ರ ಅಲ್ಲದೆ ನಂತರ ಮೇಂಟೆನ್ ಮಾಡುವುದು ಕೂಡ ದುಬಾರಿ ಆಗಿರುವುದರಿಂದ ಇದು ಜನಸಾಮಾನ್ಯರಿಗೆ ಎಟುಕದ್ದು ಎಂದೇ ಹೇಳಬಹುದು. ಆದ್ದರಿಂದ ನಮಗಿರುವ ಕೂದಲಿನ ಆರೋಗ್ಯದ ಬಗ್ಗೆ ನಾವು ಸಮಾಧಾನ ಪಟ್ಟುಕೊಳ್ಳಬೇಕು. ಯಾಕೆಂದರೆ ಅನೇಕ ಸೆಲಬ್ರೆಟಿಗಳಿಗೆ ಕೂದಲು ಇರುವುದಿಲ್ಲ ಅಥವಾ ಅವರು ಕೂಡ ಕೂದಲು ಉದುರುವಿಕೆ ಸಮಸ್ಯೆಗೆ ಒಳಗಾಗಿರುವವರೇ ಆಗಿರುತ್ತಾರೆ ಹೀಗಾಗಿ ಒಪ್ಪಿಕೊಳ್ಳುವ ಮನಸ್ಸು ಮುಖ್ಯ.

Leave a Comment