Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸರ್ಕಾರದಿಂದ ಮಹಿಳೆಯರಿಗಾಗಿ ಶ್ರಮಶಕ್ತಿ ಯೋಜನೆ ಆರಂಭ, 50 ಸಾವಿರ ಸಾಲ ಪಡೆದರೆ 25 ಸಾವಿರ ಉಚಿತ ಆಸಕ್ತ ಅಭ್ಯರ್ಥಿಗಳು ತಪ್ಪದೇ ಅರ್ಜಿ ಸಲ್ಲಿಸಿ…

Posted on August 29, 2023 By Kannada Trend News No Comments on ಸರ್ಕಾರದಿಂದ ಮಹಿಳೆಯರಿಗಾಗಿ ಶ್ರಮಶಕ್ತಿ ಯೋಜನೆ ಆರಂಭ, 50 ಸಾವಿರ ಸಾಲ ಪಡೆದರೆ 25 ಸಾವಿರ ಉಚಿತ ಆಸಕ್ತ ಅಭ್ಯರ್ಥಿಗಳು ತಪ್ಪದೇ ಅರ್ಜಿ ಸಲ್ಲಿಸಿ…

ಕರ್ನಾಟಕದ ಮಹಿಳೆಯರಿಗೆ (for womens) ಸರ್ಕಾರವು (government) ಒಂದಾದ ಮೇಲೆ ಒಂದರಂತೆ ಸಾಕಷ್ಟು ಯೋಜನೆಗಳ ಮೂಲಕ ನೆರವಾಗುತ್ತಿದೆ. ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆ ಹೆಚ್ಚುವರಿ ಅಕ್ಕಿ ಹಣದ ಪ್ರಯೋಜನ ಪಡೆಯುತ್ತಿರುವ ಮಹಿಳೆಯರಿಗೆ ಗ್ಯಾರಂಟಿಯೇತರವಾಗಿ ಕೂಡ ಹಲವು ಯೋಜನೆಗಳನ್ನು ಜಾರಿ ಮಾಡಿದೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮತದಿಂದ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ (ShramaShakthi Vishesha Mahila Yojane) ಎನ್ನುವ ಯೋಜನೆಗೆ ಅರ್ಜಿ ಆಹ್ವಾನ ಪ್ರಕ್ರಿಯೆ ಕೂಡ ಆರಂಭವಾಗಿದೆ. ಅಲ್ಪಸಂಖ್ಯಾತ ವರ್ಗದ (Minority Corporation) ವಿಧವೆಯರು, ಅವಿವಾಹಿತ ಮತ್ತು ವಿಚ್ಛೇದಿತ, ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆ ಜಾರಿಗೆ ತರಲಾಗಿದೆ.

ಪೂಜೆಗಾಗಿ ತಂದ ತೆಂಗಿನಕಾಯಿ ಕೊಳೆತರೆ, ತೆಂಗಿನಕಾಯಿಯಲ್ಲಿ ಹೂವು ಬಂದರೆ ಏನು ಸೂಚನೆ ಗೊತ್ತಾ.? ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕಾದ ಮಾಹಿತಿ ಇದು

ಯೋಜನೆಯಡಿ ಫಲಾನಭವಿಯಾಗುವ ಮಹಿಳೆಯು ತಮ್ಮ ಕರಕುಶಲತೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಆ ಮೂಲಕ ಸಣ್ಣ ಉದ್ಯೋಗ ಸ್ಥಾಪನೆ ಮಾಡಿಕೊಳ್ಳಲು ಗರಿಷ್ಠ 50 ಸಾವಿರ ರೂಪಾಯಿವರೆಗೆ ಸಾಲ ಸೌಲಭ್ಯ (loan) ನೀಡಲಾಗುತ್ತದೆ. ಸರ್ಕಾರದ ನಿಯಮಕ್ಕೆ ಒಳಪಟ್ಟು ನಿಯಮಗಳ ಪ್ರಕಾರ 36 ತಿಂಗಳಿನ ಒಳಗಡೆ ಈ ಸಾಲದ ಅರ್ಧ ಮೊತ್ತವನ್ನು ಮರುಪಾವತಿ ಮಾಡಿದರೆ ಉಳಿದ ಅರ್ಧ ಭಾಗ 50% ಅಂದರೆ 25,000 ರೂಗಳನ್ನು ಮಹಿಳೆಯರಿಗೆ ಸಬ್ಸಿಡಿ ( 50% Subsidy) ರೂಪದಲ್ಲಿ ಸರ್ಕಾರ ವಿನಾಯಿತಿ ನೀಡಲಿದೆ.

ಹಾಗಾಗಿ ಮಹಿಳೆಯರಿಗಾಗಿಯೇ ಇರುವ ಈ ವಿಶೇಷ ಯೋಜನೆಯನ್ನು ಅಲ್ಪಸಂಖ್ಯಾತ ವರ್ಗದ ಪ್ರತಿಯೊಬ್ಬ ಮಹಿಳೆಯರು ಕೂಡ ತಪ್ಪದೆ ಪಡೆದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯ ಹೆಚ್ಚಿನ ಮಹಿಳೆಯರಿಗೆ ತಲುಪುವಂತೆ ಎಲ್ಲರಿಗೂ ಶೇರ್ ಮಾಡಿ.

ಒಣಗಿದ ಹೂವುಗಳನ್ನು ಬಿಸಾಕುವ ಬದಲು ಅವುಗಳನ್ನೇ ಬಳಸಿಕೊಂಡು ಕೋನ್ ಶೇಪ್ ಸಾಂಬ್ರಾಣಿ ಮಾಡಿ.! ಬುದ್ದಿವಂತ ಮಹಿಳೆಯರಿಗಾಗಿ

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು:-

● ಅರ್ಜಿದಾರರು ರಾಜ್ಯದ ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.
● ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
● ಅರ್ಜಿದಾರರ ವಯೋಮಿತಿ 18 ರಿಂದ 55 ವರ್ಷದ ಒಳಗಿರಬೇಕು.
● ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂ.3.50 ಲಕ್ಷದ ಒಳಗಿರಬೇಕು.
● ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ರಾಜ್ಯ ಅಥವಾ ಕೇಂದ್ರ ಸರ್ಕಾರದ ಉದ್ಯೋಗಿಯಾಗಿರಬಾರದು.
● ಅರ್ಜಿದಾರರು KMDC ಯಲ್ಲಿ ಸುಸ್ತಿದಾರರಾಗಿರಬಾರದು.

ಬೇಕಾಗುವ ದಾಖಲೆಗಳು:-

● ಅರ್ಜಿದಾರಆಧಾರ್ ಕಾರ್ಡ್
● ಪ್ಯಾನ್ ಕಾರ್ಡ್
● ನಿವಾಸ ಪ್ರಮಾಣಪತ್ರ
● ಮೊಬೈಲ್ ನಂಬರ್
● ಪಾಸ್ಪೋರ್ಟ್ ಗಾತ್ರದ ಫೋಟೋ
● ಬ್ಯಾಂಕ್ ಪಾಸ್ಬುಕ್ ವಿವರ
● ಜಾತಿ ಪ್ರಮಾಣ ಪತ್ರ
● ಆದಾಯ ಪ್ರಮಾಣ ಪತ್ರ
● ಅಲ್ಪಸಂಖ್ಯಾತರ ಪ್ರಮಾಣಪತ್ರ
● ಸ್ವಯಂ ಘೋಷಣೆ ಪತ್ರ
● ಜಮೀನದಾರರ ಸ್ವಯಂ ಘೋಷಣೆ ಪತ್ರ
● ಯೋಜನಾ ವರದಿ

ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೇ ಇರಲು ಇದೇ ಮುಖ್ಯವಾದ ಕಾರಣ.!

ಅರ್ಜಿ ಸಲ್ಲಿಸುವ ವಿಧಾನ:-

● KMDC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
kmdconline.karntaka.gov.in ಭೇಟಿ ಕೊಡಿ.
● ಮುಖಪುಟದಲ್ಲಿ, ಆನ್‌ಲೈನ್ ಅರ್ಜಿ ಸಲ್ಲಿಸಲು ಆಪ್ಷನ್ ಇರುತ್ತದೆ, ಅದನ್ನು ಕ್ಲಿಕ್ ಮಾಡಿ. ನಿಮ್ಮ Mobile num. ನಮೂದಿಸುವ ಮೂಲಕ Login ಆಗಿ
● ಸ್ಕ್ರೀನ್ ಮೇಲೆ ನೀಡಲಾದ ಸೂಚನೆಗಳ ಪ್ರಕಾರ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯ ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.

● ವೈಯುಕ್ತಿಕ ಮಾಹಿತಿ, ವಿಳಾಸ, ದಾಖಲೆಗಳು ಮತ್ತು ಬ್ಯಾಂಕ್ ವಿವರಗಳಂತಹ ಅಗತ್ಯ ವಿವರಗಳನ್ನು ನಮೂದಿಸಿ.
● ಕೊಟ್ಟಿರುವ ಫೀಲ್ಡ್‌ಗಳಲ್ಲಿ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡಿ.
● ಅರ್ಜಿ ಸಲ್ಲಿಕೆ ಯಶಸ್ವಿಯಾದ ಬಳಿಕ ನೋಂದಣಿಯ ನಂತರ, ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಇದು ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ.

ಈ 10 ಜಿಲ್ಲೆಗಳಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗಿದೆ.! ಯಾವ ಜಿಲ್ಲೆ.? ಯಾರಿಗೆ ಹಣ ಜಮೆ ಆಗಿದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ – 30.09.2023

Useful Information
WhatsApp Group Join Now
Telegram Group Join Now

Post navigation

Previous Post: ಪೂಜೆಗಾಗಿ ತಂದ ತೆಂಗಿನಕಾಯಿ ಕೊಳೆತರೆ, ತೆಂಗಿನಕಾಯಿಯಲ್ಲಿ ಹೂವು ಬಂದರೆ ಏನು ಸೂಚನೆ ಗೊತ್ತಾ.? ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕಾದ ಮಾಹಿತಿ ಇದು
Next Post: ಈ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ನಿಮ್ಮ ಮನೆಯೇ ಸ್ವರ್ಗವಾಗುತ್ತದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore