ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೇ ಇರಲು ಇದೇ ಮುಖ್ಯವಾದ ಕಾರಣ.!

ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ನಮ್ಮ ಮನೆ ಏಳಿಗೆಗೆ ಅಡ್ಡಿಯಾಗಿರುತ್ತದೆ, ನೀವು ಕೂಡ ಈ ರೀತಿ ತಪ್ಪು ಮಾಡುತ್ತಿದ್ದರೆ ಇನ್ನು ಮುಂದೆ ಇವುಗಳನ್ನು ತಿದ್ದುಕೊಂಡು ಸರಿಪಡಿಸಿಕೊಳ್ಳಿ, ಅವುಗಳ ಪಟ್ಟಿ ಹೀಗಿದೆ ನೋಡಿ.

● ಹಿರಿಯರ ಕಾರ್ಯ ಮಾಡದೇ ಇರುವುದು ಮುಖ್ಯ ಕಾರಣ
● ಹರಕೆ ಮಾಡಿಕೊಂಡಿರುವುದು ನೆನಪಿದ್ದರೂ ಕೂಡ ಅವುಗಳನ್ನು ತೀರಿಸದೇ ಇರುವುದು
● ಮಲಗಿ ಎದ್ದಾಗ ಗೃಹಿಣಿಯರು ತಾಳಿಸರ ಬೆನ್ನಿಗೆ ಬಂದಿದ್ದರು ಅದನ್ನು ಗಮನಿಸದೇ ಇರುವುದು
● ಮನೆಯಲ್ಲಿ ನಾಗರ ಪೂಜೆ ಮಾಡುವ ಪದ್ಧತಿ ಇದ್ದರೂ ಕೂಡ ಅದನ್ನು ಪಾಲಿಸದೆ ಇರುವುದು.

● ಮನೆಯಲ್ಲಿ ದೇವರ ಪೂಜೆ ಮಾಡುವ ಸಾಮಾನುಗಳು ಕಪ್ಪಾಗಿದ್ದರು ಹಾಗೂ ಒಡೆದು ಹೋಗಿದ್ದರೂ, ಭಿನ್ನವಾಗಿದ್ದರೂ ಬದಲಾಯಿಸದೆ ಅವುಗಳನ್ನೇ ಬಳಸುವುದು
● ಹೊರಗಿನಿಂದ ಮನೆಗೆ ಹಾಲು ಮತ್ತು ನೀರನ್ನು ಒಟ್ಟಿಗೆ ತರುವುದು.
● ಆರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು ಹೂವು ಕೂಡ ಇರದಂತೆ ಖಾಲಿ ತಟ್ಟೆಯಲ್ಲಿ ಆರತಿ ಮಾಡುವುದು.
● ಮನೆಯಲ್ಲಿ ಹಾಲು ಕಾಯಿಸುವ ಪಾತ್ರೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು.

ಈ 10 ಜಿಲ್ಲೆಗಳಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗಿದೆ.! ಯಾವ ಜಿಲ್ಲೆ.? ಯಾರಿಗೆ ಹಣ ಜಮೆ ಆಗಿದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ಮನೆ ಮುಂದೆ ಹೂವಿನವರು ಬಂದಾಗ ಬೇಡ ಎಂದು ಹೇಳಿ ಕಳಿಸುವುದು ಇದರ ಬದಲು ಅವಶ್ಯಕತೆ ಇಲ್ಲದಿದ್ದರೆ ನಾಳೆ ತೆಗೆದುಕೊಳ್ಳುತ್ತೇನೆ ಎಂದು ಹೇಳಬೇಕು ಹೊರತು ಬೇಡ ಎಂದು ಹೇಳಬಾರದು.
● ವರ್ಷದಲ್ಲಿ ಒಂದು ದಿನವೂ ಕೂಡ ಅಸಹಾಯಕರಿಗೆ ಬಟ್ಟೆ ಆಹಾರ ಇವುಗಳನ್ನು ದಾನ ಮಾಡದೆ ಇರುವುದು.

● ಮನೆಯಲ್ಲಿ ದೇವರಕೊಣೆಯಲ್ಲಿ ದೇವರ ಫೋಟೋಗಳ ಜೊತೆ ಮನೆಯಲ್ಲಿ ಹಿರಿಯರ ಅಥವಾ ಸತ್ತು ಹೋದವರು ಫೋಟೋಗಳನ್ನು ಸರಿಸಮವಾಗಿ ಇಟ್ಟು ಪೂಜೆ ಮಾಡುವುದು.
● ರೊಟ್ಟಿ ಹಂಚು ಕಡಾಯಿ, ಮೊರ, ಸೇರು ಈ ರೀತಿ ವಸ್ತುಗಳನ್ನು ಬೋರಲು ಹಾಕಿ ಇಡುವುದು.
● ಹೆಣ್ಣು ಮಕ್ಕಳನ್ನು ಕೀಳಾಗಿ ಕಾಣುವ ಅವರನ್ನು ಸದಾ ಕಣ್ಣಿರಾಕಿಸುತ್ತಿರುವ ಮನೆಯಲ್ಲಿ ಯಾವ ರೀತಿ ಏಳಿಗೆಯು ಆಗುವುದಿಲ್ಲ, ಒಂದು ವೇಳೆ ಹಣಕಾಸಿನ ಅನುಕೂಲತೆ ಇದ್ದರೆ ಕೂಡ ನೆಮ್ಮದಿಯಾಗಿರಲು ಸಾಧ್ಯವೇ ಇಲ್ಲ.

● ಮನೆ ಗುಡಿಸುವುದಕ್ಕೆ ಮೊಂಡು ಪರಕೆಯನ್ನು ಬಳಸುವುದು
● ಮಲಗುವ ಹಾಸಿಗೆಯನ್ನು ಮನೆಗುಡಿಸುವ ಪೊರಕೆಯಿಂದ ಕ್ಲೀನ್ ಮಾಡುವುದು.
● ದೇವರಿಗೆ ಹಣ್ಣುಗಳ ತುದಿಯನ್ನು ಮುರಿಯದೆ ನೈವೇದ್ಯ ಮಾಡುವುದು, ದೇವರಿಗೆ ನೈವೇದ್ಯ ಇಡಲು ಪ್ಲಾಸ್ಟಿಕ್ ಅಥವಾ ಪೇಪರ್ ತಟ್ಟೆಗಳನ್ನು ಬಳಸುವುದು.
● ಅಂತ್ಯಕ್ರಿಯೆ ಮೆರವಣಿಗೆ ನಡೆಯುತ್ತಿದ್ದರು ಅದರ ಮುಂದೆ ಹೋಗುವುದು.

ಕೂದಲು ಕಸಿ ಮಾಡುವುದು ಎಷ್ಟು ನಿಜ.? ಕೂದಲು ಉದುರಿ ಹೋಗದಿರಲು, ಬೊಕ್ಕ ತಲೆ ಆಗದಂತೆ ತಡೆಯಲು ಇಷ್ಟು ಮಾಡಿ ಸಾಕು.!

● ದೇವರಿಗೆ ಪೂಜೆ ಮಾಡುವಾಗ ಚಾಪೆ ಅಥವಾ ಮಣೆ ಹಾಕಿಕೊಳ್ಳದೆ
ನೆಲದ ಮೇಲೆ ಕುಳಿತು ಪೂಜೆ ಮಾಡುವುದು
● ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಮಾಡಿಕೊಂಡು ಮನೆಗೆ ಬಂದ ಕೂಡಲೇ ಕಾಲುಗಳನ್ನು ತೊಳೆಯುವುದು.
● ಹಸಿದವರಿಗೆ ಊಟ ಕೊಡದೆ ಕಳುಹಿಸುವುದು
● ಮುರಿದ ಬಾಚಣಿಕೆಯಿಂದ ತಲೆ ಬಾಚುವುದನ್ನು ಮಾಡಲೇಬಾರದು ಇದು ರಾಹುತತ್ವವನ್ನು ಹೊಂದಿರುತ್ತದೆ, ಬಡತನಕ್ಕೆ ಕಾರಣವಾಗುತ್ತದೆ.

● ವ್ಯಾಲೆಟ್ ಪರ್ಸ್ ಇವುಗಳಲ್ಲಿ ಚಿಲ್ಲರೆ ಹಾಗೂ ನೋಟ್ ಗಳನ್ನು ಒಟ್ಟಿಗೆ ಇಡುವುದು.
● ಅನುಕೂಲವಾದ ಪರಿಸ್ಥಿತಿಯಲ್ಲಿ ಇದ್ದರೂ ಕೂಡ ದೇವಸ್ಥಾನದಲ್ಲಿ ಯಾವುದೇ ಕಾಣಿಕೆ ಹಾಕದೆ ಮಂಗಳಾರತಿ ಪಡೆಯುವುದು ಹಾಗೂ ಕಾಣಿಕೆಯನ್ನು ಅರ್ಪಿಸದೆ ಊಟ ಮಾಡಿ ಬರುವುದು
● ವಯಸ್ಸಾದ ವ್ಯಕ್ತಿಗಳು, ಚಿಕ್ಕ ಮಕ್ಕಳು ಅಥವಾ ಬಡವರಿಂದ ಖರೀದಿ ಮಾಡುವಾಗ ವಿಪರೀತವಾಗಿ ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಕೊಂಡುಕೊಳ್ಳುವುದು.

● ಮನೆಯಲ್ಲಿ ಬಾಗಿಲುಗಳ ಮೇಲೆ ಬೀರುವಿನ ಮೇಲೆ ಸಿಕ್ಕಾಪಟ್ಟೆ ಸ್ಟಿಕರ್ಗಳನ್ನು ಅಂಟಿಸುವುದು.
● ಹೊತ್ತು ಬಿದ್ದ ಮೇಲೆ ಮನೆಯಲ್ಲಿ ಕಸಗುಡಿಸುವುದು ಮತ್ತು ರಾತ್ರಿ ಹೊತ್ತು ಎಂಜಲು ಪಾತ್ರೆಯನ್ನು ಹಾಗೆ ಇಟ್ಟು ಮಲಗುವುದು
● ಮುಸ್ಸಂಜೆ ಹೊತ್ತು ಮಲಗುವುದು ಹಾಗೂ ಹಲ್ಲು ಕಡಿಯುವುದು ಮನೆಗೆ ಬಂದ ಅತಿಥಿಗಳ ಸತ್ಕಾರ ಮಾಡದೆ ಅವರಿಗೆ ಬೇಸರ ಬರುವ ಹಾಗೆ ಮಾಡುವುದು.

ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶ, ಆಸಕ್ತರು ಅರ್ಜಿ ಅರ್ಜಿ ಸಲ್ಲಿಸಿ ವೇತನ 56,900

● ಊಟ ಇರುವ ತಟ್ಟೆಗಳನ್ನು ಪಾತ್ರೆಗಳನ್ನು ದಾಟುವುದು, ಆಹಾರಕ್ಕೆ ಗೌರವ ಕೊಡದೆ ಇರುವುದು.
● ಮನೆಯಲ್ಲಿ ವಸ್ತುಗಳನ್ನು ಅಚ್ಚುಕಟ್ಟಾಗಿಡದೇ ಸಿಕ್ಕಸಿಕ್ಕಲ್ಲಿ ಎಲ್ಲ ವಸ್ತುಗಳನ್ನು ಬಿಸಾಕುವುದು.
● ಹೊಸ್ತಿಲ ಮೇಲೆ ನಿಲ್ಲುವುದು ಒಂದು ಕಾಲು ಹೊರಗೆ ಒಂದು ಕಾಲು ಮನೆ ಒಳಗೆ ಇಟ್ಟು ಏನನ್ನಾದರೂ ಬೇರೆಯವರಿಗೆ ಕೊಡುವುದು ಅಥವಾ ತೆಗೆದುಕೊಳ್ಳುವುದು.
● ಮನೆಯಲ್ಲಿ ಇರುವ ಸದಸ್ಯರ ನಡುವೆ ಭೇದ ಭಾವ ಮಾಡುವುದು.

Leave a Comment