ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗುವ ಎಲ್ಲರೂ ಕೂಡ ಗರ್ಭಗುಡಿ ಸುತ್ತ ಅಥವಾ ದೇವಸ್ಥಾನದ ಸುತ್ತ ಅಥವಾ ದೇವರ ವಿಗ್ರಹದ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ ಈ ರೀತಿ ಪ್ರದಕ್ಷಿಣೆ ಹಾಕುವುದಕ್ಕೆ ಅದರದ್ದೇ ಆದ ನಿಯಮ ಇರುತ್ತದೆ. ನಾವು ತಪ್ಪಾಗಿ ಮಾಡಿದ ಆಚರಣೆಗಾಗಿ ಶಿಕ್ಷೆ ಕೂಡ ಪಡಬೇಕಾಗುತ್ತದೆ ಅಥವಾ ನಾವು ಮಾಡಿದ ಪೂಜೆ ಫಲ ಸಿಗದಂತೆ ಆಗುತ್ತದೆ.
ಇದನ್ನು ತಪ್ಪಿಸಿಕೊಳ್ಳಲು ಪ್ರದಕ್ಷಿಣೆ ಕುರಿತು ಶಾಸ್ತ್ರಗಳಲ್ಲಿ ಏನು ಹೇಳಲಾಗಿದೆ ಎನ್ನುವುದನ್ನು ಸರಿಯಾಗಿ ತಿಳಿದುಕೊಂಡು ಆ ಪ್ರಕಾರ ನಡೆದುಕೊಳ್ಳಬೇಕು. ಶುದ್ಧ ಭಕ್ತಿಯಿಂದ ಮನಸ್ಸಿನಲ್ಲಿ ಭಗವಂತನನ್ನು ನೆನೆಯುತ್ತಾ ಏಕಾಗ್ರತೆಯಿಂದ ಪ್ರದಕ್ಷಿಣೆ ಮಾಡಿದರೆ ನಿಮ್ಮ ಕಷ್ಟಗಳನ್ನು ಭಗವಂತನು ಖಂಡಿತವಾಗಿ ಪರಿಹಾರ ಮಾಡುತ್ತಾರೆ.
● ಗರ್ಭಗುಡಿ ಸುತ್ತ ಪ್ರದಕ್ಷಿಣೆ ಹಾಕುವಾಗ ಕೆಲವರು ಗರ್ಭಗುಡಿ ಹಿಂದೆ ದೇವರ ವಿಗ್ರಹಕಕ್ಕೆ ತಲೆ ಬಾಗಿ ಹಣೆ ಹಚ್ಚಿ ನಮಸ್ಕರಿಸುತ್ತಾರೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡಬಾರದು. ಶ್ರೀಕೃಷ್ಣ ಪರಮಾತ್ಮನೇ ಇದರ ಬಗ್ಗೆ ತಿಳಿಸಿದ್ದಾರೆ. ಈ ರೀತಿ ನಮಸ್ಕಾರ ಮಾಡುವುದರಿಂದ ಪ್ರದಕ್ಷಿಣೆ ಫಲ ಸಿಗುವುದಿಲ್ಲ ಬದಲಾಗಿ ಕಷ್ಟಗಳು ಬೆನ್ನೆತ್ತುತ್ತವೆ. ಆದ್ದರಿಂದ ಇನ್ನು ಮುಂದೆ ಈ ರೀತಿ ತಪ್ಪನ್ನು ಮಾಡಬೇಡಿ.
● ಪ್ರದಕ್ಷಿಣೆ ಹಾಕುವಾಗ ಮುಖ್ಯ ನಿಯಮವೇ ಎಷ್ಟು ಪ್ರದಕ್ಷಿಣೆ ಹಾಕಬೇಕು ಎಂದು ಇದರ ಬಗ್ಗೆ ಹೇಳುವುದಾದರೆ ಗಣಪತಿಗೆ ಮೂರು ಪ್ರದರ್ಶನ ಹಾಕಬೇಕು, ಆಗ ರಿದ್ದಿ, ಸಿದ್ದಿ ಮತ್ತು ಯಶಸ್ಸು ಪ್ರಾಪ್ತಿಯಾಗುತ್ತದೆ.
● ಆಂಜನೇಯನ ದೇವಸ್ಥಾನದಲ್ಲಿ 3 ಪ್ರದಕ್ಷಿಣೆ ಹಾಕಿದರೆ ಜಯ ಬಲ ಸಂಪತ್ತು ಪ್ರಾಪ್ತಿಯಾಗುತ್ತದೆ.
ದೇವರ ಮುಂದೆ ಹಚ್ಚುವ ದೀಪದ ಬತ್ತಿ ಹೇಗಿರಬೇಕು.? ಎಷ್ಟಿದ್ದರೆ ಏನು ಫಲ ನೋಡಿ.!
● ಶಿವನ ದೇವಾಲಯದಲ್ಲಿ ಅರ್ಧ ಪ್ರದಕ್ಷಿಣೆ ಹಾಕುವುದು ಬಹಳ ಶ್ರೇಷ್ಠ ಈ ರೀತಿ ಮಾಡುವುದರಿಂದ ಇಷ್ಟಾರ್ಥ ಶೀಘ್ರವಾಗಿ ನೆರವೇರುತ್ತದೆ.
● ವಿಷ್ಣುವಿನ ಅವತಾರದ ಯಾವುದೇ ದೇವಾಲಯಕ್ಕೆ ಹೋದಾಗಲೂ ಕೂಡ ಅಲ್ಲಿ ಗರ್ಭಗುಡಿ ಸುತ್ತ ನಾಲ್ಕು ಪ್ರದಕ್ಷಿಣೆ ಹಾಕಿದರೆ ಬಹಳ ಒಳ್ಳೆಯ ಫಲಗಳು ಸಿಗುತ್ತದೆ, ಜೀವನದಲ್ಲಿ ಯಶಸ್ಸನ್ನು ಹೊಂದುತ್ತೀರಿ.
● ಸೂರ್ಯದೇವನಿಗಾಗಿ ಇರುವ ದೇವಸ್ಥಾನಗಳಿಗೆ ಹೋಗಿ 7 ಪ್ರದಕ್ಷಿಣೆ ಹಾಕಿದರೆ ಬಹಳ ಒಳ್ಳೆಯದು, ರೋಗಭಾದೆಯಿಂದ ಮುಕ್ತಿ ಸಿಗುತ್ತದೆ.
● ಅರಳಿ ಮರಕ್ಕೆ 108 ಪ್ರದಕ್ಷಿಣೆ ಹಾಕುವುದರಿಂದ ಇಷ್ಟಾರ್ಥ ಸಿದ್ದಿ ಆಗುತ್ತದೆ, ಬಹಳ ಬೇಗ ನೀವು ಅಂದುಕೊಂಡ ಕಾರ್ಯ ಆಗಬೇಕು ನಿಮಗೆ ಆ ಕಾರ್ಯದಲ್ಲಿ ಯಶಸ್ಸು ಕೂಡ ಸಿಗಬೇಕು ಎಂದರೆ ನೀವು ಅರಳಿ ಮರಕ್ಕೆ 108 ಪ್ರದಕ್ಷಿಣೆ ಹಾಕಬಹುದು.
● ಒಂದು ವೇಳೆ ನೀವು ಯಾವುದಾದರು ದೇವಸ್ಥಾನಕ್ಕೆ ಹೋಗಿದ್ದಾಗ ಆ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಿ ನಮಸ್ಕರಿಸಬೇಕು ಎನ್ನುವ ಬಗ್ಗೆ ಸರಿಯಾದ ವಿವರ ಗೊತ್ತಿಲ್ಲದೇ ಇದ್ದರೆ ಗಾಬರಿಕೊಳ್ಳುವ ಅವಶ್ಯಕತೆ ಇಲ್ಲ. ನಿಮಗೆ ಆ ಬಗ್ಗೆ ಗೊತ್ತೇ ಇಲ್ಲ ಎಂದಾಗ ನೀವು ಮೂರು ಪ್ರದಕ್ಷಿಣೆ ಹಾಕಿದರೆ ನಿಮಗೆ ಯಾವ ದೋಷವು ಕೂಡ ಉಂಟಾಗುವುದಿಲ್ಲ.
ಈ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ನಿಮ್ಮ ಮನೆಯೇ ಸ್ವರ್ಗವಾಗುತ್ತದೆ.!
● ಮತ್ತೊಂದು ವಿಧಾನ ಕೂಡ ಇದೆ ಇದರಲ್ಲಿ ಎಷ್ಟು ಪ್ರದರ್ಶನ ಹಾಕಿದ್ದರೆ ಯಾವ ಫಲ ಸಿಗುತ್ತದೆ ಎನ್ನುವುದರ ಕುರಿತು ಹೇಳಲಾಗುತ್ತದೆ. ಆ ಪ್ರಕಾರವಾಗಿ ನೋಡುವುದಾದರೆ ಶತ್ರು ಸಂಹಾರಕ್ಕಾಗಿ 7 ಪ್ರದಕ್ಷಿಣೆ, ಸಂತಾನ ಪ್ರಾಪ್ತಿಗಾಗಿ 9 ಪ್ರದಕ್ಷಿಣೆ, ಆಯಸ್ಸು ವೃದ್ಧಿಗಾಗಿ 11 ಪ್ರದಕ್ಷಿಣೆ, ಪ್ರಾರ್ಥನೆ ಸಿದ್ಧಿಗಾಗಿ 13 ಪ್ರದಕ್ಷಿಣೆ ಮತ್ತು ಧನ ಪ್ರಾಪ್ತಿಗಾಗಿ 15 ಪ್ರದಕ್ಷಿಣೆ, ರೋಗ ನಿವಾರಣೆಗಾಗಿ 19 ಪ್ರದಕ್ಷಿಣೆಯನ್ನು ಶಾಸ್ತ್ರದಲ್ಲಿ ಸೂಚಿಸಲಾಗಿದೆ.
● ಪ್ರದಕ್ಷಿಣೆಯನ್ನು ಮುಗಿಸಿ ದೇವಸ್ಥಾನದಿಂದ ಮನೆಗೆ ಬರುವಾಗ ತಪ್ಪದೆ ದೇವಸ್ಥಾನದಲ್ಲಿ ನೀಡುವ ಕುಂಕುಮ ಪ್ರಸಾದವನ್ನು ಹಣಗೆ ಇಟ್ಟುಕೊಂಡು ಮನೆಗೆ ಕೂಡ ತರಬೇಕು. ಮನೆಯಲ್ಲಿರುವ ಕುಂಕುಮದ ಜೊತೆಗೆ ಮಿಕ್ಸ್ ಮಾಡಿ ಪ್ರತಿದಿನವೂ ಕೂಡ ಹಣೆಗೆ ಇಟ್ಟುಕೊಳ್ಳಬೇಕು ಇದರಿಂದ ಶುಭವಾಗುತ್ತದೆ.
● ಪ್ರತಿಯೊಬ್ಬ ದೇವರಿಗೂ ಕೂಡ ಒಂದೊಂದು ವಾರ ವಿಶೇಷವಾಗಿರುತ್ತದೆ. ಆ ವಾರಗಳಲ್ಲಿ ಆ ದೇವಸ್ಥಾನಕ್ಕೆ ಹೋಗಿ ಈ ರೀತಿ ಪ್ರದರ್ಶನ ಹಾಕುವುದರಿಂದ ಕೋರಿಕೆಗಳು ನೆರವೇರುತ್ತವೆ. ಮತ್ತು ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳು ಕೂಡ ದೇವಸ್ಥಾನಕ್ಕೆ ಹೋಗಿ ಪ್ರದಕ್ಷಿಣೆ ಹಾಕುವುದಕ್ಕೆ ಶ್ರೇಷ್ಠ ದಿನಗಳಾಗಿರುತ್ತವೆ.