ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಖಾತೆಗೆ ಜಮೆ ಆಗಿದೆ.! ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.! ಆದರೆ ಈ ಮಹಿಳೆಯರಿಗೆ ಮಾತ್ರ ಹಣ ಜಮೆ ಆಗಲ್ಲ.!

ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಸರ್ಕಾರ ಸ್ಥಾಪನೆಯಾಗಿ ನೂರು ದಿನಗಳ ತುಂಬಿದ ಸಂಭ್ರಮದಲ್ಲಿ ಚುನಾವಣೆ ಪೂರ್ವವಾಗಿ ಪಕ್ಷ ನೀಡಿದ ಭರವಸೆಗಳಾದ 5 ಗ್ಯಾರೆಂಟಿ ಯೋಜನೆಗಳ ಪೈಕಿ ನಾಲ್ಕನೇ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಚಾಲನೆ ಸಿಗುತ್ತದೆ.

ಮೈಸೂರಿನಲ್ಲಿ (Mysore) ಆಗಸ್ಟ್ 30ರಂದು ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು (C.M Siddaramaih) ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿರುವ 1.28 ಕೋಟಿ ಮಹಿಳಾ ಫಲಾನುಭವಿಗಳ ಖಾತೆಗೆ ಬೆಳಗ್ಗೆ 11:30 ಕ್ಕೆ ಈ ಹಣವನ್ನು ವರ್ಗಾವಣೆ ಮಾಡಲಿದ್ದಾರೆ.

ದೇವರ ಮುಂದೆ ಹಚ್ಚುವ ದೀಪದ ಬತ್ತಿ ಹೇಗಿರಬೇಕು.? ಎಷ್ಟಿದ್ದರೆ ಏನು ಫಲ ನೋಡಿ.!

ಗೃಹಲಕ್ಷ್ಮಿ ಯೋಜನೆಯನ್ನು ನಮ್ಮ ಹೆಮ್ಮೆ ಎಂದು ಹೇಳಿಕೊಂಡಿರುವ ಸರ್ಕಾರವು ಈ ಮೂಲಕ ಕುಟುಂಬದ ಯಜಮಾನನಿಗೆ ಕುಟುಂಬ ನಿರ್ವಹಣೆಗಾಗಿ ಆರ್ಥಿಕ ನೆರವು ನೀಡಿ ಲಿಂಗ ಸಮಾನತೆಯನ್ನು ಕಾಪಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದೆ.

ಗೃಹಲಕ್ಷ್ಮಿ ಯೋಜನೆಗೆ ಸರ್ಕಾರಿ ಹುದ್ದೆಯಲ್ಲಿರುವ ಕುಟುಂಬಗಳು ಹಾಗೂ ಆದಾಯ ತೆರಿಗೆ, ವೃತ್ತಿ ತೆರಿಗೆ, GST ರಿಟರ್ನ್ಸ್ ಸಲ್ಲಿಸುವ ಕುಟುಂಬಗಳ ಯಜಮಾನಿಯರು ಹೊರತುಪಡಿಸಿ APL / BPL / ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿಯರು ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ನೀಡುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದು.

ಈ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ನಿಮ್ಮ ಮನೆಯೇ ಸ್ವರ್ಗವಾಗುತ್ತದೆ.!

ಆಗಸ್ಟ್ 25ರ ಒಳಕ್ಕೆ ಈ ಯೋಜನೆಗೆ ನೋಂದಾಯಿಸಿಕೊಂಡಿರುವ ಎಲ್ಲಾ ಮಹಿಳೆಯರು ಕೂಡ ಇಂದು ತಮ್ಮ ಖಾತೆಗೆ ಹಣ ಪಡೆಯಲು ಅರ್ಹರಾಗಿದ್ದಾರೆ. ಇದುವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇಂದು ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಲಿದೆ ಆದರೆ ಆಲ್ಫಬೆಟಿಕ್ ಮಾದರಿಯಲ್ಲಿ ಹಣ ವರ್ಗಾವಣೆ ಮಾಡಲು ಅಂದರೆ A ಇಂದ Z ವರೆಗೆ ಹೆಸರಿನ ಆಧಾರದ ಮೇಲೆ ಹಣ ವರ್ಗಾವಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಮಂಜೂರಾತಿ ಪತ್ರ ಪಡೆದಿದ್ದರು ಕೂಡ ಕೆಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಕೂಡ ಇದೆ. ಅದಕ್ಕೆ ಕಾರಣಗಳು ಸಹ ಇದೆ ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ, ಇಂತಹ ತಪ್ಪುಗಳನ್ನು ಆಗಿದ್ದರೆ ಶೀಘ್ರವೇ ಸರಿಪಡಿಸಿಕೊಳ್ಳಿ ಇಲ್ಲವಾದಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಕೈ ತಪ್ಪಬಹುದು.

ಸರ್ಕಾರದಿಂದ ಮಹಿಳೆಯರಿಗಾಗಿ ಶ್ರಮಶಕ್ತಿ ಯೋಜನೆ ಆರಂಭ, 50 ಸಾವಿರ ಸಾಲ ಪಡೆದರೆ 25 ಸಾವಿರ ಉಚಿತ ಆಸಕ್ತ ಅಭ್ಯರ್ಥಿಗಳು ತಪ್ಪದೇ ಅರ್ಜಿ ಸಲ್ಲಿಸಿ…

● ಯಾರೆಲ್ಲಾ ಅನ್ನ ಭಾಗ್ಯ ಯೋಜನೆ ಫಲಾನುಭವಿಗಳಾಗಿ ಹೆಚ್ಚುವರಿ ಅಕ್ಕಿ ಹಣವನ್ನು (Annabh amount) ಪಡೆದಿರುತ್ತಾರೆ, ಆ ಮಹಿಳೆಯರ ಅದೇ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ವರ್ಗಾವಣೆ ಆಗಲಿದೆ. ನೀವೇನಾದರೂ ಅನ್ನಭಾಗ್ಯ ಯೋಜನೆಗೆ ಅರ್ಹರಾಗಿದ್ದು ಬೇರೆ ಯಾವುದೇ ಸಮಸ್ಯೆಯಿಂದ ಆ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದರೆ ಕೂಡಲೇ ನೀವು ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು.

● ಹೆಚ್ಚಿನ ಮಹಿಳೆಯರ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಈ ರೀತಿ ಆಧಾರ್ ಕಾರ್ಡ್ ಲಿಂಕ್, NPCI ಮ್ಯಾಪಿಂಗ್ (aadhar linking and NPCI Maiing) ಆಗಿಲ್ಲ ಎಂದರೆ ಕೂಡಲೇ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿಕೊಟ್ಟು ಅರ್ಜಿ ಸಲ್ಲಿಸಿ ಈ ಪ್ರಕ್ರಿಯ ಪೂರ್ತಿಗೊಳಿಸಿ. ಇಲ್ಲವಾದಲ್ಲಿ ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಹಣದಿಂದ ವಂಚಿತರಾಗುತ್ತಿರಿ.

ಪೂಜೆಗಾಗಿ ತಂದ ತೆಂಗಿನಕಾಯಿ ಕೊಳೆತರೆ, ತೆಂಗಿನಕಾಯಿಯಲ್ಲಿ ಹೂವು ಬಂದರೆ ಏನು ಸೂಚನೆ ಗೊತ್ತಾ.? ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕಾದ ಮಾಹಿತಿ ಇದು

● ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕಾದವರು ಅಥವಾ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುವವರು ರೇಷನ್ ಕಾರ್ಡ್ ಹೊಂದಿಲ್ಲದೆ ಇರುವವರು ಅರ್ಜಿ ಸಲ್ಲಿಸಲು ಆಗಿಲ್ಲ . ಆದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ನಿಗದಿಯಾಗಿಲ್ಲ. ಇದು ನಿರಂತರ ಪ್ರಕ್ರಿಯೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ. ಹಾಗಾಗಿ ಹೊಸ ರೇಷನ್ ಕಾರ್ಡ್ ಪಡೆದ ನಂತರ ಅಥವಾ ರೇಷನ್ ಕಾರ್ಡ್ ನ ಮಾಹಿತಿಯನ್ನು ಸರಿಪಡಿಸಿ ತಿದ್ದುಪಡಿ ಮಾಡಿಸಿಕೊಂಡ ನಂತರ ಕೂಡ ಅರ್ಜಿ ಸಲ್ಲಿಸಿ ಮುಂದಿನ ತಿಂಗಳಗಳಿಂದ ಅವರು ಈ ಸಹಾಯಧನವನ್ನು ಪಡೆಯಬಹುದು.

ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ ಆಗಿದೆ ಎಂದು ತಿಳಿಯುವುದು ಹೇಗೆ.?

● ನೀವು ಗೃಹಲಕ್ಷ್ಮಿ ಯೋಜನೆಯ 2000 ಸಹಾಯಧನವನ್ನು ಪಡೆದ ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಇದರ ಕುರಿತು SMS ನೋಟಿಫಿಕೇಶನ್ ಕೂಡ ಬರುತ್ತದೆ.
● ಇಲ್ಲದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಉಳಿತಾಯ ಖಾತೆಯ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕ ಗೃಹಲಕ್ಷ್ಮಿ ಯೋಜನೆ ಸಹಾಯಧನ ನಿಮ್ಮ ಖಾತೆಗೆ ವರ್ಗಾವಣೆ ಆಗಿದೆಯೇ ಎಂದು ದೃಢಪಡಿಸಿಕೊಳ್ಳಬಹುದು.
● ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅನ್ನಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡುವ DBT ಸ್ಟೇಟಸ್ ವಿಧಾನದಿಂದ ಕೂಡ ನೀವು ನಿಮ್ಮ ಯಾವ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಯಾವ ದಿನಾಂಕದಂದು ವರ್ಗಾವಣೆ ಆಗಿದೆ ಎನ್ನುವುದರ ಮಾಹಿತಿಯನ್ನು ಪಡೆದು ಕೊಳ್ಳಬಹುದು.

Leave a Comment