ಈಗಿನ ಕಾಲಮಾನಲ್ಲಿ ಫ್ರಿಡ್ಜ್ ನಮ್ಮೆಲ್ಲರ ಬದುಕಿನ ಮುಖ್ಯ ಭಾಗವಾಗಿ ಬಿಟ್ಟಿದೆ. ಈಗ ಪ್ರತಿಯೊಂದು ಮನೆಯಲ್ಲಿ ಕೂಡ ಫ್ರಿಡ್ಜ್ ಗಳು ಇದ್ದೇ ಇರುತ್ತದೆ. ಮೊದಲೆಲ್ಲಾ ನಗರ ಪ್ರದೇಶದಲ್ಲಿ ಇದರ ಮೇಲೆ ಅವಲಂಬನೆ ಹೆಚ್ಚು ಎಂದು ಹೇಳಲಾಗುತ್ತಿತ್ತು, ಆದರೆ ಕಾಲ ಕಳೆದಂತೆ ಗ್ರಾಮೀಣ ಭಾಗದಲ್ಲೂ ಮನೆ ಮನೆಗೊಂದು ಫ್ರಿಡ್ಜ್ ಬಂದಿದೆ. ಈ ರೀತಿ ಫ್ರಿಜ್ ಕೊಂಡುಕೊಳ್ಳುವವರು ಡಬಲ್ ಡೋರ್ ಖರೀದಿಸುವುದಕ್ಕಿಂತ ಸಿಂಗಲ್ ಡೋರ್ ಫ್ರಿಡ್ಜ್ ಅನ್ನು ಹೆಚ್ಚು ಜನ ತೆಗೆದುಕೊಳ್ಳುತ್ತಾರೆ.
ಅಗತ್ಯ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳೋಣ ಅಥವಾ ಕಾಸ್ಟ್ ಕಡಿಮೆ ಇರುತ್ತದೆ ಎನ್ನುವುದು ಇದು ಕಾರಣವಿರಬಹುದು. ಕಾರಣವೇನೇ ಇದ್ದರೂ ಒಂದು ಶಾಪ್ ನಲ್ಲಿ ಡಬಲ್ ಡೋರ್ ಫ್ರಿಡ್ಜ್ ಸೇಲ್ ಆಗುವುದಕ್ಕಿಂತ ಸಿಂಗಲ್ ಡೋರ್ ಫ್ರಿಡ್ಜ್ ಸೇಲ್ ಆಗುವುದೇ ಹೆಚ್ಚು ಎನ್ನುವುದನ್ನು ಒಪ್ಪಲೇಬೇಕು ಹಾಗೂ ನಾವು ನೋಡುವ ಮನೆಗಳಲ್ಲಿ ಬಹುತೇಕ ಸಿಂಗಲ್ ಡೋರ್ ಫ್ರಿಡ್ಜ್ ಇರುವುದನ್ನೇ ನಾವು ಕಾಣಬಹುದು.
ಈ ರೀತಿ ಸಿಂಗಲ್ ಡೋರ್ ಫ್ರಿಡ್ಜ್ ಗಿಂತ ಡಬಲ್ ಡೋರ್ ಫ್ರಿಡ್ಜ್ ನಲ್ಲಿ ಹೆಚ್ಚಿಗೆ ಜಾಗ ಇರುತ್ತದೆ ಎನ್ನುವ ವ್ಯತ್ಯಾಸವನ್ನು ಬಿಟ್ಟರೆ ಬಹುತೇಕ ಎಲ್ಲವೂ ಸೇಮ್ ಆದರೆ ನೀರನ್ನು ಫಿಲ್ಟರ್ ಮಾಡುವ ವಿಷಯ ಬಿಟ್ಟು. ಯಾಕೆಂದರೆ ಸಿಂಗಲ್ ಡೋರ್ ಫ್ರಿಡ್ಜ್ ಕೊಳ್ಳುವಾಗ ನೀರಿನ ಫಿಲ್ಟರ್ ಇಂದ ನಾವೇ ನೀರನ್ನು ತೆಗೆಯಬೇಕಾಗುತ್ತದೆ. ಆದರೆ ಡಬಲ್ ಡೋರ್ ಫ್ರಿಡ್ಜ್ ನಲ್ಲಿ ಬಿಲ್ಟ್ ಇನ್ ಕನ್ಸ್ಟ್ರಕ್ಷನ್ ಆಗಿರುವುದರಿಂದ ನೀರಿನ ಫಿಲ್ಟರ್ ಇಂದ ನೀರನ್ನು ತೆಗೆದಬೇಕಾದ ಕೆಲಸ ತಪ್ಪುತ್ತದೆ ಎನ್ನುವ ಕಾರಣದಿಂದಲೂ ಕೆಲವರು ಡಬಲ್ ಡೋರ್ ಫ್ರಿಡ್ಜ್ ಖರೀದಿಸುತ್ತಾರೆ.
ಈ ರೀತಿ ಫ್ರಿಡ್ಜ್ ನಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಏನೆಂದರೆ ಫ್ರೀಜರ್ ನಲ್ಲಿ ಮಂಜುಗಡ್ಡೆ ಪರ್ವತದಂತೆ ಐಸ್ ತುಂಬಿಕೊಳ್ಳುವುದು. ನೀವು ಎಷ್ಟೇ ಬಾರಿ ಕ್ಲೀನ್ ಮಾಡಿದರೂ ಪ್ರಯೋಜನವಾಗುವುದಿಲ್ಲ ಮತ್ತೆ ಮತ್ತೆ ಐಸ್ ಕಟ್ಟುತ್ತಲೇ ಇರುತ್ತದೆ. ಅನೇಕ ಕಾರಣಗಳಿಂದಾಗಿ ಹೀಗಾಗುತ್ತದೆ, ಅದರಲ್ಲಿ ಕೆಲವು ಕಾರಣಗಳು ಮತ್ತು ಪರಿಹಾರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಕಸ ಪೊರಕೆ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ.!
● ಫ್ರಿಜ್ ಬಾಗಿಲು ಅಥವಾ ಮುಚ್ಚಳದ ಗ್ಯಾಸ್ಕೆಟ್ ಹಾನಿಗೊಳಗಾದರೆ ಈ ರೀತಿ ಪ್ರಾಬ್ಲಮ್ ಆಗುತ್ತದೆ. ಗ್ಯಾಸ್ಕೆಟ್ ಹಾಳಾದಾಗ ಡೋರ್ ಪೂರ್ತಿಯಾಗಿ ಸರಿಯಾದ ರೀತಿಯಲ್ಲಿ ಕ್ಲೋಸ್ ಆಗುವುದಿಲ್ಲ. ಆಗ ಗಾಳಿಯು ಇದರಿಂದ ಒಳಗೆ ಹೋಗುತ್ತದೆ. ಆದ್ದರಿಂದ ಬಾಗಿಲು ಅಥವಾ ಗ್ಯಾಸ್ಕೆಟ್ ನೀರು ತೊಟ್ಟಿಕ್ಕುವಷ್ಟು ಹಾನಿಗೊಳಗಾದರೆ ಅಥವಾ ಮಧ್ಯದಲ್ಲಿ ಕಟ್ ಆಗಿದ್ದರೆ ಸಂಪೂರ್ಣವಾಗಿ ಬದಲಾಯಿಸುವುದು ಉತ್ತಮ.
● ಫ್ರಿಜ್ ಹಿಂಭಾಗದಲ್ಲಿ ಇರುವಂತಹ ಬಾಷ್ಪೀಕರಣ ಕಾಯಿಲ್ ಡ್ಯಾಮೇಜ್ ಆದರೂ ಕೂಡ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಈ ಸುರುಳಿಯು ಫ್ರಿಜ್ನಿಂದ ಹೆಚ್ಚುವರಿ ನೀರನ್ನು ತೆಗೆದುಹಾಕಲು ಸಹಾಯಕವಾಗಿದೆ. ಕಾಯಿಲ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿದರೆ ಮತ್ತು ನಿರ್ವಹಿಸಿದರೆ, ಮತ್ತು ಅದಕ್ಕೆ ಡ್ಯಾಮೇಜ್ ಆಗದಂತೆ ನೋಡಿಕೊಂಡರೆ ಈ ಸಮಸ್ಯೆ ಆಗುವುದಿಲ್ಲ.
ಮಹಿಳೆಯರು ಕಡ್ಡಾಯವಾಗಿ ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ ಇದು.!
● ನೀರನ್ನು ಸ್ವಚ್ಛಗೊಳಿಸುವ ನೀಡಿರುವ ನೀರಿನ ಫಿಲ್ಟರ್ ಮುರಿದರೆ, ನೀರನ್ನು ಸ್ಟೋರ್ ಮಾಡಲು ಆಗದ ಕಾರಣ ಈ ರೀತಿ ಮಂಜುಗಡ್ಡೆ ರೂಪುಗೊಳ್ಳಬಹುದು. ನೀವು ಇಟ್ಟಿದ್ದೆಲ್ಲವೂ ಮಂಜುಗಡ್ಡೆಯಿಂದ ಮುಚ್ಚಲ್ಪಡುತ್ತಿದ್ದದೆ, ಮೊದಲು ನೀರಿನ ಫಿಲ್ಟರ್ ಅನ್ನು ಬದಲಿಸಬೇಕು.
● ಫ್ರಿಡ್ಜ್ ಸರಿಯಾಗಿ ಕೆಲಸ ಮಾಡಬೇಕಾದರೆ, ಹಲವು ವರ್ಷಗಳವರೆಗೆ ಬಾಳಿಕೆ ಬರಬೇಕು ಎಂದರೆ ವರ್ಷಕ್ಕೊಮ್ಮೆಯಾದರೂ ಸರ್ವೀಸ್ ಮಾಡಿಸಬೇಕು. ಆಗ ಮಾತ್ರ ಇಂತಹ ಸಮಸ್ಯೆಗಳನ್ನು ತಪ್ಪಿಸಬಹುದು. ಮನೆಯಲ್ಲಿ ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿಯಾದರೂ ಫ್ರಿಜ್ ನ್ನು ಸ್ವಚ್ಛಗೊಳಿಸಿ ಸರಿಯಾಗಿ ಮೇಂಟೇನ್ ಮಾಡಿ.