ಬಹಳ ಹಿಂದಿನ ದಿನದಲ್ಲಿ 50 ವರ್ಷ 60 ವರ್ಷ ದಾಟಿದವರಿಗೆ ಕೂದಲು ಉದುರುತ್ತಿತ್ತು. ಆದರೆ ಇತ್ತೀಚಿನ ದಿನದಲ್ಲಿ ಚಿಕ್ಕ ಮಕ್ಕಳಿಗೂ ಕೂಡ ಕೂದಲು ಉದುರುವಂತಹ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಹೋಗಿದೆ ಅದಕ್ಕಾಗಿಯೇ ಕೆಲವೊಂದಷ್ಟು ಜನ ತಲೆ ಕೂದಲು ಉದುರುತ್ತಿರು ವoತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಆಸ್ಪತ್ರೆಗಳಿಗೆ ಹೋಗಿ ಕೆಲವೊಂದಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ.
ಆದರೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರು ಕೂಡ ತಲೆಕೂದಲಿನ ಸಮಸ್ಯೆ ಕಡಿಮೆಯಾಗುವುದಿಲ್ಲ. ಬದಲಿಗೆ ಮತ್ತಷ್ಟು ಉದುರುವಂತಹ ಸಾಧ್ಯತೆ ಗಳು ಕೂಡ ಹೆಚ್ಚಾಗಿರುತ್ತದೆ. ಆದರೆ ಯಾವ ಒಂದು ಕಾರಣಕ್ಕಾಗಿ ಚಿಕ್ಕವಯಸ್ಸಿನಲ್ಲಿಯೇ ತಲೆ ಕೂದಲು ಉದುರುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ, ಆನಂತರ ನಿಮಗೆ ತಿಳಿಯುತ್ತದೆ ಇದಕ್ಕೆ ಪರಿಹಾರ ಮಾರ್ಗ ಏನು ಎಂದು.
ಈ ಚಿನ್ಹೆಗಳು ಕಂಡು ಬಂದರೆ ನಿಮ್ಮ ದೇಹ ಡೇಂಜರ್ ನಲ್ಲಿ ಇದೆ ಅನ್ನೊದನ್ನು ಸೂಚಿಸುತ್ತದೆ.!
ನಮ್ಮ ತಲೆ ಕೂದಲಿನ ಬೆಳವಣಿಗೆಗೆ ಬೇಕಾಗಿರುವಂತಹ ಪೋಷಕಾಂಶ ಗಳು ಜಿಂಕ್, ಸೆಲೆನಿಯಂ, ಬಯೋಟಿನ್, ಹೌದು ಈ ಮೂರು ಪೋಷ ಕಾಂಶಗಳು ನಮ್ಮ ತಲೆಕೂದಲಿನ ಬೆಳವಣಿಗೆಗೆ ಬಹಳ ಮುಖ್ಯವಾಗಿ ಬೇಕಾಗಿರುವಂತದ್ದು. ಅದರಲ್ಲಿಯೂ ಬಯೋಟಿನ್ ನಮ್ಮ ಕೂದಲಿನ ಬೆಳವಣಿಗೆಗೆ ಬಹಳ ಅದ್ಭುತವಾದಂತಹ ಪೋಷಕಾಂಶ ಎಂದು ಹೇಳಬಹುದು.
ಇವಿಷ್ಟು ಪೋಷಕಾಂಶಗಳು ಸಿಗುವಂತಹ ಏಕೈಕ ಆಹಾರ ಯಾವುದು ಎಂದರೆ ನಟ್ಸ್. ನಟ್ಸ್ ಎಂದರೆ ಬಾದಾಮಿ, ಗೋಡಂಬಿ, ವಾಲ್ ನಟ್, ಪಿಸ್ತ, ಕಡಲೆಬೀಜ, ಅದರಲ್ಲೂ ಕಡಲೆ ಬೀಜವನ್ನು ಹುರಿದು ಮತ್ತು ನೀರಿನಲ್ಲಿ ನೆನೆಹಾಕಿ ಬೇಯಿಸಿ ಈ ರೀತಿಯಾಗಿ ಸೇವನೆ ಮಾಡಬಹುದು. ಕಡಲೆ ಬೀಜವು ನಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಹಾಗೂ ಇದು ನಮ್ಮ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಎಂದೇ ಹೇಳಬಹುದು.
ಹಾಗಾದರೆ ನಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ನಮ್ಮ ಸೌಂದರ್ಯವನ್ನು ಹೆಚ್ಚಿಸುವಂತಹ ಪೋಷಕಾಂಶಗಳನ್ನು ಅಂದರೆ ಯಾವ ಆಹಾರವನ್ನು ಸೇವನೆ ಮಾಡಬೇಕು ಎನ್ನುವುದನ್ನು ತಿಳಿದುಕೊಂಡು ಅದನ್ನು ಸೇವನೆ ಮಾಡುವುದು ಒಳ್ಳೆಯದು. ಹಾಗಾದರೆ ಆ ಆಹಾರ ಪದಾರ್ಥಗಳು ಯಾವುದು ಎಂದು ನೋಡುವುದಾದರೆ.
ವಿಟಮಿನ್ ಸಿ ಅಂಶವನ್ನು ಹೊಂದಿರುವಂತಹ ಸೀಬೆಕಾಯಿ, ಕಿತ್ತಳೆ ಹಣ್ಣು, ಮೋಸಂಬಿ, ಬೀಟ್ರೋಟ್, ಸ್ಟ್ರಾಬೆರಿ, ಬ್ರೊಕೋಲಿ ಅಂದರೆ ಹಸಿರು ಸೊಪ್ಪು ಹಾಗೂ ತರಕಾರಿಗಳು ಇವುಗಳಲ್ಲಿ ನಮಗೆ ಯಥೇಚ್ಛ ವಾಗಿ ವಿಟಮಿನ್ ಸಿ ಅಂಶ ಸಿಗುತ್ತದೆ. ಹಾಗಾಗಿ ಪ್ರತಿಯೊಂದು ಸೊಪ್ಪನ್ನು ಸಹ ಸೇವನೆ ಮಾಡುವುದು ತುಂಬಾ ಒಳ್ಳೆಯದು.
ಪುರುಷರಲ್ಲಿ ಈ ರೀತಿಯ ಲಕ್ಷಣಗಳಿದ್ದರೆ ಅವರು ಬಹಳ ಅದೃಷ್ಟವಂತರು.!
* ಅದೇ ರೀತಿಯಾಗಿ ಸೆಲೆನಿಯಂ ಪೋಷಕಾಂಶ ನಮಗೆ ಸಿಗಬೇಕು ಎಂದರೆ ಮೊದಲೇ ಹೇಳಿದಂತೆ ನಟ್ಸ್ ಗಳನ್ನು ಯಥೇಚ್ಛವಾಗಿ ಸೇವನೆ ಮಾಡಬೇಕು ಹಾಗೂ ಬ್ರೌನ್ ರೈಸ್ ಇದನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು.
* ಹಾಗೂ ಫ್ಲಾಕ್ಸ್ ಸೀಡ್ಸ್, ಕುಂಬಳಕಾಯಿ ಬೀಜ, ಕಲ್ಲಂಗಡಿ ಹಣ್ಣಿನ ಬೀಜ, ಇವುಗಳನ್ನು ಸೇವನೆ ಮಾಡಬೇಕು. ಅದರಲ್ಲೂ ಕುಂಬಳಕಾಯಿ ಬೀಜವನ್ನು ನೀರಿನಲ್ಲಿ ನೆನೆ ಹಾಕಿ ಪ್ರತಿದಿನ ಒಂದು ಚಮಚ ತಿನ್ನುತ್ತಾ ಬಂದರೆ ನಮ್ಮ ತಲೆ ಕೂದಲು ಉದುರುವಂತಹ ಸಮಸ್ಯೆ ದೂರವಾಗುತ್ತದೆ ಹೊಸದಾಗಿ ತಲೆ ಕೂದಲು ಬೆಳೆಯುವುದಕ್ಕೆ ಪ್ರಾರಂಭವಾಗುತ್ತದೆ.
ಬೆಂಡೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ಈ 2 ಪದಾರ್ಥ ತಿನ್ನಬೇಡಿ ನಿಮ್ಮ ಜೀವಕ್ಕೆ ಕುತ್ತು ತರುತ್ತೆ ಎಚ್ಚರ.!
* ಬಹಳ ಮುಖ್ಯವಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಇದರಲ್ಲಿ ಯಥೇಚ್ಛವಾಗಿ ನಾರಿನ ಅಂಶ ಇದ್ದು ಇದು ನಮ್ಮ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುವುದಷ್ಟೇ ಅಲ್ಲದೆ ಕೂದಲಿನ ಬೆಳವಣಿ ಗೆಗೂ ಕೂಡ ಇದು ಸಹಕಾರಿಯಾಗಿದೆ. ಆದ್ದರಿಂದ ಪ್ರತಿ ಯೊಬ್ಬರೂ ಕೂಡ ಮೇಲೆ ಹೇಳಿದ ಇಷ್ಟು ಆಹಾರ ಕ್ರಮವನ್ನು ನಿಮ್ಮ ಆಹಾರದಲ್ಲಿ ಸೇವನೆ ಮಾಡುವುದು ಬಹಳ ಒಳ್ಳೆಯದು.