ಆಹಾರ ಸೇವನೆ ಮಾಡುವ ಪದ್ಧತಿಯನ್ನು ನಾವು ಬದಲಾವಣೆ ಮಾಡಿಕೊಂಡರೆ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ. ನಾವು ಈಗ ಆಹಾರ ಸೇವನೆ ಮಾಡುವಂತಹ ವಿಧಾನ ತುಂಬಾ ಬದಲಾವಣೆ ಆಗುತ್ತಿದೆ ಎಂದು ಹೇಳಬಹುದು. ಹೌದು ಅವರ ಅನುಕೂಲಕ್ಕೆ ತಕ್ಕಂತೆ ಅನುಗುಣವಾಗಿ ಎಲ್ಲವನ್ನು ಬದಲಾಯಿಸಿಕೊಂಡು ನಮ್ಮ ಜೀವನ ಶೈಲಿಯನ್ನು ನಡೆಸುತ್ತಿದ್ದೇವೆ.
ಉದಾಹರಣೆಗೆ ಕೆಲವೊಂದಷ್ಟು ಜನ ಬೆಳಗಿನ ತಿಂಡಿ ಮಧ್ಯಾಹ್ನದ ಊಟ ರಾತ್ರಿ ಊಟ ಇವೆಲ್ಲವನ್ನು ಕೂಡ ಓಡಾಡಿಕೊಂಡು ನಿಂತು ತಮ್ಮ ಆಹಾರ ಸೇವನೆಯನ್ನು ಮಾಡುತ್ತಿದ್ದಾರೆ ಎಂದೇ ಹೇಳಬಹುದು. ಅದರಲ್ಲೂ ನಮ್ಮ ಆಹಾರ ಸೇವನೆಯನ್ನು ಹೋಟೆಲ್ ಗಳಲ್ಲಿ ಸ್ನೇಹಿತರ ಜೊತೆ ಕುಂತಲ್ಲಿಯೇ ನಿಂತಲ್ಲಿಯೇ ಮಾತನಾಡುತ್ತಾ ನಮ್ಮ ಆಹಾರ ಸೇವನೆಯನ್ನು ಮಾಡುತ್ತಿದ್ದೇವೆ.
ಆದರೆ ಇದು ಎಷ್ಟು ದೊಡ್ಡ ಅಪಾಯಕಾರಿ ಎಂದು ಯಾರಿಗೂ ಕೂಡ ತಿಳಿದಿಲ್ಲ. ಹೌದು ಬಹಳ ಹಿಂದಿನ ದಿನದಲ್ಲಿ ನಾವೆಲ್ಲರೂ ಗಮನಿಸಿ ರುವಂತೆ ಮನೆಯಲ್ಲಿ ಯಾವುದೇ ಆಹಾರ ಪದಾರ್ಥವನ್ನು ಸೇವನೆ ಮಾಡಬೇಕು ಎಂದರೆ ಕೈಕಾಲು ಮುಖ ತೊಳೆದು ನೆಲದ ಮೇಲೆ ಕುಳಿತು ನಮ್ಮ ಪದ್ಧತಿಯಂತೆ ಆಹಾರ ಸೇವನೆಯನ್ನು ಮಾಡುತ್ತಿದ್ದೆವು.
ಅದರಲ್ಲೂ ಮನೆಯಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಒಟ್ಟಾರೆಯಾಗಿ ಒಂದು ಕಡೆ ಕುಳಿತು ಕೆಲವೊಂದಷ್ಟು ಸಂತೋಷಕರವಾದಂತಹ ಮಾತುಗಳನ್ನು ಹೇಳುತ್ತಾ. ಹೀಗೆ ಎಲ್ಲಾ ರೀತಿಯ ವಿಚಾರಗಳನ್ನು ಚರ್ಚೆ ಮಾಡುತ್ತಾ ನಮ್ಮ ಆಹಾರ ಕ್ರಮವನ್ನು ಮುಗಿಸುತ್ತಿದ್ದೆವು.
ಆದರೆ ಇತ್ತೀಚಿನ ದಿನದಲ್ಲಿ ಮನೆಯಲ್ಲಿ ಮೂರು ಜನ ಇದ್ದರೆ ಮೂರು ಜನರು ಒಂದೊಂದು ಸಮಯದಲ್ಲಿ ಆಹಾರ ಸೇವನೆಯನ್ನು ಮಾಡುವಂತಹ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಹೌದು ಇದರಿಂದ ಮನೆಯಲ್ಲಿರುವಂತಹ ಸದಸ್ಯರಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಇಲ್ಲದಿರಲು ಇದು ಬಹಳ ಪ್ರಮುಖವಾದ ಕಾರಣವಾಗಿದೆ ಎಂದು ಹೇಳಬಹುದು.
ಆದರೆ ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಕುಳಿತು ಊಟ ಮಾಡುವುದರಲ್ಲಿ ಇರುವಂತಹ ಖುಷಿ ಇನ್ಯಾವುದರಲ್ಲೂ ಇಲ್ಲ ಎಂದೇ ನಮ್ಮ ಶಾಸ್ತ್ರ ಸಂಪ್ರದಾಯಗಳು ತಿಳಿಸುತ್ತದೆ. ಆದ್ದರಿಂದ ಅಂತಹ ಕೆಲವೊಂದಷ್ಟು ವಿಧಾನಗಳನ್ನು ನಾವು ಅನುಸರಿಸುವುದು ಒಳ್ಳೆಯದು.
ಹಾಗಾದರೆ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಯಾವುದೆಲ್ಲ ಪ್ರಯೋಜನ ಪಡೆಯಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
* ನಾವು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ.
* ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ.
* ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ.
* ನಮ್ಮ ಮೊಣಕಾಲು ಹಾಗೂ ಮೊಣ ಕೈ ಆರೋಗ್ಯ ಸುಧಾರಿಸುತ್ತದೆ.
* ಕುಟುಂಬದ ಜನರೊಂದಿಗೆ ಸಮಯ ಕಳೆಯಲು ನೆರವಾಗುತ್ತದೆ.
* ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಮುಖ್ಯವಾಗಿ ತೂಕವನ್ನು ಇಳಿಸುವವರಿಗೆ ತುಂಬಾ ಸಹಾಯವಾಗುತ್ತದೆ.
* ನಮಗೆ ಹೆಚ್ಚು ಆರಾಮದಾಯಕವಾಗಿ ಊಟ ಮಾಡಲು ಆಗುತ್ತದೆ.
* ಪದ್ಮಾಸನದಲ್ಲಿ ಕುಳಿತು ಊಟ ಮಾಡುವುದರಿಂದ ಮೈ ಕೈ ನೋವು ಕೂಡ ಮಾಯಾವಾಗುತ್ತದೆ.
* ಮೂಳೆಗಳಿಗೆ, ಮಾಂಸಖಂಡಗಳಿಗೆ ಸಂಬಂಧ ಪಟ್ಟ ಸಮಸ್ಯೆಗೆ ಪರಿಹಾರ ಇದು.
* ಕಿಬ್ಬೊಟ್ಟೆಯ ಅರೋಗ್ಯವು ಹೆಚ್ಚುತ್ತದೆ.
* ಹೆಣ್ಣು ಮಕ್ಕಳು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ತಿಂಗಳ ಮುಟ್ಟು ಸಹ ಸರಿಯಾಗಿ ಆಗುತ್ತದೆ.
* ನೆಲದ ಮೇಲೆ ಕುಳಿತುಕೊಂಡು ಊಟ ಮಾಡುವಾಗ ನಾವು ಬಾಗಿ, ಎದ್ದು ಊಟ ಮಾಡುತ್ತೇವೆ. ಇದು ಆಹಾರವನ್ನು ಜಠರಕ್ಕೆ ಜಾರಲು ಸಹಕರಿಸುತ್ತದೆ.
* ನೀವು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಸೊಂಟದ ಭಾಗಕ್ಕೆ ವ್ಯಾಯಾಮ ಸಿಗುತ್ತದೆ.