ಸಾಮಾನ್ಯವಾಗಿ ಜನರು ಸಮಯ ಮತ್ತು ದುಡ್ಡು ಉಳಿಸಲು ತಾಜಾ ತರಕಾರಿಗಳನ್ನು ವಾರಕ್ಕಾಗುವಷ್ಟು ಕೊಳ್ಳುತ್ತಾರೆ. ಆದರೆ ಕೆಲವು ತರಕಾರಿಗಳು ಬೇಗನೆ ಒಣಗಿ, ಹಾಳಾಗುತ್ತವೆ. ಇಂಥ ತರಕಾರಿಗಳಲ್ಲಿ ಬೆಂಡೆಕಾಯಿಯೂ ಒಂದು ಹೌದು ಬೆಂಡೆಕಾಯಿಯನ್ನು ಸೇವನೆ ಮಾಡುವುದರಿಂದ ಪ್ರತಿಯೊಂದು ಆರೋಗ್ಯ ಸಮಸ್ಯೆಯೂ ಸಹ ದೂರವಾಗುತ್ತದೆ ಎಂದೇ ಹೇಳಬಹುದು.
ಇದರಲ್ಲಿ ಯಥೇಚ್ಛವಾದಂತಹ ಪೌಷ್ಟಿಕಾಂಶಗಳು ಇದ್ದು ಇದನ್ನು ನಮ್ಮ ಆಹಾರ ಕ್ರಮದಲ್ಲಿ ಅಳವಡಿಸಿ ಕೊಳ್ಳುವುದು ತುಂಬಾ ಒಳ್ಳೆಯದು. ವೈದ್ಯರು ನಮ್ಮ ಆಹಾರ ಕ್ರಮದಲ್ಲಿ ಇದನ್ನು ಅಳವಡಿಸಿಕೊಳ್ಳುವಂತೆ ಸೂಚನೆಯನ್ನು ಸಹ ನೀಡುತ್ತಾರೆ. ಅದರಂತೆಯೇ ಬೆಂಡೆಕಾಯಿಯನ್ನು ಹಸಿಯಾಗಿ ಕತ್ತರಿಸಿ ಅದನ್ನು ನೀರಿ ನಲ್ಲಿ ಹಾಕಿ ಇಟ್ಟು ಬೆಳಗಿನ ಸಮಯ ಆ ನೀರನ್ನು ಶೋಧಿಸಿ ಕುಡಿಯುವುದರಿಂದ ಹಲವಾರು ರೀತಿಯ ಸಮಸ್ಯೆಗಳು ದೂರವಾಗುತ್ತದೆ ಎಂದು ಸಹ ಹೇಳುತ್ತಾರೆ.
ಹೀಗೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವಂತಹ ಬೆಂಡೆಕಾಯಿಯನ್ನು ಹೆಚ್ಚು ದಿನಗಳ ಕಾಲ ತಾಜಾವಾಗಿಡಲು ಅನೇಕ ಉಪಾಯಗಳಿವೆ. ಹೌದು ಯಾವುದೇ ಫ್ರಿಡ್ಜ್ ಬಳಸದೆ ಅದನ್ನು ಹೇಗೆ ಹೆಚ್ಚು ದಿನಗಳ ಕಾಲ ಫ್ರೆಶ್ ಆಗಿರುವಂತೆ ಇಡಬಹುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದು ಕೊಳ್ಳುತ್ತಾ ಹೋಗೋಣ.
* ಮೃದುವಾಗಿರುವ ಮತ್ತು ಕಡಿಮೆ ಬೀಜಗಳಿರುವ ಬೆಂಡೆಕಾಯಿಗಳನ್ನು ಖರೀದಿಸಿ. ಬೆಂಡೆಕಾಯಿಯನ್ನು ಬೆರಳಲ್ಲಿ ಹಗುರವಾಗಿ ಒತ್ತಿದರೆ ಅದರ ಮೃದುತ್ವ ಗೊತ್ತಾಗುತ್ತದೆ. ಸಾಧ್ಯವಾದಷ್ಟು ಸಣ್ಣ ಗಾತ್ರದ ಮತ್ತು ದಟ್ಟ ಹಸಿರು ಬಣ್ಣದ ಬೆಂಡೆಕಾಯಿಗಳನ್ನು ಖರೀದಿಸಿ.
* ಮನೆಗೆ ತಂದ ನಂತರ ಅದನ್ನು ಹರಡಿಸಿ ನೀರಿನ ಪಸೆ ಹೋಗುವವರೆಗೆ ಸಂಪೂರ್ಣ ಒಣಗಿಸಿ. ಬಳಿಕ ಇದನ್ನು ಒಣ ಬಟ್ಟೆಯಲ್ಲಿ ಸುತ್ತಿ ಗಾಳಿಯಾಡದ ಕಂಟೇನರ್ನಲ್ಲಿಡಿ. ಬೆಂಡೆಕಾಯಿಯಲ್ಲಿ ಸ್ವಲ್ಪ ನೀರಿನ ಪಸೆಯಿದ್ದರೂ ಅದು ಬೇಗ ಹಾಳಾಗುತ್ತದೆ.
* ಬೆಂಡೆಕಾಯಿಯನ್ನು ಫ್ರಿಜ್ನಲ್ಲಿ ಇಡುವುದಾದರೆ ಪಾಲಿಥೀನ್ ಅಥವಾ ವೆಜಿಟೇಬಲ್ ಬ್ಯಾಗ್ನೊಳಗಿಟ್ಟು ಬ್ಯಾಗ್ ಗೆ ಎರಡು ತೂತು ಮಾಡಿ ಫ್ರಿಜ್ನಲ್ಲಿಡಿ.
* ಫ್ರಿಜ್ನ ವೆಜಿಟೇಬಲ್ ಬಾಸ್ಕೆಟ್ನಲ್ಲಿ ಇಡುವುದಾದರೆ ಅದಕ್ಕೆ ಪೇಪರ್ ಹರಡಿಸಿ, ಅದರಲ್ಲಿ ಬೆಂಡೆಕಾಯಿಯನ್ನು ಒಂದರ ಪಕ್ಕ ಒಂದರಂತೆ ಇಡಿ. ಇದರಿಂದಾಗಿ ಬೆಂಡೆಕಾಯಿಯಲ್ಲಿರುವ ನೀರನ್ನು ಪೇಪರ್ ಹೀರಿಕೊಂಡು ತರಕಾರಿ ಫ್ರೆಶ್ ಆಗಿರುತ್ತದೆ.
* ಬೆಂಡೆಕಾಯಿಯನ್ನು ತೇವಾಂಶವಿರುವ ತರಕಾರಿ ಅಥವಾ ಹಣ್ಣುಗಳ ಜತೆಗೆ ಇಡಬೇಡಿ. ಇದರಿಂದ ಅವೆರಡೂ ಬೇಗನೆ ಹಾಳಾಗುತ್ತವೆ. ಬೆಂಡೆಕಾಯಿಯನ್ನು ಆದಷ್ಟು ಬೇಗನೆ ಅಡುಗೆ ಮಾಡಿ ತಿನ್ನಿ. ಇದನ್ನು ತುಂಬಾ ದಿನಗಳ ಕಾಲ ಇಟ್ಟರೆ ಅದರ ತಾಜಾತನ ಪೋಷಕಾಂಶ ಮತ್ತು ಅದರಲ್ಲಿರುವಂತಹ ರುಚಿಯು ಸಂಪೂರ್ಣವಾಗಿ ಹೋಗುತ್ತದೆ. ಆದ್ದರಿಂದ ಆದಷ್ಟು ಬೆಂಡೆಕಾಯಿಯನ್ನು ತಂದ ಸ್ವಲ್ಪ ದಿನಗಳ ಒಳಗೆ ಉಪಯೋಗಿಸುವುದು ಉತ್ತಮ.
ಕೇವಲ ಬೆಂಡೆಕಾಯಿ ಮಾತ್ರವಲ್ಲದೆ ನಾವು ತರುವಂತಹ ಪ್ರತಿಯೊಂದು ತರಕಾರಿ ಹಣ್ಣುಗಳನ್ನು ಕೂಡ ತಂದ ಸ್ವಲ್ಪ ದಿನದಲ್ಲಿಯೇ ಉಪಯೋ ಗಿಸಿ ಆನಂತರ ಬೇರೆ ತಂದು ಉಪಯೋಗಿಸುವುದು ಒಳ್ಳೆಯದು. ಹೆಚ್ಚು ದಿನಗಳ ಕಾಲ ಎಲ್ಲಾ ತರಕಾರಿ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಇಡುವುದ ರಿಂದ ಅದರಲ್ಲಿ ಇರುವಂತಹ ಸತ್ವಗಳು ಅದರಲ್ಲಿ ಇರುವಂತಹ ಎಲ್ಲ ಪೋಷಕಾಂಶಗಳು ಕೂಡ ನಾಶವಾಗುತ್ತದೆ.
ಆದ್ದರಿಂದ ಯಾವುದು ಸಮಯಕ್ಕೆ ಸಿಗುವುದಿಲ್ಲವೋ ಅಂತಹ ಕೆಲವೊಂದಷ್ಟು ಪದಾರ್ಥಗ ಳನ್ನು ಮಾತ್ರ ನೀವು ಫ್ರಿಡ್ಜ್ ನಲ್ಲಿ ಇಟ್ಟು ಅದನ್ನು ಉಪಯೋಗಿಸುವುದು ಒಳ್ಳೆಯದು. ಹೀಗೆ ಮೇಲೆ ಹೇಳಿದಂತಹ ಇಷ್ಟು ವಿಧಾನಗಳನ್ನು ನೀವು ಅನುಸರಿಸಿ ಬೆಂಡೆಕಾಯಿಯನ್ನು ಉಪಯೋಗಿಸುವುದರಿಂದ ಹೆಚ್ಚು ದಿನಗಳ ಕಾಲ ಫ್ರೆಶ್ ಆಗಿ ಇರುವ ಹಾಗೆ ನೋಡಿಕೊಳ್ಳಬಹುದು.